ಪ್ರಧಾನ ಮಂತ್ರಿಯವರ ಕಛೇರಿ

ಹಿಂದುಳಿದ ಪ್ರದೇಶಗಳನ್ನು ನಾವು ರೈಲ್ವೆಯ ಮೂಲಕ, ಸಂಪರ್ಕಿಸುತ್ತಿದ್ದೇವೆ : ಪ್ರಧಾನಮಂತ್ರಿ ಮೋದಿ

Posted On: 17 JAN 2021 2:15PM by PIB Bengaluru

 

 

ದೇಶದ ಹಿಂದುಳಿದ ಮತ್ತು ಸಂಪರ್ಕ ಹೊಂದದ ಪ್ರದೇಶಗಳನ್ನು ರೈಲ್ವೆ ಮೂಲಕ ಸಂಪರ್ಕಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ. ಗುಜರಾತ್ ನ ಕೇವಾಡಿಯಾಕ್ಕೆ ವಿವಿಧ ವಲಯಗಳಿಂದ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ಮತ್ತು ರಾಜ್ಯದ ಹಲವು ರೈಲ್ವೆ ಸಂಬಂಧಿತ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ತರುವಾಯ ಶ್ರೀ ಮೋದಿ ಮಾತನಾಡುತ್ತಿದ್ದರು.    
ಬ್ರಾಡ್ ಗೇಜ್ ಮತ್ತು ವಿದ್ಯುದ್ದೀಕರಣ ವೇಗವನ್ನು ಪಡೆದುಕೊಂಡಿದೆ ಮತ್ತು ಹೆಚ್ಚಿನ ವೇಗದ ಚಾಲನೆಗಾಗಿ ಹಳಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇದು ಸೆಮಿ ಹೈಸ್ಪೀಡ್ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುತ್ತಿದೆ ಮತ್ತು ನಾವು ಹೆಚ್ಚಿನ ವೇಗದ ಸಾಮರ್ಥ್ಯಗಳತ್ತ ಸಾಗುತ್ತಿದ್ದೇವೆ, ಏಕೆಂದರೆ ಇದಕ್ಕಾಗಿ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ರೈಲ್ವೆ ಪರಿಸರ ಸ್ನೇಹಿಯಾಗಿ ಉಳಿದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕೇವಾಡಿಯ ರೈಲ್ವೆ ನಿಲ್ದಾಣ ಹಸಿರು ಕಟ್ಟಡ ಪ್ರಮಾಣೀಕರಣದೊಂದಿಗೆ ಪ್ರಾರಂಭವಾದ ಭಾರತದ ಮೊದಲ ನಿಲ್ದಾಣ ಎಂದು ತಿಳಿಸಿದರು.
ರೈಲ್ವೆ ಸಂಬಂಧಿತ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಮಹತ್ವನ್ನು ಪ್ರತಿಪಾದಿಸಿದ ಅವರು, ಇದು ಉತ್ತಮ ಫಲಿತಾಂಶ ನೀಡುತ್ತಿದೆ ಎಂದರು. ಇದು ಸ್ಥಳೀಯವಾಗಿ ಹೆಚ್ಚಿನ ಹಾರ್ಸ್ ಪವರ್ ನ ಎಲೆಕ್ಟ್ರಿಕ್ ರೈಲು ಎಂಜಿನ್ ಉತ್ಪಾದನೆಯಿಂದಾಗಿ ಸಾಧ್ಯವಾಗಿದ್ದು, ಭಾರತವು ವಿಶ್ವದ ಮೊದಲ ಡಬಲ್ ಸ್ಟ್ಯಾಕ್ಡ್ ಲಾಂಗ್ ಹೌಲ್ ಕಂಟೇನರ್ ರೈಲನ್ನು ಆರಂಭಿಸಿದೆ. ಇಂದು ಸ್ಥಳೀಯವಾಗಿ ತಯಾರಿಸಿದ ಆಧುನಿಕ ರೈಲುಗಳ ಸರಣಿಯು ಭಾರತೀಯ ರೈಲ್ವೆಯ ಭಾಗವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ರೈಲ್ವೆ ಪರಿವರ್ತನೆಯ ಅಗತ್ಯವನ್ನು ಪೂರೈಸಲು ನುರಿತ ತಜ್ಞ ಮಾನವಶಕ್ತಿ ಮತ್ತು ವೃತ್ತಿಪರರ ಅಗತ್ಯವನ್ನು ಪ್ರಧಾನಮಂತ್ರಿ  ಒತ್ತಿ ಹೇಳಿದರು. ಈ ಅಗತ್ಯವು ವಡೋದರಾದಲ್ಲಿ ಡೀಮ್ಡ್ ರೈಲ್ವೆ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣವಾಯಿತು. ಈ ಸ್ವರೂಪದ ಸಂಸ್ಥೆಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂದರು. ರೈಲು ಪ್ರಯಾಣ, ಬಹು-ಶಿಸ್ತಿನ ಸಂಶೋಧನೆ, ತರಬೇತಿಗಾಗಿ ಆಧುನಿಕ ಸೌಲಭ್ಯಗಳು ಲಭ್ಯವಾಗುತ್ತಿವೆ. ರೈಲ್ವೆಯ ಪ್ರಸಕ್ತ ಮತ್ತು ಭವಿಷ್ಯತ್ತಿನಲ್ಲಿ ಮುನ್ನಡೆಸಲು 20 ರಾಜ್ಯಗಳ ಪ್ರತಿಭಾವಂತ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ನಾವೀನ್ಯತೆ ಮತ್ತು ಸಂಶೋಧನೆಯ ಮೂಲಕ ರೈಲ್ವೆಯನ್ನು ಆಧುನೀಕರಿಸಲು ಇದು ಸಹಾಯ ಮಾಡುತ್ತದೆ ಎಂದು  ಪ್ರಧಾನಮಂತ್ರಿ ತಮ್ಮ ಮಾತು ಮುಗಿಸಿದರು.


***

 



(Release ID: 1689523) Visitor Counter : 167