ಹಣಕಾಸು ಸಚಿವಾಲಯ
ನಿಯಮಗಳ ಸರಳೀಕರಣ ಮತ್ತು ಪ್ರಕ್ರಿಯೆ ಸುಧಾರಣೆಗೆ ಆರ್ಥಿಕ ಸಮೀಕ್ಷೆ ಕರೆ
ಹೆಚ್ಚು ಸಂಕೀರ್ಣವಾದ ನಿಯಮಗಳನ್ನು ಹೊಂದುವುದರಿಂದ, ಹೆಚ್ಚು ಪಾರದರ್ಶಕವಲ್ಲದ ವಿವೇಚನೆಗೆ ಕಾರಣವಾಗುವ ಸಮಸ್ಯೆಗಳನ್ನು ತಗ್ಗಿಸುವ ಪ್ರಯತ್ನ
ಹೆಚ್ಚಿನ ವಿವೇಚನೆಯನ್ನು ಸೂಚಿಸಿದರೂ ಸಹ ನಿಯಮಗಳನ್ನು ಸರಳೀಕರಿಸುವುದು ಮತ್ತು ಹೆಚ್ಚಿನ ಮೇಲ್ವಿಚಾರಣೆಯಲ್ಲಿ ಹೂಡಿಕೆ ಮಾಡುವುದು ಪರಿಹಾರವಾಗಿದೆ
ವಿವೇಚನೆಯು ಪಾರದರ್ಶಕತೆ, ಹಣಕಾಸಿನ ಹೊಣೆಗಾರಿಕೆ ಮತ್ತು ಎಕ್ಸ್-ಪೋಸ್ಟ್ ಪರಿಹಾರ ವ್ಯವಸ್ಥೆಗಳೊಂದಿಗೆ ಸಮತೋಲನವಾಗಿರಬೇಕಾಗುತ್ತದೆ
Posted On:
29 JAN 2021 3:29PM by PIB Bengaluru
ನೈಜ ಜಗತ್ತಿನ ಸನ್ನಿವೇಶಗಳಲ್ಲಿನ ಅನಿಶ್ಚಿತತೆಗಳ ಬೆಳಕಿನಲ್ಲಿ ನಿಯಂತ್ರಕ ಪ್ರಕ್ರಿಯೆಗಳನ್ನು ಸರಳೀಕರಿಸಲು ಆರ್ಥಿಕ ಸಮೀಕ್ಷೆ ಕರೆ ನೀಡಿದೆ. ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2020-21 ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದರು.
ಭಾರತದಲ್ಲಿನ ಆಡಳಿತಾತ್ಮಕ ಪ್ರಕ್ರಿಯೆಗಳು ಅನೇಕ ಸಂದರ್ಭಗಳಲ್ಲಿ ಗಮನಾರ್ಹವಾದ ಕಾರ್ಯವಿಧಾನದ ವಿಳಂಬ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿನ ಇತರ ನಿಯಂತ್ರಕ ಸಂಕೀರ್ಣತೆಗಳಿಂದ ಕೂಡಿದ್ದು, ಎಲ್ಲ ಬಾಧ್ಯಸ್ಥರುಗಳಿಗೆ ಅಸಮರ್ಥ ಮತ್ತು ತೊಡಕುಂಟು ಮಾಡುತ್ತಿದೆ ಎಂದು ಸಮೀಕ್ಷೆಯು ಹೇಳಿದೆ. ಇದು ಈ ಸಮಸ್ಯೆಯನ್ನು ಒತ್ತಿ ಹೇಳಿದ್ದು, ಈ ಆಡಳಿತಾತ್ಮಕ ಸವಾಲನ್ನು ಪರಿಹರಿಸಲು ಮಾರ್ಗಗಳು ಮತ್ತು ವಿಧಾನಗಳನ್ನು ಶಿಫಾರಸು ಮಾಡಿದೆ.
ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ, ಪ್ರಾಧಿಕಾರಗಳು ಹೆಚ್ಚು ಸಂಕೀರ್ಣವಾದ ನಿಯಮಗಳನ್ನು ಹೊಂದುವ ಮೂಲಕ ವಿವೇಚನೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮಾಡುತ್ತಾರೆ, ಇದು ಪ್ರತಿರೋಧಕವಾಗಿದೆ ಮತ್ತು ಇನ್ನೂ ಹೆಚ್ಚು ಪಾರದರ್ಶಕವಲ್ಲದ ವಿವೇಚನೆಗೆ ಕಾರಣವಾಗುತ್ತದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಆರ್ಥಿಕ ಸಮೀಕ್ಷೆಯ ಪ್ರಕಾರ, ಅಂತಾರಾಷ್ಟ್ರೀಯ ಹೋಲಿಕೆಗಳು, ಭಾರತದ ಆಡಳಿತಾತ್ಮಕ ಪ್ರಕ್ರಿಯೆಗಳ ಸಮಸ್ಯೆಗಳು ಅತಿಯಾದ ನಿಯಂತ್ರಣದಿಂದ ಕೂಡಿದ್ದು, ಪ್ರಕ್ರಿಯೆ ಅಥವಾ ನಿಯಂತ್ರಕ ಮಾನದಂಡಗಳ ಅನುಸರಣೆಯ ಕೊರತೆಯನ್ನು ಕಡಿಮೆ ಪಡೆಯುತ್ತವೆ ಎಂದು ತೋರಿಸುತ್ತವೆ.
