ಹಣಕಾಸು ಸಚಿವಾಲಯ
ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಹೆಚ್ಚು ಸಕ್ರಿಯ, ಪ್ರತಿ – ಆವರ್ತಕ ಹಣಕಾಸು ನೀತಿ ಅಗತ್ಯ : ಹಣಕಾಸು ಸಮೀಕ್ಷೆ ಸಲಹೆ
ಬೆಳವಣಿಗೆಯಿಂದ ಸಾಲ ಸುಸ್ಥಿರತೆ ಹಾದಿ ಸುಗಮ : ಆರ್ಥಿಕ ಸಮೀಕ್ಷೆ
ಬೆಳವಣಿಗೆ ಮತ್ತು ಬಡ್ಡಿದರ ಸೂಚಕಗಳನ್ನು ಮೀರಿ ಮುಂದಿನ ದಶಕದಲ್ಲಿ ಸುಸ್ಥಿರ ಬೆಳವಣಿಗೆ
Posted On:
29 JAN 2021 3:32PM by PIB Bengaluru
ದೇಶದಲ್ಲಿ ಸಾಲದ ಸುಸ್ಥಿರತೆ, ಬೆಳವಣಿಗೆಯ ವೇಗ ಹೆಚ್ಚಿಸುವ ಸಕ್ರಿಯ ಹಣಕಾಸು ನೀತಿ ಅಗತ್ಯವಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು 2020-21 ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದರು.
ಕೋವಿಡ್-19 ಬಿಕ್ಕಟ್ಟಿನ ನಡುವೆ ಹಣಕಾಸಿನ ಅಗತ್ಯತೆಯನ್ನು ಪರಿಶೀಲಿಸುವುದಾದರೆ ದೇಶದಲ್ಲಿ ಹಣಕಾಸಿನ ಅತ್ಯುತ್ತಮ ನಿಲುವಿನತ್ತ ಇದು ಬೆಳಕು ಚೆಲ್ಲುತ್ತದೆ. ಈ ಬೆಳವಣಿಗೆ ಸುಸ್ಥಿರತೆಗೆ ಕಾರಣವಾಗುತ್ತದೆ. ಸಾಲದ ಸುಸ್ಥಿರತೆಯು ಬಡ್ಡಿದರದ ಮತ್ತು ಬೆಳವಣಿಗೆಯ ದರದ ವ್ಯತ್ಯಾಸದ ಮೇಲೆ ಅವಲಂಬಿತವಾಗಿರುತ್ತದೆ ಎಂದು ವರದಿ ಹೇಳಿದೆ. ಕೇಂದ್ರ ಸರ್ಕಾರ ಪಾವತಿಸುವ ಸಾಲದ ಮೇಲಿನ ಬಡ್ಡಿದರ ಭಾರತದ ಬೆಳವಣಿಗೆಯ ದರಕ್ಕಿಂತ ಕಡಿಮೆ ಇರುತ್ತದೆ. ಹೆಚ್ಚಿನ ಬೆಳವಣಿಗೆಯು ಭಾರತೀಯ ಸನ್ನಿವೇಶದೊಂದಿಗೆ ಕೂಡಿರುತ್ತದೆ. ವಿನಾಯಿತಿಯಿಂದಲ್ಲ ಎಂದು ವರದಿ ತಿಳಿಸಿದೆ.
