ಹಣಕಾಸು ಸಚಿವಾಲಯ
ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ 1% ರಿಂದ 2.5-3% ಕ್ಕೆ ಹೆಚ್ಚಿಸಲು ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸು
"ಆರೋಗ್ಯಕಾಳಜಿ ಕ್ಷೇತ್ರದಲ್ಲಿ ಖರ್ಚು ಹೆಚ್ಚಾಗುವುದರಿಂದ ವೈಯ್ಯಕ್ತಿಕ ಕೈವೆಚ್ಚವನ್ನು ಒಟ್ಟಾರೆ ಆರೋಗ್ಯ ವೆಚ್ಚದ 65% ರಿಂದ 35% ವರೆಗೆ ಕಡಿಮೆ ಮಾಡಬಹುದು"
ಆರೋಗ್ಯ ಮೂಲಸೌಕರ್ಯವು ತ್ವರಿತವಾಗಿ ಎಲ್ಲರಿಗೂ ಲಭ್ಯ ಆಗಬೇಕು, ಹಾಗಾಗಿ ಬರೆದಿಡಬೇಕಾದ ಪ್ರಮುಖ ಆರೋಗ್ಯ ವೆಚ್ಚದಲ್ಲಿ ಯಾರೂ ಗಮನಹರಿಸಬಾರದು ಎಂದು ಆರೋಗ್ಯ ನೀತಿ ಒತ್ತಿಹೇಳುತ್ತದೆ;
ಆರೋಗ್ಯ ಮಾರುಕಟ್ಟೆಯ ರಚನೆಯನ್ನು ಸಕ್ರಿಯವಾಗಿ ರೂಪಿಸುವುದು ಸರ್ಕಾರದ ಪಾಲಿಗೆ ಪ್ರಮುಖ ವಿಷಯವಾಗಿದೆ
ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಎನ್.ಎಚ್.ಎಂ. ಅನ್ನೂ ಕೂಡಾ ಮುಂದುವರಿಸಲು ಶಿಫಾರಸು
"ಆರೋಗ್ಯ ಕ್ಷೇತ್ರದ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ವಲಯ ನಿಯಂತ್ರಕವನ್ನು ಗಂಭೀರವಾಗಿ ಪರಿಗಣಿಸಬೇಕು"
ಕಡಿಮೆ ವಿಮಾ ಕಂತು(ಪ್ರೀಮಿಯಂ)ಗಳಿಗೆ ಸಹಾಯ ಮಾಡಲು ಮಾಹಿತಿ ಅಸಮತೋಲನವನ್ನುತಗ್ಗಿಸುತ್ತದೆ
"ಆರೋಗ್ಯ ಸೇವೆಗಳ ವಿತರಣೆಯ ಸೇವೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಪೂರ್ಣವಾಗಿ ಬಳಸಿಕೊಳ್ಳಬೇಕು, ಇದಕ್ಕಾಗಿ ತಂತ್ರಜ್ಞಾನ-ಶಕ್ತಗೊಂಡ ಪರಿಹಾರಗಳನ್ನುಹೆಚ್ಚಿಸಬೇಕು"
Posted On:
29 JAN 2021 3:45PM by PIB Bengaluru
ರಾಷ್ಟ್ರೀಯ ಆರೋಗ್ಯ ನೀತಿ 2017 ರಲ್ಲಿ ಈಗಾಗಲೇ ಸೂಚಿರುವಂತೆ ಆರೋಗ್ಯ ಸೇವೆಗಳ ಸಾರ್ವಜನಿಕ ಖರ್ಚನ್ನು ಜಿಡಿಪಿಯ ಶೇಕಡಾ 1 ರಿಂದ 2.5-3ಕ್ಕೆ ಹೆಚ್ಚಿಸಲು ಆರ್ಥಿಕ ಸಮೀಕ್ಷೆ 2020-21ಯು ಬಲವಾಗಿ ಶಿಫಾರಸು ಮಾಡಿದೆ. ಇದು ವೈಯ್ಯಕ್ತಿಕ ಕೈ ವೆಚ್ಚವನ್ನು (ಒ.ಒ.ಪಿ.ಇ) ಒಟ್ಟಾರೆ ಆರೋಗ್ಯ ವೆಚ್ಚದ ಶೇಕಡಾ 65 ರಿಂದ 35 ರವರೆಗೆ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು 2020-21ರನ್ನು ಸಂಸತ್ತಿನಲ್ಲಿ ಮಂಡಿಸಿದರು.
