ಪ್ರಧಾನ ಮಂತ್ರಿಯವರ ಕಛೇರಿ

ಬಜೆಟ್‌ನಲ್ಲಿ ಇಂಧನ ಮತ್ತು ನವೀಕೃತ ಇಂಧನ ವಲಯದ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ವೆಬಿನಾರ್ ಮೂಲಕ ಸಮಾಲೋಚನಾ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಸರ್ಕಾರದ ವಿಧಾನ ಎಲ್ಲರನ್ನು ತಲುಪುವ, ಬಲವರ್ಧನೆ, ಸುಧಾರಣೆ ಮತ್ತು ನವೀರಿಸಹುದಾದ ಶಕ್ತಿಯ ಮಂತ್ರಗಳ ಮೂಲಕ ಮಾರ್ಗದರ್ಶನ ಹೊಂದಿದೆ: ಪ್ರಧಾನಮಂತ್ರಿ

Posted On: 18 FEB 2021 5:55PM by PIB Bengaluru

ಬಜೆಟ್‌ನಲ್ಲಿ ಇಂಧನ ಮತ್ತು ನವೀಕೃತ ಇಂಧನ ವಲಯದ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವೆಬಿನಾರ್ ಮೂಲಕ ಮಾತನಾಡಿದರು.

ಕೇಂದ್ರ ಇಂಧನ, ನವ ಮತ್ತು ನವೀಕೃತ ಇಂಧನ ಖಾತೆ ರಾಜ್ಯ [ಸ್ವತಂತ್ರ] ಸಚಿವರು, ಇಂಧನ ಕ್ಷೇತ್ರದ ವಲಯ ತಜ್ಞರು, ಕೈಗಾರಿಕೆ ಮತ್ತು ಸಂಘಗಳು, ಡಿಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರುಗಳು, ನವೀಕೃತ ಇಂಧನ ವಲಯದ ನೋಡೆಲ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ಗ್ರಾಹಕ ವಲಯದ ಪ್ರಮುಖರು, ಇಂಧನ ಸಚಿವಾಲಯ, ನವ ಮತ್ತು ನವೀಕೃತ ಇಂಧನ ಸಚಿವಾಲಯದ ಹಿರಿಯ ಅಧಿಕಾರಿಗಳು ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

ವೆಬಿನಾರ್ ನಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಅಭಿವೃದ್ದಿ, ಸುಗಮ ಜೀವನ ಹಾಗೂ ಸುಗಮ ವ್ಯವಹಾರದಲ್ಲಿ ಇಂಧನ ವಲಯದ ಪಾತ್ರ ಅತಿ ದೊಡ್ಡದಾಗಿದೆ ಎಂದರು.

ಇಂಧನ ಕ್ಷೇತ್ರ ಸರ್ಕಾರ ಮತ್ತು ಖಾಸಗಿ ವಲಯದ ನಂಬಿಕೆಯ ಸಂಕೇತವಾಗಿದೆ ಹಾಗೂ ಬಜೆಟ್ ನಲ್ಲಿ ಕ್ಷೇತ್ರದ ಘೋಷಣೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮಾರ್ಗಗಳನ್ನು ಹುಡುಕುವ ಪ್ರಯತ್ನವಾಗಿದೆ ಎಂದರು

