ಪ್ರಧಾನ ಮಂತ್ರಿಯವರ ಕಛೇರಿ

ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ


ನೇತಾಜಿ ಭಾರತದ ಶಕ್ತಿ ಮತ್ತು ಸ್ಫೂರ್ತಿಯ ಸಾಕಾರ: ಪ್ರಧಾನಮಂತ್ರಿ

Posted On: 23 JAN 2021 6:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ನಡೆದಪರಾಕ್ರಮ ದಿನ ಆಚರಣೆಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾಜಿ ಕುರಿತ ಕಾಯಂ ಪ್ರದರ್ಶನ ಮತ್ತು ಪ್ರೊಜಕ್ಷನ್ ಮ್ಯಾಪಿಂಗ್ ಶೋ ಅನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಪ್ರಧಾನಮಂತ್ರಿ ಅವರು ನೇತಾಜಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಸ್ಟಾಂಪ್ ಅನ್ನು ಬಿಡುಗಡೆ ಮಾಡಿದರು. ನೇತಾಜಿ ಆಧರಿಸಿದಅಮ್ರಾ ನೂತನ್ ಜೌಬನೇರಿ ದೂತ್ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಮಂತ್ರಿ ಅವರು ಎಲ್ಗಿನ್ ರಸ್ತೆಯಲ್ಲಿನ ಸುಭಾಷ್ ಚಂದ್ರ ಬೋಸ್ ಅವರ ನಿವಾಸ, ನೇತಾಜಿ ಭವನಕ್ಕೆ ಭೇಟಿ ನೀಡಿ ನೇತಾಜಿಗೆ ಗೌರವ ನಮನ ಸಲ್ಲಿಸಿದರು. ನಂತರ ಅವರು ರಾಷ್ಟ್ರೀಯ ಗ್ರಂಥಾಲಯಕ್ಕೆ ಭೇಟಿ ನೀಡಿದ್ದರು, “21ನೇ ಶತಮಾನದಲ್ಲಿ ನೇತಾಜಿ ಸುಭಾಷ್ ಅವರ ಗತ ವೈಭವಕ್ಕೆ ಮರಳುವುದು’’ ವಿಷಯದ ಕುರಿತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಕಲಾವಿದರ ಶಿಬಿರಕ್ಕೆ ಭೇಟಿ ನೀಡಿದ್ದರು.ವಿಕ್ಟೋರಿಯಾ ಸ್ಮಾರಕದಲ್ಲಿ ಪರಾಕ್ರಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಪ್ರಧಾನಮಂತ್ರಿ ಅವರು ಅಲ್ಲಿ ಭಾಗವಹಿಸಿದ್ದ ಕಲಾವಿದರು ಮತ್ತು ಇತರರೊಂದಿಗೆ ಸಂವಾದ ನಡೆಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರುಸ್ವತಂತ್ರ ಭಾರತದ ಕನಸ್ಸಿಗೆ ಹೊಸ ದಿಕ್ಕು ನೀಡಿದ ಭಾರತ ಮಾತೆಯ ದಿಟ್ಟ ಪುತ್ರನ ಜನ್ಮ ದಿನ ಇಂದು. ಗುಲಾಮಗಿರಿಯ ಕತ್ತಲೆಯನ್ನು ಹೊಡೆದುದೊಡಿಸಿ ಎಲ್ಲರಲ್ಲೂ ಆತ್ಮಸಾಕ್ಷಿ ಜಾಗೃತಗೊಳಿಸಿದ ದಿನವನ್ನು ನಾವು ಆಚರಿಸುತ್ತಿದ್ದೇವೆ. ನಾನು ಸ್ವಾತಂತ್ರ್ಯಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ನಾನೇ ಅದನ್ನು ಪಡೆದುಕೊಳ್ಳುತ್ತೇನೆ ಎಂದು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಿಗೆ ನೇತಾಜಿ ಸವಾಲೊಡ್ಡಿದ್ದರು ಎಂದರು.

ಪ್ರತಿ ವರ್ಷ ನೇತಾಜಿ ಅವರ ಜನ್ಮ ದಿನವಾದ ಜನವರಿ 23 ಅನ್ನುಪರಾಕ್ರಮ ದಿನವನ್ನಾಗಿ ಆಚರಿಸಲು ದೇಶ ನಿರ್ಧರಿಸಿದೆ ಎಂದ ಪ್ರಧಾನಮಂತ್ರಿ, ಮೂಲಕ ರಾಷ್ಟ್ರಕ್ಕೆ ಸ್ವಾರ್ಥರಹಿತ ಸೇವೆ ಮತ್ತು ಅಪ್ರತಿಮ ಸ್ಪೂರ್ತಿಯನ್ನು ನೀಡಿದ ನೇತಾಜಿಯವರನ್ನು ಸ್ಮರಿಸಲಾಗುತ್ತಿದೆ ಎಂದರು. ನೇತಾಜಿ ಭಾರತದ ಶಕ್ತಿ ಮತ್ತು  ಸ್ಪೂರ್ತಿಯ ಸಾಕಾರಮೂರ್ತಿ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

