ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ‘ಮೈತ್ರಿ ಸೇತು’ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 09 MAR 2021 4:49PM by PIB Bengaluru

ನಮಸ್ಕಾರ!  ಖುಲುಮಖಾ!

ತ್ರಿಪುರದ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಜಿ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಿಪ್ಲಾಬ್ ದೇಬ್ ಜಿ, ಉಪಮುಖ್ಯಮಂತ್ರಿ ಶ್ರೀ ಜಿಶ್ನು ದೇಬ್ ಬರ್ಮನ್ ಜಿ, ರಾಜ್ಯ ಸರ್ಕಾರದ ಎಲ್ಲಾ ಮಂತ್ರಿಗಳು, ಸಂಸದರು ಮತ್ತು ಶಾಸಕರು ಮತ್ತು ತ್ರಿಪುರದ ನನ್ನ ಆತ್ಮೀಯ ಸಹೋದರ ಮತ್ತು ಸಹೋದರಿಯರೇ.  ತ್ರಿಪುರದ ಮೂರು ವರ್ಷಗಳ ಅಭಿವೃದ್ಧಿಯ ಪ್ರಯಾಣ ಪೂರ್ಣಗೊಂಡಿದ್ದಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು! ಶುಭಾಶಯಗಳು!

ಸಹೋದರ  ಸಹೋದರಿಯರೇ,

ಮೂರು ವರ್ಷಗಳ ಹಿಂದೆ ತ್ರಿಪುರದ ಜನರು ಹೊಸ ಇತಿಹಾಸವನ್ನು ಸೃಷ್ಟಿಸಿದರು ಮತ್ತು ಇಡೀ ದೇಶಕ್ಕೆ ಬಹಳ ಬಲವಾದ ಸಂದೇಶವನ್ನು ನೀಡಿದರು.   ತ್ರಿಪುರವು ದಶಕಗಳವರೆಗೆ ರಾಜ್ಯದ ಅಭಿವೃದ್ಧಿಯನ್ನು ತಡೆಯುವ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ಮೂಲಕ ಹೊಸ ಆರಂಭವನ್ನು ಮಾಡಿತು. ನೀವು ತ್ರಿಪುರದ ಸಾಮರ್ಥ್ಯವನ್ನು ಹಿಡಿದಿಟ್ಟಿದ್ದ ಸಂಕೋಲೆಗಳನ್ನು ಬಿಡಿಸಿದ್ದೀರಿ. ಮಾ ತ್ರಿಪುರ ಸುಂದರಿಯ ಆಶೀರ್ವಾದದೊಂದಿಗೆ ಬಿಪ್ಲಾಬ್ ದೇಬ್ ಜಿ ನೇತೃತ್ವದ ಸರ್ಕಾರವು ತನ್ನ ನಿರ್ಣಯಗಳನ್ನು ಶೀಘ್ರ ಕೈಗೊಂಡಿದ್ದರ ಬಗ್ಗೆ ಎಂದು ನನಗೆ ಸಂತೋಷವಾಗಿದೆ.

