ನೀತಿ ಆಯೋಗ

ನೀತಿ ಆಯೋಗದಿಂದ ಎರಡನೇ ಭಾರತ ನಾವೀನ್ಯತಾ ಸೂಚ್ಯಂಕ  ಬಿಡುಗಡೆ


‘ಪ್ರಮುಖ ರಾಜ್ಯಗಳು’ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಕರ್ನಾಟಕ

ಒಟ್ಟಾರೆಯಾಗಿ ದೆಹಲಿಗೆ ಅಗ್ರಸ್ಥಾನ, ಚಂಡೀಗಢಕ್ಕೆ ಎರಡನೇ ಸ್ಥಾನ

Posted On: 20 JAN 2021 6:32PM by PIB Bengaluru

ಭಾರತ ನಾವೀನ್ಯತಾ ಸೂಚ್ಯಂಕದ ಎರಡನೆಯ ಆವೃತ್ತಿಯನ್ನು ಇಂದು ನೀತಿ ಆಯೋಗವು, ಸ್ಪರ್ಧಾತ್ಮಕ ಸಂಸ್ಥೆಯೊಂದಿಗೆ ವರ್ಚುವಲ್ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ. ವರದಿಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾವೀನ್ಯತೆಯ ಸಾಮರ್ಥ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಹೇಳುತ್ತದೆ. ಸೂಚ್ಯಂಕದ ಮೊದಲ ಆವೃತ್ತಿಯನ್ನು ಅಕ್ಟೋಬರ್ 2019 ರಂದು ಬಿಡುಗಡೆ ಮಾಡಲಾಗಿತ್ತು.

ಭಾರತ ನಾವೀನ್ಯತಾ ಸೂಚ್ಯಂಕ 2020ನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಬಿಡುಗಡೆ ಮಾಡಿದರು. ನೀತಿ ಆಯೋಗದ ಸದಸ್ಯರಾದ, (ಡಾ) ವಿ.ವಿ.ಕೆ ಪಾಲ್ (ಆರೋಗ್ಯ), ಡಾ.ರಮೇಶ್ ಚಂದ್ (ಕೃಷಿ), ಸಿಇಒ ಅಮಿತಾಭ್ ಕಾಂತ್, ಸಲಹೆಗಾರ (ವಿಜ್ಞಾನ ಮತ್ತು ತಂತ್ರಜ್ಞಾನ) ನೀರಜ್ ಸಿನ್ಹಾ ಮತ್ತು ಸ್ಪರ್ಧಾತ್ಮಕತೆ ಸಂಸ್ಥೆಯ ಅಧ್ಯಕ್ಷ ಡಾ. ಅಮಿತ್ ಕಪೂರ್ ಸಂದರ್ಭದಲ್ಲಿದ್ದರು.

ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ.ಶೇಖರ್ ಸಿ. ಮಾಂಡೆ, ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ರೇಣು ಸ್ವರೂಪ್, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ಎನ್. ರಾಜೀವನ್, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಮತ್ತು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಕಾರ್ಯದರ್ಶಿ ಡಾ. ಕ್ಷತ್ರಪತಿ ಶಿವಾಜಿ ಮತ್ತಿತರರು ಭಾಗವಹಿಸಿದ್ದರು.

ಎರಡನೆಯ ಆವೃತ್ತಿಯಲ್ಲಿಯೂ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸ್ಪರ್ಧಾತ್ಮಕತೆಯ ಮಟ್ಟವು ಹೆಚ್ಚಾಗಿರುವುದನ್ನು ಸೂಚ್ಯಂಕವು ಗುರುತಿಸಿದೆ. ಇದು ವರ್ಷದಿಂದ ವರ್ಷಕ್ಕೆ ಅವುಗಳ ಸಕ್ರಿಯ ಅಂಶಗಳು ಮತ್ತು ನಾವೀನ್ಯತೆ ಕಾರ್ಯಕ್ಷಮತೆಯನ್ನು ನಿರಂತರವಾಗಿ ಸುಧಾರಿಸಲು ಅವಶ್ಯಕವಾಗಿದೆ.

ಕರ್ನಾಟಕಕ್ಕೆ ಮತ್ತೆ ಅಗ್ರ ಸ್ಥಾನ

ಪ್ರಮುಖ ರಾಜ್ಯಗಳುವಿಭಾಗದಲ್ಲಿ ಕರ್ನಾಟಕವು ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಮಹಾರಾಷ್ಟ್ರವು ತಮಿಳುನಾಡನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ತಲುಪಿದೆ. ತೆಲಂಗಾಣ, ಕೇರಳ, ಹರಿಯಾಣ, ಆಂಧ್ರಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಪಂಜಾಬ್ ಕ್ರಮವಾಗಿ ನಂತರದ ಹತ್ತು ಸ್ಥಾನಗಳಲ್ಲಿವೆ.