2018ರಲ್ಲಿ ತಮ್ಮ ಸರ್ಕಾರ ಅಂಡಮಾನ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ನಾಮಕರಣ ಮಾಡಿದ್ದು ನನ್ನ ದೊರೆತ ಯೋಗವಾಗಿದೆ ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ದೇಶದ ಭಾವನೆಗಳನ್ನು ಗೌರವಿಸಿ, ತಮ್ಮ ಸರ್ಕಾರ ನೇತಾಜಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಗೊಳಿಸಿತು. ಜನವರಿ 26 ಪಥಸಂಚಲನದಲ್ಲಿ ಐಎನ್ ಹಿರಿಯ ಯೋಧರ ಪಡೆ ಭಾಗವಹಿಸಿದ್ದು ಮತ್ತು ಕೆಂಪು ಕೋಟೆಯಲ್ಲಿ ಅಜಾದ್ ಹಿಂದ್ ಸರ್ಕಾರದ 75ನೇ ವಾರ್ಷಿಕೋತ್ಸವ ಆಚರಿಸಿದ್ದು, ನೇತಾಜಿ ಅವರ ಕನಸಿನಂತೆ ತ್ರಿವರ್ಣಧ್ವಜ ಹಾರಿಸಲಾಯಿತು ಎಂದು ಅವರು ಸ್ಮರಿಸಿದರು.

ನೇತಾಜಿ ತಾವು ದಿಟ್ಟತನದಿಂದ ಪರಾರಿಯಾಗುವ ಕಾರ್ಯಾಚರಣೆಗೂ ಮುನ್ನ ತಮ್ಮ ಸಂಬಂಧಿ ಶಿಶಿರ್ ಬೋಸ್ ಗೆ ಕೇಳಿದ್ದ ಕಠಿಣ ಪ್ರಶ್ನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರುಇಂದು ಭಾರತದ ಪ್ರತಿಯೊಂದು  ನೇತಾಜಿ ಅವರು ಇರುವಿಕೆಯ ಅನುಭವವಾಗುತ್ತಿದೆ. ಅವರು ಇಂದು ಇದಿದ್ದರೆ ಅದೇ ಪ್ರಶ್ನೆಯನ್ನು ಕೇಳುತ್ತಿದ್ದರು, ನೀವು ನನಗಾಗಿ ಏನನ್ನಾದರೂ ಮಾಡುವೆಯಾ ಎಂದು? ಕೆಲಸ, ಕಾರ್ಯ ಮತ್ತು ಗುರಿ ಭಾರತವನ್ನು ಸ್ವಾವಲಂಬಿ ಮಾಡುವುದಾಗಿದೆ. ಇದರಲ್ಲಿ ದೇಶದ ಪ್ರತಿಯೊಂದು ಭಾಗದ, ಪ್ರತಿಯೊಬ್ಬ ಜನರೂ ಸಹ ಭಾಗಿಯಾಗಬೇಕಿದೆ ‘’ಎಂದರು.

ಬಡತನ, ಅನಕ್ಷರತೆ ಮತ್ತು ಕಾಯಿಲೆಗಳು ದೇಶದ ಅತಿದೊಡ್ಡ ಸಮಸ್ಯೆಗಳು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಪರಿಗಣಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಅತಿ ದೊಡ್ಡ ಸಮಸ್ಯೆಗಳೆಂದರೆ ಬಡತನ, ಅನಕ್ಷರತೆ, ಕಾಯಿಲೆ ಮತ್ತು ವೈಜ್ಞಾನಿಕ ಉತ್ಪಾದನೆಯ ಕೊರತೆ ಎಂಧು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸಮಸ್ಯೆಗಳ ನಿವಾರಣೆಗೆ ಇಡೀ ಸಮಾಜ ಒಗ್ಗೂಡಬೇಕು ಮತ್ತು ನಾವೆಲ್ಲರೂ ಸೇರಿ ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆತ್ಮ ನಿರ್ಭರ ಭಾರತದ ಕನಸಿನ ಜೊತೆ ಸೋನಾರ್ ಬಾಂಗ್ಲಾಕ್ಕೆ ಭಾರಿ ಸ್ಪೂರ್ತಿಯನ್ನು ತುಂಬಿದ್ದರು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. ದೇಶದ ಸ್ವಾತಂತ್ರ್ಯದ ಸಮಯದಲ್ಲಿ ನೇತಾಜಿ ಅವರು ವಹಿಸಿದ ಪಾತ್ರವನ್ನೇ, ಪಶ್ಚಿಮ ಬಂಗಾಳ ಇಂದು ಆತ್ಮನಿರ್ಭರ ಭಾರತ ಅಭಿಯಾನದಲ್ಲೂ ವಹಿಸಬೇಕಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಆತ್ಮನಿರ್ಭರ ಭಾರತ ಅಭಿಯಾನದ ನೇತೃತ್ವವನ್ನು ಸ್ವಾವಲಂಬಿ ಬಂಗಾಳ ಮತ್ತು ಸೋನಾರ್ ಬಾಂಗ್ಲಾ ವಹಿಸಬೇಕು ಎಂದು ಹೇಳಿ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1692106) Visitor Counter : 140