ಪ್ರಧಾನ ಮಂತ್ರಿಯವರ ಕಛೇರಿ
2025ರೊಳಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸಲು ಪ್ರಧಾನಿ ಕನಸು
ಕ್ಷಯರೋಗದ ವಿರುದ್ಧ ಜನಾಂದೋಲನ ಆರಂಭ ಕುರಿತು ಡಾ.ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ
ನಾವು 2021ನೇ ವರ್ಷವನ್ನು ಕ್ಷಯರೋಗ ವರ್ಷವನ್ನಾಗಿ ಮಾಡಲು ಬಯಸಿದ್ದೇವೆ
Posted On:
24 FEB 2021 6:19PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಕ್ಷಯರೋಗದ ವಿರುದ್ಧ ಜನಾಂದೋಲನವನ್ನು ಆರಂಭಿಸುವ ಕುರಿತಂತೆ ವಕೀಲಿಕೆ, ಸಂವಹನ ಮತ್ತು ಸಾಮಾಜಿಕ ಜಾಗೃತಿ(ಎಸಿಎಂಎಸ್) ಒಳಗೊಂಡಂತೆ ಅಭಿವೃದ್ಧಿ ಪಾಲುದಾರರ ಜೊತೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆ ನಡೆಯಿತು.
ಒಟ್ಟಾರೆ ಡಾ.ಹರ್ಷವರ್ಧನ್ ಅವರು, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ(ಎನ್ ಟಿಇಪಿ) ಅಡಿ ಕ್ಷಯರೋಗ ನಿಯಂತ್ರಣಕ್ಕೆ ಭಾರತ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ವಿವರಿಸಿದರು ಮತ್ತು ಅದಕ್ಕಾಗಿ ಕೈಗೊಂಡಿರುವ ದೃಢವಾದ ಕ್ರಮಗಳು ಮತ್ತು ಸಂಪನ್ಮೂಲಗಳ ಒದಗಿಸುವ ದಿಟ್ಟ ಬದ್ಧತೆಗಳ ಮೂಲಕ ಬೆಂಬಲ ನೀಡಿರುವುದನ್ನು ವಿವರಿಸಿದರು. “ನಾವು 2021ನೇ ವರ್ಷವನ್ನು ಕ್ಷಯರೋಗ ವರ್ಷವನ್ನಾಗಿ ಮಾಡಲು ಬಯಸಿದ್ದೇವೆ” ಎಂದ ಸಚಿವರು, ಉಚಿತವಾಗಿ ಚಿಕಿತ್ಸೆ ಮತ್ತು ಆರೈಕೆ ಪಡೆಯುತ್ತಿರುವವರು, ಕಳೆದ ಕೆಲವು ವರ್ಷಗಳಿಂದೀಚೆಗೆ ಉನ್ನತ ಗುಣಮಟ್ಟದ ಕ್ಷಯರೋಗ ಆರೈಕೆ ಪಡೆಯುತ್ತಿರುವವರು ಸೇರಿದಂತೆ ಎಲ್ಲ ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಕೈಗೊಂಡಿರುವ ಭಾರೀ ಪ್ರಗತಿಯನ್ನು ಅವರು ವಿವರಿಸಿದರು. ಮತ್ತು ಇದರ ಲಾಭ ಪಡೆದು ಮತ್ತು ಈ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿ ರೋಗದ ಬಗೆಗಿನ ಕಳಂಕವನ್ನು ಹೋಗಲಾಡಿಸಲು ಮತ್ತು 2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ಗುರಿ ಸಾಕಾರ ನಿಟ್ಟಿನಲ್ಲಿ ಸಹಾಯಕವಾಗಲಿದೆ ಎಂದರು.
