ಹಣಕಾಸು ಸಚಿವಾಲಯ
ಐಐಪಿ ದತ್ತಾಂಶದ ಪ್ರಕಾರ ದೇಶದ ಆರ್ಥಿಕ ಚಟುವಟಿಕೆ “ವಿ” ಆಕಾರದಲ್ಲಿ ಬಲಿಷ್ಠ ಚೇತರಿಕೆ
ಐಐಪಿ ಮತ್ತು ಎಂಟು ಕೋರ್ ಸೂಚ್ಯಂಕದಂತೆ ಆರ್ಥಿಕ ಚಟುವಟಿಕೆ ಕೋವಿಡ್ ಪೂರ್ವ ಹಂತಕ್ಕೆ
ಐಐಪಿ ಬ್ರಾಡ್ ಆಧರಿತ ಬೆಳವಣಿಗಾಗಿ ಫಲಿತಾಂಶ: ಏಪ್ರಿಲ್ ನಲ್ಲಿ [-] 57.3 ರಷ್ಟು, ನವೆಂಬರ್ 20ರಲ್ಲಿ [-] 1.9 ರಷ್ಟು ಪ್ರಗತಿ
ಪರಿಹಾರ ಮತ್ತು ಸುಧಾರಣೆಗಾಗಿ [ ಆತ್ಮನಿರ್ಭರ್ ಭಾರತ್] ಉತ್ತೇಜನಾ ಪ್ಯಾಕೇಜ್ ಭಾರತದ ಜಿಡಿಪಿಯಲ್ಲಿ ಶೇ 15 ರಷ್ಟು
ಸುಗಮ ವ್ಯಾಪಾರ ಸೂಚ್ಯಂಕದಲ್ಲಿ [ಇ.ಒ.ಡಿ.ಬಿ] 190 ದೇಶಗಳ ಪೈಕಿ 2018 ರಲ್ಲಿ 77 ನೇ ಸ್ಥಾನದಲ್ಲಿದ್ದ ಭಾರತ 2019 ರಲ್ಲಿ 63 ನೇ ಸ್ಥಾನಕ್ಕೆ ಬಡ್ತಿ
ಕೋವಿಡ್-19 ನಡುವೆಯೂ 2020ರ ಹಣಕಾಸು ವರ್ಷದಲ್ಲಿ ಎಫ್.ಡಿ.ಐ ಏರಿಕೆ: 2019 ರಲ್ಲಿ 40.37 ಶತಕೋಟಿ ಡಾಲರ್, 2020 ರಲ್ಲಿ 49.98 ಶತಕೋಟಿ ಡಾಲರ್, 2021 ರ [2020ರ ಸೆಪ್ಟೆಂಬರ್ -2020ರವರೆಗೆ 30 ಶತಕೋಟಿ ಡಾಲರ್
ಕೋವಿಡ್-19 ಸಂದರ್ಭದಲ್ಲಿ ಎಫ್.ಡಿ.ಐನಲ್ಲಿ ಗಣನೀಯ ಏರಿಕೆ: ಭಾರತದ ಆರ್ಥಿಕತೆಯ ಮೇಲೆ ಅಂತಾರಾಷ್ಟ್ರೀಯ ಸಮುದಾಯದ ಬಲಿಷ್ಠ ನಂಬಿಕೆ
ಸಹಾಯಧನದೊಂದಿಗೆ ಉತ್ಪಾದನಾ ಯೋಜನೆ: ಒಟ್ಟು ಯೋಜನಾ ವೆಚ್ಚ 1.46 ಲಕ್ಷ ಕೋಟಿ ರೂ
Posted On:
29 JAN 2021 3:28PM by PIB Bengaluru
ಹಿಂದೆಂದೂ ಕಂಡರಿಯದ ಕೋವಿಡ್-19 ಸಾಂಕ್ರಾಮಿಕ ಮತ್ತು ಪರಿಣಾಮಕಾರಿ ಸವಾಲುಗಳ ನಡುವೆ ದೇಶದ ಕೈಗಾರಿಕೆ ಮತ್ತು ಮೂಲ ಸೌಕರ್ಯ ವಲಯ ಸೇರಿ ದೇಶದ ಅರ್ಥವ್ಯವಸ್ಥೆ “ವಿ” ಆಕಾರದ ಹಾದಿಯಲ್ಲಿದೆ. ಐಐಪಿ ದತ್ತಾಂಶದ ಪ್ರಕಾರ ಆರ್ಥಿಕ ಚಟುವಟಿಕೆ ಮತ್ತಷ್ಟು ಚೇತರಿಸಿಕೊಳ್ಳುತ್ತಿದ್ದು, “ವಿ” ಆಕಾರದ ಸ್ಪರೂಪ ಪಡೆಯುತ್ತಿದೆ ಮತ್ತು ಐಐಪಿ ದತ್ತಾಂಶದ ಪ್ರಕಾರ ಆರ್ಥಿಕ ಚಟುವಟಿಕೆ “ವಿ” ಆಕಾರದಲ್ಲಿ ಚೇತರಿಕೆಯಾಗುತ್ತಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಆರ್ಥಿಕ ಸಮೀ್ಕ್ಷಾ ವರದಿಯನ್ನು ಮಂಡಿಸಿದರು.