ಸ್ನೇಹಿತರೇ,

2017 ರಲ್ಲಿ, ತ್ರಿಪುರಾದಲ್ಲಿ ಒಂದು ಡಬಲ್ ಎಂಜಿನ್ ಅಭಿವೃದ್ಧಿಯನ್ನು ಸ್ಥಾಪಿಸಲು ನೀವು ನಿರ್ಧರಿಸಿದ್ದೀರಿ - ತ್ರಿಪುರಾದಲ್ಲಿ ಒಂದು ಎಂಜಿನ್ ಮತ್ತು ಇನ್ನೊಂದು ದೆಹಲಿಯಲ್ಲಿ.  ಈ ಡಬಲ್ ಎಂಜಿನ್ ನಿರ್ಧಾರವು ಪ್ರಗತಿಗೆ ದಾರಿ ಮಾಡಿಕೊಟ್ಟಿತು, ಮತ್ತು ಇದರ ಫಲಿತಾಂಶಗಳು ಇಂದು ನಿಮ್ಮ ಮುಂದೆ ಇವೆ. ಇಂದು, ತ್ರಿಪುರವು 30 ವರ್ಷದ ಇದ್ದ ಸರ್ಕಾರ ಮತ್ತು ಡಬಲ್ ಎಂಜಿನ್‌ನ ಮೂರು ವರ್ಷಗಳ ಸರ್ಕಾರದ ನಡುವೆ ಇರುವ ಸ್ಪಷ್ಟ ವ್ಯತ್ಯಾಸವನ್ನು ಕಾಣುತ್ತಿದೆ. ಮೊದಲು ಲಂಚ,ರುಷುವತ್ತು ಮತ್ತು ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುವುದು ಕಷ್ಟಕರವಾಗಿತ್ತೋ ಅಲ್ಲಿ  ಇಂದು ಸರ್ಕಾರದ ಲಾಭಗಳು ನೇರವಾಗಿ ಜನರ ಬ್ಯಾಂಕ್ ಖಾತೆಗೆ ತಲುಪುತ್ತಿವೆ. ಕಾಲ ಕಾಲಕ್ಕೆ  ಸಂಬಳ ದೊರೆಯದೆ ತೊಂದರೆಗೊಳಗಾದ ನೌಕರರು ಈಗ 7 ನೇ ವೇತನ ಆಯೋಗದ ಅಡಿಯಲ್ಲಿ ತಮ್ಮ ಸಂಬಳವನ್ನು ಪಡೆಯುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನೇಕ ತೊಂದರೆಗಳನ್ನು ಎದುರಿಸಬೇಕಾಗಿತ್ತು ಈಗ ರೈತರ ಉತ್ಪನ್ನಗಳನ್ನು ತ್ರಿಪುರದಲ್ಲಿ ಮೊದಲ ಬಾರಿಗೆ ಎಂಎಸ್‌ಪಿಯಲ್ಲಿ ಖರೀದಿಸಲಾಯಿತು. ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳು ಈಗ ದಿನಕ್ಕೆ ರೂ.135 ಬದಲು ರೂ.205 ಪಡೆಯುತ್ತಿದ್ದಾರೆ. ಮುಷ್ಕರ ಸಂಸ್ಕೃತಿಯಿಂದ ಹಿಂದುಳಿದಿದ್ದ ತ್ರಿಪುರವು ಈಗ ವ್ಯಾಪಾರ ಮಾಡಲು ಸುಲಭವಾಗುವಂತಾಗಿದೆ. ಕೈಗಾರಿಕೆಗಳ ಮುಚ್ಚುವಿಕೆಯನ್ನು ಎದುರಿಸುತ್ತಿದ್ದ ತ್ರಿಪುರ ಈಗ ಕೈಗಾರಿಕೆಗಳನ್ನು ಸ್ಥಾಪಿಸಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ.  ವ್ಯಾಪಾರದ ಪ್ರಮಾಣ ಹೆಚ್ಚಳದ ಜೊತೆಗೆ, ತ್ರಿಪುರಾದಿಂದ ರಫ್ತು ಕೂಡ ಸುಮಾರು ಐದು ಪಟ್ಟು ಹೆಚ್ಚಾಗಿದೆ.

ಸ್ನೇಹಿತರೇ,

ತ್ರಿಪುರದ ಅಭಿವೃದ್ಧಿಗೆ ಪ್ರತಿಯೊಂದು ಅವಶ್ಯಕತೆಗಳನ್ನು ಕೇಂದ್ರ ಸರ್ಕಾರ ನೋಡಿಕೊಂಡಿದೆ.  ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ತ್ರಿಪುರಕ್ಕೆ ಹಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.   ತ್ರಿಪುರವು 2009 ಮತ್ತು 2014 ರ ನಡುವೆ ಕೇಂದ್ರ ಅಭಿವೃದ್ಧಿ ಯೋಜನೆಗಳಿಗೆ 3500 ಕೋಟಿ ಪಡೆದಿದೆ.  ರೂ.3500 ಕೋಟಿ ರೂಪಾಯಿಗಳು! ಆದರೆ ನಾವು ಸರ್ಕಾರ ರಚಿಸಿದ ನಂತರ 2014 ಮತ್ತು 2019 ರ ನಡುವೆ ತ್ರಿಪುರಕ್ಕೆ 12,000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.  ಇಂದು, ತ್ರಿಪುರ ಡಬಲ್ ಎಂಜಿನ್ ಸರ್ಕಾರ ಇಲ್ಲದ ದೊಡ್ಡ ರಾಜ್ಯಗಳಿಗೆ ಒಂದು ಉದಾಹರಣೆಯಾಗಿದೆ ಮತ್ತು ಇವುಗಳು ದೆಹಲಿಯೊಂದಿಗೆ ಜಗಳವಾಡಲು ತಮ್ಮ ಸಮಯವನ್ನು ಮೀಸಲಿಡುತ್ತಾರೆ.  ಅವರಗೀಗ ಅರಿವಾಗುತ್ತಿದೆ.  ಒಂದು ಕಾಲದಲ್ಲಿ ವಿದ್ಯುತ್ ಕೊರತೆಯ ರಾಜ್ಯವಾಗಿದ್ದ  ತ್ರಿಪುರ, ಡಬಲ್ ಎಂಜಿನ್ ಸರ್ಕಾರದಿಂದಾಗಿ ಇಂದು ವಿದ್ಯುತ್ ಹೆಚ್ಚುವರಿ ರಾಜ್ಯವಾಗಿ ಮಾರ್ಪಟ್ಟಿದೆ. 2017 ಕ್ಕಿಂತ ಮೊದಲು ತ್ರಿಪುರಾದಲ್ಲಿ ಕೇವಲ 19,000 ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿಯ ನೀರನ್ನು ಹೊಂದಿದ್ದವು. ದೆಹಲಿ ಮತ್ತು ತ್ರಿಪುರದ ಡಬಲ್ ಎಂಜಿನ್ ಸರ್ಕಾರದಿಂದಾಗಿ ಸುಮಾರು ಎರಡು ಲಕ್ಷ ಗ್ರಾಮೀಣ ಕುಟುಂಬಗಳಿಗೆ ಈಗ ನಲ್ಲಿಯ ನೀರು ಸಿಗುತ್ತಿದೆ.