ಒಂದು ರಾಷ್ಟ್ರದ ಆರೋಗ್ಯವು ಅದರ ನಾಗರಿಕರಿಗೆ ನ್ಯಾಯಯುತ, ಕೈಗೆಟುಕುವ ಮತ್ತು ಜವಾಬ್ದಾರಿಯುತ ಆರೋಗ್ಯ ವ್ಯವಸ್ಥೆಗೆ ಅವಕಾಶವನ್ನು ಹೊಂದಿರುವುದರ ಮೇಲೆ ವಿಮರ್ಶಾತ್ಮಕವಾಗಿ ಅವಲಂಬಿತವಾಗಿದೆ ಎಂದು ಸಮೀಕ್ಷೆಯು ಗಮನಿಸಿದೆ. ಸಾರ್ವಜನಿಕ ಆರೋಗ್ಯ ವೆಚ್ಚಗಳು ಹೆಚ್ಚಾದಾಗ ಒಟ್ಟು ಆರೋಗ್ಯ ಖರ್ಚಿನ ಪಾಲು ವೈಯ್ಯಕ್ತಿಕ ಕೈ ವೆಚ್ಚವನ್ನು (ಒ.ಒ.ಪಿ.ಇ) ತೀವ್ರವಾಗಿ ಇಳಿಸುತ್ತದೆ. ಆರೋಗ್ಯದ ಸಮಸ್ಯೆ ಎದುರಾದಾಗ, ದುರ್ಬಲ ಗುಂಪುಗಳು ಆರೋಗ್ಯಕ್ಕಾಗಿ ವೈಯ್ಯಕ್ತಿಕ ಕೈ ವೆಚ್ಚವನ್ನು (ಒ.ಒ.ಪಿ.ಇ) ಮಾಡಬೇಕಾಗಿ ಬರುತ್ತದೆ ಮತ್ತು ಅವರು ಬಡತನಕ್ಕೆ ಜಾರಿಕೊಳ್ಳುವ ಅಪಾಯವನ್ನು ಇನ್ನೂ ಹೆಚ್ಚಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಒಂದು ದೇಶದಲ್ಲಿನ ಜೀವಿತಾವಧಿಯು ತಲಾ ಸಾರ್ವಜನಿಕ ಆರೋಗ್ಯ ವೆಚ್ಚದೊಂದಿಗೆ ಸಕಾರಾತ್ಮಕವಾಗಿ ಸಂಬಂಧ ಹೊಂದಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಗಮನಾರ್ಹವಾಗಿ, ಆರ್ಥಿಕ ದೃಷ್ಟಿಕೋನದಿಂದ, ವೈಯ್ಯಕ್ತಿಕ ಕೈ ವೆಚ್ಚ (ಒ.ಒ.ಪಿ.ಇ)ಗಳಲ್ಲಿ ವಿಶ್ವದಲ್ಲೇ ಭಾರತವು ಅತ್ಯುನ್ನತ ಮಟ್ಟವನ್ನು ಹೊಂದಿದೆ, ಇದು ವಿಪತ್ತು ವೆಚ್ಚಗಳು ಮತ್ತು ಬಡತನದ ಹೆಚ್ಚಿನ ಸಂಭವಗಳಿಗೆ ನೇರವಾಗಿ ಕೊಡುಗೆ ನೀಡುತ್ತದೆ. ಇದಲ್ಲದೆ, ಭಾರತದ ಜನಸಂಖ್ಯೆಯ ಹೆಚ್ಚಿನ ಶೇಕಡಾವಾರು ಜನರಿಗೆ ಆರ್ಥಿಕ ಕೈಗೆಟುಕುವಿಕೆಯನ್ನು ಒದಗಿಸುವ ದಿಕ್ಕಿನಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಆಶ್ರಯ ಕೊಡೆಯಾಗಿ ವಿಕಾಸವಾಗಿದೆ ಎಂದು ಸಮೀಕ್ಷೆಯು ಶ್ಲಾಘಿಸುತ್ತದೆ.
ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ ಅಧ್ಯಾಯದಲ್ಲಿ, ಇತ್ತೀಚಿನ ಕೋವಿಡ್ -19 ಸಾಂಕ್ರಾಮಿಕವು ಆರೋಗ್ಯ ಕ್ಷೇತ್ರದ ಮಹತ್ವವನ್ನು ಮತ್ತು ಆರ್ಥಿಕತೆಯ ಇತರ ಪ್ರಮುಖ ಕ್ಷೇತ್ರಗಳೊಂದಿಗೆ ಅದರ ಅಂತರ-ಸಂಪರ್ಕಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ಪ್ರಸ್ತುತ ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುತ್ತಿರುವ ಒಂದು ಪ್ರಮುಖ ಕಲಿಕೆಯೆಂದರೆ, ಆರೋಗ್ಯ ಬಿಕ್ಕಟ್ಟನ್ನು ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಇದು ತೋರಿಸಿದೆ. ಹೆಚ್ಚುವರಿಯಾಗಿ, ಆರೋಗ್ಯ ಮೂಲಸೌಕರ್ಯವು ತ್ವರಿತವಾಗಿ ಎಲ್ಲರಿಗೂ ಲಭ್ಯ ಆಗಬೇಕು, ಹಾಗಾಗಿ ಬರೆದಿಡಬೇಕಾದ ಪ್ರಮುಖ ಆರೋಗ್ಯ ವೆಚ್ಚದಲ್ಲಿ ಯಾರೂ ಗಮನಹರಿಸಬಾರದು ಎಂದು ಆರೋಗ್ಯ ನೀತಿ ಒತ್ತಿಹೇಳುತ್ತದೆ, ಸಾಂಕ್ರಾಮಿಕ ರೋಗಗಳಿಗೆ ಸ್ಪಂದಿಸಲು ಭಾರತವನ್ನು ಶಕ್ತಗೊಳಿಸಲು, ಆರೋಗ್ಯ ಮೂಲಸೌಕರ್ಯವು ಚುರುಕಾಗಿರಬೇಕು, ಅಲ್ಲದೆ, ಭಾರತದ ಆರೋಗ್ಯ ನೀತಿಯು ಅದರ ದೀರ್ಘಕಾಲೀನ ಆರೋಗ್ಯ ಆದ್ಯತೆಗಳ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಬೇಕು ಎಂದು ಆರ್ಥಿಕ ಸಮೀಕ್ಷೆ ಬಲವಾಗಿ ಸಲಹೆ ನೀಡಿದೆ.
ಹೆಚ್ಚು ಛಿದ್ರಗೊಂಡ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳು ಹೆಚ್ಚಿನ ವೆಚ್ಚ, ಕಡಿಮೆ ದಕ್ಷತೆ ಮತ್ತು ಕಳಪೆ ಗುಣಮಟ್ಟದಲ್ಲಿ ಪ್ರತಿಫಲಿಸಿದಂತೆ ಕಡಿಮೆ ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ ಎಂದು ಸಮೀಕ್ಷೆಯು ಮುಖ್ಯವಾಗಿ ಗಮನಿಸಿದೆ. ಆದ್ದರಿಂದ, ಆರೋಗ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ ಆರೋಗ್ಯ ಸೇವೆಗೆ ಹಣಕಾಸು ಒದಗಿಸುವುದರ ಜೊತೆಗೆ, ಆರೋಗ್ಯ ಮಾರುಕಟ್ಟೆಯ ರಚನೆಯನ್ನು ಸಕ್ರಿಯವಾಗಿ ರೂಪಿಸುವುದು ಕೂಡಾ ಸರ್ಕಾರದ ಪ್ರಮುಖ ಪಾತ್ರವಾಗಿದೆ. ಪ್ರಸವಪೂರ್ವ ಮತ್ತು ಪ್ರಸವನಂತರ ಆರೈಕೆ ಮತ್ತು ಸಾಂಸ್ಥಿಕ ವಿತರಣೆಗಳಿಗೆ ಇತ್ತೀಚೆಗೆ ಬಡವರ ಪ್ರವೇಶವು ಗಮನಾರ್ಹವಾಗಿ ಹೆಚ್ಚಿರುವುದರಿಂದ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ) ಅಸಮಾನತೆಯನ್ನು ತಗ್ಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸಮೀಕ್ಷೆ ಗಮನಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಎನ್.ಎಚ್.ಎಂ ಕೂಡಾ ಮುಂದುವರಿಯಲು ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿದೆ
ಆರೋಗ್ಯ ಸಮೀಕ್ಷೆಯಲ್ಲಿರುವ ಮಾಹಿತಿ ಅಸಮತೋಲನ ಸಮಸ್ಯೆಯನ್ನು ಆರ್ಥಿಕ ಸಮೀಕ್ಷೆಯು ಆಳವಾಗಿ ಪರಿಶೀಲಿಸಿದೆ. ಭಾರತದಲ್ಲಿ ಆರೋಗ್ಯ ರಕ್ಷಣೆಯ ಬಹುಪಾಲು ಭಾಗವನ್ನು ಖಾಸಗಿ ವಲಯವು ಒದಗಿಸುತ್ತಿರುವುದರಿಂದ, ಆರೋಗ್ಯ ರಕ್ಷಣೆಯಲ್ಲಿ ಮಾಹಿತಿ ಅಸಮತೋಲನವನ್ನು ತಗ್ಗಿಸುವ ನೀತಿಗಳನ್ನು ವಿನ್ಯಾಸಗೊಳಿಸುವುದು ನೀತಿ ನಿರೂಪಕರಿಗೆ ನಿರ್ಣಾಯಕವಾಗಿದೆ, ಇದು ಮಾರುಕಟ್ಟೆಯ ವೈಫಲ್ಯಗಳನ್ನು ಸೃಷ್ಟಿಸುತ್ತದೆ ಮತ್ತು ಆ ಮೂಲಕ ಅನಿಯಂತ್ರಿತ ಖಾಸಗಿ ಆರೋಗ್ಯ ಮಹತ್ತರತೆಯನ್ನು ಜೊತೆಯಲ್ಲಿ ಸೃಷ್ಟಿಸುತ್ತದೆ. ಆದ್ದರಿಂದ, ಮಾಹಿತಿಯ ಅಸಮತೋಲನವನ್ನು ತಗ್ಗಿಸಲು ಸಹಾಯ ಮಾಡುವ ಮಾಹಿತಿ ಉಪಯುಕ್ತತೆಗಳು ಒಟ್ಟಾರೆ ಆರೋಗ್ಯ- ಕಲ್ಯಾಣವನ್ನು ಹೆಚ್ಚಿಸಲು ಬಹಳ ಉಪಯುಕ್ತವಾಗುತ್ತವೆ, ಹಾಗೂ ಮಾಹಿತಿ ಅಸಮತೋಲನವನ್ನು ತಗ್ಗಿಸುವುದು ವಿಮಾ ಕಂತುಗಳನ್ನು ಕಡಿಮೆ ಮಾಡಲು, ಉತ್ತಮ ಉತ್ಪನ್ನಗಳ ಕೊಡುಗೆಯನ್ನು ಶಕ್ತಗೊಳಿಸಲು ಮತ್ತು ದೇಶದಲ್ಲಿ ವಿಮಾ ಕ್ಷೇತ್ರದ ವಿಸ್ತಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಮುಖ ಶೋಧನಾ ಟಿಪ್ಪಣಿಯಲ್ಲಿ ಸೂಚಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಮಾಹಿತಿ ಅಸಮತೋಲನವನ್ನು ತಗ್ಗಿಸಲು ಸಹಾಯ ಮಾಡುವ ಮಾಹಿತಿ ಉಪಯುಕ್ತತೆಗಳು ಒಟ್ಟಾರೆ ಕಲ್ಯಾಣವನ್ನು ಹೆಚ್ಚಿಸಲು ಬಹಳ ಉಪಯುಕ್ತವಾಗಿವೆ. ಇದರ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಎತ್ತಿ ತೋರಿಸಿದೆ ಎಂದು ಗಮನಿಸಿದ ಆರ್ಥಿಕ ಸಮೀಕ್ಷೆಯು ಮಾಹಿತಿ ಅಸಮತೋಲನದಿಂದ ಉಂಟಾಗುವ ಮಾರುಕಟ್ಟೆ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಆರೋಗ್ಯ ಭೂದೃಶ್ಯದಲ್ಲಿ ವಲಯ ನಿಯಂತ್ರಕವನ್ನು ಶಿಫಾರಸು ಮಾಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಫಿನ್ಲ್ಯಾಂಡ್, ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ಮುಂತಾದ ಹಲವಾರು ದೇಶಗಳ ಅತ್ಯುತ್ತಮ ಅಭ್ಯಾಸ- ಕಾರ್ಯಯೋಜನೆಗಳನ್ನು ಕೂಡಾ ಹಂಚಿಕೊಳ್ಳಲಾಗಿದೆ.
