ವಾರ್ತಾ ಮತ್ತು ಪ್ರಸಾರ ಸಚಿವಾಲಯ

51ನೇ ಐಎಫ್.ಎಫ್.ಐ.ನಲ್ಲಿ ಹಿರಿಯ ನಟ ಹಾಗೂ ನಿರ್ದೇಶಕ ಬಿಸ್ವಜಿತ್ ಚಟರ್ಜಿ ಅವರಿಗೆ ಭಾರತೀಯ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟ

Posted On: 16 JAN 2021 4:45PM by PIB Bengaluru

ಹಿಂದಿ ಮತ್ತು ಬೆಂಗಾಲಿ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ ಬಿಸ್ವಜಿತ್ ಚಟರ್ಜಿ ಅವರಿಗೆ ಗೋವಾದಲ್ಲಿ ನಡೆಯುತ್ತಿರುವ 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ. ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಕಟಿಸಿದ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಮಾರ್ಚ್ 21ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.  

ಬಿಸ್ವಜಿತ್ ಚಟರ್ಜಿ ಅವರು ಬೀಸ್ ಸಾಲ್ ಬಾತ್ ಚಿತ್ರದ ಕುಮಾರ್ ವಿಜಯ್ ಸಿಂಗ್, ಕೋಹ್ರಾದಲ್ಲಿ ರಾಜಾ ಅಮಿತ್ ಕುಮಾರ್ ಸಿಂಗ್, ಏಪ್ರಿಲ್ ಫೂಲ್ ನಲ್ಲಿ ಅಶೋಕ್, ಮೇರೆ ಸನಮ್ ನಲ್ಲಿ ರಮೇಶ್ ಕುಮಾರ್, ನೈಟ್ ಇನ್ ಲಂಡನ್ ನಲ್ಲಿ ಜೀವನ್, ದೋ ಕಾಲಿಯಾನ್ ನಲ್ಲಿ ಶೇಖರ್ ಮತ್ತು ಕಿಸ್ಮತ್ ನಲ್ಲಿನ ವಿಕ್ಕಿ ಪಾತ್ರಗಳಿಂದ ಹೆಸರಾಗಿದ್ದಾರೆ.  ಅವರು ಹೆಸರಾಂತ ನಟಿಯರಾದ ಆಶಾ ಪರೇಖ್, ವಹೀದಾ ರೆಹಮಾನ್, ಮುಮ್ತಾಜ್, ಮಾಲಾ ಸಿನ್ಹ ಮತ್ತು ರಾಜಶ್ರೀ ಅವರೊಂದಿಗೆ ನಟಿಸಿದ್ದರು. ಅವರ ಕೆಲವು ಬೆಂಗಾಲಿ ಚಿತ್ರಗಳಲ್ಲಿ ಚೌರಿಂಗೀ (1968) ಮತ್ತು ಉತ್ತಮ್ ಕುಮಾರ್ ಮತ್ತು ಕುಹೇಲಿ ಅವರೊಂದಿಗಿನ ಘರ್ ನಸಿಂಪುರ್, ನಂತರ ಶ್ರೀಮಾನ್ ಪೃಥ್ವಿರಾಜ್ (1973), ಜೈ ಬಾಬಾ ತಾರಕ್ ನಾಥ್ (1977) ಮತ್ತು ಅಮರ್ ಗೀತಿ (1983) ಸೇರಿವೆ. 1975ರಲ್ಲಿ ಬಿಸ್ವಜಿತ್ ತಮ್ಮದೇ ಸ್ವಂತ ಚಿತ್ರ ಖಹೆತೇ ಹೇ ಮುಜ್ಕೋ ರಾಜಾ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ನಟನೆ, ನಿರ್ದೇಶನದ ಜೊತೆಗೆ ಅವರು ಗಾಯಕ ಮತ್ತು ನಿರ್ಮಾಪಕರೂ ಆಗಿದ್ದರು.  

***



(Release ID: 1689127) Visitor Counter : 263