ಕೃಷಿ ಸಚಿವಾಲಯ

ಕೇಂದ್ರ ಸರ್ಕಾರದಿಂದ 6,865 ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ಹೊಸ ರೈತ ಉತ್ಪಾದಕ ಸಂಸ್ಥೆಗಳ (ಎಫ್’ಪಿಒ) ಸ್ಥಾಪನೆ ಮತ್ತು ಪ್ರೋತ್ಸಾಹ


ಎಫ್’ಪಿಒಗಳ ಮೂಲಕ ಸುಸ್ಥಿರ ಉದ್ಯಮವಾಗಿ ಕೃಷಿ ಪರಿವರ್ತನೆ

Posted On: 09 FEB 2021 6:06PM by PIB Bengaluru

ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕೃಷಿ ವಲಯ ಮಹತ್ವದ ಮತ್ತು ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತವೀಗ ಕೃಷಿ ರಂಗದ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ. 2022 ಹೊತ್ತಿಗೆ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣವನ್ನು ದುಪ್ಪಟ್ಟು ಮಾಡಲು ಭಾರತ ಗುರಿ ಹಾಕಿಕೊಂಡಿದೆ. ಆದಾಗ್ಯೂ, ಭಾರತದ 86%ಗಿಂತ ಹೆಚ್ಚಿನ ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದಾರೆ. ನಿಟ್ಟಿನಲ್ಲಿ, ವರ್ಗದ ರೈತರಿಗೆ ಸುಧಾರಿತ ತಂತ್ರಜ್ಞಾನ ಲಭ್ಯತೆ, ಸಾಲ, ಹೆಚ್ಚಿನ ಮಾರುಕಟ್ಟೆ ಸಂಪರ್ಕ ಕಲ್ಪಿಸಿ, ಉತ್ಪಾದಕತೆ ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ, ಸಣ್ಣ, ಅತಿಸಣ್ಣ ಮತ್ತು ಭೂಹೀನ ರೈತರನ್ನು ಎಫ್‌ಪಿಒಗಳಲ್ಲಿ ಒಟ್ಟುಗೂಡಿಸುವುದರಿಂದ ರೈತರ ಆದಾಯ ಹೆಚ್ಚಿಸಲು, ಆರ್ಥಿಕ ಶಕ್ತಿ ಮತ್ತು ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.

ಭಾರತ ಸರ್ಕಾರ ಇದನ್ನೇ ಗಮನದಲ್ಲಿಟ್ಟುಕೊಂಡು, ಹೊಸ ಕೇಂದ್ರೀಯ ವಲಯದ ಯೋಜನೆಕೃಷಿ ಉತ್ಪಾದಕ ಸಂಸ್ಥೆಗಳ ಸ್ಥಾಪನೆಗೆ ಚಾಲನೆ ನೀಡಿದೆ. ದೇಶಾದ್ಯಂತ 10 ಸಾವಿರ ಎಫ್ಪಿಒಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ 6,865 ಕೋಟಿ ರೂ. ಅನುದಾನ ಮೀಸಲಿರಿಸಿದೆ.

ಕೃಷಿ ಉತ್ಪನ್ನಗಳ ಕ್ಲಸ್ಟರ್ಗಳಲ್ಲಿ ಎಫ್ಪಿಒಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಲ್ಲಿ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಜತೆಗೆ, ಎಫ್ಪಿಒ ಸದಸ್ಯ ಕೃಷಿಕರಿಗೆ ಮಾರುಕಟ್ಟೆ ಲಭ್ಯತೆಯನ್ನು ಒದಗಿಸಲು ಇದು ಕೆಲಸ ಮಾಡಲಿದೆ.

ಒಂದು ಜಿಲ್ಲೆ ಒಂದು ಉತ್ಪನ್ನಕ್ಲಸ್ಟರ್ ಉತ್ತಮ ಸಂಸ್ಕರಣೆ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ರಫ್ತು ಉತ್ತೇಜಿಸಲುಒಂದು ಜಿಲ್ಲಾ ಒಂದು ಉತ್ಪನ್ನಕ್ಲಸ್ಟರ್. ಕೃಷಿ ಮೌಲ್ಯ ಸರಪಳಿ ಸಂಸ್ಥೆಗಳು ಎಫ್‌ಪಿಒಗಳನ್ನು ಸ್ಥಾಪಿಸುವ ಜತೆಗೆ, ಸದಸ್ಯರ ಉತ್ಪನ್ನಗಳಿಗೆ 60% ಮಾರುಕಟ್ಟೆ ಸಂಪರ್ಕವನ್ನು ಒದಗಿಸುತ್ತವೆ.