ಐಐಪಿ ಮತ್ತು ಎಂಟು ಕೋರ್ ಸೂಚ್ಯಂಕದ ಪ್ರಕಾರ ಆರ್ಥಿಕ ಪರಿಸ್ಥಿತಿ ಕೋವಿಡ್ ಪೂರ್ವ ಹಂತಕ್ಕೆ ತಲುಪಲಿದೆ.
ಐಐಪಿ ಬ್ರಾಡ್ ಆಧರಿತ ಬೆಳವಣಿಗೆಯ ಫಲಿತಾಂಶದಲ್ಲಿ ಏಪ್ರಿಲ್ ನಲ್ಲಿ [-] 57.3 ರಷ್ಟು ಪ್ರಗತಿಯಾಗಿದ್ದು, ನವೆಂಬರ್ 20ರಲ್ಲಿ [-] 1.9 ರಷ್ಟು ಹಾಗೂ ಕಳೆದ 2019ರ ನವೆಂಬರ್ ನಲ್ಲಿ [-] 2.1 ರಷ್ಟು ಪ್ರಗತಿ ಕಂಡಿದೆ. ಐಐಪಿ ದತ್ತಾಂಶದ ಪುನರುಜ್ಜೀವನದ ಬಗ್ಗೆ ಮತ್ತೊಂದು ದೃಷ್ಟಿಕೋನದಿಂದಲೂ ಮತ್ತಷ್ಟು ವಿಶ್ಲೇಷಣೆ ಮಾಡಲಾಗಿದೆ. 2020 ರ ನವೆಂಬರ್ ನಲ್ಲಿ ಶೇ 46.05 ರಷ್ಟು ಬೆಳವಣಿಗೆಯಾಗಿತ್ತು. ಇದು 2020ರ ಏಪ್ರಿಲ್ ನಲ್ಲಿ ಶೇ 5.87 ರಷ್ಟಿತ್ತು.
ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ, ಭಾರತದ ಆರ್ಥಿಕ ಚೇತರಿಕೆಯಾಗಲಿದ್ದು, ಬಲಿಷ್ಠ ಆರ್ಥಿಕತೆಯ ಆರಂಭವಾಗಲಿದೆ ಎಂದು ಹೇಳಿದೆ. ಕೈಗಾರಿಕಾ ಚಟುವಟಿಕೆ ದೃಢವಾಗಿ ಹಾಗೂ ಮತ್ತಷ್ಟು ಸುಧಾರಣೆ ಕಾಣಲಿದ್ದು, ಸರ್ಕಾರದ ಬಂಡವಾಳ ಮತ್ತು ದೀರ್ಘಕಾಲದಿಂದ ಕಾಯುತ್ತಿದ್ದ ಬಾಕಿ ಉಳಿದಿರುವ ಹೂಡಿಕೆ ಹೆಚ್ಚಾಗಲಿದೆ. ಲಸಿಕೆ ಅಭಿಯಾನದ ಜತೆಗೆ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಕೆ ಹಾದಿಗೆ ಮರಳಲಿದೆ. ದೇಶದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವಿಸ್ತಾರವಾದದ್ದು ಮತ್ತು ಗಮನ ಸೆಳೆಯುವಂತಹದ್ದಾಗಿದೆ. ಪರಿಹಾರ ಮತ್ತು ಸುಧಾರಣಾ ಪ್ಯಾಕೇಜ್ [ ಆತ್ಮನಿರ್ಭರ್ ಭಾರತ್] ಉತ್ತೇಜನಾ ಪ್ಯಾಕೇಜ್ ಭಾರತದ ಜಿಡಿಪಿಯಲ್ಲಿ ಶೇ 15 ರಷ್ಟು ಅಥವಾ 29.87 ಲಕ್ಷ ಕೋಟಿ ರೂಪಾಯಿಯಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಈ ಕ್ರಮಗಳು ಪೂರಕವಾಗಲಿವೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯಿಂದ ಹೊರ ಬರಲು ಈ ಉತ್ತೇಜನಾ ಪ್ಯಾಕೇಜ್ ನಿಂದ ನಿರ್ದಿಷ್ಟ ಪರಿಹಾರದ ಜತೆಗೆ ಸಣ್ಣ, ಮದ್ಯಮ ಮತ್ತು ಉದ್ಯಮ ವಲಯ ಎಂ.