ಕರ್ನಾಟಕದ ಅಗ್ರ ಸ್ಥಾನಕ್ಕೆ ಅದರ ಗಣನೀಯ ಸಂಖ್ಯೆಯ ವೆಂಚರ್ ಕ್ಯಾಪಿಟಲ್ ವ್ಯವಹಾರಗಳು, ನೋಂದಾಯಿತ ಭೌಗೋಳಿಕ ಸೂಚಕಗಳು ಮತ್ತು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದಲ್ಲಿನ ರಫ್ತುಗಳು ಕಾರಣವಾಗಿದೆ. ಕರ್ನಾಟಕದಲ್ಲಿ ಹೆಚ್ಚಿದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವು ಸಹ ರಾಜ್ಯದ ನಾವೀನ್ಯತೆ ಸಾಮರ್ಥ್ಯಗಳನ್ನು ಹೆಚ್ಚಿಸಿದೆ.

ವರ್ಷಪ್ರಮುಖ ರಾಜ್ಯಗಳುವಿಭಾಗದಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಕೇರಳ ಮೊದಲ ಐದು ಸ್ಥಾನಗಳನ್ನು ಪಡೆದಿವೆ.

ಒಟ್ಟಾರೆಯಾಗಿ, ದೆಹಲಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡರೆ, ಚಂಡೀಗಢ 2019 ರಿಂದ ದೊಡ್ಡ ಮುನ್ನಡೆ ಸಾಧಿಸಿ ವರ್ಷ ಎರಡನೇ ಸ್ಥಾನಕ್ಕೆ ತಲುಪಿದೆ. ‘ಈಶಾನ್ಯ / ಗುಡ್ಡಗಾಡು ರಾಜ್ಯಗಳುವಿಭಾಗದಲ್ಲಿ, ಹಿಮಾಚಲ ಪ್ರದೇಶ ಎರಡನೇ ಸ್ಥಾನದಿಂದ ವರ್ಷ ಅಗ್ರ ಸ್ಥಾನಕ್ಕೇರಿದೆ. ವಿಭಾಗದಲ್ಲಿ  2019 ಉನ್ನತ ಸಾಧಕ ರಾಜ್ಯವಾಗಿದ್ದ ಸಿಕ್ಕಿಂ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ನಾವೀನ್ಯತೆ ಒಳಹರಿವುಗಳನ್ನು ಐದು ಸಕ್ರಿಯಗೊಳಿಸುವ ನಿಯತಾಂಕಗಳು ಮತ್ತು ಹೊರ ಹರಿವುಗಳನ್ನು ಎರಡು ಕಾರ್ಯಕ್ಷಮತೆ ನಿಯತಾಂಕಗಳ ಮೂಲಕ ಅಳೆಯಲಾಗುತ್ತದೆ. ‘ಮಾನವ ಬಂಡವಾಳ, ‘ಹೂಡಿಕೆ, ‘ಜ್ಞಾನಾದಾರಿತ ಕಾರ್ಮಿಕರು, ‘ವ್ಯವಹಾರ ಪರಿಸರ, ‘ಸುರಕ್ಷೆ ಮತ್ತು ಕಾನೂನು ಪರಿಸರವನ್ನು ಸಕ್ರಿಯ ನಿಯತಾಂಕಗಳಾಗಿ ಗುರುತಿಸಲಾಗಿದ್ದು, ‘ಜ್ಞಾನ ಔಟ್‌ಪುಟ್ಮತ್ತುಜ್ಞಾನ ಪ್ರಸರಣಕಾರ್ಯಕ್ಷಮತೆಯ ನಿಯತಾಂಕಗಳಾಗಿವೆ.