2017 ಕ್ಕಿಂತ ಮೊದಲು, ತ್ರಿಪುರದ 5.80 ಲಕ್ಷ ಕುಟುಂಬಗಳು ಅಡುಗೆ ಅನಿಲ ಸಂಪರ್ಕವನ್ನು ಹೊಂದಿದ್ದವು, ಅಂದರೆ ಆರು ಲಕ್ಷಕ್ಕಿಂತ ಕಡಿಮೆ.  ಇಂದು ರಾಜ್ಯದ 8.5 ಲಕ್ಷ ಮನೆಗಳಿಗೆ ಅಡುಗೆ ಅನಿಲ ಸಂಪರ್ಕವಿದೆ.  8.50 ಲಕ್ಷ ಮನೆಗಳಲ್ಲಿ! ತ್ರಿಪುರಾದಲ್ಲಿ ಕೇವಲ ಶೇಕಡ 50 ರಷ್ಟು ಹಳ್ಳಿಗಳು ಡಬಲ್ ಎಂಜಿನ್ ಸರ್ಕಾರ ರಚನೆಯಾಗುವ ಮೊದಲು ಬಯಲು ಮಲವಿಸರ್ಜನೆ ಮುಕ್ತವಾಗಿದ್ದವು, ಇಂದು ತ್ರಿಪುರದ ಪ್ರತಿಯೊಂದು ಹಳ್ಳಿಯೂ ಬಯಲು ಮಲವಿಸರ್ಜನೆ ಮುಕ್ತವಾಗಿದೆ. ಇಂದು ಸೌಭಾಗ್ಯ ಯೋಜನೆಯಡಿ ಶೇಕಡಾ 100 ರಷ್ಟು ವಿದ್ಯುದೀಕರಣವಾಗಲಿ, ಉಜ್ವಲಾ ಯೋಜನೆಯಡಿ 2.5 ಲಕ್ಷಕ್ಕೂ ಹೆಚ್ಚು ಉಚಿತ ಅನಿಲ ಸಂಪರ್ಕವಾಗಲಿ, ಅಥವಾ ಮಾತೃ  ವಂದನಾ ಯೋಜನೆಯಡಿ 50,000 ಕ್ಕೂ ಹೆಚ್ಚು ಗರ್ಭಿಣಿಯರಿಗೆ ಆದ ಲಾಭವಾಗಲಿ ಇವುಗಳಿಂದ  ತ್ರಿಪುರದ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಸಶಕ್ತಗೊಳಿಸಲು ದೆಹಲಿ ಮತ್ತು ತ್ರಿಪುರದ ಡಬಲ್ ಎಂಜಿನ್ ಸರ್ಕಾರ ಸಹಾಯ ಮಾಡುತ್ತಿದೆ  ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಆಯುಷ್ಮಾನ್ ಭಾರತ್ ಯೋಜನೆ ತ್ರಿಪುರದ ರೈತರು ಮತ್ತು ಬಡ ಕುಟುಂಬಗಳಿಗೆ ಸಹ ಪ್ರಯೋಜನವನ್ನು ನೀಡುತ್ತಿದೆ. ಡಬಲ್ ಎಂಜಿನ್ ಸರ್ಕಾರವಿಲ್ಲದಿರುವ ನಿಮ್ಮ ನೆರೆಹೊರೆಯ ರಾಜ್ಯಗಳಲ್ಲಿ ಬಡವರು, ರೈತರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಈ ಯೋಜನೆಗಳು ಜಾರಿಗೆ ಬಂದಿಲ್ಲ, ಅಥವಾ ಅದರ ಗತಿ ತುಂಬಾ ನಿಧಾನವಾಗಿದೆ ಎನ್ನುವುದನ್ನು ದೇಶವು ಗಮನಿಸುತ್ತಿದೆ.