ಎಸ್.ಎಂ.ಇಗೆ ಪರಿಹಾರ ಮತ್ತು ಸಾಲದ ನೆರವು ಒದಗಿಸಲಿದೆ. ಈ ಎಲ್ಲಾ ಕ್ರಮಗಳು ಆರ್ಥಿಕ ವ್ಯವಸ್ಥೆಯ ಚೇತರಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಕೊವಿಡ್-19 ಸಾಂಕ್ರಾಮಿಕ “ ಶತಮಾನದಲ್ಲಿ ಒಮ್ಮೆ” ಸಂಭವಿಸುವಂತಹದ್ದು, ಇದರಿಂದ ಆರ್ಥಿಕ ಚಟುವಟಿಕೆ ಮತ್ತು ಶತಕೋಟಿ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಈ ಆಘಾತದಿಂದ ಕೈಗಾರಿಕಾ ವಲಯ ಹೊರತಾಗಿಲ್ಲ. ಈ ಕ್ಷೇತ್ರದಲ್ಲಿ ತೀಕ್ಷ್ಣವಾದ ಇಳಿಕೆಗೆ ಕಾರಣವಾಗಿದೆ. ಆದರೂ ಆನ್ ಲಾಕ್ ನಂತರ ಆರ್ಥಿಕ ಚಟುವಟಿಕೆ ಚೇತರಿಸಿಕೊಳ್ಳುತ್ತಿದೆ.
ಆರ್ಥಿಕ ಚಟುವಟಿಕೆ ಮತ್ತು ಉತ್ಪಾದನಾ ವಲಯದಲ್ಲಿ ಭಾರತ ಜಾಗತಿಕ ಕೇಂದ್ರವಾಗಿ ಹೊರ ಹೊಮ್ಮಲು ಸೂಕ್ತ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧತೆ ಹೊಂದಿರುವುದನ್ನು ಆರ್ಥಿಕ ಸಮೀಕ್ಷೆ ತಿಳಿಸಿದೆ. ಇದಕ್ಕಾಗಿ ಸರ್ಕಾರ ಪುರಾತನ ನಿಯಂತ್ರಣಗಳನ್ನು ತೆರೆವುಗೊಳಿಸಿ ನಿಯಮಗಳನ್ನು ಸರಳಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸುಗಮ ವ್ಯವಹಾರವನ್ನು ಇನ್ನಷ್ಟು ಉತ್ತೇಜಿಸಲು ಕೈಗಾರಿಕಾ ಪರಿಸರ ವಲಯದಲ್ಲಿ ಸುಧಾರಣೆ, ಪರಿಣಾಮಕಾರಿ ಮತ್ತು ಸಮರ್ಥ ಆಡಳಿತ, ಕೈಗಾರಿಕೆಗಳ ಅನುಮೋದನೆಗೆ ಏಕ ಗವಾಕ್ಷಿ ಯೋಜನೆ, ಮಾಹಿತಿ ತಂತ್ರಜ್ಞಾನದ ಸೂಕ್ತ ಬಳಕೆಗೆ ಒತ್ತು ನೀಡಲಾಗಿದೆ. ಈ ಎಲ್ಲಾ ಕ್ರಮಗಳಿಂದ ಸುಗಮ ವ್ಯವಹಾರ ಸೂಚ್ಯಂಕದಲ್ಲಿ ಭಾರತ ಸುಧಾರಣೆಗೊಳ್ಳಲು ಸಹಕಾರಿಯಾಗಿದೆ.
