ಕೃಷಿ ಸಚಿವಾಲಯ

ಕೃಷಿ ಉತ್ಪನ್ನಗಳಿಗಾಗಿ “ಒಂದು ದೇಶ - ಒಂದು ಮಾರುಕಟ್ಟೆ“ ದೃಷ್ಟಿಕೋನ ಬಲಪಡಿಸಲು ಪ್ಯಾನ್-ಇಂಡಿಯಾ  ಪೋರ್ಟಲ್ ನೆರವು

ಒಂದು ಸಾವಿರ ಹೊಸ ಮಂಡಿಗಳನ್ನು ಒಟ್ಟುಗೂಡಿಸಿ ವಿಸ್ತರಣೆ

Posted On: 04 FEB 2021 6:03PM by PIB Bengaluru

ಕೃಷಿ ಉತ್ಪನ್ನಗಳಿಗಾಗಿಒಂದು ದೇಶ-ಒಂದು ಮಾರುಕಟ್ಟೆ ದೃಷ್ಟಿಕೋನವನ್ನು ಸಾಕಾರಗೊಳಿಸಲು -ನ್ಯಾಮ್ ಎಂದೇ ಜನಪ್ರಿಯಗೊಂಡಿರುವ ರಾಷ್ಟ್ರೀಯ ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ. ಅನೇಕ ಮಾರುಕಟ್ಟೆಗಳು ಮತ್ತು ಖರೀದಿದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ವ್ಯಾಪಾರ ವಹಿವಾಟಿನಲ್ಲಿ  ಪಾರದರ್ಶಕತೆ, ಅಂತರ್ಜಾಲದ ಮೂಲಕ ಬೆಲೆ ಅನ್ವೇಷಣೆ, ಗುಣಮಟ್ಟದ ಪೂರಕ ಗ್ರಾಹಕ ದರವನ್ನು ನಿಗದಿಪಡಿಸುವ ಸಲುವಾಗಿಒಂದು ದೇಶ-ಒಂದು ಉತ್ಪನ್ನಪರಿಕಲ್ಪನೆಯನ್ನು ಅಭಿವೃದ್ದಿಪಡಿಸಲಾಗಿದೆ.

ಮೂರು ಕೇಂದ್ರಾಡಳಿತ ಪ್ರದೇಶಗಳು, 18 ರಾಜ್ಯಗಳನ್ನು ಒಳಗೊಂಡಂತೆ 1000 ಮಾರುಕಟ್ಟೆಗಳನ್ನು -ನ್ಯಾಮ್ ವ್ಯವಸ್ಥೆಯಡಿ ಉತ್ತಮ ಸಂಪರ್ಕಕಲ್ಪಿಸಲಾಗಿದೆ. -ನ್ಯಾಮ್ ವೇದಿಕೆಯಡಿ ಈವರೆಗೆ 1.69 ಕೋಟಿ ರೈತರು ಮತ್ತು 1.55 ಲಕ್ಷ ವ್ಯಾಪಾರಿಗಳು ನೋಂದಣಿಯಾಗಿದ್ದಾರೆ. -ನ್ಯಾಮ್ ನಡಿ ಪಾರದರ್ಶಕತೆಯ ಹರಾಜು ಮಾಡುವ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದ್ದು, ಇದರಿಂದ ವ್ಯಾಪಾರ ಹೆಚ್ಚಾಗಲು ಸಹಕಾರಿಯಾಗಿದೆ. ಒಟ್ಟು 4.13 ಕೋಟಿ ಮೆಟ್ರಿಕ್ ಟನ್ ಸರಕುಗಳು, 3.68 ಕೋಟಿ ತೆಂಗು ಮತ್ತು ಬಿದಿರು ಉತ್ಪನ್ನಗಳ ಅಂದಾಜು 1.22 ಲಕ್ಷ ಕೋಟಿ ರೂ ದಾಖಲೆ ಮೊತ್ತದ  ವಹಿವಾಟು ದಾಖಲಾಗಿದೆ. ವೇದಿಕೆಯಡಿ ರೈತರಿಗೆ ನೇರ ಪಾವತಿ ವ್ಯವಸ್ಥೆ ಮಾಡಲಾಗಿದೆ.

ಯಶಸ್ಸಿನ ನಂತರ -ನ್ಯಾಮ್ ವ್ಯವಸ್ಥೆಯಡಿ ಮತ್ತೆ 1000 ಮಂಡಿಗಳನ್ನು ಜೋಡಿಸುವುದಾಗಿ 2021 ಫೆಬ್ರವರಿ 1 ರಂದು  ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ -ನ್ಯಾಮ್ ವ್ಯವಸ್ಥೆಯಡಿ ಮಾರುಕಟ್ಟೆ ಮತ್ತಷ್ಟು ಬಲಗೊಳ್ಳಲಿದೆ.

