ಪ್ರಧಾನ ಮಂತ್ರಿಯವರ ಕಛೇರಿ
ಹತ್ತು ನೆರೆ ರಾಷ್ಟ್ರಗಳೊಂದಿಗೆ “ಕೋವಿಡ್ -19 ನಿರ್ವಹಣೆ: ಅನುಭವ, ಉತ್ತಮ ರೂಢಿಗಳು ಮತ್ತು ಮುಂದಿನ ಹಾದಿ” ಕುರಿತ ಕಾರ್ಯಾಗಾರ ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ
Posted On:
18 FEB 2021 3:32PM by PIB Bengaluru
ಘನತೆವೇತ್ತರರೇ,
ನಮಸ್ಕಾರ!
ನಮ್ಮ ತಕ್ಷಣದ ಮತ್ತು ವಿಸ್ತರಿತ ನೆರೆಹೊರೆಯ ರಾಷ್ಟ್ರಗಳ ಆರೋಗ್ಯಾಧಿಕಾರಿಗಳು ಮತ್ತು ತಜ್ಞರು ಇಂದು ಸಭೆ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಇಂದು ಅತ್ಯಂತ ಫಲಪ್ರದವಾದ ಚರ್ಚೆಗಾಗಿ ನಿಮ್ಮೆಲ್ಲರಿಗೂ ನಾನು ಶುಭ ಕೋರುವುದರೊಂದಿಗೆ ಆರಂಭಿಸುತ್ತೇನೆ. ಸಾಂಕ್ರಾಮಿಕದ ವೇಳೆ ನಮ್ಮ ಆರೋಗ್ಯ ವ್ಯವಸ್ಥೆ ಹೇಗೆ ಸಹಕರಿಸಿದ ರೀತಿಗಾಗಿ ಕೂಡ ನಿಮ್ಮೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ವಿಶ್ವಕ್ಕೆ ವರ್ಷ ಕೋವಿಡ್ -19 ಎರಗಿದಾಗ, ಹಲವು ತಜ್ಞರು ನಮ್ಮ ದಟ್ಟ ಜನಸಂಖ್ಯೆಯ ಪ್ರದೇಶದ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದರು. ಆದರೆ, ಆರಂಭದಿಂದಲೂ ನಾವು ಈ ಸವಾಲುಗಳನ್ನು ಸಂಯೋಜಿತ ಸ್ಪಂದನೆಯೊಂದಿಗೆ ಎದುರಿಸಿದೆವು. ಕಳೆದ ವರ್ಷ ಮಾರ್ಚ್ ನಲ್ಲಿ ಆತಂಕವನ್ನು ಗುರುತಿಸಿ ಒಗ್ಗೂಡಿ ಹೋರಾಡುವ ಬದ್ಧತೆ ವ್ಯಕ್ತಪಡಿಸಿದವರಲ್ಲಿ ನಾವು ಮೊದಲಿಗರಾಗಿದ್ದೆವು. ಇತರ ಹಲವು ವಲಯಗಳು ಮತ್ತು ಗುಂಪುಗಳು ನಮ್ಮ ಆರಂಭಿಕ ಉದಾಹರಣೆಯನ್ನು ಅನುಸರಿಸಿದವು. ನಾವು ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ತತ್ ಕ್ಷಣದ ವೆಚ್ಚವನ್ನು ಭರಿಸಲು ಕೋವಿಡ್ -19 ತುರ್ತು ಸ್ಪಂದನಾ ನಿಧಿಯನ್ನು ಸ್ಥಾಪಿಸಿದೆವು. ನಾವು ನಮ್ಮ ಸಂಪನ್ಮೂಲಗಳನ್ನು – ಔಷಧಗಳು, ಪಿಪಿಇ ಮತ್ತು ಪರೀಕ್ಷಾ ಸಾಧನಗಳನ್ನು ಹಂಚಿಕೊಂಡೆವು. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಸಹಯೋಗದ ತರಬೇತಿಯ ಮೂಲಕ ಅತ್ಯಂತ ಮೌಲ್ಯಯುತವಾದ ಸರಕಾದ –ಜ್ಞಾನ-ವನ್ನು ಹಂಚಿಕೊಂಡೆವು. ವೆಬಿನಾರ್ ಗಳು, ಆನ್ ಲೈನ್ ಕೋರ್ಸ್ ಗಳು ಮತ್ತು ಐಟಿ ಪೋರ್ಟಲ್ ಗಳ ಮೂಲಕ ನಮ್ಮ ಅನುಭವಗಳನ್ನು ಹಂಚಿಕೊಂಡೆವು ಹಾಗೂ ಪರೀಕ್ಷೆ, ಸೋಂಕು ನಿಯಂತ್ರಣ ಮತ್ತು ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಕುರಿತಂತೆ ಪರಸ್ಪರರ ಉತ್ತಮ ರೂಢಿಗಳಿಂದ ಕಲಿತೆವು. ಯಾವುದೇ ಕ್ರಮ ಪರಿಣಾಮ ಟುಮಾಡಿತೋ ಅದನ್ನು ನಾವು ನಮ್ಮದೇ ಆದ ರೀತಿ ಉತ್ತಮ ರೂಢಿಯಾಗಿ ಅಭಿವೃದ್ಧಿಪಡಿಸಿದೆವು. ನಾವು ಪ್ರತಿಯೊಬ್ಬರೂ ಈ ಅನುಭವ ಮತ್ತು ಜ್ಞಾನ ನಿಧಿಗೆ ಅಪಾರ ಕೊಡುಗೆ ನೀಡಿದೆವು.