ಸ್ನೇಹಿತರೇ,

ಡಬಲ್ ಎಂಜಿನ್‌ನ ಸರ್ಕಾರದ ಅತಿದೊಡ್ಡ ಪರಿಣಾಮವು ತನ್ನ ಪಕ್ಕಾ ಮನೆಗಳನ್ನು ಬಡವರಿಗೆ ನೀಡುವ ವೇಗದಲ್ಲಿ ಕಂಡುಬರುತ್ತದೆ.  ಇಂದು, ತ್ರಿಪುರ ಸರ್ಕಾರವು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವಾಗ, ರಾಜ್ಯದ 40,000 ಬಡ ಕುಟುಂಬಗಳು ಸಹ ತಮ್ಮ ಹೊಸ ಮನೆಯನ್ನು ಪಡೆಯುತ್ತಿದ್ದಾರೆ. ಇಂದು ತಮ್ಮ ಮನೆಯ ಕನಸು ನನಸಾಗುತ್ತಿರುವ ಬಡ ಕುಟುಂಬಗಳು ತಮ್ಮ ಒಂದು ಮತದ ಬಲವನ್ನು ತಿಳಿದಿದ್ದಾರೆ. ಒಂದು ಮತವು ಅವರ ಕನಸುಗಳನ್ನು ಹೇಗೆ ಸಾಕಾರಗೊಳಿಸಬಹುದು? ಸ್ವಂತ ಮನೆ ಪಡೆಯುತ್ತಿರುವವರೆಲ್ಲರ ಅನುಭವಕ್ಕೆ ಇದು ಬಂದಿರಬಹುದು. ಈ ಹೊಸ ಮನೆ ನಿಮ್ಮ ಕನಸುಗಳಿಗೆ ಮತ್ತು ನಿಮ್ಮ ಮಕ್ಕಳ ಆಕಾಂಕ್ಷೆಗಳಿಗೆ ಹೊಸ ರೆಕ್ಕೆಗಳನ್ನು ನೀಡಬೇಕೆಂದು ನಾನು ಬಯಸುತ್ತೇನೆ.

ಸಹೋದರ ಮತ್ತು ಸಹೋದರಿಯರೇ,

ಹಳ್ಳಿಯೇ ಇರಲೀ ಅಥವಾ ನಗರವೇ ಇರಲಿ  ತ್ರಿಪುರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿರುವುದು ಡಬಲ್ ಎಂಜಿನ್ ಸರ್ಕಾರದ ಸಾಮರ್ಥ್ಯವಾಗಿದೆ.  ತ್ರಿಪುರದ ಸಣ್ಣ ಪಟ್ಟಣಗಳಲ್ಲಿ ಬಡವರಿಗೆ 80,000 ಕ್ಕೂ ಹೆಚ್ಚು ಪಕ್ಕಾ ಮನೆಗಳನ್ನು ಮಂಜೂರು ಮಾಡಲಾಗಿದೆ. ಹೊಸ ತಂತ್ರಜ್ಞಾನದಿಂದ ಆಧುನಿಕ ಮನೆಗಳನ್ನು ನಿರ್ಮಿಸುತ್ತಿರುವ ದೇಶದ ಆರು ರಾಜ್ಯಗಳಲ್ಲಿ ತ್ರಿಪುರವೂ ಸೇರಿದೆ.

ಸಹೋದರ  ಸಹೋದರಿಯರೇ,

ಹಿರಾ, ಅಭಿವೃದ್ಧಿಗಾಗಿ ತ್ರಿಪುರದಲ್ಲಿ ಡಬಲ್ ಎಂಜಿನ್ (ಸರ್ಕಾರ) ಇರುತ್ತದೆ ಎಂದು ನಿಮಗೆ ಮಾತು ಕೊಟ್ಟಿದ್ದೆವು. ನಾನು ವೀಡಿಯೊವನ್ನು ನೋಡುತ್ತಿದ್ದೆ, ಅದನ್ನು ಅದ್ಭುತವಾಗಿ ಹಿಡಿಯಲಾಗಿದೆ.  ಹಿರಾ HIRA ಅಂದರೆ, H- ಹೆದ್ದಾರಿಗಳು,I- ಐ-ವೇಗಳು, A- ರೈಲ್ವೆ ಮತ್ತು A- ವಾಯುಮಾರ್ಗಗಳು!  ಕಳೆದ ಮೂರು ವರ್ಷಗಳಲ್ಲಿ ತ್ರಿಪುರದ ಸಂಪರ್ಕದ ಮೂಲಸೌಕರ್ಯದಲ್ಲಿ ಶೀಘ್ರ ಸುಧಾರಣೆ ಕಂಡುಬಂದಿದೆ. ಇದು ವಿಮಾನ ನಿಲ್ದಾಣದ ಕೆಲಸವಾಗಲಿ ಅಥವಾ ತ್ರಿಪುರವನ್ನು ಸಮುದ್ರದ ಮೂಲಕ ಇಂಟರ್‌ನೆಟ್‌-ಗೆ ಸಂಪರ್ಕಿಸುವ ಕೆಲಸವಾಗಲಿ, ಅಥವಾ ರೈಲು ಸಂಪರ್ಕವಾಗಲಿ ಇವು ಶೀಘ್ರ ಪ್ರಗತಿ ಕಾಣುತ್ತಿವೆ.  ರೂ. 3,000 ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟ ಅಥವಾ ಇಂದು ಶಂಖುಸ್ಥಾಪನೆ ಮಾಡಿದ ಯೋಜನೆಗಳು ನಮ್ಮ ಅದೇ ಹಿರಾ ಯೋಜನೆಯ ಮಾದರಿಯ ಭಾಗವಾಗಿದೆ.  ವಾಸ್ತವವಾಗಿ, ಈಗ ಜಲಮಾರ್ಗಗಳು ಮತ್ತು ಬಂದರು ಮೂಲಸೌಕರ್ಯಗಳನ್ನು ಸಹ ಇದಕ್ಕೆ ಸೇರಿಸಲಾಗಿದೆ.