ಕಾಯಿಲೆಯನ್ನು ಸಮಗ್ರವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ವಿಧಾನಗಳ ಅಳವಡಿಕೆಯ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದ ಅವರು ಕ್ಷಯರೋಗ ಮುಕ್ತ ಭಾರತದ ಗುರಿ ಸಾಧನೆಗೆ ವೇಗವರ್ಧಿತ ಮತ್ತು ನಿಂತರ ಗಮನಹರಿಸುವ ಸುಸ್ಥಿರ ಆದ್ಯತೆ ಅಗತ್ಯವಿದೆ ಎಂದು ಸಚಿವರು ಹೇಳಿದರು. “ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಮುಂದುವರಿಕೆ ನಮ್ಮ ಕ್ಷಯರೋಗ ನಿರ್ವಹಣೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ. ಇದು ವ್ಯಾಪಕ ಜನಸಂಖ್ಯೆ, ಪ್ರಜಾಪ್ರಭುತ್ವದ ಸಾರವನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮಾತ್ರ ಸಾಧ್ಯವಾಗಿದೆ ಮತ್ತು ಹಲವು ಪೀಳಿಗೆಗಳಿಂದ ನಡೆದುಕೊಂಡು ಬಂದ ಜಾಗೃತಿ, ಸಮುದಾಯದೊಳಗೆ ಆರೋಗ್ಯ ರಕ್ಷಣಾ ನಡವಳಿಕೆಗೆ ಉತ್ತೇಜನ ಮತ್ತು ಕ್ಷಯರೋಗದ ಬಗೆಗಿನ ಕಳಂಕವನ್ನು ಹೋಗಲಾಡಿಸುವುದು ಇವುಗಳಿಂದಾಗಿ ಜನಾಂದೋಲನದ ಸ್ವರೂಪ ತಾಳಲು ಪ್ರೇರಣೆ ಪಡೆದುಕೊಳ್ಳುತ್ತಿದೆ” ಎಂದು ಹೇಳಿದರು. ಸಂಪೂರ್ಣ ಸಹಭಾಗಿತ್ವ ಖಾತ್ರಿಪಡಿಸುವ ಮೂಲಕ ತ್ವರಿತವಾಗಿ ಗರಿಷ್ಠ ಜನಸಂಖ್ಯೆಯನ್ನು ಮುಟ್ಟುವ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದ ಅವರು, ಸಮುದಾಯಗಳ ಸಹಕಾರ ಮತ್ತು ಸಮುದಾಯ ಆಧಾರಿತ ಗುಂಪುಗಳು, ಕ್ಷಯರೋಗ ನಿರ್ವಹಣೆಯ ವಿವಿಧ ಹಂತಗಳಲ್ಲಿ ಸಂಸ್ಥಾಪನಾ ಸ್ಥಂಬಗಳಾಗಿ ಕಾರ್ಯನಿರ್ವಹಿಸಿದ್ದು, ಈ ಚಳವಳಿಯ ಹುಟ್ಟಿಗೆ ಕಾರಣವಾಗಿವೆ ಎಂದರು.
ಕೋವಿಡ್-19 ನಿರ್ವಹಣೆಯಿಂದ ಕಲಿತ ಪಾಠಗಳಿಂದ ಸ್ಫೂರ್ತಿ ಪಡೆಯಬೇಕಾಗಿದೆ. ಭಾರತ ಕೇವಲ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇ ಅಲ್ಲದೆ, ಪರಿಹಾರಗಳು, ರೋಗಪತ್ತೆ ಮತ್ತು ಲಸಿಕೆಯಲ್ಲಿ ಭಾರತ ಇಡೀ ವಿಶ್ವಕ್ಕೆ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು. “ಖಚಿತ ಮಾಹಿತಿ ಮತ್ತು ಸೂಕ್ತ ನಡವಳಿಕೆ ಹಾಗೂ ಶುಚಿತ್ವ ವಿಧಾನಗಳ ಕುರಿತು ಹೆಚ್ಚಿನ ಆದ್ಯತೆ ನೀಡಲು ನಿರಂತರ ಸಂದೇಶ ನೀಡುವುದಕ್ಕೆ ಗಮನಹರಿಸುವ ಪಾತ್ರವನ್ನು ಸಾಂಕ್ರಾಮಿಕದ ವೇಳೆ ತಿಳಿದಿದೆ. ಅದೇ ರೀತಿ ಕ್ಷಯರೋಗದ ಸೋಂಕಿನ ಬಗ್ಗೆಯೂ ರಾಷ್ಟ್ರವ್ಯಾಪಿ ಸಂದೇಶಗಳ ಮೂಲಕ ನಮ್ಮ ಅಧಿಸೂಚನೆಗಳ ಪ್ರಮಾಣವನ್ನು ಮುಂದುವರಿಸಿ, ದೇಶದಲ್ಲಿ ಟಿಬಿ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ನಡವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ ಎಂದರು. ದೆಹಲಿಯ ಆರೋಗ್ಯ ಸಚಿವರಾಗಿದ್ದಾಗ ಪೋಲಿಯೋ ವಿರುದ್ಧದ ಜಾಗೃತಿ ಮೂಡಿಸಲು ನೆರೆಹೊರೆಯ ಔಷಧ ಅಂಗಡಿಗಳ ಸಹಭಾಗಿತ್ವವನ್ನು ಪಡೆದು ಕೈಗೊಂಡಿದ್ದ ಕ್ರಮಗಳನ್ನು ಸಚಿವರು ಸ್ಮರಿಸಿದರು.
