ಪ್ರಧಾನ ಮಂತ್ರಿಯವರ ಕಛೇರಿ

ಭಾರತ – ಬಾಂಗ್ಲಾದೇಶ ನಡುವಿನ “ ಮೈತ್ರಿ ಸೇತು” ಉದ್ಘಾಟಿಸಿದ ಪ್ರಧಾನಮಂತ್ರಿ


ಡಬಲ್ ಎಂಜಿನ್ ಸರ್ಕಾರ ತ್ರಿಪುರದಲ್ಲಿ ಪರಿವರ್ತನೆ ತಂದಿದೆ: ಪ್ರಧಾನಮಂತ್ರಿ

ತ್ರಿಪುರದಲ್ಲಿ “ಹೀರಾ” ಅಭಿವೃದ್ಧಿ. ಎಚ್ ಎಂದರೆ ಹೆದ್ದಾರಿಗಳು, ಐ ಎಂದರೆ ಐ ವೇಗಳು, ಆರ್ – ರೈಲ್ವೇ ಮತ್ತು ಎ-ಏರ್ ವೇಸ್ – ಪ್ರಧಾನಮಂತ್ರಿ

ಸಂಪರ್ಕ ಎನ್ನುವುದು ಭಾರತ – ಬಾಂಗ್ಲಾ ದೇಶ ನಡುವಿನ ಸ್ನೇಹವನ್ನಷ್ಟೇ ಬಲವರ್ಧನೆಗೊಳಿಸುವುದಿಲ್ಲ, ವ್ಯಾಪಾರಕ್ಕಾಗಿ ಬಲಿಷ್ಠ ಸಂಪರ್ಕವನ್ನೂ ಸಹ ಒದಗಿಸುತ್ತದೆ: ಪ್ರಧಾನಮಂತ್ರಿ

ಮೈತ್ರಿ ಸೇತುವೆ ಬಾಂಗ್ಲಾದೇಶದ ಆರ್ಥಿಕ ಅವಕಾಶಗಳಿಗೆ ಉತ್ತೇಜನ ನೀಡುತ್ತದೆ: ಪ್ರಧಾನಮಂತ್ರಿ

Posted On: 09 MAR 2021 1:40PM by PIB Bengaluru

ಭಾರತಬಾಂಗ್ಲಾದೇಶ ನಡುವೆ ಸಂಪರ್ಕ ಕಲ್ಪಿಸುವಮೈತ್ರಿ ಸೇತುಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. ಅಲ್ಲದೇ ತ್ರಿಪುರಾದಲ್ಲಿ ಹಲವು ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ತ್ರಿಪುರ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಅಲ್ಲಿನ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶವನ್ನು ಸಹ ಪ್ರಸಾರ ಮಾಡಲಾಯಿತು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ತ್ರಿಪುರಾದಲ್ಲಿ ಹಿಂದಿನ 30 ವರ್ಷಗಳ ಆಡಳಿತ ಮತ್ತು ಈಗಿನ ಮೂರು ವರ್ಷಗಳ ಡಬಲ್ ಎಂಜಿನ್ ಸರ್ಕಾರದ ಆಡಳಿತ ವೈಖರಿಯನ್ನು ಜನತೆ ನೋಡುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ಸಂಸ್ಕೃತಿಯನ್ನು ನೋಡಿದ್ದ ಜನತೆ ಇದೀಗ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಖಾತೆಗೆ ದೊರೆಯುತ್ತಿರುವುದನ್ನು ಕಾಣುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ದೊರೆಯದೇ ತೊಂದರೆಯಲ್ಲಿದ್ದ ನೌಕರರಿಗೆ ಇದೀಗ 7 ನೇ ವೇತನ ಆಯೋಗದ ಪ್ರಕಾರ ನಿಯಮಿತವಾಗಿ ಸಂಬಳ ಸಿಗುತ್ತಿದೆ. ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ತೊಂದರೆ ಎದುರಿಸುತ್ತಿದ್ದ ರೈತರಿಗೆ ತ್ರಿಪುರಾದಲ್ಲಿ ಮೊದಲ ಬಾರಿಗೆ ಕನಿಷ್ಠ ಬೆಂಬಲ ಬೆಲೆ - ಎಂ.ಎಸ್.ಪಿ ಜಾರಿಗೊಳಿಸಲಾಗಿದೆ. ಹಿಂದಿನ ಮುಷ್ಕರ ನಡೆಸುತ್ತಿದ್ದ ಸಂಸ್ಕೃತಿಯ ಜಾಗದಲ್ಲಿ ಇದೀಗ ಸುಗಮ ವ್ಯವಹಾರ ನಡೆಸುವ ವಾತಾವರಣ ಇರುವ ಬಗ್ಗೆ ಪ್ರಧಾನಮಂತ್ರಿ ಅವರು ಗಮನ ಸೆಳೆದರು. ಕೈಗಾರಿಕೆಗಳನ್ನು ಮುಚ್ಚುತ್ತಿದ್ದ ಹಿಂದಿನ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದ್ದು, ಹೊಸ ಹೂಡಿಕೆಗಳು ಹೆಚ್ಚಾಗುತ್ತಿವೆ. ತ್ರಿಪುರದಲ್ಲಿ ರಫ್ತು ಚಟುವಟಿಕೆ ಐದು ಪಟ್ಟು ಹೆಚ್ಚಾಗಿದೆ ಎಂದರು.