ಸ್ನೇಹಿತರೇ,

ಇದರ ಭಾಗವಾಗಿ ತ್ರಿಪುರದಲ್ಲಿ ಗ್ರಾಮಗಳಿಗೆ ರಸ್ತೆಗಳ, ಹೆದ್ದಾರಿಗಳನ್ನು ಅಗಲಗೊಳಿಸುವುದು, ಸೇತುವೆಗಳು, ಪಾರ್ಕಿಂಗ್, ರಫ್ತಿಗೆ ಮೂಲಸೌಕರ್ಯ, ಸ್ಮಾರ್ಟ್ ಸಿಟಿ ಮೂಲಸೌಕರ್ಯಗಳ ಕೊಡುಗೆಗಳು ಇಂದು ದೊರೆತಿವೆ. ತ್ರಿಪುರದಲ್ಲಿ ಇಂದು ಅಭಿವೃದ್ಧಿಪಡಿಸುತ್ತಿರುವ ಸಂಪರ್ಕ ಸೌಲಭ್ಯಗಳು ದೂರದ ಹಳ್ಳಿಗಳಲ್ಲಿ ಜನರ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಮತ್ತು ಜನರ ಆದಾಯವನ್ನು ಹೆಚ್ಚಿಸುತ್ತದೆ. ಈ ಸಂಪರ್ಕವು ಬಾಂಗ್ಲಾದೇಶ ಮತ್ತು ವ್ಯಾಪಾರದೊಂದಿಗಿನ ನಮ್ಮ ಸ್ನೇಹಕ್ಕಾಗಿ ಬಲವಾದ ಕೊಂಡಿಯಾಗಿದೆ ಎಂದು ಸಾಬೀತಾಗಿದೆ.

ಸ್ನೇಹಿತರೇ,

ಇಡೀ ಪ್ರದೇಶವನ್ನು ಪೂರ್ವ, ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಒಂದು ರೀತಿಯ ವ್ಯಾಪಾರದ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನನ್ನ ಬಾಂಗ್ಲಾದೇಶದ ಭೇಟಿಯ ಸಮಯದಲ್ಲಿ, ನಾನು ಮತ್ತು ಪ್ರಧಾನಿ ಶೇಖ್ ಹಸೀನಾಜಿ ಒಟ್ಟಾಗಿ ತ್ರಿಪುರವನ್ನು ನೇರವಾಗಿ ಬಾಂಗ್ಲಾದೇಶಕ್ಕೆ ಸಂಪರ್ಕಿಸುವ ಸೇತುವೆಗೆ ಶಿಲಾನ್ಯಾಸವನ್ನು ನಡೆಸಿದ್ದೆವು ಮತ್ತು ಅದನ್ನು ಇಂದು ಉದ್ಘಾಟಿಸಲಾಗಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ಸ್ನೇಹ ಮತ್ತು ಸಂಪರ್ಕವನ್ನು ಪ್ರಸ್ತಾಪಿಸಿದ ಗೌರವಾನ್ವಿತ ಪ್ರಧಾನಿ ಶೇಖ್ ಹಸೀನಾ ಜಿ ಅವರ ಮಾತುಗಳನ್ನು ನಾವು ಆಲಿಸಿದ್ದೇವೆ. ಸಬ್ರೂಮ್ ಮತ್ತು ರಾಮಗರ್ ನಡುವಿನ ಸೇತುವೆ ಭಾರತ  ಮತ್ತು ಬಾಂಗ್ಲಾದೇಶದ ಸಮೃದ್ಧಿಯ ಜೊತೆಗೆ ನಮ್ಮ ಸ್ನೇಹವನ್ನು ಬಲಪಡಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಭೂಮಿ, ರೈಲು ಮತ್ತು ನೀರಿನ ಸಂಪರ್ಕಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಈ ಒಪ್ಪಂದದಿಂದ ಮತ್ತಷ್ಟು ಬಲಪಡಿಸಲಾಗಿದೆ. ಇದು ತ್ರಿಪುರ ಮತ್ತು ದಕ್ಷಿಣ ಅಸ್ಸಾಂ, ಮಿಜೋರಾಂ, ಮಣಿಪುರದಿಂದ ಬಾಂಗ್ಲಾದೇಶ ಮತ್ತು ಆಗ್ನೇಯ ಏಷ್ಯಾದ ಇತರ ದೇಶಗಳ ಸಂಪರ್ಕವನ್ನು ಸಶಕ್ತಗೊಳಿಸುತ್ತದೆ. ಈ ಸೇತುವೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಭಾರತದಲ್ಲಿ ಮಾತ್ರವಲ್ಲ, ಬಾಂಗ್ಲಾದೇಶದಲ್ಲೂ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುತ್ತದೆ. ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಈ ಸೇತುವೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಬಂದರು ನೇತೃತ್ವದ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಬಂದರಿನೊಂದಿಗಿನ ಸಂಪರ್ಕದಿಂದಾಗಿ ಸಬ್ರೂಮ್ ಮತ್ತು ಅದರ ಪಕ್ಕದ ಪ್ರದೇಶಗಳು ಅಂತರರಾಷ್ಟ್ರೀಯ ವ್ಯಾಪಾರದ ಒಂದು ದೊಡ್ಡ ಕೇಂದ್ರವಾಗಲಿದೆ.