ಸುಗಮ ವ್ಯವಹಾರ ಸೂಚ್ಯಂಕದಲ್ಲಿ [ಇ.ಒ.ಡಿ.ಬಿ] 190 ದೇಶಗಳ ಪೈಕಿ 2018 ರಲ್ಲಿ 77 ನೇ ಸ್ಥಾನದಲ್ಲಿದ್ದ ಭಾರತ 2019 ರಲ್ಲಿ 63 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಅಂತಾರಾಷ್ಟ್ರೀಯ ವಲಯದ ಉತ್ತಮ ಅಭ್ಯಾಸದಲ್ಲಿ 7 ರಿಂದ 10 ಸಂಕೇತಗಳಲ್ಲಿ ದೇಶ ಸುಧಾರಣೆ ಕಂಡಿದ್ದು, ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸುಗಮ ವ್ಯವಹಾರ ವಲಯದ ಸುಧಾರಣೆಯಲ್ಲಿ ಭಾರತ ಮೊದಲ ಹತ್ತರಲ್ಲಿ ಸ್ಥಾನ ಪಡೆದಿದ್ದು, ಮೂರು ವರ್ಷಗಳಲ್ಲಿ 67 ಶ‍್ರೇಯಾಂಕಕ್ಕೆ ತಲುಪಿದೆ. 2011 ನಂತರ ಉಳಿದ ಯಾವುದೇ ದೇಶಗಳಿಗೆ ಹೋಲಿಕೆ ಮಾಡಿದರೆ ಇದು ಅತಿ ದೊಡ್ಡ ಸಾಧನೆಯಾಗಿದೆ.
ದೇಶದಲ್ಲಿ ನವೋದ್ಯಮಗಳು ಅತಿ ದೊಡ್ಡ ಯಶೋಗಾಥೆಗಳಾಗಿವೆ ಎಂದು ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ. ನವೋದ್ಯಮಗಳನ್ನು ಉತ್ತೇಜಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸ್ವಾರ್ಟ್ ಅಪ್ ಗಳು ಉದ್ಯಮಿಗಳಿಗೆ ಮಹತ್ವದ ವೇದಿಕೆಯಾಗಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸತನ ಹೊಂದಿರುವ ವಸ್ತುಗಳನ್ನು ಉತ್ಪಾದಿಸಲು ನಾವೀನ್ಯತೆಯ ಪರಿಕಲ್ಪನೆ ಹಾಗೂ ಸೀಮಾ ರೇಖೆಯಿಂದ ಹೊರಗಡೆ ಆಲೋಚಿಸುವ ಕ್ರಿಯಾಶೀಲ ಮನಸ್ಥಿತಿಯನ್ನು ಹೊಂದಿರಬೇಕಾಗುತ್ತದೆ. ಇಂತಹ ನವೋದ್ಯಮಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ “ ಸ್ವಾರ್ಟ್ ಅಫ್ ಇಂಡಿಯಾ – ಸ್ಟ್ಯಾಂಡ್ ಅಪ್ ಇಂಡಿಯಾ “ ಕ್ರಮಗಳನ್ನು ಜಾರಿಗೆ ತಂದಿದೆ. 2020ರ ಡಿಸೆಂಬರ್ 23 ರ ವರದಿಯಂತೆ ಕೇಂದ್ರ ಸರ್ಕಾರ 41,061 ನವೋದ್ಯಮಗಳಿಗೆ ಮಾನ್ಯತೆ ನೀಡಿದೆ ಮತ್ತು 39,000 ಕ್ಕೂ ಹೆಚ್ಚು ನವೋದ್ಯಮಗಳಿಂದ 4,70,000 ಕ್ಕೂ ಹೆಚ್ಚು ಉದ್ಯೋಗ ಸೃ಼ಷ್ಟಿಯಾಗಿದೆ.