ಜಗತ್ತಿನ ಎಲ್ಲಾ ಅನಿಶ್ಚಿತತೆಗಳಿಗೆ ಮತ್ತು ಸಂಭವನೀಯ ಎಲ್ಲಾ ಫಲಿತಾಂಶಗಳಿಗೆ ಕಾರಣವಾಗುವಂತಹ ನಿಯಮಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಭಾರತವು ಆರ್ಥಿಕತೆಯನ್ನು ಅತಿಯಾಗಿ ನಿಯಂತ್ರಿಸುತ್ತದೆ ಎಂದು ಪುರಾವೆಗಳು ತೋರಿಸುತ್ತವೆ. ಪ್ರಕ್ರಿಯೆಯೊಂದಿಗಿನ ಉತ್ತಮ ಅನುಸರಣೆಯ ನಡುವೆಯೂ ನಿಯಮಗಳು ಪರಿಣಾಮಕಾರಿಯಾಗದಿರಲು ಇದು ಕಾರಣವಾಗುತ್ತದೆ.
"ಅಪೂರ್ಣ ಒಪ್ಪಂದಗಳ" ಚೌಕಟ್ಟನ್ನು ಬಳಸಿಕೊಂಡು, ಆರ್ಥಿಕ ಸಮೀಕ್ಷೆಯು ಭಾರತೀಯ ಆಡಳಿತ ಪ್ರಕ್ರಿಯೆಗಳಲ್ಲಿ ಅತಿಯಾದ ನಿಯಂತ್ರಣ ಮತ್ತು ಅಪಾರದರ್ಶಕತೆಯ ಸಮಸ್ಯೆಯು ಎಲ್ಲ ಸಂಭಾವ್ಯ ಫಲಶ್ರುತಿಗೆ ಕಾರಣವಾಗುವ ಸಂಪೂರ್ಣ ನಿಯಮಗಳನ್ನು ಹೊಂದುವ ಪ್ರಕ್ರಿಯೆಗಳಿಂದ ಹರಿಯುತ್ತದೆ ಎಂದು ವಾದಿಸುತ್ತದೆ. ಒಂದೆಡೆ ‘ನಿಯಂತ್ರಣ’ ಮತ್ತು ‘ಮೇಲ್ವಿಚಾರಣೆ’ ನಡುವಿನ ವ್ಯತ್ಯಾಸದ ಅಸಮರ್ಪಕ ಮೆಚ್ಚುಗೆಯ ಕಾರಣದಿಂದ ಆದರೆ, ಮತ್ತೊಂದೆಡೆ ಅಪೂರ್ಣ ನಿಯಮಗಳ ಅನಿವಾರ್ಯತೆಯೇ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಕಂಪನಿಯನ್ನು ಸ್ವಯಂಪ್ರೇರಣೆಯಿಂದ ಮುಚ್ಚಲು ಬೇಕಾದ ಸಮಯ ಮತ್ತು ಕಾರ್ಯವಿಧಾನಗಳ ಅಧ್ಯಯನದಿಂದ ಇದನ್ನು ವಿವರಿಸಲಾಗಿದೆ. ಯಾವುದೇ ವಿವಾದ/ ದಾವೆಗಳಿಲ್ಲದಿದ್ದರೂ ಮತ್ತು ಎಲ್ಲಾ ದಾಖಲೆಗಳು ಪೂರ್ಣಗೊಂಡಾಗಲೂ, ದಾಖಲೆಗಳಲ್ಲಿ 1570 ದಿನಗಳು ಅಂಟಿಕೊಂಡಿರುತ್ತದೆ.