ಸ್ನೇಹಿತರೇ,

ಮೈತ್ರಿ ಸೇತು (ಸೇತುವೆ) ಹೊರತುಪಡಿಸಿ ಇತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದಾಗ, ನಾವು ಈಶಾನ್ಯಕ್ಕೆ ಸರಬರಾಜು ಮಾಡಲು ರಸ್ತೆ ಮಾರ್ಗವನ್ನು ಮಾತ್ರ ಅವಲಂಬಿಸಬೇಕಾಗಿಲ್ಲ. ಈಗ ಸಮುದ್ರ ಮತ್ತು ನದಿ ಮಾರ್ಗಗಳಿಗೆ ತೊಂದರೆಯಾಗುವುದಿಲ್ಲ.  ದಕ್ಷಿಣ ತ್ರಿಪುರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸಬ್ರೂಮ್‌ನಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ನಿರ್ಮಾಣವೂ ಇಂದಿನಿಂದ ಪ್ರಾರಂಭವಾಗಿದೆ. ಈ ಐಸಿಪಿ ಪೂರ್ಣ ಪ್ರಮಾಣದ ಲಾಜಿಸ್ಟಿಕ್ ಹಬ್‌ನಂತೆ ಕಾರ್ಯನಿರ್ವಹಿಸುತ್ತದೆ. ಪಾರ್ಕಿಂಗ್ ಸ್ಥಳಗಳು, ಗೋದಾಮುಗಳು ಮತ್ತು ಕಂಟೇನರ್ ಟ್ರಾನ್ಸ್-ಶಿಪ್ಪಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.

ಸ್ನೇಹಿತರೇ,

ಫೆನಿ ಸೇತುವೆ ತೆರೆಯುವುದರೊಂದಿಗೆ, ಅಗರ್ತಲಾ ಅಂತರರಾಷ್ಟ್ರೀಯ ಬಂದರಿನಿಂದ ಭಾರತದ ಹತ್ತಿರದ ನಗರವಾಗಲಿದೆ. ಈಗಾಗಲೇ ಸಮರ್ಪಿಸಲಾಗಿರುವ ಅಥವಾ ಇಂದು ಶಿಲಾನ್ಯಾಸವನ್ನು ಹಾಕಿರುವ ಎನ್ಎಚ್-8 ಮತ್ತು ಎನ್ಎಚ್-208 ಅನ್ನು ವಿಸ್ತರಿಸುವ ಯೋಜನೆಗಳು, ಈಶಾನ್ಯ ಬಂದರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. ಅಗರ್ತಲಾ ಈಶಾನ್ಯದಾದ್ಯಂತ ಲಾಜಿಸ್ಟಿಕ್ಸ್‌ನ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ಮಾರ್ಗವು ಸಾರಿಗೆ ವೆಚ್ಚವನ್ನು ಕಡಿತಗೊಳಿಸುತ್ತದೆ ಮತ್ತು ಇಡೀ ಈಶಾನ್ಯವು ಸರಕುಗಳನ್ನು ಸುಲಭವಾಗಿ ಪಡೆಯುತ್ತದೆ.  ತ್ರಿಪುರದ ರೈತರು ತಮ್ಮ ಹಣ್ಣುಗಳು, ತರಕಾರಿಗಳು, ಹಾಲು, ಮೀನು ಇತ್ಯಾದಿಗಳಿಗಾಗಿ ದೇಶ ಮತ್ತು ವಿದೇಶಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಪಡೆಯಲಿದ್ದಾರೆ.  ಈಗ ಇರುವ ಕೈಗಾರಿಕೆಗಳಿಗೆ ಲಾಭವಾಗಲಿದೆ ಮತ್ತು ಹೊಸ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ. ಇಲ್ಲಿ ಉತ್ಪಾದನೆಯಾಗುತ್ತಿರುವ ಕೈಗಾರಿಕಾ ಸರಕುಗಳು ವಿದೇಶಿ ಮಾರುಕಟ್ಟೆಗಳಲ್ಲೂ ಬಹಳ ಸ್ಪರ್ಧಾತ್ಮಕವಾಗಿರುತ್ತವೆ. ವರ್ಷಗಳಲ್ಲಿ, ಈ ಹೊಸ ಸೌಲಭ್ಯಗಳಿಂದ ಬಿದಿರಿನ ಉತ್ಪನ್ನಗಳು, ಧೂಪದ್ರವ್ಯದ ಉದ್ಯಮ, ಅನಾನಸ್ ಸಂಬಂಧಿತ ವ್ಯವಹಾರಗಳಿಗೆ ನೀಡಲಾಗುವ ಪ್ರೋತ್ಸಾಹವನ್ನು ಇನ್ನಷ್ಟು ಬಲಪಡಿಸಲಾಗುತ್ತದೆ.