ವಲಯದಲ್ಲಿ ಸರ್ಕಾರದ ವಿಧಾನವು ಸಮಗ್ರವಾಗಿದೆ ಮತ್ತು ತಲುಪುವ, ಬಲವರ್ಧನೆ, ಸುಧಾರಣೆ ಮತ್ತು ನವೀರಿಸಹುದಾದ ಶಕ್ತಿಯ ಮಂತ್ರಗಳ ಮೂಲಕ ಮಾರ್ಗದರ್ಶನ ಹೊಂದಿದೆ. ತಲುಪುವುದು ಎಂದರೆ ಕೊನೆಯ ಮೈಲಿವರೆಗೆ ತಲುಪಬೇಕು. ತಲುಪುವಿಕೆಯಲ್ಲಿ ಸ್ಥಾಪನಾ ಸಾಮರ್ಥ್ಯದ ವ್ಯಾಪ್ತಿಯನ್ನು ಬಲಪಡಿಸುವ ಅಗತ್ಯವಿದೆ. ಇದರೊಂದಿಗೆ ನವೀಕರಿಸಬಹುದಾದ ಇಂಧನ ಈಗಿನ ಬೇಡಿಕೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮೊದಲ ಮಂತ್ರ ತಲುವುವ ವಿಧಾನ ಕುರಿತು ಮತ್ತಷ್ಟು ವಿಸ್ತಾರವಾಗಿ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಸರ್ಕಾರ ಪ್ರತಿಯೊಂದು ಹಳ್ಳಿ ಮತ್ತು ಪ್ರತಿಯೊಂದು ಮನೆಯನ್ನೂ ತಲುಪುವುದನ್ನು ಕೇಂದ್ರೀಕರಿಸಿಕೊಂಡಿದೆ.  ಇದಕ್ಕಾಗಿ ಸಾಮರ್ಥ್ಯ ಬಲವರ್ಧನೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯುತ್ ಕೊರತೆಯ ದೇಶವಾಗಿದ್ದ ಭಾರತ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ರಾಷ್ಟ್ರವಾಗಿದೆ. ಭಾರತ 139 ಗಿಗಾವ್ಯಾಟ್ಸ್ ಸಾಮರ್ಥ್ಯವನ್ನು ಸೇರ್ಪಡೆಮಾಡಿಕೊಂಡಿದೆ ಮತ್ತುಒಂದು ದೇಶ, ಒಂದು ಗ್ರಿಡ್, ಒಂದು ಆವರ್ತಕವ್ಯವಸ್ಥೆಯನ್ನು ಹೊಂದುವ ತನ್ನ ಗುರಿಯನ್ನು ತಲುಪಿದೆ ಎಂದು ಹೇಳಿದರು.

ಉದಯ್ನಂತಹ ಸುಧಾರಣಾ ಕ್ರಮಗಳಿಂದ 2 ಲಕ್ಷದ 32 ಸಾವಿರ ಕೋಟಿ ರೂಪಾಯಿ ಬಾಂಡ್ ಗಳನ್ನು ಕ್ರೋಡೀಕರಿಸಿದ್ದು, ಇದರಿಂದ ಆರ್ಥಿಕ ದಕ್ಷತೆ ಮತ್ತು ಹಣಕಾಸು ಸುಧಾರಣೆ ತರಲು ಸಹಕಾರಿಯಾಗಿದೆ. ಪವರ್ ಗ್ರಿಡ್ ಸ್ವತ್ತುಗಳಿಂದ ಹಣಗಳಿಸಲು ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್ -.ಎನ್.ವಿ..ಟಿ ಯನ್ನು ಸ್ಥಾಪಿಸಿದ್ದು, ಇದು ಶೀಘ್ರದಲ್ಲೇ ಹೂಡಿಕೆದಾರರಿಗೆ ಮುಕ್ತಗೊಳ್ಳಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಕಳೆದ ಆರು ವರ್ಷಗಳಲ್ಲಿ ನವೀಕೃತ ಇಂಧನ ಸಾಮರ್ಥ್ಯ ಎರಡೂವರೆ ಪಟ್ಟು ಹೆಚ್ಚಾಗಿದೆ. ಸೌರ ವಿದ್ಯುತ್ ಸಾಮರ್ಥ್ಯ 15 ಪಟ್ಟು ಹೆಚ್ಚಾಗಿದೆ. ವರ್ಷದ ಬಜೆಟ್ ಹಿಂದೆಂದೂ ಇಲ್ಲದಷ್ಟು ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ಮಾಡುವ ಬದ್ಧತೆಯನ್ನು ಪ್ರದರ್ಶಿಸಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಜಲಜನಕ ಅಭಿಯಾನ, ಸೌರ ಕೋಶಗಳ ದೇಶೀಯ ಉತ್ಪಾದನೆ, ನವೀಕೃತ ಇಂಧನ ಕ್ಷೇತ್ರದಲ್ಲಿ ಬೃಹತ್ ಹೂಡಿಕೆಯನ್ನು ಇದು ಉತ್ತೇಜಿಸುತ್ತದೆ ಎಂದು ಹೇಳಿದರು.