ಭಾರತ ಸರ್ಕಾರದ ಅನುದಾನದಲ್ಲಿ ಆರಂಭವಾಗಲಿರುವ ಎಫ್ಪಿಒಗಳ ಸ್ಥಾಪನೆ ಮತ್ತು ಪ್ರೋತ್ಸಾಹ ಯೋಜನೆಯು ಅನುಷ್ಠಾನ ಏಜೆನ್ಸಿಗಳ ಮೂಲಕ ಜಾರಿಯಾಗಲಿದೆ. ಪ್ರಸ್ತುತ, 09 ಅನುಷ್ಠಾನ ಏಜೆನ್ಸಿಗಳನ್ನು ಅಂತಿಮಗೊಳಿಸಲಾಗಿದೆ. ಸಣ್ಣ ಕೃಷಿಕರ ಕೃಷಿ-ವ್ಯವಹಾರ ಒಕ್ಕೂಟ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ(ಎನ್ಸಿಡಿಸಿ), ನಬಾರ್ಡ್, ನ್ಯಾಫೆಡ್, ಜಲಾನಯನ ಅಭಿವೃದ್ಧಿ ಇಲಾಖೆಕರ್ನಾಟಕ ಸೇರಿದಂತೆ 9 ಸಂಸ್ಥೆಗಳನ್ನು ಗುರುತಿಸಲಾಗಿದೆ.

ಅನುಷ್ಠಾನ ಏಜೆನ್ಸಿಗಳು ಕ್ಲಸ್ಟರ್ ಆಧರಿತ ವ್ಯವಹಾರ ಸಂಸ್ಥೆಗಳ ಜತೆ ತೊಡಗಿಸಿಕೊಂಡು 5 ವರ್ಷಗಳ ಕಾಲ ಪ್ರತಿ ಎಫ್ಪಿಒಗೆ ವೃತ್ತಿಪರ ಬೆಂಬಲ ನೀಡಲಿವೆ. ಕ್ಲಸ್ಟರ್ ಆಧರಿತ ವ್ಯವಹಾರ ಸಂಸ್ಥೆಗಳು ಎಫ್ಪಿಒ ಉತ್ತೇಜನಕ್ಕೆ ಸಂಬಂಧಿಸಿದ ಸಮಗ್ರ ಜ್ಞಾನ ಒದಗಿಸುವ ವೇದಿಕೆಗಳಾಗಲಿವೆ.

2020-21 ಸಾಲಿಗೆ ಒಟ್ಟು 2,200 ಎಫ್ಪಿಒ ಉತ್ಪನ್ನ ಕ್ಲಸ್ಟರ್ಗಳನ್ನು ಎಫ್ಪಿಒಗಳ ಸ್ಥಾಪನೆಗೆ ಹಂಚಿಕೆ ಮಾಡಲಾಗಿದೆ. ಜತೆಗೆ, ವಿಶೇಷ 100 ಸಾವಯವ ಎಫ್ಪಿಒಗಳು, 100 ತೈಲಬೀಜಗಳ ಎಫ್ಪಿಒಗಳು ಇದರಲ್ಲಿ ಸೇರಿವೆ. ದೇಶದ 115 ಜಿಲ್ಲೆಗಳಲ್ಲಿ ವರ್ಷ 368 ೆಫ್ಪಿಒಗಳ ಸ್ಥಾಪನೆ ಗುರಿ ಹಾಕಿಕೊಳ್ಳಲಾಗಿದೆ.

ನ್ಯಾಫೆಡ್ ಸಂಸ್ಥೆಯು ವಿಶೇಷ ಎಫ್ಪಿಒಗಳನ್ನು ಸ್ಥಾಪಿಸಲಿದೆ. ಇತರೆ ಅನುಷ್ಠಾನ ಏಜೆನ್ಸಿಗಳು ಸ್ಥಾಪಿಸುವ ಮಾರುಕಟ್ಟೆ ಮತ್ತು ಕೃಷಿ-ಮೌಲ್ಯ ಸರಪಣಿಯ ಸಂಪರ್ಕವನ್ನು ನ್ಯಾಫೆಡ್ ಎಫ್ಪಿಒಗಳಿಗೆ ಕಲ್ಪಿಸುತ್ತದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ  ನ್ಯಾಫೆಡ್ ವರ್ಷ 5 ಜೇನುತುಪ್ಪ ಎಫ್ಪಿಒಗಳನ್ನು ಸ್ಥಾಪಿಸಿದೆ.