ಕೋವಿಡ್-19 ಸಂದರ್ಭದಲ್ಲಿ ಎಫ್.ಪಿ. ವ್ಯಾಪಾರ ಮಾದರಿ ಜಾರಿಮಾಡುವ ಮೂಲಕ -ನ್ಯಾಮ್ ವೇದಿಕೆ, ಮೊಬೈಲ್ ಆ‍್ಯಪ್  ಗಳನ್ನು ಬಲಪಡಿಸಲಾಗಿದೆ. ಎಪಿಎಂಸಿಗಳಿಗೆ ಉತ್ಪನ್ನಗಳನ್ನು ತರದೇ ತಮ್ಮ ಸಂಗ್ರಹ ಕೇಂದ್ರದಿಂದಲೇ ಉತ್ಪನ್ನಗಳ ವ್ಯಾಪಾರ ಮಾಡಬಹುದಾಗಿದೆ. -ನ್ಯಾಮ್ ವೇದಿಕೆಯಡಿ ಈವರೆಗೆ 1844 ಎಫ್.ಪಿ. ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಹೆಚ್ಚುವರಿಯಾಗಿ ಗೋದಾಮು ಆಧಾರಿತ ವ್ಯಾಪಾರ ಮಾದರಿಯನ್ನು ಸಹ -ನ್ಯಾಮ್ ವ್ಯವಸ್ಥೆಯಡಿ ತರಲಾಗಿದ್ದು, -ಎನ್.ಡಬ್ಲ್ಯೂ.ಆರ್ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗಿದೆ. ಅಂತರರಾಜ್ಯ ಮತ್ತು ಮಂಡಿಗಳ ನಡುವೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ಲಾಜಿಸ್ಟಿಕ್ ಮಾದರಿಯ ಉತ್ತೇಜಿತ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲಿ ಸಾರಿಗೆ ಸೌಲಭ್ಯವನ್ನು ಸಹ ಜೋಡಿಸಲಾಗಿದೆ. ಇದು ಬಳಕೆದಾರರಿಗೆ ತಮ್ಮ ಉತ್ಪನ್ನಗಳನ್ನು ಸಾಗಿಸಲು ಮತ್ತು ಟ್ರ್ಯಾಕ್ ಮಾಡಲು, ಸಾರಿಗೆ ಸೌಲಭ್ಯಗಳನ್ನು ಪಡೆಯಲು ಸಹಾಯಮಾಡುತ್ತದೆ. -ನ್ಯಾಮ್ ವೇದಿಕೆ  ಆರ್...ಎಂ.ಎಸ್ ಜತೆ ಸಂಪರ್ಕ ಹೊಂದಿದ್ದು, ಎರಡೂ ವೇದಿಕೆಗಳೊಂದಿಗೆ ತನ್ನ ಜಾಲ ಬೆಸೆದುಕೊಂಡಿರುವ ಕರ್ನಾಟಕ ವೇದಿಕೆಯಿಂದ ತಮ್ಮ ಉತ್ಪನ್ನಗಳನ್ನು ಇತರೆ ವೇದಿಕೆಗಳಿಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುತ್ತದೆ.

ಕೃಷಿ ಕ್ಷೇತ್ರದ ವಿವಿಧ ವಿಭಾಗಗಲ್ಲಿ ಪ್ರತ್ಯೇಕ ವೇದಿಕೆಗಳ ಪರಿಣತಿಯನ್ನು ಹತೋಟಿಗೆ ತರಲು, ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು -ನ್ಯಾಮ್ ವ್ಯವಸ್ಥೆ ಇದೀಗವೇದಿಕೆಗಳ ವೇದಿಕೆಯಾಗಿ ಮೌಲ್ಯವರ್ಧಿತ ಸರಣಿಯಾಗಿ ಅಭಿವೃದ್ಧಿ ಹೊಂದುತ್ತಿದೆ.

-ನ್ಯಾಮ್ ವ್ಯವಸ್ಥೆ [ಕ್ಯೂ/ಸಿ ಸೇವೆಗಳು, ಪಾರದರ್ಶಕತೆ ಮತ್ತು ಸೇವೆಗಳನ್ನು ದೊರಕಿಸುವ, ವಿತರಣಾ ಸೇವೆಗಳು, ವಿಮೆ, ವ್ಯಾಪಾರ. ಹಣಕಾಸು, ಗೋದಾಮುಗಳ ವ್ಯವಸ್ಥೆ], ರೈತರಿಗೆ ತಮ್ಮ ಉತ್ಪನ್ನಗಳಿಗೆ ಮೌಲ್ಯ ಸೇ‍ರ್ಪಡೆ ಮಾಡಲು, ಕೃಷಿ ಮಾರುಕಟ್ಟೆ ಸುಲಭವಾಗುವಂತೆ ಮಾಡಲು ಅನುವು ಮಾಡಿಕೊಡುತ್ತದೆ.

-ನ್ಯಾಮ್ ಕೇವಲ ಒಂದು ಯೋಜನೆಯಲ್ಲ. ಆದರೆ ಇದು ಒಂದು ಯಾತ್ರೆ. ಕೊನೆಯ ಹಂತದಲ್ಲಿರುವ ರೈತರಿಗೆ ಲಾಭ ದೊರಕಿಸಲು ಮತ್ತು ಅವರ ಕೃಷಿ ಉತ್ಪನ್ನಗಳಿಗೆ ಪರಿವರ್ತನೆಯ ಮೌಲ್ಯ ದೊರಕಿಸಿಕೊಡಲು ನೆರವಾಗುತ್ತದೆ ರೀತಿಯ ಮಧ್ಯ ಪ್ರವೇಶದಿಂದ ಹೆಚ್ಚುವರಿ ವೆಚ್ಚವಿಲ್ಲದೇ  ರೈತರಿಗೆ ಸ್ಪರ್ಧಾತ್ಮಕ ಮತ್ತು ಸಂಭಾವನೆ ದರಗಳನ್ನು ಪಾರದರ್ಶಕ ರೀತಿಯಲ್ಲಿ ಅರಿತುಕೊಳ್ಳಲು ಅನುವು ಮಾಡಿಕೊಡುತ್ತದೆ. ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಅಪಾರ ಪ್ರಯೋಜನಗಳನ್ನು ತರುತ್ತದೆ.”

***(Release ID: 1695406) Visitor Counter : 15