ಕೋವಿಡ್ -19 ರ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಕಲಿತ, ಆರ್ಥಿಕ ಸಮೀಕ್ಷೆಯು ದೇಶದಲ್ಲಿ ಆರೋಗ್ಯ ವಿತರಣೆಯ ಕೊನೆಯ ಸೇವೆಗಳ ಸವಾಲುಗಳನ್ನು ಎದುರಿಸಲು ಟೆಲಿ-ಮೆಡಿಸಿನ್ ಅನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರುವುದು ಸಹಾಯ ಮಾಡಿದೆ. ಆರೋಗ್ಯ ಸೇವೆಗಳ ವಿತರಣೆಗೆ ಪರ್ಯಾಯ ವಿತರಣಾ ಮಾರ್ಗವಾಗಿ ತಂತ್ರಜ್ಞಾನ-ಶಕ್ತಗೊಂಡ ಇ-ಸಂಜೀವನಿಯಂತಹ ವ್ಯವಸ್ಥೆಗಳ (ಪ್ಲಾಟ್‌ಫಾರ್ಮ್‌ಗಳ) ಪಾತ್ರವನ್ನು ಗಮನಾರ್ಹವಾಗಿ ತೋರಿಸಿಕೊಡಲು ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು ಕಾರಣವಾಗಿದೆ ಎಂದು ಆರ್ಥಿಕ ಸಮೀಕ್ಷೆ ಗಮನಿಸಿದೆ. ಟೆಲಿಮೆಡಿಸಿನ್ ಮುಖ್ಯವಾಗಿ ಅಂತರ್ಜಾಲ ಸಂಪರ್ಕದ ಮೇಲೆ ಅವಲಂಬಿತವಾಗಿರುವುದರಿಂದ, ಮತ್ತು ಆರೋಗ್ಯ ಮೂಲಸೌಕರ್ಯ ಮತ್ತು ಟೆಲಿಮೆಡಿಸಿನ್ ಸಮಾಲೋಚನೆಗಳ ಸಂಖ್ಯೆಯು ಒಂದು ಪ್ರದೇಶದಲ್ಲಿನ ಅಂತರ್ಜಾಲ ಪ್ರಗತಿಯೊಂದಿಗೆ ಬಲವಾಗಿ ಸಂಬಂಧ ಹೊಂದಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರದ ಡಿಜಿಟಲ್ ಹೆಲ್ತ್ ಮಿಷನ್‌ಗೆ ಪೂರಕವಾಗಿ ಟೆಲಿಮೆಡಿಸಿನ್‌ನಲ್ಲಿ ಉದೇಶಿತ ಕಾರ್ಯಯೋಜನೆ (ಮಿಷನ್ ಮೋಡ್‌ನಲ್ಲಿ) ರೀತಿಯಲ್ಲಿ ಹೂಡಿಕೆ ಮಾಡಲು ಆರ್ಥಿಕ ಸಮೀಕ್ಷೆ ಸೂಚಿಸಿದೆ. ಮತ್ತು ಆ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ಪ್ರವೇಶ ಅವಕಾಶ ಸೃಷ್ಠಿಸಲು ಸಾಧ್ಯವಿದೆ.
(Release ID: 1693478)
Visitor Counter : 320