ಶೈಕ್ಷಣಿಕ ಸಿದ್ಧಾಂತಗಳನ್ನು ಉಲ್ಲೇಖಿಸಿ, ಆರ್ಥಿಕ ಸಮೀಕ್ಷೆಯು ನೈಜ-ಜಗತ್ತಿನ ನಿಯಂತ್ರಣವು ಅನಿವಾರ್ಯವಾಗಿ ಅಪೂರ್ಣವಾಗಿರುತ್ತದೆ ಎಂದು ಹೇಳುತ್ತದೆ:
1. “ಅಜ್ಞಾತ ಅಪರಿಚಿತರು” ಕಾರಣದಿಂದ ಬೌಂಡೆಡ್ ವಿಚಾರಪರತೆ
2. "ಸಂಪೂರ್ಣ" ಒಪ್ಪಂದಗಳನ್ನು ನಿರೀಕ್ಷಿಸುವ ಮತ್ತು ರಚಿಸುವಲ್ಲಿನ ಸಂಕೀರ್ಣತೆ, ಅದು ಎಲ್ಲಾ ಸಂಭಾವ್ಯತೆಗಳನ್ನು ಪೂರ್ಣವಾಗಿ ನಿರ್ದಿಷ್ಟಪಡಿಸಬೇಕು
3. ಈ ಎರಡು ಅಂಶಗಳು ಮೂರನೇ ವ್ಯಕ್ತಿಗೆ ನಿರ್ಧಾರಗಳನ್ನು ನಿಸ್ಸಂದಿಗ್ಧವಾಗಿ ಪರಿಶೀಲಿಸಲು ತೊಂದರೆ ಉಂಟುಮಾಡುತ್ತದೆ.
ನೈಜ-ಪ್ರಪಂಚದ ನಿಯಂತ್ರಣವು ಅಂತರ್ಗತವಾಗಿ ಅಪೂರ್ಣವಾಗಿದ್ದರೂ, ನಿಯಂತ್ರಕ ನಿಬಂಧನೆಗಳ ಸಂಕೀರ್ಣತೆಯನ್ನು ಹೆಚ್ಚಿಸುವುದರಿಂದ ಪರಿಶೀಲನಾರ್ಹತೆ ಕಡಿಮೆಯಾಗುತ್ತದೆ ಮತ್ತು ಮೇಲ್ವಿಚಾರಕರ ಕೈಯಲ್ಲಿ ಅಪಾರದರ್ಶಕ ವಿವೇಚನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅತಿಯಾದ ನಿಯಂತ್ರಣ, ಸರಳವಾದ ನಿಯಂತ್ರಣವಲ್ಲದ್ದು, ವಿಪರೀತ ಎಕ್ಸ್ ಪೋರ್ಟ್ ವಿವೇಚನೆಗೆ ಕಾರಣವಾಗುತ್ತದೆ.
ಹೆಚ್ಚು ಸಂಕೀರ್ಣವಾದ ನಿಯಂತ್ರಣದೊಂದಿಗೆ ಮೇಲ್ವಿಚಾರಣೆಯನ್ನು ಬದಲಿಸುವುದನ್ನು ತಪ್ಪಿಸುವುದು ಆರ್ಥಿಕ ಸಮೀಕ್ಷೆಯ ಪರಿಹಾರವಾಗಿದೆ. ಪಾರದರ್ಶಕ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯೊಂದಿಗೆ ಸರಳವಾದ ನಿಯಮಗಳನ್ನು ಹೊಂದಿರುವುದು ಸೂಕ್ತ ಪರಿಹಾರವಾಗುತ್ತದೆ. ಸರ್ಕಾರದಲ್ಲಿ ನಿರ್ಧಾರ ತೆಗೆದುಕೊಳ್ಳುವವರಿಗೆ ವಿವೇಚನೆ ಒದಗಿಸಿದ ನಂತರ, ಅದನ್ನು ಮೂರು ವಿಷಯಗಳೊಂದಿಗೆ ಸಮತೋಲನಗೊಳಿಸುವುದು ಬಹಳ ಮುಖ್ಯ:
1. ಪಾರದರ್ಶಕತೆಯ ಸುಧಾರಣೆ,
2. ಹಣಕಾಸಿನ ಹೊಣೆಗಾರಿಕೆಯ ಬಲವಾದ ವ್ಯವಸ್ಥೆ (ಬ್ಯಾಂಕ್ ಮಂಡಳಿಯ ರೀತಿ) ಮತ್ತು
3. ಎಕ್ಸ್-ಪೋಸ್ಟ್ ಪರಿಹಾರ ವ್ಯವಸ್ಥೆ.
ಎಲ್ಲೆಲ್ಲಿ ಇಂತಹ ನಿಯಂತ್ರಣ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆಯೋ ಅಲ್ಲಿ, ಸುಗಮ ವಾಣಿಜ್ಯ ಗಮನಾರ್ಹವಾಗಿ ಸುಧಾರಿಸಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಉದಾಹರಣೆಗೆ, ಹೊಸ ಸರ್ಕಾರಿ ಇ- ಮಾರುಕಟ್ಟೆ ಪ್ರದೇಶ (ಜಿಇಎಂ ಪೋರ್ಟಲ್) ಸರ್ಕಾರಿ ಖರೀದಿಯ ಬೆಲೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ. ಇದು ಖರೀದಿ ವೆಚ್ಚವನ್ನು ತಗ್ಗಿಸಿರುವುದಲ್ಲದೆ, ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವುದನ್ನು ಸುಲಭಗೊಳಿಸಿದೆ.
***
(Release ID: 1693496)
Visitor Counter : 212