ರಾಷ್ಟ್ರೀಯ ತಾಂತ್ರಿಕ ನೆರವಿನ ಸಮಿತಿ(ಎನ್ ಟಿಎಸ್ ಯು) ಸ್ಥಾಪಿಸುವ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಭೆಯ ವಿವರಗಳನ್ನು ಹಂಚಿಕೊಂಡ ಅವರು, ಭಾರತ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸಲು ಅಭಿವೃದ್ಧಿ ಪಾಲುದಾರರ ಸಹಭಾಗಿತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಟಿಬಿ ಕಾರ್ಯಕ್ರಮದಡಿ ಲಭ್ಯವಿರುವ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂವಹನ ವಿಧಾನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಲು ನಾನಾ ಬಗೆಯ ವಕೀಲಿಕೆ ಹಾಗೂ ಸಂವಹನ ವಿಧಾನಗಳನ್ನು ತಳಮಟ್ಟದಲ್ಲಿ ಬಲವರ್ಧನೆಗೊಳಿಸಲು ಸಹಾಯಕವಾಗುತ್ತದೆ.
ಕ್ಷಯರೋಗ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭಿವೃದ್ಧಿ ಪಾಲುದಾರರು ಸಭೆಯಲ್ಲಿ ಭಾಗವಹಿಸಿ, ಕಳೆದ ಕೆಲವು ವರ್ಷಗಳಿಂದೀಚೆಗೆ ತಮ್ಮ ಕಾರ್ಯದಲ್ಲಿ ಆಗಿರುವ ಪರಿಣಾಮಗಳನ್ನು ವಿವರಿಸಿದರು ಮತ್ತು ಉದ್ದೇಶಿತ ಜನಾಂದೋಲನ ಚಳವಳಿಯನ್ನು ಬೆಂಬಲಿಸಲು ತಮ್ಮ ಯೋಜನೆಗಳನ್ನು ಹಂಚಿಕೊಂಡರು.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಹೆಚ್ಚುವರಿ ಕಾರ್ಯದರ್ಶಿ(ಆರೋಗ್ಯ), ಶ್ರೀಮತಿ ಆರತಿ ಅಹುಜಾ, ಡಿಜಿಎಚ್ಎಸ್ ಡಾ. ಸುನಿಲ್ ಕುಮಾರ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಸ್ಥಾನಿಕ ಪ್ರತಿನಿಧಿ ಡಾ. ರೊಡ್ರಿಕೊ ಓಫ್ರಿನ್ ಮತ್ತು ಬಿಜಿಎಂಎಫ್ ಹಾಗೂ ಯುಎಸ್ಎಐಡಿ ಸೇರಿದಂತೆ ಅಭಿವೃದ್ಧಿ ಪಾಲುದಾರ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.
***
(Release ID: 1700666)
Visitor Counter : 438
Read this release in:
Telugu
,
Marathi
,
Gujarati
,
Odia
,
Tamil
,
Malayalam
,
Assamese
,
English
,
Urdu
,
Hindi
,
Manipuri
,
Bengali
,
Punjabi