ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಮಂತ್ರಿ ಉತ್ತರ

Posted On: 10 FEB 2021 6:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸತ್ತನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಲೋಕಸಭೆಯಲ್ಲಿ ಉತ್ತರ ನೀಡಿದರು. ರಾಷ್ಟ್ರಪತಿಯವರು ಮಾಡಿದ ಭಾಷಣ ಭಾರತದ 'ಸಂಕಲ್ಪ ಶಕ್ತಿ'ಯನ್ನು ಬಿಂಬಿಸಿದೆ ಎಂದರು. ಅವರ ಒಂದೊಂದು ಪದವೂ ಭಾರತದ ಜನರ ವಿಸ್ವಾಸವನ್ನು ವರ್ಧಿಸಿದೆ ಎಂದ ಶ್ರೀ ಮೋದಿ, ಸದನದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ಚರ್ಚೆಯ ವೇಳೆ ದೊಡ್ಡ ಸಂಖ್ಯೆಯ ಮಹಿಳಾ ಸಂಸತ್ ಸದಸ್ಯರು ಪಾಲ್ಗೊಂಡು ತಮ್ಮ ಚಿಂತನೆಗಳಿಂದ ಸದನದ ಪ್ರಕ್ರಿಯೆಗೆ ನೀಡಿರುವ ಬೆಂಬಲಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ವಿಶ್ವಯುದ್ಧಗಳ ಬಳಿಕ ಜಾಗತಿಕ ವ್ಯವಸ್ಥೆಯ ಇತಿಹಾಸವನ್ನು ಶೋಧಿಸಿದರೆ, ಕೋವಿಡ್ -19 ನಂತರದ ವಿಶ್ವದ ಸ್ಥಿತಿ ಭಿನ್ನವಾಗೇನೂ ಇರುವುದಿಲ್ಲ ಎಂದರು. ಇಂಥ ಸಮಯದಲ್ಲಿ, ಜಾಗತಿಕ ಪ್ರವೃತ್ತಿಗಳಿಂದ ಪ್ರತ್ಯೇಕವಾಗಿ ಉಳಿದಿರುವುದು ಪ್ರತಿ-ಉತ್ಪಾದಕವಾಗಿರುತ್ತದೆ. ಅದಕ್ಕಾಗಿಯೇ, ಭಾರತವು ಆತ್ಮನಿರ್ಭರ ಭಾರತ ನಿರ್ಮಾಣ ಕಾರ್ಯ ಮಾಡುತ್ತಿದೆ, ಅದು ಮತ್ತಷ್ಟು ಜಾಗತಿಕ ಒಳಿತನ್ನು ಬಯಸುತ್ತದೆ ಎಂದು ಅವರು ಹೇಳಿದರು, ಭಾರತವು ಬಲಶಾಲಿ ಮತ್ತು ಆತ್ಮನಿರ್ಭರವಾದರೆ ಅದರಿಂದ ಜಗತ್ತಿಗೆ ಹೆಚ್ಚು ಒಳ್ಳೆಯದಾಗುತ್ತದೆ ಎಂದರು. ಸ್ಥಳೀಯತೆಗೆ ಧ್ವನಿಯಾಗುವುದು ಯಾವುದೇ ನಿರ್ದಿಷ್ಟ ನಾಯಕರ ಚಿಂತನೆಯಲ್ಲ, ಆದರೆ ಅದು ದೇಶದ ಎಲ್ಲ ಮೂಲೆಯಲ್ಲಿರುವ ಜನರಲ್ಲಿ ಅಣುರಣಿಸುತ್ತಿದೆ ಎಂದರು. ಕೊರೊನಾ ನಿರ್ವಹಣೆಯ ಶ್ರೇಯ 130 ಕೋಟಿ ಭಾರತೀಯರಿಗೆ ಸಲ್ಲುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ನಮ್ಮ ವೈದ್ಯರು, ದಾದಿಯರು, ಕೋವಿಡ್ ಯೋಧರು, ಸ್ವಚ್ಛತಾ ಕರ್ಮಚಾರಿಗಳು, ಆಂಬುಲೆನ್ಸ್ ನಡೆಸುವವರು . ಹೀಗೆ ಎಲ್ಲ ಜನರೂ ಮತ್ತು ಇನ್ನೂ ಹಲವರು ಭಾರತ ಜಾಗತಿಕ ಮಹಾಮಾರಿಯ ವಿರುದ್ಧ ಹೋರಾಡಲು ಬಲ ನೀಡಿ, ಸಾಕಾರಗೊಳಿಸಿದರು.ಎಂದು ಪ್ರಧಾನಮಂತ್ರಿ ಹೇಳಿದರು.

