ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಸಕಲ ಸೌಲಭ್ಯಗಳಿಂದ ನವೀಕರಿಸಲಾದ ಉನ್ನತ ದರ್ಜೆಯ ಕ್ರೀಡಾ ಸೌಕರ್ಯಗಳನ್ನು ಒಳಗೊಂಡ ತರಬೇತಿ ಕೇಂದ್ರಗಳಿಗೆ ಕ್ರೀಡಾ ಸಾಧಕರ ಹೆಸರು ನಾಮಕರಣಕ್ಕೆ ಕ್ರೀಡಾ ಸಚಿವಾಲಯ ನಿರ್ಧಾರ

Posted On: 17 JAN 2021 3:50PM by PIB Bengaluru

ದೇಶದ ಕ್ರೀಡಾಕ್ಷೇತ್ರದ  ದಿಗ್ಗಜ ನಾಯಕರಿಗೆ ಗೌರವ ಸೂಚಿಸುವ ಸಲುವಾಗಿ, ಕೇಂದ್ರ ಕ್ರೀಡಾ ಸಚಿವಾಲಯ ಭಾರತೀಯ ಕ್ರೀಡಾ ಪ್ರಾಧಿಕಾರ ನಿರ್ಮಿಸಲಿರುವ ಎಲ್ಲ ಕ್ರೀಡಾ ಸೌಕರ್ಯ ಮತ್ತು ಉನ್ನತೀಕರಿಸುವ ಎಲ್ಲ ಕ್ರೀಡಾ ಸೌಕರ್ಯಗಳಿಗೆ ಭಾರತದಲ್ಲಿ ಕ್ರೀಡೆಗೆ ಕೊಡುಗೆ ನೀಡಿದ ಗಣ್ಯರ ಹೆಸರುಗಳನ್ನಿಡಲು ತೀರ್ಮಾನಿಸಿದೆ.  

ಮೊದಲಿಗೆ ಲಖನೌದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಹವಾನಿಯಂತ್ರಿತ ಕುಸ್ತಿ ತರಬೇತಿ ಕೋಣೆ ಮತ್ತು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ(ಎನ್ ಸಿಒಇ)ನ ಈಜು ತರಬೇತಿ ಕೊಳ, ಭೂಪಾಲ್ ನಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಎನ್ ಸಿಒಇ ಹಾಸ್ಟೆಲ್, ಸೋನ್ ಪೇಟೆಯ ಎನ್ ಸಿಒಇ ಬಾಲಕಿಯರ ಹಾಸ್ಟೆಲ್, ಗೌವಾಹಟಿಯ ಹೊಸ ಎಸ್ ಟಿಸಿ ಮತ್ತು ಹಾಸ್ಟೆಲ್, ಬಹು ಉದ್ದೇಶದ ಸಭಾಂಗಣ ಮತ್ತು ಸಿಬ್ಬಂದಿ ಕ್ವಾರ್ಟಸ್ ಗಳಿಗೆ ಸ್ಥಳೀಯ ಕ್ರೀಡಾ ತಾರೆಗಳ ಹೆಸರುಗಳನ್ನಿಡಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು “ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು, ನಮ್ಮ ಕ್ರೀಡಾವ್ಯಕ್ತಿಗಳಿಗೆ ಅವರು ಅರ್ಹರಿರುವಷ್ಟು ಗೌರವವನ್ನು ಸಲ್ಲಿಸಬೇಕಾಗಿದೆ, ಹಾಗಾದಾಗ ಮಾತ್ರ ಯುವ ಪೀಳಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲು ಆಸಕ್ತಿ ತೋರುತ್ತಾರೆ. ಸರ್ಕಾರ ಈಗಾಗಲೇ ಹಾಲಿ ಕ್ರೀಡಾಕ್ಷೇತ್ರದಲ್ಲಿರುವವರಿಗೆ ಹಾಗೂ ಹಿಂದಿನ ಅಥ್ಲೀಟ್ ಗಳಿಗೆ ಗೌರವದಿಂದ ಹಾಗೂ ಸುಗಮವಾಗಿ ಬಾಳ್ವೆ ನಡೆಸುವಂತಾಗಲು ಎಲ್ಲ ರೀತಿಯ ನೆರವನ್ನು ನೀಡುತ್ತಿದೆ. ಕ್ರೀಡಾ ಸಾಧಕರನ್ನು ಗುರುತಿಸಿ ಕ್ರೀಡಾ ಸೌಕರ್ಯಗಳಿಗೆ ಅವರುಗಳ ಹೆಸರು ನಾಮಕರಣ ಮಾಡುವುದು, ಸರ್ಕಾರ ಕ್ರೀಡಾವ್ಯಕ್ತಿಗಳ ಬಲವರ್ಧನೆಗೆ ಬದ್ಧವಾಗಿದೆ ಎಂಬುದನ್ನು ತೋರಿಸುವ ಬದ್ಧತೆಯ ಪ್ರಯತ್ನವಾಗಿದೆ’’ಎಂದರು.   


*******

 


(Release ID: 1689427) Visitor Counter : 217