ಪಿ.ಎಲ್. ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವ ಸೌರ ವಿದ್ಯುತ್ ಪಿ.ವಿ. ಮಾದರಿಯ ಉತ್ಪನ್ನದ ಉತ್ಪಾದನೆ ಕೂಡ ಪಿ.ಎಲ್. ಯೋಜನೆಯ ಭಾಗವಾಗಿದೆ ಮತ್ತು ಸರ್ಕಾರ ಕ್ಷೇತ್ರದಲ್ಲಿ 4.500 ಕೋಟಿ ರೂಪಾಯಿ ಹೂಡಿಕೆ ಮಾಡುವ ಬದ್ಧತೆ ಹೊಂದಿದೆ. ಕಾರ್ಯಕ್ರಮಕ್ಕೆ ವ್ಯಾಪಕ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ. ಪಿ.ಎಲ್. ಯೋಜನೆಯಡಿ ಸಮಗ್ರ ಸೌರ ವಿದ್ಯುತ್ ಉತ್ಪಾದಿಸುವ ಪಿ.ವಿ. ಉತ್ಪಾದನಾ ಘಟಕಗಳಿಂದ 14 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದರಿಂದ ಸ್ಥಳೀಯವಾಗಿ ಉತ್ಪಾದಿಸುವ ಇವಿಎ, ಸೋಲಾರ್ ಗ್ಲಾಸ್ ಗಳು, ಬ್ಯಾಕ್ ಶೀಟ್, ಜಂಕ್ಷನ್ ಬಾಕ್ಸ್ ಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. “ ನಮ್ಮ ಕಂಪೆನಿಗಳು ಸ್ಥಳೀಯ ಬೇಡಿಕೆಗಳನ್ನಷ್ಟೇ ಪೂರೈಸದೇ ಜಾಗತಿಕ ವಲಯದ ಮುಂಚೂಣಿ ಉತ್ಪಾದನಾ ಸಂಸ್ಥೆಗಳಾಗಿ ಹೊರಹೊರಮ್ಮುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಭಾರತೀಯ ಸೌರ ಇಂಧನ ನಿಗಮಕ್ಕೆ 1000 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ತೊಡಗಿಸುವ ಇಂಗಿತವನ್ನು ಸರ್ಕಾರ ಹೊಂದಿದೆ. ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಹೆಚ್ಚುವರಿಯಾಗಿ 1,500 ಕೋಟಿ ರೂ ಹೂಡಿಕೆಯನ್ನು ಪಡೆಯಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ವಲಯದಲ್ಲಿ ಸುಗಮ ವ್ಯವಹಾರ ನಡೆಸುವ ಪ್ರಯತ್ನಗಳಿಂದಾಗಿರುವ ಸುಧಾರಣೆಗಳ ಬಗ್ಗೆ ಪ್ರಧಾನಮಂತ್ರಿಯವರು ವಿಶೇಷವಾಗಿ ಪ್ರಸ್ತಾಪಿಸಿದರು. ನಿಯಂತ್ರಣ ಮತ್ತು ಪ್ರತಿಕ್ರಿಯೆಯ ಸುಧಾರಣೆಗಳೊಂದಿಗೆ ವಿದ್ಯುತ್ ಕ್ಷೇತ್ರದ ದೃಷ್ಟಿಕೋನ ಗಮನಾರ್ಹವಾಗಿ ಸುಧಾರಿಸಿದೆ ಎಂದು ಪ್ರತಿಪಾದಿಸಿದರು.