ಸಹೋದರ  ಸಹೋದರಿಯರೇ,

ಅಗರ್ತಲಾದಂತಹ ನಗರಗಳು ಆತ್ಮ ನಿರ್ಭರ  ಭಾರತದ ಹೊಸ ಕೇಂದ್ರಗಳಾಗುವ ಸಾಮರ್ಥ್ಯ ಹೊಂದಿವೆ. ಅಗರ್ತಲಾವನ್ನು ಉತ್ತಮ ನಗರವನ್ನಾಗಿ ಮಾಡಲು ಅನೇಕ ಯೋಜನೆಗಳ ಸಮರ್ಪಣೆ ಮತ್ತು ಶಿಲಾನ್ಯಾಸವು ಅಂತಹ ಪ್ರಯತ್ನಗಳ ಒಂದು ಭಾಗವಾಗಿದೆ. ಹೊಸದಾಗಿ ರಚಿಸಲಾದ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಸ್ಮಾರ್ಟ್ ತಂತ್ರಜ್ಞಾನದ ಮೂಲಕ ನಗರದ ವ್ಯವಸ್ಥೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಸಂಚಾರ ಸಂಬಂಧಿತ ಸಮಸ್ಯೆಗಳಿಂದ ಹಿಡಿದು ಅಪರಾಧ ತಡೆಗಟ್ಟುವವರೆಗೆ ವಿವಿಧ ವಿಷಯಗಳಿಗೆ ತಾಂತ್ರಿಕ ನೆರವು ಇರುತ್ತದೆ. ಅಂತೆಯೇ, ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಹುಮಟ್ಟದ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣಗಳು ಮತ್ತು ರಸ್ತೆಯ ಅಗಲೀಕರಣವು ಅಗರ್ತಲಾದಲ್ಲಿ ವಾಸಿಸುವ ಸುಲಭ ಮತ್ತು ವ್ಯಾಪಾರ ಮಾಡುವಿಕೆಯನ್ನು ಉತ್ತಮಗೊಳಿಸುತ್ತದೆ.

ಸಹೋದರ ಸಹೋದರಿಯರೇ,

ಅಂತಹ ಅಭಿವೃದ್ಧಿ ಕಾರ್ಯಗಳು ನಡೆದಾಗ; ವರ್ಷಗಳಿಂದ ಕಡೆಗಣಿಸಲ್ಪಟ್ಟ ಜನರು ಮತ್ತು ಅವರವರ ಪಾಡಿಗೆ ಕಷ್ಟದಲ್ಲೇ ಜೀವನ ನಡೆಸುತ್ತಿದ್ದ ಜನರು. ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರು ಮತ್ತು ಬ್ರೂ ನಿರಾಶ್ರಿತರು, ವಿಶೇಷವಾಗಿ ಸರ್ಕಾರದ ಇಂತಹ ಹಲವು ಕ್ರಮಗಳಿಂದ ಲಾಭ ಪಡೆಯುತ್ತಿದ್ದಾರೆ.  ಸರ್ಕಾರದ ಪ್ರಯತ್ನದಿಂದಾಗಿ ತ್ರಿಪುರದ ಬ್ರೂ ನಿರಾಶ್ರಿತರ ದಶಕಗಳಷ್ಟು ಹಳೆಯ ಸಮಸ್ಯೆಗಳನ್ನು ಬಗೆಹರಿಸಲಾಯಿತು.  ರೂ. 600 ಕೋಟಿಯ ವಿಶೇಷ ಪ್ಯಾಕೇಜ್ ಸಾವಿರಾರು ಬ್ರೂ ಸಹೋದ್ಯೋಗಿಗಳ ಜೀವನದಲ್ಲಿ ಅತ್ಯಂತ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ.