 

ಸಂದರ್ಭದಲ್ಲಿ ಮಾತನಾಡಿದ, ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, 'ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿ ವಿವಿಧ ಪಾಲುದಾರರ ನಡುವೆ ಸಮನ್ವಯ ಸೃಷ್ಟಿಸುತ್ತದೆ, ಇದರಿಂದಾಗಿ ಭಾರತವು ಸ್ಪರ್ಧಾತ್ಮಕವಾದ ಉತ್ತಮ ಆಡಳಿತಕ್ಕೆ ಬದಲಾಗುತ್ತದೆ' ಎಂದು ಹೇಳಿದರು. ದೇಶದ ನಾವೀನ್ಯತೆ ಪರಿಸರವನ್ನು ಸುಧಾರಿಸಿ. ಭಾರತವನ್ನು ವಿಶ್ವದ ನಾವೀನ್ಯತೆ ಕ್ಷೇತ್ರದ ನಾಯಕನನ್ನಾಗಿ ಮಾಡುವ ದಿಕ್ಕಿನಲ್ಲಿ ಇದು ಸೂಕ್ತ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಮಾತನಾಡಿ, ‘ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ ರಾಜ್ಯಗಳ ನಾವೀನ್ಯತೆ ಫಲಿತಾಂಶಗಳನ್ನು ಅಳೆಯುವ ಪ್ರಮುಖ ಕ್ರಮವಾಗಿದೆ ಮತ್ತು ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸಲು ರಾಷ್ಟ್ರೀಯ ಮತ್ತು ರಾಜ್ಯ ವ್ಯವಸ್ಥೆಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ.’ ಎಂದರು.

"ರಾಜ್ಯಗಳು ತಮ್ಮ ನಾವೀನ್ಯತೆ ಕಾರ್ಯಕ್ಷಮತೆಯನ್ನು ಗುರುತಿಸುವಲ್ಲಿ ಮತ್ತು ಅವುಗಳ ವಿಶಿಷ್ಟ ಸಾಮರ್ಥ್ಯಗಳನ್ನು ವೃದ್ಧಿಸಲು ಅಗತ್ಯವಾದ ನೀತಿಗಳನ್ನು ಪ್ರಾರಂಭಿಸುವಲ್ಲಿ ಸೂಚ್ಯಂಕವು ಮಹತ್ವದ್ದಾಗಿದೆ" ಎಂದು ನೀತಿ ಆಯೋಗದ ಸಲಹೆಗಾರ ನೀರಜ್ ಸಿನ್ಹಾ ಹೇಳಿದರು.

ಸ್ಪರ್ಧಾತ್ಮಕ ಸಂಸ್ಥೆಯ ಅಧ್ಯಕ್ಷ ಡಾ.ಅಮಿತ್ ಕಪೂರ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾದೇಶಿಕ ಕಾರ್ಯಕ್ಷಮತೆಯನ್ನು ನಾವೀನ್ಯತೆಗೆ ಸಂಬಂಧಿಸಿದಂತೆ ಮಾನದಂಡವಾಗಿಸಲು ಸೂಚ್ಯಂಕ ಸಹಾಯ ಮಾಡುತ್ತದೆ ಮತ್ತು ಅದನ್ನು ಸುಧಾರಿಸಲು ಮತ್ತು ವೃದ್ಧಿಸಲು ಏನು ಮಾಡಬೇಕೆಂಬುದರ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆಎಂದು ಹೇಳಿದರು.

ಭಾರತದ ನಾವೀನ್ಯತೆ ಪರಿಸರದ ನಿರಂತರ ಮೌಲ್ಯಮಾಪನಕ್ಕಾಗಿ ವ್ಯಾಪಕವಾದ ಚೌಕಟ್ಟನ್ನು ಸೃಷ್ಟಿಸುವ ಉದ್ದೇಶವನ್ನು ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ ಹೊಂದಿದೆ. ಸೂಚ್ಯಂಕವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಸ್ಕೋರ್‌ಗಳ ಆಧಾರದ ಮೇಲೆ ಶ್ರೇಣೀಕರಿಸುತ್ತದೆ, ಅವಕಾಶಗಳು ಮತ್ತು ಸವಾಲುಗಳನ್ನು ಗುರುತಿಸುವುದು ಮತ್ತು ನಾವೀನ್ಯತೆಯನ್ನು ಬೆಳೆಸಲು ಸರ್ಕಾರದ ನೀತಿಗಳನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನೀತಿ ಆಯೋಗವು, ರಾಷ್ಟ್ರದ ನಾವೀನ್ಯತೆ ಫಲಿತಾಂಶವನ್ನು ವೇಗವರ್ಧಿಸುವಲ್ಲಿ ಭಾರತ ನಾವೀನ್ಯತಾ ಸೂಚ್ಯಂಕವನ್ನು ಬಳಸಿಕೊಳ್ಳಲು ಬದ್ಧವಾಗಿದೆ.

ಪೂರ್ಣ ಪಠ್ಯವನ್ನು ಇಲ್ಲಿ ನೋಡಬಹುದು: https://niti.gov.in/sites/default/files/2021-01/IndiaInnovationReport2020Book.pdf

***



(Release ID: 1690689) Visitor Counter : 1509