ವಿಶೇಷವಾಗಿ ಬೆಳವಣಿಗೆಯ ಕುಸಿತ ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಹಣಕಾಸಿನ ನೀತಿಯ ಬಗ್ಗೆ ಚರ್ಚೆಯನ್ನು ಪ್ರೇರೇಪಿಸುತ್ತದೆ. ದೇಶದಲ್ಲಿ ನಕಾರಾತ್ಮಕ ಐ.ಆರ್.ಜಿ.ಡಿ ಬೆಳವಣಿಗೆಗೆ ಕಡಿಮೆ ಬಡ್ಡಿದರ ಕಾರಣವಲ್ಲ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಲವಾರು ದೇಶಗಳಲ್ಲಿನ ಸಮೀಕ್ಷೆ ಪ್ರಕಾರ ಹೆಚ್ಚಿನ ಬೆಳವಣಿಗೆ ಹೊಂದಿರುವ ದೇಶಗಳಲ್ಲಿನ ಬೆಳವಣಿಗೆಯು ಸುಸ್ಥಿರವಾಗಲು ಕಾರಣವಾಗುತ್ತದೆ ಮತ್ತು ಅಂತಹ ಕಡಿಮೆ ಬೆಳವಣಿಗೆ ದರ ಹೊಂದಿರುವ ದೇಶಗಳಲ್ಲಿ ಸಾಂದರ್ಭಿಕ ದಿಕ್ಕಿನ ಬಗ್ಗೆ ಸ್ಪಷ್ಟತೆ ಕಂಡು ಬರುವುದಿಲ್ಲ. ಸರ್ಕಾರದ ಸೂಕ್ಷ್ಮ ಆರ್ಥಿಕತೆಯ ಸಾಲ ಕುರಿತ “ ಎ ಲಾ ಬಲ್ಟೋನ್ [2006] ಗೆ ಕಾರ್ಪೋರೇಟ್ ಹಣಕಾಸು ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ಉನ್ನತ ಬೆಳವಣಿಗೆ ಸಾಧಿಸಲು ಮತ್ತು ಬೆಳವಣಿಗೆ ಹೊಂದುತ್ತಿರುವ ಮತ್ತು ಕಡಿಮೆ ಬೆಳವಣಿಗೆಯ ಸುಧಾರಿತ ಆರ್ಥಿಕತೆಗಳ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಈ ಸಮೀಕ್ಷೆಯ ಪರಿಕಲ್ಪನೆ ಅಡಿಪಾಯ ಹಾಕುತ್ತದೆ.
ಸೈಕ್ಲಿಕಲ್ ಆರ್ಥಿಕ ನೀತಿಗೆ ಸಕ್ರಿಯ ಪ್ರತಿಕ್ರಿಯೆ ನೀತಿಯ ಅಗತ್ಯ
ಆರ್ಥಿಕ ಪ್ರಗತಿಗಿಂತ ಆರ್ಥಿಕ ಬಿಕ್ಕಟ್ಟುಗಳು ಹಣಕಾಸಿನ ಸಂಕಷ್ಟ ಸಂದರ್ಭದಲ್ಲಿ ಅಸಮ ಪ್ರಮಾಣದಲ್ಲಿರುತ್ತವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ಬೇಡಿಕೆಗೆ ನಕಾರಾತ್ಮಕ ಆಘಾತ ನೀಡಿದೆ. ಸಕ್ರಿಯ ಹಣಕಾಸಿನ ನೀತಿ ಸರ್ಕಾರ ತೆಗೆದುಕೊಳ್ಳುವ ಮೂಲ ಆರ್ಥಿಕ ಸುಧಾರಣೆಗಳ ಸಂಪೂರ್ಣ ಲಾಭವನ್ನು ಖಚಿತಪಡಿಸುತ್ತದೆ. ನಿರೀಕ್ಷೆಯ ಭವಿಷ್ಯದಲ್ಲಿ ಐ.ಆರ್.ಜಿ.ಡಿ ನಕಾರಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸಿರುವುದರಿಂದ ಸಾಲದಿಂದ ಜಿಡಿಪಿ ಅನುಪಾತದಲ್ಲಿ ಏರಿಳಿತವಾಗಲಿದೆ. ಇದರಿಂದ ಬೆಳವಣಿಗೆ ಕಡಿಮೆಯಾಗಲಿದ್ದು, ಹೆಚ್ಚಾಗುವುದಿಲ್ಲ ಎಂದು ವರದಿ ತಿಳಿಸಿದೆ.
ಬರುವ 2030ರ ವರೆಗೆ ಉತ್ತೇಜನ ಪ್ಯಾಕೇಜ್ ಜಾರಿಯಲ್ಲಿರುವುದರಿಂದ ಮತ್ತು ದೇಶದ ಬೆಳವಣಿಗೆಯ ಸಾಮರ್ಥ‍್ಯ ಗಮನಿಸಿದರೆ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲೂ ಸಾಲದ ಸುಸ್ಥಿರತೆ ಸಮಸ್ಯೆಯಾಗುವ ಸಾಧ‍್ಯತೆಯಿಲ್ಲ ಎಂದು ಸಮೀಕ್ಷೆ ಹೇಳಿದೆ.
ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಪ್ರತಿ ಆವರ್ತಕ ಹಣಕಾಸು ನೀತಿ ಬಳಸುವ ಆಪೇಕ್ಷಣೀಯತೆಯನ್ನು ಎತ್ತಿ ತೋರಿಸಿದೆ. ಆರ್ಥಿಕ ಚಕ್ರಗಳನ್ನು ಸುಗಮಗೊಳಿಸಲು ಇದು ಅಗತ್ಯವಿದ್ದರೂ ಆರ್ಥಿಕ ಕುಸಿತದ ಸಂದರ್ಭದಲ್ಲಿ ಇದು ನಿರ್ಣಾಯಕವಾಗಿರುತ್ತದೆ.
ಉತ್ತಮವಾಗಿ ವಿನ್ಯಾಸಗೊಳಿಸಲಾದ ಆರ್ಥಿಕ ನೀತಿ ಉತ್ತಮ ಆರ್ಥಿಕತೆ ಹೊರ ಹೊಮ್ಮಲು ಎರಡು ಹಾದಿಗಳನ್ನು ತೋರಿಸುತ್ತದೆ. ಮೊದಲನೆಯದಾಗಿ ಬಹು ಹಂತದ ಸಾರ್ವಜನಿಕ ಹೂಡಿಕೆಯ ಪ್ಯಾಕೇಜ್ ಗಳ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಸಂಭವನೀಯ ಪ್ರಗತಿಯನ್ನು ಇದು ಉತ್ತೇಜಿಸುತ್ತದೆ. ಎರಡನೇಯದಾಗಿ ಇದು ಜಪಾನ್ ನಂತೆ ಭಾರತೀಯ ಆರ್ಥಿಕತೆಯು ಕಡಿಮೆ ಬೇತನ ಬೆಳವಣಿಗೆಯ ಬಲೆಗೆ ಬೀಳುವ ಅಪಾಯನ್ನು ತಗ್ಗಿಸಲಿದೆ.
ಮುಂದುವರೆದು ಖಾಸಗಿ ವಲಯದಲ್ಲಿ ವಿಪರೀತ ಅಪಾಯ ನಿವಾರಣೆಯ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಕಂಡು ಬರುವಂತೆ ಸಾರ್ವಜನಿಕ ಹೂಡಿಕೆ ವೇಗವನ್ನು ತಗ್ಗಿಸುತ್ತದೆ. ರಾಷ್ಟ್ರೀಯ ಮೂಲ ಸೌಕರ್ಯ ಪೈಪ್ ಲೈನ್ [ಎನ್.ಐ.ಪಿ] ಈಗಾಗಲೇ ಸಾರ್ವಜನಿಕ ಹೂಡಿಕೆಯ ತನ್ನ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಪ್ರಗತಿ, ಉತ್ಪಾದನೆ, ಉನ್ನತ ವೇತನದ ಉದ್ಯೋಗ ಸೃಷ್ಟಿ ಮತ್ತು ಸ್ವಯಂ ಹಣಕಾಸು ಕಾರ್ಯಸೂಚಿಯನ್ನು ಇದು ಒಳಗೊಂಡಿದೆ.
ಹೆಚ್ಚು ಕ್ರಿಯಾಶೀಲ ಮತ್ತು ಪ್ರತಿ ಚಕ್ರದ ಹಣಕಾಸಿನ ಜವಾಬ್ದಾರಿತನದ ಕರೆ ಅಲ್ಲ ಎಂಬುದನ್ನು ತಿಳಿಸುತ್ತದೆ. ಬೆಳವಣಿಗೆಯನ್ನು ಸುಸ್ಥಿರ ರೀತಿಯಲ್ಲಿ ಎತ್ತಿಕೊಳ್ಳುವವರೆಗೆ ಬೆಳವಣಿಗೆಯ ಮಂದಗತಿ ಅಥವಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಲ ಮತ್ತು ಹಣಕಾಸಿನ ಖರ್ಚುಗಳನ್ನು ಸಡಿಲಿಸಲು ಸರ್ಕಾರಕ್ಕೆ ಬೌದ್ಧಿಕ ಆಧಾರವನ್ನು ಒದಗಿಸಲು ಇದು ಸಹಕಾರ ನೀಡಲಿದೆ.
****
(Release ID: 1693483)
Visitor Counter : 295