ಸ್ನೇಹಿತರೇ,

ಕುಡಿಯುವ ನೀರು, ವಿದ್ಯುತ್ ಮತ್ತು ಆರೋಗ್ಯದಂತಹ ಸೌಲಭ್ಯಗಳು ಪ್ರತಿ ಮನೆ ಬಾಗಿಲಿಗೆ ತಲುಪಿದಾಗ ನಮ್ಮ ಬುಡಕಟ್ಟು ಪ್ರದೇಶಗಳು ಸಾಕಷ್ಟು ಪ್ರಯೋಜನ ಪಡೆಯುತ್ತವೆ.  ಕೇಂದ್ರ ಮತ್ತು ತ್ರಿಪುರ ಸರ್ಕಾರಗಳು ಜೊತೆಯಾಗಿ ಇದಕ್ಕಾಗಿ ಕೆಲಸ ಮಾಡುತ್ತಿವೆ. ತ್ರಿಪುರದ ಅಭಿವೃದ್ಧಿಗೆ ಇದ್ದ ದೂರದೃಷ್ಟಿಯ ಗೌರವಕ್ಕಾಗಿ ಅಗರ್ತಲಾ ವಿಮಾನ ನಿಲ್ದಾಣವನ್ನು ಮಹಾರಾಜ ಬಿರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಜಿ ಎಂದು ನಾಮಕರಣ ಮಾಡಲಾಗಿದ್ದು,   ತ್ರಿಪುರದ ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯಕ್ಕಾಗಿ ಕೆಲಸ ಮಾಡಿದ ಪುತ್ರರಾದ ಶ್ರೀ ತಂಗಾ ದರ್ಲಾಂಗ್ ಜಿ, ಶ್ರೀ ಸತ್ಯರಾಮ್ ರಿಯಾಂಗ್ ಜಿ ಮತ್ತು ಶ್ರೀ ಬೆನಿಚಂದ್ರ ಜಮಾತಿಯಾ ಜಿ ಅವರಿಗೆ ಪದ್ಮಶ್ರೀ ಪ್ರದಾನ ಮಾಡಿದ್ದ ಭಾಗ್ಯವೂ ನಮಗಿದೆ. ಸಂಸ್ಕೃತಿ ಮತ್ತು ಸಾಹಿತ್ಯದ ಈ ಆರಾಧಕರ ಕೊಡುಗೆಗೆ ನಾವೆಲ್ಲರೂ ಋಣಿಯಾಗಿದ್ದೇವೆ. ಬೇನಿ ಚಂದ್ರ ಜಮಾತಿಯಾ ಜಿ ಈಗ ನಮ್ಮ ನಡುವೆ ಇಲ್ಲ, ಆದರೆ ಅವರ ಕೆಲಸ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ.

ಸ್ನೇಹಿತರೇ,

ಪ್ರಧಾನ ಮಂತ್ರಿ ವನ್ ಧನ್ ಯೋಜನೆ ಅಡಿಯಲ್ಲಿ ಬುಡಕಟ್ಟು ಕರಕುಶಲ ವಸ್ತುಗಳು ಮತ್ತು ಬಿದಿರು ಆಧಾರಿತ ಕಲೆಗಳಿಗೆ ನೀಡುವ ಪ್ರೋತ್ಸಾಹವು ಬುಡಕಟ್ಟು ಸಹೋದರ ಸಹೋದರಿಯರಿಗೆ ಹೊಸ ಆದಾಯದ ಮೂಲಗಳನ್ನು ಒದಗಿಸುತ್ತಿದೆ. ಮುಲಿ ಬಿದಿರಿನ ಕುಕಿಯನ್ನು ಪ್ಯಾಕೇಜ್ ಮಾಡಿದ ಉತ್ಪನ್ನವಾಗಿ ಮೊದಲ ಬಾರಿಗೆ ಪ್ರಾರಂಭಿಸಲಾಗಿದೆ ಎಂದು ನನಗೆ ಹೇಳಲಾಗಿದೆ. ಇದು ಶ್ಲಾಘನೀಯ ಕೆಲಸ. ಅಂತಹ ಹಂತಗಳ ವಿಸ್ತರಣೆಯು ಜನರಿಗೆ ಸಹಾಯ ಮಾಡುತ್ತದೆ. ಈ ವರ್ಷದ ಕೇಂದ್ರ ಬಜೆಟ್ ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳು ಮತ್ತು ಇತರ ಆಧುನಿಕ ಸೌಲಭ್ಯಗಳಿಗೆ ಸಮಗ್ರ ಅವಕಾಶವನ್ನು ಒದಗಿಸುತ್ತದೆ. ತ್ರಿಪುರ ಸರ್ಕಾರವು ಮುಂದಿನ ವರ್ಷವೂ ತ್ರಿಪುರ ಜನರಿಗೆ ಸೇವೆ ಸಲ್ಲಿಸುತ್ತಲೇ ಇರುತ್ತದೆ ಎಂದು ನನಗೆ ಖಾತ್ರಿಯಿದೆ. ಮತ್ತೊಮ್ಮೆ, ಮೂರು ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ಬಿಪ್ಲಾಬ್ ಜಿ, ಅವರ ಇಡೀ ತಂಡ ಮತ್ತು ಆಡಳಿತದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಭವಿಷ್ಯದಲ್ಲಿ ಜನರಿಗೆ ಸೇವೆ ಸಲ್ಲಿಸಲು ಮತ್ತು ತ್ರಿಪುರದ ಹಣೆಬರಹವನ್ನು ಬದಲಿಸಲು ಅವರು ಹೆಚ್ಚಿನ ಪ್ರಯತ್ನಗಳನ್ನು ಮುಂದುವರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಬಹಳ  ಅಭಿನಂದಿಸುತ್ತೇನೆ.  ನನ್ನ ಶುಭಾಶಯಗಳು .

ಧನ್ಯವಾದಗಳು!

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಭಾಷಣ ಮಾಡಲಾಗಿತ್ತು.

***



(Release ID: 1704326) Visitor Counter : 210