ಸಂಪುಟ
ದೂರ ಸಂಪರ್ಕ ವಲಯದ ಉತ್ಪಾದನೆ ಭಾರತದಲ್ಲಿ ಜಾಗತಿಕ ಮಟ್ಟ ತಲುಪಲಿದೆ
ಜಾಗತಿಕ ದೂರ ಸಂಪರ್ಕ ವಲಯದ ಕೇಂದ್ರವಾಗಲು ಭಾರತದಲ್ಲಿ ಪಿ.ಎಲ್.ಐ ಯೋಜನೆ ಜಾರಿ
ಪಿ.ಎಲ್.ಐ ಯೋಜನೆಯಿಂದ ದೂರ ಸಂಪರ್ಕ ವಲಯಕ್ಕೆ ಪುಷ್ಠಿ: ದೂರ ಸಂಪರ್ಕ ಮತ್ತು ನೆಟ್ವರ್ಕಿಂಗ್ ಪರಿಕರಗಳ ಉತ್ಪಾದನೆ ಹೆಚ್ಚಳ
ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಉತ್ಪನ್ನಗಳ ಉತ್ಪಾದನೆಗಾಗಿ ದೂರ ಸಂಪರ್ಕ ಉತ್ಪಾದನಾ ವಲಯಕ್ಕೆ 12,195 ಕೋಟಿ ರೂ
Posted On:
17 FEB 2021 3:50PM by PIB Bengaluru
ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹ ಯೋಜನೆ[ಪಿ.ಎಲ್.ಐ]ಯಡಿ ದೂರ ಸಂಪರ್ಕ ಮತ್ತು ನೆಟ್ ವರ್ಕಿಂಗ್ ಪರಿಕರಗಳ ಉತ್ಪಾದನೆಗಾಗಿ 12,195 ಕೋಟಿ ರೂ ಮೊತ್ತದ ಪ್ರಸ್ತಾವನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹ ಯೋಜನೆ[ಪಿ.ಎಲ್.ಐ]ಯಡಿ ಭಾರತದಲ್ಲಿ ದೂರ ಸಂಪರ್ಕ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ. ಭಾರತದಲ್ಲೇ ತಯಾರಿಸು – ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶೀಯ ಉತ್ಪಾದನೆಗೆ ಆರ್ಥಿಕ ಪ್ರೋತ್ಸಾಹ ನೀಡಲಾಗುತ್ತಿದೆ ಮತ್ತು ಕೆಲವೊಂದು ನಿಗದಿತ ದೂರ ಸಂಪರ್ಕ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು, ನೆಟ್ವರ್ಕಿಂಗ್ ವಲಯದ ಉತ್ಪನ್ನಗಳನ್ನು ಉತ್ಪಾದಿಸಲು ಆದ್ಯತೆ ನೀಡಲಾಗುತ್ತಿದೆ. ಭಾರತದಲ್ಲಿ ತಯಾರಾದ ದೂರ ಸಂಪರ್ಕ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳನ್ನು ಈ ಯೋಜನೆಯಡಿ ರಫ್ತು ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.
ಭಾರತದಲ್ಲಿ ನಿರ್ದಿಷ್ಟ ದೂರ ಸಂಪರ್ಕ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳನ್ನು ಉತ್ಪಾದಿಸಲು ತೊಡಗಿಕೊಂಡಿರುವ ಕಂಪೆನಿಗಳು ಮತ್ತು ಘಟಕಗಳಿಗೆ ಬೆಂಬಲ ನೀಡಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಹೂಡಿಕೆಯ ಕನಿಷ್ಠ ಮಿತಿಯನ್ನು ಸಾಧಿಸುವ ಅರ್ಹತೆಯನ್ನು ನಿಗದಿಮಾಡಲಾಗಿದೆ ಮತ್ತು ಮೂಲ ವರ್ಷದಲ್ಲಿ ಅಂದರೆ 2019 – 2020 ರ ಅವಧಿಯಲ್ಲಿ ನಿವ್ವಳ ಉತ್ಪಾದಿತ ಸರಕುಗಳ [ವ್ಯಾಪಾರಿ ಸರಕುಗಳಿಗಿಂತ ಭಿನ್ನವಾಗಿ] ಮಾರಾಟ ಹೆಚ್ಚಿರಬೇಕು. ಇನ್ನು ಸಂಚಿತ ಹೂಡಿಕೆಯನ್ನು ಒಂದೇ ಸಮಯದಲ್ಲಿ ಮಾಡಬಹುದು, ನಿಗದಿಪಡಿಸಿದಂತೆ ನಾಲ್ಕು ವರ್ಷಗಳ ಕಾಲದ ಸಂಚಿತ ಮಿತಿಗೆ ಇದು ಒಳಪಟ್ಟಿರುತ್ತದೆ.