ಸ್ನೇಹಿತರೆ,
ಈ ಸಹಯೋಗದ ಸ್ಫೂರ್ತಿ ಸಾಂಕ್ರಾಮಿಕ ರೋಗದಿಂದ ಕಲಿತ ಅಮೂಲ್ಯ ಮಾರ್ಗವಾಗಿದೆ. ನಮ್ಮ ಮುಕ್ತತೆ ಮತ್ತು ದೃಢ ನಿಶ್ಚಯದ ಮೂಲಕ, ನಾವು ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಶ್ಲಾಘನೆಗೆ ಅರ್ಹವಾಗಿದೆ. ಇಂದು, ನಮ್ಮ ವಲಯದ ಮತ್ತು ಜಗತ್ತಿನ ಆಶಯ ಲಸಿಕೆಗಳನ್ನು ಶೀಘ್ರವಾಗಿ ನೀಡುವುದರ ಮೇಲೆ ಕೇಂದ್ರೀಕರಿಸಿದೆ. ಇದರಲ್ಲೂ ನಾವು ಒಂದೇ ರೀತಿಯ ಸಹಕಾರಿ ಮತ್ತು ಸಹಕಾರಿ ಸ್ಫೂರ್ತಿಯನ್ನು ಕಾಪಾಡಿಕೊಳ್ಳಬೇಕಿದೆ.
ಸ್ನೇಹಿತರೆ,
ಕಳೆದ ವರ್ಷ, ನಮ್ಮ ಆರೋಗ್ಯ ಸಹಕಾರ ಸಾಕಷ್ಟು ಸಾಧನೆ ಮಾಡಿದೆ. ನಾವು ಈಗ ನಮ್ಮ ಮಹತ್ವಾಕಾಂಕ್ಷೆಯನ್ನು ಮತ್ತಷ್ಟು ಹೆಚ್ಚಿಸಲು ಚಿಂತಿಸಬಹುದೇ? ಇಂದಿನ ನಿಮ್ಮ ಚರ್ಚೆಗೆ ಕೆಲವು ಸಲಹೆಗಳನ್ನು ನೀಡಲು ನನಗೆ ಅವಕಾಶ ಮಾಡಿಕೊಡಿ:
- ನಾವು ನಮ್ಮ ವೈದ್ಯರು ಮತ್ತು ದಾದಿಯರಿಗೆ ವಿಶೇಷ ವೀಸಾ ಯೋಜನೆ ರೂಪಿಸುವುದನ್ನು ಪರಿಗಣಿಸಬಹುದೇ?, ಅದರಿಂದ ಅವರು ಆರೋಗ್ಯ ತುರ್ತು ಸ್ಥಿತಿಯಲ್ಲಿ ಸ್ವೀಕರಿಸುವ ರಾಷ್ಟ್ರದ ಕೋರಿಕೆಯ ಮೇಲೆ ನಮ್ಮ ವಲಯದಲ್ಲಿ ತ್ವರಿತವಾಗಿ ಪ್ರಯಾಣಿಸಬಹುದು.
- ನಮ್ಮ ನಾಗರಿಕ ವಿಮಾನ ಯಾನ ಸಚಿವಾಲಯಗಳು ವೈದ್ಯಕೀಯ ಆಕಸ್ಮಿಕಗಳಿಗಾಗಿ ಪ್ರಾದೇಶಿಕ ಆಂಬುಲೆನ್ಸ್ ವಿಮಾನ ಒಪ್ಪಂದವನ್ನು ಮಾಡಿಕೊಳ್ಳಬಹುದೇ?