ಇಂಧನ ಕ್ಷೇತ್ರವನ್ನು ಸರ್ಕಾರ ಪ್ರತ್ಯೇಕ ವಲಯ ಎಂದು ಪರಿಗಣಿಸಿದ್ದು, ಇದು ಕೈಗಾರಿಕೆಗಳ ಭಾಗವಲ್ಲ. ಸಹಜ ಇಂಧನ ಪ್ರಾಮುಖ್ಯವು ಪ್ರತಿಯೊಬ್ಬರಿಗೂ ಇಂಧನ ದೊರೆಯುವಂತೆ ಮಾಡಲು ತನ್ನ ಗಮನವನ್ನು ಕೇಂದ್ರೀಕರಿಸಿಕೊಂಡಿದೆ. ವಿದ್ಯುತ್ ವಿತರಣಾ ವಲಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲೂ ಸರ್ಕಾರ ಕಾರ್ಯಪ್ರವೃತ್ತವಾಗಿದೆ.  ಇದಕ್ಕಾಗಿ ಡಿಸ್ಕಾಂಗಳಿಂದ ನೀತಿ ಮತ್ತು ನಿಯಂತ್ರಣ ಚೌಕಟ್ಟುಗಳು ಸಿದ್ಧವಾಗಿವೆ. ಗ್ರಾಹಕರು ಇತರೆ ಚಿಲ್ಲರೆ ಸರಕುಗಳನ್ನು ಆಯ್ಕೆ ಮಾಡುವಂತೆ ತಮಗೆ ವಿದ್ಯುತ್ ಪೂರೈಸುವ ಸಮರ್ಥ ಸಂಸ್ಥೆಗಳನ್ನು ಸಹ ಆಯ್ಕೆಮಾಡುವಂತಾಗಬೇಕು. ವಿದ್ಯುತ್ ವಿತರಣೆ ಮತ್ತು ಪೂರೈಕೆಗೆ ಪರವಾನಗಿ ನೀಡುವ  ಮತ್ತು ಉಚಿತ ಪೂರೈಕೆ ವಲಯದಲ್ಲಿನ ಅಡೆತಡೆಗಳನ್ನು ನಿವಾರಿಸುವ ಕೆಲಸ ನಡೆಯುತ್ತಿದೆ. ಪೂರ್ವ ಪಾವತಿ ಸ್ಮಾರ್ಟ್ ಮಿಟರ್, ಫೀಡರ್ ಸೆಪರೇಟರ್ ಮತ್ತು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು

ಪಿಎಂ-ಕುಸುಮ್ ಯೋಜನೆಯಿಂದ ರೈತರು ಇಂಧನ ವಲಯದ ಉದ್ಯಮಿಗಳಾಗುತ್ತಿದ್ದಾರೆ. ರೈತರ ಹೊಲಗಳಲ್ಲಿ ಸಣ್ಣ ಸಣ್ಣ ಘಟಕಗಳನ್ನು ಅಳವಡಿಸಿ 30 ಗಿಗಾವ್ಯಾಟ್ ನಷ್ಟು ಸೌರ ವಿದ್ಯುತ್ ಉತ್ಪಾದಿಸುವ ಗುರಿ ಸಾಧಿಸಲು ವ್ಯವಸ್ಥೆ ಕಲ್ಪಿಸಲಾಗಿದೆಮೇಲ್ಛಾವಣಿ ಸೌರ  ವಿದ್ಯುತ್ ವಲಯದಲ್ಲಿ 4 ಗಿಗಾವ್ಯಾಟ್ ಸಾಮರ್ಥ್ಯವನ್ನು ಈಗಾಗಲೇ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಇನ್ನೂ 2.5 ಗಿಗಾವ್ಯಾಟ್ ಸೇರ್ಪಡೆ ಮಾಡಲಾಗುವುದು. ಮೇಲ್ಛಾವಣಿ ಸೌರ ವಿದ್ಯುತ್ ವಲಯದಿಂದ ಮುಂದಿನ ಒಂದು ಮತ್ತು ಒಂದೂವರೆ ವರ್ಷದಲ್ಲಿ 40 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

***(Release ID: 1699410) Visitor Counter : 271