ಸಾಂಕ್ರಾಮಿಕದ ಸಮಯದಲ್ಲಿ ಬಾಧಿತ ಜನರಿಗೆ 2 ಲಕ್ಷ ಕೋಟಿ ರೂಪಾಯಿಗಳನ್ನು ನೇರ ಸವತ್ತು ವರ್ಗಾವಣೆಯ ಮೂಲಕ ಅವರ ಖಾತೆಗೆ ಜಮಾ ಮಾಡಿದ ಸರ್ಕಾರ ನೆರವು ನೀಡಿತು ಎಂದು ಪ್ರಧಾನಮಂತ್ರಿ ತಿಳಿಸಿದರುನಮ್ಮ ಜನ್ಧನ್ಆಧಾರ್ಮೊಬೈಲ್ (ಜೆ..ಎಂ) ಮೂರೂ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದವು. ಇದು ಬಡವರಲ್ಲೇ ಕಡುಬಡವರಿಗೆ, ವಂಚಿತರಿಗೆ ಮತ್ತು ದುರ್ಬಲರಿಗೆ ನೆರವಾಯಿತು ಎಂದು ತಿಳಿಸಿದರು. ಸಾಂಕ್ರಾಮಿಕದ ಸಮಯಲ್ಲೂ ಪರಿವರ್ತನೆ ನಡೆದಿತ್ತು, ಇದು ಆರ್ಥಿಕತೆಗೆ ಹೊಸ ವೇಗ ನೀಡಿತು ಮತ್ತು ಇದು ಎರಡಂಕಿಯ ವೃದ್ಧಿಯ ಭರವಸೆ ಮೂಡಿಸಿದೆ ಎಂದರು.

ರೈತರ ಪ್ರತಿಭಟನೆ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ, ಸದನ, ಸರ್ಕಾರ ಮತ್ತು ನಾವೆಲ್ಲರೂ ಕೃಷಿ ಕಾಯಿದೆಗಳ ವಿರುದ್ಧ ಧ್ವನಿ ಎತ್ತಿರುವ ರೈತರ ಬಗ್ಗೆ  ಮತ್ತು ಅವರ ಅಭಿಪ್ರಾಯಕ್ಕೆ ಗೌರವ ನೀಡುತ್ತೇವೆ. ಹೀಗಾಗಿಯೇ ಸರ್ಕಾರದ ಉನ್ನತ ಸಚಿವರುಗಳು ನಿರಂತರವಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ರೈತರ ಬಗ್ಗೆ ಅಪಾರ ಗೌರವ ಇದೆ. ಸಂಸತ್ತಿನಲ್ಲಿ ಕಾಯಿದೆಗಳು ಅನುಮೋದನೆ ಆದ ಬಳಿಕ ಯಾವುದೇ ಮಂಡಿಯನ್ನು ಮುಚ್ಚಿಲ್ಲ. ಅದೇ ರೀತಿ ಎಂ.ಎಸ್.ಪಿ. ಮುಂದುವರಿದಿದೆಎಂ.ಎಸ್.ಪಿ. ದರದಲ್ಲಿ ಖರೀದಿ ನಡೆದಿದೆ. ಬಜೆಟ್ ಮಂಡಿಗಳ ಬಲವರ್ಧನೆಗೆ ಪ್ರಸ್ತಾಪಿಸಿದೆ. ಅಂಶಗಳನ್ನು ಕಡೆಗಣಿಸಲಾಗದು ಎಂದರು. ಸದನದಲ್ಲಿ ಅಡ್ಡಿ ಪಡಿಸುತ್ತಿರುವವರು ಯೋಜಿತ ಕಾರ್ಯತಂತ್ರದ ರೀತ್ಯ ಹಾಗೆ ಮಾಡುತ್ತಿದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಜನರು ಸತ್ಯದ ಮೂಲಕ ನೋಡುತ್ತಿದ್ದಾರೆ ಇದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಆಟಗಳ ಮೂಲಕ ಜನರ ನಂಬಿಕೆಯನ್ನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಸರ್ಕಾರ ಕೇಳದ ಸುಧಾರಣೆಯನ್ನು ಏಕೆ ಮುಂದಿಡುತ್ತಿದೆ ಎಂಬ ವಾದವನ್ನು ಅವರು ಮುಂದಿಡುತ್ತಿದ್ದಾರೆ. ಇದೆಲ್ಲವೂ ಐಚ್ಛಿಕ, ನಾವು ಕೇಳುವವರೆಗೆ ಮಾಡಬಾರದು ಎಂದು ಕೂರುವುದಿಲ್ಲ. ಹಲವಾರು ಪ್ರಗತಿಪರ ಶಾಸನಗಳು ಸಮಯದ ಬೇಡಿಕೆಗೆ ಅನುಗುಣವಾಗಿ ಬಂದಿವೆ. ಜನರು ಕೇಳುವಂತೆ ಮಾಡುವ ಅಥವಾ ಬೇಡಲು ಒತ್ತಾಯಿಸುವ ಚಿಂತನೆಯು ಪ್ರಜಾಪ್ರಭುತ್ವವಾದದ್ದಲ್ಲ. ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ದೇಶದ ಅಗತ್ಯಗಳಿಗೆ ಅನುಗುಣವಾಗಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರಬೇಕು. ದೇಶದಲ್ಲಿನ ಬದಲಾವಣೆಗಾಗಿ ನಾವು ಕೆಲಸ ಮಾಡಿದ್ದೇವೆ ಮತ್ತು ಉದ್ದೇಶ ಸರಿಯಾಗಿದ್ದರೆ, ಉತ್ತಮ ಫಲಿತಾಂಶಗಳು ಬರಲಿವೆ ಎಂದು ಅವರು ಹೇಳಿದರು.