ಕಳೆದ ಆರು ವರ್ಷಗಳಲ್ಲಿ ತ್ರಿಪುರಾದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರತಿಯೊಂದು ಅಗತ್ಯಗಳ ಬಗ್ಗೆಯೂ ಗಮನಹರಿಸಿದೆ. ಕೇಂದ್ರದ ಅನುದಾನದಲ್ಲಿ ಗಣನೀಯ ಏರಿಕೆಯಾಗಿದೆ. 2009 – 2014 ಅವಧಿಯಲ್ಲಿ ಕೇಂದ್ರದಿಂದ ತ್ರಿಪುರಾ 3,500 ಕೋಟಿ ರೂ ಅನುದಾನ ಪಡೆದಿತ್ತು. 2014 – 2019 ಅವಧಿಯಲ್ಲಿ 12,000 ಕೋಟಿ ರೂ ನೀಡಲಾಗಿದೆ ಎಂದು ಹೇಳಿದರು.

ತ್ರಿಪುರದಲ್ಲಿ ನೆಲೆ ನಿಂತಿರುವ ಡಬಲ್ ಎಂಜಿನ್ ಸರ್ಕಾರದ ಲಾಭಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಎಲ್ಲಿ ಡಬ್ಬಲ್ ಎಂಜಿನ್ ಸರ್ಕಾರಗಳು ಇಲ್ಲವೋ ಅಲ್ಲಿ ಬಡವರು, ರೈತರು ಮತ್ತು ಮಹಿಳೆಯರ ಕುರಿತಾದ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಮತ್ತು ಮಂದಗತಿ ಪ್ರಗತಿ ಕಾಣುತ್ತಿವೆ. ತ್ರಿಪುರವನ್ನು ಬಲಪಡಿಸಲು ಡಬಲ್ ಎಂಜಿನ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದರು. ವಿದ್ಯುತ್ ಕೊರತೆಯ ತ್ರಿಪುರಾ ರಾಜ್ಯವನ್ನು ಡಬಲ್ ಎಂಜಿನ್ ಸರ್ಕಾರ ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯವನ್ನಾಗಿ ಪರಿವರ್ತಿಸಿದೆ ಎಂದರು.

ರಾಜ್ಯದ ಪರಿವರ್ತನೆಯ ಪಟ್ಟಿ ಮಾಡಿದ ಪ್ರಧಾನಮಂತ್ರಿ ಅವರು, ಎರಡು ಲಕ್ಷ ಗ್ರಾಮೀಣ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಪೂರೈಸುವ, 2.5 ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಪೂರೈಕೆ, ತ್ರಿಪುರದ ಪ್ರತಿಯೊಂದು ಹಳ್ಳಿಯೂ ಸಹ ಬಯಲು ಶೌಚ ಮುಕ್ತವಾಗಿದ್ದು, ಮಾತೃವಂದನಾ ಯೋಜನೆ ಮೂಲಕ 50,000 ಗರ್ಭೀಣಿಯರಿಗೆ ಸೌಲಭ್ಯ, 40,000 ಬಡ ಕುಟುಂಬಗಳಿಗೆ ಹೊಸದಾಗಿ ಸೂರು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಪರ್ಕ ಸಂಬಂಧಿತ ಮೂಲ ಸೌಕರ್ಯದಲ್ಲಿ ಗಣನೀಯ ಸುಧಾರಣೆಯಾಗಿದೆ. ವಿಮಾನ ನಿಲ್ದಾಣ ನಿರ್ಮಾಣದಲ್ಲಿ ತ್ವರಿತಗೊಂಡಿರುವ ಕಾಮಗಾರಿ, ಸಮುದ್ರ ಮಾರ್ಗ, ರೈಲು ಮತ್ತು ಜಲ ಮಾರ್ಗ ವಲಯದಲ್ಲಿ ಅಂತರ್ಜಾಲ ಸೌಲಭ್ಯ ಅಭಿವೃದ್ದಿಯಾಗಿದೆ ಎಂದರು. ತ್ರಿಪುರದಲ್ಲಿಹಿರಾಅಭಿವೃದ್ಧಿ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು. ಎಚ್ ಎಂದರೆ ಹೆದ್ದಾರಿಗಳು, ಎಂದರೆ ವೇಗಳು, ಆರ್ರೈಲ್ವೇ ಮತ್ತು -ಏರ್ ವೇಸ್ ಎಂದು ವ್ಯಾಖ್ಯಾನಿಸಿದರು.