ಪ್ರತಿ ಎಫ್ಪಿಒ ಸ್ಥಾಪನೆಗೆ ಮೂರು ವರ್ಷಗಳ ಅವಧಿಗೆ 18 ಲಕ್ಷ ರೂ. ಆರ್ಥಿಕ ನೆರವು ಸಿಗಲಿದೆ. ಜತೆಗೆ, ಎಫ್ಪಿಒ ಸದಸ್ಯ ಕೃಷಿಕನಿಗೆ 2,000 ರೂ ಈಕ್ವಿಟಿ ಅನುದಾನ, ಯೋಜನೆಗೆ 2 ಕೋಟಿ ರೂ. ಸಾಲ ಖಾತ್ರಿ ಸೌಲಭ್ಯ, ಸಾಂಸ್ಥಜ ಸಾಲ ಲಭ್ಯತೆ ಇತ್ಯಾದಿ ಸೌಲಭ್ಯಗಳು ಸಿಗಲಿವೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಒ ನೇತೃತ್ವದಲ್ಲಿ ಜಿಲ್ಲಾ ನಿರ್ವಹಣಾ ಸಮಿತಿ(ಡಿ-ಎಂಸಿ) ರಚನೆಯಾಗಲಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಮಿತಿಯಲ್ಲಿ ಇರುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಯೋಜನೆ ನಿರ್ವಹಣೆ ಏಜೆನ್ಸಿ(ಎನ್ಪಿಎಂಎ) ವೃತ್ತಿಪರ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಸಂಸ್ಥೆ ಮಾರ್ಗದರ್ಶನ, ಸಮನ್ವಯ, ಮಾಹಿತಿ ಸಂಗ್ರಹ, ನಿರ್ವಹಣೆ ಮತ್ತಿತರ ಕಾರ್ಯಗಳನ್ನು ಮಾಡಲಿದೆ.

ಯೋಜನೆಯ ತರಬೇತಿ ಸ್ವರೂಪವನ್ನು ಉತ್ತಮವಾಗಿ ವ್ಯಾಖ್ಯಾನಿಸಲಾಗಿದೆ. ಲಖನೌದ ಬ್ಯಾಂಕರ್ಸ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವೆಲಪ್ಮೆಂಟ್ ಮತ್ತು ಗುರುಗ್ರಾಮದ ಲಕ್ಷ್ಮಣರಾವ್ ಇನಾಂದಾರ್ ನ್ಯಾಷನಲ್ ಅಕಾಡೆಮಿ ಫಾರ್ ಕೋ-ಆಪರೇಟಿವ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಸಂಸ್ಥೆಗಳು ತರಬೇತಿ ನೀಡಲಿವೆ. ತರಬೇತಿ ಮತ್ತು ಕೌಶಲ ಅಭಿವೃದ್ಧಿ ಮಾದರಿಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ.

ಕೃಷಿಯನ್ನು ಆತ್ಮನಿರ್ಭರ್ ಕೃಷಿಯಾಗಿ ಪರಿವರ್ತಿಸಲು ಎಫ್ಪಿಒಗಳ ಸ್ಥಾಪನೆ ಮತ್ತು ಉ್ತತೇಜನ ಮೊದಲ ಮೆಟ್ಟಿಲಾಗಿದೆ. ಇದು ವೆಚ್ಚ ಪರಿಣಾಮಕಾರಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲಿದೆ. ಎಫ್ಪಿಒ ಸದಸ್ಯರ ನಿವ್ವಳ ಆದಾಯವನ್ನು ಹೆಚ್ಚಿಸಲಿದೆ. ಎಲ್ಲಕ್ಕಿಂತ ವಿಶೇಷವಾಗಿ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸಲಿದೆ ಮತ್ತು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಲು ಇದು ಮಹತ್ವದ ಹೆಜ್ಜೆಯಾಗಿದೆ.

ಎಫ್‌ಪಿಒ ಮೂಲಕ ಕೃಷಿಯನ್ನು ಸುಸ್ಥಿರ ಉದ್ಯಮವನ್ನಾಗಿ ಪರಿವರ್ತಿಸುವ ಆತ್ಮನಿರ್ಭಾರತವು ಇಂದಿನ ಝೇಂಕಾರವಾಗಿದೆ. ಭಾರತೀಯ ರೈತರು  ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಆತ್ಮನಿರ್ಭರ್ ಭಾರತ ಸ್ಥಾಪನೆಗೆ ಇದು ಅನುವು ಕಲ್ಪಿಸಲಿದೆ.

***


(Release ID: 1697080) Visitor Counter : 525