ದೇಶದ ಆರ್ಥಿಕ ಬೆಳವಣಿಗೆ ಮತ್ತು ಹಣಕಾಸು ಹೂಡಿಕೆ ಕ್ಷೇತ್ರಕ್ಕೆ ಬಂಡವಾಳ ಪ್ರಮುಖ ಮೂಲವಾಗಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ ಎಫ್.ಡಿ.ಐ ಕುರಿತು ಆರ್ಥಿಕ ಸಮೀಕ್ಷೆ ಬೆಳಕು ಚೆಲ್ಲಿದೆ. ಎಫ್.ಡಿ.ಐನಿಂದ ಉತ್ಪಾದಕತೆ, ಕೌಶಲ್ಯ ಮತ್ತು ದೇಶದ ತಂತ್ರಜ್ಞಾನ ಬೆಳವಣಿಗೆಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಪೂರ್ವಭಾವಿ ನೀತಿ, ಸುಧಾರಣೆಗಳ ಪರಿಣಾಮ ಎಫ್.ಡಿ.ಐ ಒಳಹರಿವಿನಲ್ಲಿ ಭಾರೀ ಸುಧಾರಣೆಯಾಗಿದೆ. ಕೋವಿಡ್-19 ಸಂಕಷ್ಟಸಮಯದಲ್ಲೂ ಎಫ್.ಡಿ.ಐನಲ್ಲಿ ಏರಿಕೆ ಕಂಡು ಬಂದಿದ್ದು, ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಮೇಲೆ ವಿದೇಶದ ನಂಬಿಕೆ ಇರುವುದರ ಸಂಕತೇತವನ್ನು ಇದು ಪ್ರತಿಬಿಂಬಿಸುತ್ತದೆ ಮತ್ತು ದೇಶ ನೋಡುವ ಅನಿವಾರ್ಯ ಮಾರ್ಗ ಕೂಡ ಇದಾಗಿದೆ.
ಕೋವಿಡ್-19 ನಡುವೆಯೂ 2020ರ ಹಣಕಾಸು ವರ್ಷದಲ್ಲಿ ಎಫ್.ಡಿ.ಐನಲ್ಲಿ ಏರಿಕೆಯಾಗಿದ್ದು, 2019 ರಲ್ಲಿ 40.37 ಶತಕೋಟಿ ಡಾಲರ್, 2020 ರಲ್ಲಿ 49.98 ಶತಕೋಟಿ ಡಾಲರ್, 2021 ರ [2020ರ ಸೆಪ್ಟೆಂಬರ್ -2020ರವರೆಗೆ 30 ಶತಕೋಟಿ ಡಾಲರ್ ಗೆ ಎಫ್.ಡಿ.ಐ ತಲುಪಿದೆ. ಉತ್ಪಾದನೇತರ ವಲಯದಲ್ಲಿ ಎಫ್.ಡಿ.ಐ ನಲ್ಲಿ ನಿವ್ವಳ ಏರಿಕೆ ಕಂಡು ಬಂದಿದ್ದು, ಉತ್ಪಾದಕಾ ವಲಯದಲ್ಲಿ ಎಫ್.ಡಿ.ಐನಲ್ಲಿ ಇಳಿಕೆಯಾಗಿದೆ. ಉತ್ಪಾದನಾ ವಲಯದಲ್ಲಿ ಪ್ರಮುಖವಾಗಿ ಆಟೋಮೊಬೈಲ್, ಟೆಲಿ ಕಮ್ಯುನಿಕೇಷನ್, ಮೆಟಲರಾರ್ಜಿಕಲ್, ಅಸಂಪ್ರದಾಯಿಕ ಇಂಧನ, ರಾಸಾಯನಿಕ [ರಸಗೊಬ್ಬರ ಹೊರತುಪಡಿಸಿ]. ಆಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಲ್ಲಿ ಎಫ್.ಡಿ.ಐ ಇಕ್ವಿಟಿಯಲ್ಲಿ ಹೆಚ್ಚಳ ಕಂಡು ಬಂದಿದೆ.