ಕೃಷಿ ಸಮಾಜ ಮತ್ತು ಸಂಸ್ಕೃತಿಯ ಭಾಗವಾಗಿದೆ ಮತ್ತು ನಮ್ಮ ಹಬ್ಬಗಳು ಮತ್ತು ಎಲ್ಲ ಸಂದರ್ಭಗಳು ಬಿತ್ತನೆ ಮತ್ತು ಸುಗ್ಗಿಗೆ ಸಂಪರ್ಕಿತವಾಗಿವೆ. ಶೇ.80ಕ್ಕಿಂತ ಹೆಚ್ಚಿನ ಜನಸಂಖ್ಯನ್ನು ನಿರ್ಲಕ್ಷಿಸಲಾಗುವುದಿಲ್ಲ, ಸಣ್ಣ ರೈತರನ್ನು ಕಡೆಗಣಿಸಲಾಗುವುದಿಲ್ಲ. ಭೂ ಹಿಡುವಳಿಯ ವಿಘಟನೆಯು ರೈತರು ತಮ್ಮ ಹೊಲಗಳಿಂದ ಕಾರ್ಯಸಾಧ್ಯವಾದ ಲಾಭವನ್ನು ಪಡೆಯದಿರುವ ಆತಂಕಕಾರಿ ಪರಿಸ್ಥಿತಿಗೆ ಕಾರಣವಾಗುತ್ತಿದೆ, ಕೃಷಿಯಲ್ಲಿ ಹೂಡಿಕೆಯು ಬಳಲುತ್ತಿದೆ. ಸಣ್ಣ ರೈತರಿಗಾಗಿ ಕೆಲವು ಕ್ರಮಗಳು ಅಗತ್ಯ. ಆದ್ದರಿಂದ ನಾವು ನಮ್ಮ ರೈತರನ್ನು ಆತ್ಮನಿರ್ಭರ ಮಾಡಲು ಕೆಲಸ ಮಾಡಬೇಕಾಗಿದೆ ಮತ್ತು ಅವರ ಸುಗ್ಗಿಯ ಬೆಳೆಯನ್ನು ಮಾರಾಟ ಮಾಡಲು ಮತ್ತು ಬೆಳೆಗಳಲ್ಲಿ ವೈವಿಧ್ಯತೆಯನ್ನು ತುಂಬಲು ಅವರಿಗೆ ಸ್ವಾತಂತ್ರ್ಯವನ್ನು ನೀಡಬೇಕಾಗಿದೆ. ಕೃಷಿಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಉದ್ಯೋಗ ದೊರೆಯುತ್ತದೆ ಎಂದು ಒತ್ತಿ ಹೇಳಿದರು. ನಾವು ನಮ್ಮ ರೈತರಿಗೆ ಸಮಾನ ಅವಕಾಶ ಕಲ್ಪಿಸಬೇಕಾಗುತ್ತದೆ, ಆಧುನಿಕ ತಂತ್ರಜ್ಞಾನವನ್ನು ಒದಗಿಸಬೇಕಾಗುತ್ತದೆ ಮತ್ತು ಅವರಲ್ಲಿ ವಿಶ್ವಾಸವನ್ನು ತುಂಬಬೇಕಾಗುತ್ತದೆ. ಹಳೆಯ ಮಾರ್ಗಗಳು ಮತ್ತು ನಿಯತಾಂಕಗಳು ಕಾರ್ಯನಿರ್ವಹಿಸದ ಕಾರಣ ಇದಕ್ಕೆ ಸಕಾರಾತ್ಮಕ ಚಿಂತನೆ ಅಗತ್ಯವಾಗಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಾರ್ವಜನಿಕ ವಲಯ ಅಗತ್ಯವಾಗಿದೆ ಆದರೆ, ಅದೇ ವೇಳೆ ಖಾಸಗಿ ವಲಯದ ಪಾತ್ರವೂ ಪ್ರಮುಖವಾಗುತ್ತದೆ ಎಂದು ಪ್ರತಿಪಾದಿಸಿದರು. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅದು ದೂರಸಂಪರ್ಕ ಆಗಿರಲಿ, ಔಷಧವೇ ಆಗಿರಲಿ ನಾವು ಖಾಸಗಿಯ ಪಾತ್ರ ನೋಡುತ್ತೇವೆ. ಭಾರತ ಮಾನವತೆಯ ಸೇವೆ ಮಾಡಲು ಸಶಕ್ತವಾಗಿದ್ದರೆ, ಇದರಲ್ಲಿ ಖಾಸಗಿ ವಲಯದ ಪಾತ್ರವೂ ಇದೆ.”  ಖಾಸಗಿ ವಲಯದ ವಿರುದ್ಧ ಅನುಚಿತ ಪದಗಳನ್ನು ಬಳಸುವುದು ಹಿಂದೆ ಕೆಲವು ಜನರಿಗೆ ಮತಗಳನ್ನು ತಂದುಕೊಟ್ಟಿರಬಹುದು ಆದರೆ ಕಾಲ ಕಳೆದುಹೋಗಿವೆ. ಖಾಸಗಿ ವಲಯವನ್ನು ನಿಂದಿಸುವ ಸಂಸ್ಕೃತಿ ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ನಮ್ಮ ಯುವಕರನ್ನು ರೀತಿ ಅವಮಾನಿಸುವುದನ್ನು ನಾವು ಮುಂದುವರಿಸಲಾಗುವುದಿಲ್ಲಎಂದು ಪ್ರಧಾನಮಂತ್ರಿ ಹೇಳಿದರು.