ಸಂಪರ್ಕ ಎನ್ನುವುದು ಭಾರತಬಾಂಗ್ಲಾ ದೇಶ ನಡುವಿನ ಸ್ನೇಹವನ್ನಷ್ಟೇ ಬಲವರ್ಧನೆಗೊಳಿಸುವುದಿಲ್ಲ, ವ್ಯಾಪಾರಕ್ಕಾಗಿ ಬಾಂಗ್ಲಾದೇಶಕ್ಕೆ ಬಲಿಷ್ಠ ಸಂಪರ್ಕವನ್ನೂ ಸಹ ಒದಗಿಸುತ್ತದೆ. ಇಡೀ ಪ್ರದೇಶವನ್ನು ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ರೈಲು ಮತ್ತು ಜಲ ಮಾರ್ಗ ಸಂಪರ್ಕ ಯೋಜನೆಗಳನ್ನು ಸೇತುವೆಯಿಂದ ಬಲಪಡಿಸಲಾಗಿದೆ ಎಂದು ಒತ್ತಿ ಹೇಳಿದರು. ಸಂಪರ್ಕದಿಂದ ದಕ್ಷಿಣ ಅಸ್ಸಾಂ, ಮಿಜೋರಂ ಮತ್ತು ಮಣಿಪುರ ಜತೆಗೆ ತ್ರಿಪುರದೊಂದಿಗೆ ಬಾಂಗ್ಲಾದೇಶ ಮತ್ತು ದಕ್ಷಿಣ ಏಷ್ಯಾದೊಂದಿಗೆ ಸಂಪರ್ಕ ಸಾಧ್ಯವಾಗಲಿದೆ. ಸೇತುವೆ ಬಾಂಗ್ಲಾದೇಶದ ಆರ್ಥಿಕ ಅವಕಾಶಕ್ಕೂ ಉತ್ತೇಜನ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಸೇತುವೆ ನಿರ್ಮಾಣ ಪೂರ್ಣಗೊಳ್ಳಲು ಸಹಕಾರ ನೀಡಿದ ಬಾಂಗ್ಲಾದೇಶ ಸರ್ಕಾರ ಮತ್ತು ಅಲ್ಲಿನ ಪ್ರಧಾನಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದರು. ತಾವು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೇತುವೆಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿಕೊಂಡರು.