ಕೇಂದ್ರ ಸರ್ಕಾರ ಸಣ್ಣ, ಮದ್ಯಮ ಉದ್ಯಮ ವಲಯದ ಸುಧಾರಣೆಗೆ ಹಲವಾರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದು, ಇವು ದೇಶದ ಅರ್ಥ ವ್ಯವಸ್ಥೆಯ ಚಾಲನಾ ಶಕ್ತಿಯಾಗಿವೆ. ಆರಕ್ಕೂ ಹೆಚ್ಚು ಎಂ.ಎಸ್.ಎಂ.ಇ ವಲಯಗಳು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯಲ್ಲದೇ ಜೆಡಿಪಿ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಈ ವಲಯದಲ್ಲಿ 11 ಕೋಟಿಗೂ ಹೆಚ್ಚು ಉದ್ಯೋಗ ದೊರೆತಿದ್ದು, ಜಿಡಿಪಿಗೆ ಸುಮಾರು ಶೇ 30 ರಷ್ಟು ಕೊಡುಗೆ ನೀಡಿವೆ. ದೇಶದ ಶೇ 50ಕ್ಕೂ ಹೆಚ್ಚು ರಫ್ತು ಚಟುವಟಿಕೆಯನ್ನು ಇದು ಹೊಂದಿದ್ದು, ಸ್ವಾವಲಂಬಿಯಾಗಲು ಇದರಿಂದ ಸಹಕಾರಿಯಾಗಲಿದೆ. ದೇಶಾದ್ಯಂತ ಘೋಷಿಸಲಾದ ಲಾಕ್ ಡೌನ್ ಸಂದರ್ಭದಲ್ಲಿ ಎಂ.ಎಸ್.ಎಂ.ಇ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಹೊಡೆತವಾಗಿತ್ತು. ಈ ವಲಯವನ್ನು ಮತ್ತೆ ಹಳಿಗೆ ತರಲು ಹಲವಾರು ಸೂಕ್ತ ಮತ್ತು ಬೆಂಬಲಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.
ಕೈಗಾರಿಕಾ ಉತ್ಪವನ್ನು ಉತ್ತೇಜಿಸಲು, ಸಹಾಧನ ಆಧರಿತ ಉತ್ಪಾದನೆ ಮತ್ತು ರಫ್ತು ಚಟುವಟಿಕೆ ವೃದ್ಧಿಸಲು ಕ್ರಮ ತೆಗೆದುಕೊಳ್ಳಲಾಗಿತ್ತು. ಇದಕ್ಕಾಗಿ ಸರ್ಕಾರ ಉತ್ಪಾದನಾ ಆಧರಿತ ಸಹಾಯಧನ [ಪಿ.ಎಲ್.ಐ] ಯೋಜನೆಯನ್ನು ಜಾರಿಗೆ ತಂದಿದ್ದು, ಆತ್ಮ ನಿರ್ಭರ್ ಭಾರತ್ ನಡಿ ಹತ್ತು ಸಹಾಧನ ಆಧರಿತ ಉತ್ಪಾದನಾ ವಲಯವನ್ನು ಗುರುತಿಸಲಾಗಿದೆ. ಯೋಜನೆಯನ್ನು ಸಂಬಂಧಪಟ್ಟ ವಿವಿಧ ಸಚಿವಾಲಯಗಳ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಒಟ್ಟಾರೆ ಅಂದಾಜು 1.46 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಜತೆಗೆ ವಿವಿಧ ವಲಯಗಳಿಗೆ ವಲಯವಾರು ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈ ಯೋಜನೆ ಮತ್ತು ನೀತಿಗಳಿಂದಾಗಿ ದೇಶದಲ್ಲಿ ಉತ್ಪಾದನಾ ಚಟುವಟಿಕೆಯನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.
ಆರ್ಥಿಕ ಸಮೀಕ್ಷೆ ಬಲವಾದ ಆರ್ಥಿಕ ಬೆಂಬಲ, ಉತ್ಪಾದನಾ ವಲಯಕ್ಕೆ ಸಹಾಯಧನ. ಸೂಕ್ತ ವಲಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ. ಒಟ್ಟಾರೆ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಸಮಗ್ರ ಆರ್ಥಿಕ ಸುಧಾರಣೆಗಳಿಗೆ ಆದ್ಯತೆ ನೀಡಲಾಗಿದೆ.
***
(Release ID: 1693380)
Visitor Counter : 386