- ನಮ್ಮ ಜನಸಂಖ್ಯೆಯಲ್ಲಿ ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಲು, ಕ್ರೋಡೀಕರಿಸಲು ಮತ್ತು ಅಧ್ಯಯನ ಮಾಡಲು ನಾವು ಪ್ರಾದೇಶಿಕ ವೇದಿಕೆಯನ್ನು ರಚಿಸಬಹುದೇ?
- ಭವಿಷ್ಯದ ಸಾಂಕ್ರಾಮಿಕ ರೋಗ ತಡೆಗಟ್ಟಲು, ಅದೇ ರೀತಿ ನಾವು ತಂತ್ರಜ್ಞಾನ ನೆರವಿನ ಸಾಂಕ್ರಾಮಿಕ ರೋಗ ಶಾಸ್ತ್ರ ಉತ್ತೇಜಿಸಲು ಪ್ರಾದೇಶಿಕ ಜಾಲವನ್ನು ರಚಿಸಬಹುದೇ?
- ಕೋವಿಡ್ -19 ಹೊರತಾಗಿ, ನಾವು ಸಾರ್ವಜನಿಕ ಆರೋಗ್ಯದ ನಮ್ಮ ಯಶಸ್ವಿ ಕಾರ್ಯಕ್ರಮ ಮತ್ತು ನೀತಿಗಳನ್ನು ಹಂಚಿಕೊಳ್ಳಬಹುದೇ?
ಭಾರತದಿಂದ ನಮ್ಮ ಆಯುಷ್ಮಾನ್ ಭಾರತ ಮತ್ತು ಜನೌಷಧ ಯೋಜನೆಗಳು ನಮ್ಮ ಸ್ನೇಹಿತರಿಗೆ ವಲಯದಲ್ಲಿ ಅಧ್ಯಯನಕ್ಕೆ ಉಪಯುಕ್ತ ಪ್ರಕರಣಗಳಾಗಿವೆ. ಇಂಥ ಸಹಯೋಗಗಳು ಇತರ ಕ್ಷೇತ್ರಗಳಲ್ಲಿ ಕೂಡ ಪ್ರಾದೇಶಿಕ ಸಹಕಾರಕ್ಕೆ ದೊಡ್ಡ ಮಾರ್ಗವಾಗಬಲ್ಲುವಾಗಿವೆ. ನಾವು ಸಮಾನವಾದ ಹಲವು – ಹವಾಮಾನ ಬದಲಾವಣೆ; ಪ್ರಕೃತಿ ವಿಕೋಪ; ಬಡತನ, ಅನಕ್ಷರತೆ, ಮತ್ತು ಸಾಮಾಜಿಕ ಮತ್ತು ಲಿಂಗ ತಾರತಮ್ಯದಂಥ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೆ ನಾವು ಶತಮಾನಗಳ ಹಳೆಯ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಪರ್ಕಗಳ ಶಕ್ತಿಯನ್ನು ಹಂಚಿಕೊಳ್ಳುತ್ತೇವೆ. ನಮ್ಮನ್ನು ಒಗ್ಗೂಡಿಸುವ ಎಲ್ಲದರ ಮೇಲೆ ನಾವು ಗಮನಹರಿಸಿದರೆ, ನಮ್ಮ ಪ್ರದೇಶವು ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ಮಾತ್ರವಲ್ಲ, ನಮ್ಮ ಇತರ ಸವಾಲುಗಳನ್ನೂ ಸಹ ನಿವಾರಿಸಬಲ್ಲದು.
ಸ್ನೇಹಿತರೆ,
21ನೇ ಶತಮಾನ ಏಷ್ಯಾದ ಶತಮಾನವಾಗಿದೆ, ಇದು ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದ ದ್ವೀಪ ದೇಶಗಳಲ್ಲಿ ಹೆಚ್ಚಿನ ಏಕೀಕರಣವಿಲ್ಲದೆ ಸಾಧ್ಯವಾಗುವುದಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ನೀವು ತೋರಿಸಿದ ಪ್ರಾದೇಶಿಕ ಒಗ್ಗಟ್ಟಿನ ಮನೋಭಾವವು ಅಂತಹ ಏಕೀಕರಣ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ. ಇಂದು ಫಲಪ್ರದ ಚರ್ಚೆಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು!
ತುಂಬಾ ತುಂಬಾ ಧನ್ಯವಾದಗಳು!
***
(Release ID: 1699343)
Visitor Counter : 273
Read this release in:
Hindi
,
Marathi
,
Urdu
,
Manipuri
,
Punjabi
,
Assamese
,
Bengali
,
English
,
Gujarati
,
Odia
,
Tamil
,
Telugu
,
Malayalam