ರೈತರ ಆಂದೋಲನದ ವೇಳೆ ನಡೆದ ಹಿಂಸಾಚಾರವನ್ನು ಪ್ರಧಾನಮಂತ್ರಿ ಖಂಡಿಸಿದರು.  “ನಾನು ರೈತರ ಆಂದೋಲನ ಪವಿತ್ರವೆಂದು ಪರಿಗಣಿಸುತ್ತೇನೆ. ಆದರೆ, ಅದನ್ನು ಆಂದೋಲನಜೀವಿಗಳು ಪವಿತ್ರ ಆಂದೋಲನವನ್ನು ಅಪಹರಿಸಿದ ಬಳಿಕ, ಗಂಭೀರ ಆರೋಪಗಳಿಗೆ ಜೈಲು ಶಿಕ್ಷೆಯಾದವರ ಚಿತ್ರ ತೋರಿಸುತ್ತಿದೆ. ಇದು ಉದ್ದೇಶ ಈಡೇರಿಸುತ್ತದೆಯೇ? ಟೋಲ್ ಪ್ಲಾಜಾಗಳು ಕಾರ್ಯ ನಿರ್ವಹಿಸದಂತೆ ಮಾಡುವುದು, ಟೆಲಿಕಾಂ ಗೋಪುರಗಳನ್ನು ನಾಶ ಮಾಡುವುದು ಪವಿತ್ರ ಆಂದೋಲನದ ಉದ್ದೇಶ ಈಡೇರಿಸುತ್ತದೆಯೇಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. ಆಂದೋನಕಾರಿ ಮತ್ತು ಆಂದೋಲನಜೀವಿಗಳ ನಡುವೆ ವ್ಯತ್ಯಾಸ ಅರಿಯುವ ಅಗತ್ಯವಿದೆ ಎಂದರು. ಕೆಲವು ಜನರು ಸರಿಯಾಗಿ ಮಾತನಾಡುತ್ತಾರೆ. ಆದರೆ ಆದೇ ಜನ ಸರಿಯಾದ ಕೆಲಸ ಮಾಡಿದರೆ ತಮ್ಮ ಪದಗಳನ್ನು ಕ್ರಿಯೆಯಾಗಿ ಪರಿವರ್ತಿಸಲು ವಿಫಲವಾಗುತ್ತಾರೆ. ಚುನಾವಣಾ ಸುಧಾರಣೆಗಳ ಬಗ್ಗೆ ದೊಡ್ಡದಾಗಿ ಮಾತನಾಡುವವರು ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರ ಬಂದಾಗ ವಿರೋಧಿಸುತ್ತಾರೆ. ಲಿಂಗ ಸಮಾನತೆಯ ಬಗ್ಗೆ ಮಾತನಾಡುತ್ತಾರೆ, ತ್ರಿವಳಿ ತಲಾಖ್ ವಿಚಾರ ಬಂದರೆ ವಿರೋಧಿಸುತ್ತಾರೆ. ಜನರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಪಟ್ಟಿ ಮಾಡಿದರು.

ಸರ್ಕಾರ, ಬಡವರು ಮತ್ತು ಮಧ್ಯಮವರ್ಗದವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು  ಮೂಲಸೌಕರ್ಯ ಬಲವರ್ಧನೆಗೆ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರುಸರ್ಕಾರ ಸಮತೋಲಿತ ಅಭಿವೃದ್ಧಿಯತ್ತ ದೇಶವನ್ನು ತೆಗೆದುಕೊಂಡು ಹೋಗಲು ಗಮನ ಹರಿಸಿದೆ. ಸರ್ಕಾರ ಪೂರ್ವ ಭಾರತದ ಅಭಿವೃದ್ಧಿಗೆ ಅಭಿಯಾನದೋಪಾದಿಯಲ್ಲಿ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಲೆಯದ ಪೆಟ್ರೋಲಿಯಂ ಯೋಜನೆಗಳು, ರಸ್ತೆ, ವಿಮಾನನಿಲ್ದಾಣ, ಜಲ ಮಾರ್ಗಗಳು, ಸಿಎನ್.ಜಿ., ಎಲ್.ಪಿ.ಜಿ ವ್ಯಾಪ್ತಿ, ಇಂಟರ್ ನೆಟ್ ಸಂಪರ್ಕ ಯೋಜನೆಗಳನ್ನು ಉಲ್ಲೇಖಿಸಿದರು.

ಗಡಿ ಮೂಲಸೌಕರ್ಯಗಳ ಐತಿಹಾಸಿಕ ನಿರ್ಲಕ್ಷ್ಯವನ್ನು ರದ್ದುಗೊಳಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನಮ್ಮ ಗಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ರಕ್ಷಣಾ ಪಡೆಗಳು ಪೂರೈಸುತ್ತಿವೆ ಎಂದ ಪ್ರಧಾನಮಂತ್ರಿ, ಸೈನಿಕರ ಧೈರ್ಯ,ಶೌರ್ಯ ಮತ್ತು ತ್ಯಾಗವನ್ನು ಶ್ಲಾಘಿಸಿದರು.

***



(Release ID: 1697076) Visitor Counter : 202