ದೂರ ಸಂಪರ್ಕ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳ ಜಾಗತಿಕ ರಫ್ತು ಮಾರುಕಟ್ಟೆ ಅವಕಾಶಗಳು 100 ಶತಕೋಟಿ ಡಾಲರ್ ನಷ್ಟಿದ್ದು, ಇದನ್ನು ಭಾರತ ಬಳಸಿಕೊಳ್ಳಬಹುದು. ಈ ಯೋಜನೆಯ ಬೆಂಬಲದೊಂದಿಗೆ ಭಾರತ ಜಾಗತಿಕವಾಗಿ ಭಾರೀ ಹೂಡಿಕೆಯನ್ನು ಆಕರ್ಷಿಸಬಹುದಾಗಿದೆ ಮತ್ತು ಇದೇ ಸಮಯಕ್ಕೆ ದೇಶದಲ್ಲಿ ಉದಯವಾಗುತ್ತಿರುವ ಅವಕಾಶಗಳನ್ನು ಕಸಿದುಕೊಳ್ಳಲು ಭರವಸೆಯ ದೇಶೀಯ ಮುಂಚೂಣಿ ಕಂಪೆನಿಗಳನ್ನು ಪ್ರತ್ಸಾಹಿಸಬಹುದಾಗಿದೆ ಮತ್ತು ಇದರಿಂದ ರಫ್ತು ವಲಯದ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಬೆಳೆಯಲು ಸಹಕಾರಿಯಾಗಲಿದೆ.
ಆತ್ಮ ನಿರ್ಭರ್ ಭಾರತ್ ನ ನಿರಂತರ ಕಾರ್ಯತಂತ್ರದ ಮೂಲಕ ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ವಿವಿಧ ಸಚಿವಾಲಯಗಳು, ದೂರ ಸಂಪರ್ಕ ಇಲಾಖೆ [ಡಿ.ಒ.ಟಿ] ಸೇರಿ ವಿವಿಧ ಇಲಾಖೆಗಳಲ್ಲಿ ಒಂದೇ ವೇದಿಕೆಯಲ್ಲಿ ಪ್ರೋತ್ಸಾಹ ಸಂಪರ್ಕಿತ ಉತ್ಪಾದನೆ [ಪಿ.ಐ.ಎಲ್] ಯೋಜನೆ ಮಾಡಲು 2020 ರ ನವೆಂಬರ್ ನಲ್ಲಿ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿತ್ತು.
ಮೂಲ ವರ್ಷ - ಐದು ವರ್ಷಗಳಲ್ಲಿ ಎಂ.ಎಸ್.ಎಂ.ಇ ವಲಯದಲ್ಲಿ ಕನಿಷ್ಠ 10 ಕೋಟಿ ರೂಪಾಯಿ ಹೂಡಿಕೆಯಲ್ಲಿ ಮಿತಿ ಮೊತ್ತ ಶೇ 7 ರಿಂದ ಶೇ 4 ರಷ್ಟು ಮತ್ತು 100 ಕೋಟಿ ರೂ ಹೂಡಿಕೆಗೆ ಮಿತಿ ಮೊತ್ತದಲ್ಲಿ ಶೇ 6 ರಿಂದ ಶೇ 4 ರಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಎಂ.ಎಸ್..ಎಂ.ಇ ಮತ್ತು ಎಂ.ಎಸ್.ಎಂ.ಇ ಅಲ್ಲದ ವಲಯಗಳಲ್ಲಿ ಹೂಡಿಕೆ ಮಾಡುವ ಅರ್ಜಿದಾರರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ.
ಈ ಯೋಜನೆ ಮೂಲಕ ಭಾರತ ದೂರ ಸಂಪರ್ಕ ಮತ್ತು ನೆಟ್ವರ್ಕಿಂಗ್ ವಲಯದಲ್ಲಿ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರ ಹೊಮ್ಮಲಿದ್ದು, ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹೆಚ್ಚಳವಾಗಲಿರುವ ಉತ್ಪಾದನೆಯ ಮೊತ್ತ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಯಷ್ಟಿರಲಿದೆ.
ಈ ಯೋಜನೆಯಿಂದ 3000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೂಡಿಕೆಯನ್ನು ತರುವ ನಿರೀಕ್ಷೆಯಿದೆ ಮತ್ತು ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಈ ನೀತಿಯಿಂದ ಭಾರತ ಸ್ವಾವಲಂಬನೆಯತ್ತ ಸಾಗಲಿದೆ. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ದೇಶೀಯ ಮೌಲ್ಯ ವರ್ಧನೆ ಕ್ರಮೇಣ ಹೆಚ್ಚಾಗುತ್ತದೆ. ಸಣ್ಣ, ಮದ್ಯಮ ಉದ್ಯಮ ವಲಯ – ಎಂ.ಎಸ್.ಎಂ.ಇಗೆ ಹೆಚ್ಚು ಪ್ರೋತ್ಸಾಹದ ಅವಕಾಶಗಳಿರುವ ಕಾರಣ, ದೇಶೀಯ ದೂರ ಸಂರ್ಪಕ ಉತ್ಪಾದಕರು ಜಾಗತಿಕ ಪೂರೈಕೆ ಸರಣಿಯ ಭಾಗವಾಗಲಿದ್ದಾರೆ.
****
(Release ID: 1698768)
Visitor Counter : 329
Read this release in:
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam