ರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್ -19 ಸಾಂಕ್ರಾಮಿಕ ಇತರರು ಅಪಾಯದಲ್ಲಿರುವಾಗ ಒಬ್ಬರು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬ ಪಾಠವನ್ನು ವಿಶ್ವಕ್ಕೇ ಕಲಿಸಿದೆ: ರಾಷ್ಟ್ರಪತಿ ಕೋವಿಂದ್


ಕರ್ನಾಟಕದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ 23ನೇ ಘಟಿಕೋತ್ಸವಕ್ಕೆ ಶೋಭೆ ತಂದ ಭಾರತದ ರಾಷ್ಟ್ರಪತಿ

Posted On: 07 FEB 2021 12:57PM by PIB Bengaluru

ಕೋವಿಡ್ -19 ಸಾಂಕ್ರಾಮಿಕವು ಮತ್ತೊಬ್ಬರು ಅಪಾಯದಲ್ಲಿರುವಾಗ ಒಬ್ಬರು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬ ಪಾಠವನ್ನು ಇಡೀ ಜಗತ್ತಿಗೇ ಕಲಿಸಿದೆ ಎಂದು ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಹೇಳಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಉದ್ದೇಶಿಸಿ ಅವರು (2021ರ ಫೆಬ್ರವರಿ 7ರಂದು) ಮಾತನಾಡುತ್ತಿದ್ದರು. ಒಂದು ಶತಮಾನಕ್ಕೂ ಹೆಚ್ಚು ಸಮಯದ ಮೊದಲ ಪ್ರಮುಖ ಸಾಂಕ್ರಾಮಿಕ ರೋಗವು ನಮಗೆ ಅನಿರೀಕ್ಷಿತ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳಿಗೆ ಉತ್ತಮವಾಗಿ ಸಿದ್ಧರಾಗುವುದು ಹೇಗೆ ಎಂಬುದನ್ನು ಕಲಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಕೋವಿಡ್ -19 ಅಪರೂಪಕ್ಕೆ ಸಂಭವಿಸುವ ಒಂದು ರೀತಿಯ ಆರೋಗ್ಯ-ಬಿಕ್ಕಟ್ಟು ಎಂದು ತೋರುತ್ತದೆಯಾದರೂ, ವಿಜ್ಞಾನಿಗಳ ಒಂದು ವರ್ಗವು ಮುಂದೆ ಇದೇ ರೀತಿಯ ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ಎಚ್ಚರಿಸಿದೆ ಎಂದರು. ಜಗತ್ತು ಸೂಕ್ತ ಪಾಠವನ್ನು ಕಲಿತಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕೋವಿಡೋತ್ತರ ಹಂತದಲ್ಲಿ ಸಾರ್ವಜನಿಕ ಆರೋಗ್ಯ ಆರೈಕೆಗೆ ಜಗತ್ತು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಷ್ಟ್ರಪತಿಯವರು, ಗೌರವಯುತವಾದ ವೃತ್ತಿಗೆ ಅವರ ಪ್ರವೇಶ, ಮಾನವಕುಲಕ್ಕೆ ಸೇವೆ ಸಲ್ಲಿಸುವ ಅಭೂತಪೂರ್ವ ಅವಕಾಶವನ್ನು ಒದಗಿಸುತ್ತದೆ ಎಂದರು.  ಈ ಅವಕಾಶಗಳನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟಿದ್ದು ಎಂದರು. ಫೆಬ್ರವರಿ 1ರಂದು ಮಂಡಿಸಲಾದ ಆಯವ್ಯಯದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆತ್ಮ ನಿರ್ಭರ ಭಾರತದ ಆರು ಪ್ರಮುಖ ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಎಂದರು. ಆರೋಗ್ಯ ಆರೈಕೆಯ ಮೂಲಸೌಕರ್ಯ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಈ ರಾಷ್ಟ್ರೀಯ ಸಂಪನ್ಮೂಲದ ಸಮರ್ಥ ಬಳಕೆ ಅವರ ಸಕ್ರಿಯ ಬೆಂಬಲ ಮತ್ತು ಕೊಡುಗೆಯಿಂದ ಮಾತ್ರ ಸಾಧ್ಯ ಎಂದರು.

ಭಾರತದಲ್ಲಿ ಆರೋಗ್ಯ ಆರೈಕೆಯ ವಿತರಣೆ ರೋಗ ತಡೆ, ರೋಗಪತ್ತೆ ಮತ್ತು ಚಿಕಿತ್ಸೆ -ಎಲ್ಲ ಹಂತದಲ್ಲೂ ಬದಲಾವಣೆಗಳೊಂದಿಗೆ ಸಾಗಿದೆ. ಆರೋಗ್ಯ ಕ್ಷೇತ್ರದ ಯಾವುದೇ ಒಂದು ಘಟಕವು ಫಲಿತಾಂಶಗಳನ್ನು ನೀಡಲು ಮತ್ತು ಫಲಶ್ರುತಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಕ್ಷೇತ್ರದ ವಿಕಾಸವು ಎಲ್ಲಾ ಭಾದ್ಯಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಹಾಗೂ ನಾವೀನ್ಯತೆಯ ಬಳಕೆ ಉದ್ದೇಶ ಮತ್ತು ಕಾರ್ಯಗತಗೊಳಿಸುವಿಕೆಗೆ ಕರೆ ನೀಡುತ್ತದೆ ಎಂದರು.

ವಿಶ್ವದಲ್ಲಿ ಮಾನ್ಯತೆ ಹೊಂದಿದ ಸಂಸ್ಥೆಗಳ ದೊಡ್ಡ ಜಾಲವನ್ನು ಹೊಂದಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಆರೋಗ್ಯ ಆರೈಕೆಯ ಶಿಕ್ಷಣದ ಕ್ಷೇತ್ರದಲ್ಲಿ ಹಲವು ನಾವಿನ್ಯತೆಗಳಿಗೆ ಕಾರಣವಾಗಿದೆ ಎಂದರು. ಈ ವಿಶ್ವವಿದ್ಯಾನಿಲಯದ ಮುಂಚೂಣಿಯಲ್ಲಿ ನಿಂತವರು ಆರಂಭದಿಂದಲೂ ಮಾಡಿದ ನಿರಂತರ ಪ್ರಯತ್ನದಿಂದಾಗಿ ಇದು ಜಾಗತಿಕವಾಗಿ ವಿಶ್ವಾಸಾರ್ಹ ಬ್ರಾಂಡ್ ಆಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿಯವರ ಪೂರ್ಣ ಭಾಷಣ

***



(Release ID: 1696441) Visitor Counter : 170