ಈಶಾನ್ಯ ರಾಜ್ಯಗಳಿಗೆ ಸರಕುಗಳ ಪೂರೈಕೆಗೆ ಈಗ ರಸ್ತೆ ಮಾರ್ಗವನ್ನಷ್ಟೇ ಅವಲಂಬಿಸಬೇಕಾಗಿಲ್ಲ. ನದಿಯ ಮೂಲಕ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರನ್ನು ಈಶಾನ್ಯದೊಂದಿಗೆ ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಸಬ್ರೂಮ್ ನಲ್ಲಿರುವ ಗೋದಾಮುಗಳು ಮತ್ತು ಕಂಟೈನರ್ ಟ್ರಾನ್ಸ್ ಶಿಪ್ಪಿಂಗ್ ಸೌಲಭ್ಯಗಳೊಂದಿಗೆ ಇದು ಪೂರ್ಣ ಪ್ರಮಾಣದ ಲಾಜಿಸ್ಟಿಕ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಫೆನಿ ನದಿಯ ಮೇಲಿನ ಸೇತುವೆಯಿಂದಾಗಿ ಅಗರ್ತಲಾ ಭಾರತದ ಸಮುದ್ರದ ಅಂತಾರಾಷ್ಟ್ರೀಯ ಬಂದರಿಗೆ ಹತ್ತಿರದ ನಗರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎನ್ಎಚ್-08 ಮತ್ತು ಎನ್ಎಚ್ -208 ಯೋಜನೆಗಳನ್ನು ಸಮರ್ಪಿಸಲಾಗಿದೆ ಮತ್ತು ಈಶಾನ್ಯವನ್ನು ಸಂರ್ಪರ್ಕಿಸುವ ಬಂದರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಇಂದು ಉದ್ಘಾಟಿಸಿರುವ ಹಲವು ಯೋಜನೆಗಳು ಅಗರ್ತಲಾವನ್ನು ಉತ್ತಮ ನಗರ ಮಾಡುವ ಪ್ರಯತ್ನಗಳಾಗಿವೆ. ಹೊಸದಾಗಿ ಉದ್ಘಾಟಿಸಿರುವ ಕಮಾಂಡ್ ಕೇಂದ್ರದಿಂದ ಸಂಚಾರಿ ಸಮಸ್ಯಗಳ ನಿವಾರಣೆ ಮತ್ತು ಅಪರಾಧಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದೇ ಸಂದರ್ಭದಲ್ಲಿ ಬಹುಹಂತದ ಪಾರ್ಕಿಂಗ್, ವಾಣಿಜ್ಯ ಸಂಕಿರ್ಣ ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಸಹ ವಿಸ್ತರಣೆ ಮಾಡಲಾಗಿದೆ. ಇದರಿಂದ ಅಗರ್ತಲಾದಲ್ಲಿ ಸುಗಮ ಜೀವನ ಮತ್ತು ಸುಗಮ ವ್ಯವಹಾರ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸರ್ಕಾರಗಳ ಪ್ರಯತ್ನದ ಫಲವಾಗಿ ದಶಕಗಳಷ್ಟು ಹಳೆಯದಾದ ಬ್ರೂ ನಿರಾಶ್ರಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಂತಾಗಿದೆ. ಬ್ರೂ ಜನಾಂಗದ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು 600 ಕೋಟಿ ರೂ ಮೊತ್ತದ ಪ್ಯಾಕೇಜ್ ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರು ರಾಜ್ಯದ ಶ್ರೀಮಂತ ಪರಂಪರೆಯನ್ನು ಸೃಷ್ಟಿಸಿದರಲ್ಲದೇ ಅಗರ್ತಲಾ ವಿಮಾನ ನಿಲ್ದಾಣಕ್ಕೆ ಮಹಾರಾಜ ಬೀರ್ ವಿಕ್ರಮ್ ಕಿಶೋರ್ ಮಾಣಿಕ್ಯರ ಹೆಸರನ್ನು ಮರು ನಾಮಕರಣ ಮಾಡುತ್ತಿದ್ದು, ಇದು ತ್ರಿಪುರದ ಅಭಿವೃದ್ಧಿ ಕುರಿತ ಅವರ ದೃಷ್ಟಿಕೋನಕ್ಕೆ ಗೌರವ ಸಲ್ಲಿಸುವ ಸಂಕೇತವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ತ್ರಿಪುರಾದ ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯಕ್ಕಾಗಿ ಸೇವೆ ಸಲ್ಲಿಸಿದ ತಂಗಾ ದರ್ಲಾಂಗ್, ಸತ್ಯರಾಮ್ ರಿಂಗ್ ಮತ್ತು ಬೆನಿಚಂದ್ರ ಜಮಾತಿಯಾ ಅವರನ್ನು ಗೌರವಿಸುವ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸ್ಥಳೀಯ ಬಿದುರು ಆಧರಿತ ಸ್ಥಳೀಯ ಕಲೆಯನ್ನು ಪ್ರಧಾನಮಂತ್ರಿ ವನ್ ಧನ್ ಯೋಜನೆಯಡಿ ಉತ್ತೇಜಿಸಲಾಗುವುದು ಮತ್ತು ಇದು ಸ್ಥಳೀಯ ಬುಡಕಟ್ಟು ಜನರಿಗೆ ಹೊಸ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಮೂರು ವರ್ಷಗಳನ್ನು ಪೂರೈಸಿದ ತ್ರಿಪುರ ರಾಜ್ಯ ಸರ್ಕಾರವನ್ನು ಅಭಿನಂದಿಸಿದ ಪ್ರಧಾನಮಂತ್ರಿ ಅವರು, ತ್ರಿಪುರದ ಜನರಿಗೆ ಸೇವೆ ಸಲ್ಲಿಸಲು ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

***(Release ID: 1703581) Visitor Counter : 247