ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡ ಭಾರತ; 197 ದಿನಗಳ ಬಳಿಕ 2.14 ಲಕ್ಷ ಪ್ರಕರಣ


ಕಳೆದ 24 ಗಂಟೆಗಳಲ್ಲಿ 15,968 ದೈನಂದಿನ ಹೊಸ ಪ್ರಕರಣ ದಾಖಲು

Posted On: 13 JAN 2021 11:41AM by PIB Bengaluru

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 2.14 ಲಕ್ಷ (2.14,507)ಕ್ಕೆ ಇಂದು ಇಳಿದಿದೆ. ಒಟ್ಟು ಸೋಂಕಿನ  ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು ಶೇ.2.04ಕ್ಕೆ ಇಳಿಕೆಯಾಗಿದೆ. ಇದು 197 ದಿನಗಳಲ್ಲೇ ಅತ್ಯಂತ ಕಡಿಮೆಯಾಗಿದೆಒಟ್ಟು ಸಕ್ರಿಯ ಪ್ರಕರಣಗಳು 2020 ಜೂನ್ 30ರಂದು 2,15,125 ಆಗಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಒಟ್ಟಾರೆ 2051 ಪ್ರಕರಣಗಳ ಇಳಿಕೆ ದಾಖಲಾಗಿದೆ.

ದೈನಂದಿನ ಆಧಾರದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಹೊಸ 16000ಕ್ಕಿಂತ ಕಡಿಮೆ (15,968) ದೈನಂದಿನ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ದೇಶದ ಒಟ್ಟು ಸಂಖ್ಯೆಗೆ ಸೇರ್ಪಡೆಯಾಗಿದೆ. ಮತ್ತೊಂದೆಡೆ ಕಳೆದ 24 ಗಂಟೆಗಳ ಅವಧಿಯಲ್ಲಿ 17,817 ಮಂದಿ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿ ಸ್ಥಿರವಾಗಿ ಸಕ್ರಿಯ ಪ್ರಕಣಗಳ ಸಂಖ್ಯೆ ಇಳಿಯುತ್ತಿದೆ.

ಒಟ್ಟು ಗುಣಮುಖ ಪ್ರಕರಣಗಳು 10,129,111 ಆಗಿದ್ದು, ಇದು ಚೇತರಿಕೆ ದರವನ್ನು ಶೇ.95.51ಕ್ಕೆ ತಲುಪಿಸಿದೆ. ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆಯ ಪ್ರಕರಣಗಳ ನಡುವಿನ ಅಂತರ ನಿರಂತರವಾಗಿದ್ದು, ಪ್ರಸ್ತುತ 99,14,604 ಆಗಿದೆ.

ಶೇ.81.83 ಹೊಸ ಚೇತರಿಕೆಯ ಪ್ರಕರಣಗಳು 10 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿದೆ.

ಕೇರಳದಲ್ಲಿ ಗರಿಷ್ಠ ಏಕದಿನ ಚೇತರಿಕೆ 4,270 ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 3,282 ಹೊಸ ಚೇತರಿಕೆ ಕಂಡು ಬಂದಿದೆ. ಛತ್ತೀಸಗಢದಲ್ಲಿ ದೈನಿಕ ಗುಣಮುಖ ಸಂಖ್ಯೆ 1,207 ಆಗಿತ್ತು.

 

ಶೇ.74.82 ಹೊಸ ಪ್ರಕರಣಗಳು 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ.

ಕಳೆದ 24 ಗಂಟೆಗಳಲ್ಲಿ ಕೇರಳ ಗರಿಷ್ಠ ದೈನಿಕ ಹೊಸ ಪ್ರಕರಣಗಳು ಅಂದರೆ 5,507 ದಾಖಲಾಗಿದ್ದರೆ, ಮಹಾರಾಷ್ಟ್ರದಲ್ಲಿ 2,936, ಮತ್ತು ಕರ್ನಾಟಕದಲ್ಲಿ 751 ಹೊಸ ಪ್ರಕರಣಗಳು ನಿನ್ನೆ ದಾಖಲಾಗಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಏಳು ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.70.30 ಒಟ್ಟು 202 ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ 50 ಸಾವು ದಾಖಲಾಗಿದ್ದರೆ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಅನುಕ್ರಮವಾಗಿ 25 ಮತ್ತ 18 ಹೊಸ ಸಾವಿನ ಪ್ರಕರಣ ವರದಿಯಾಗಿದೆ.

ಕೋವಿಡ್ -19 ಲಸಿಕೆ ನೀಡಿಕೆ 2021 ಜನವರಿ 16ರಿಂದ ಆರಂಭವಾಗಲಿದೆಜನರ ಭಾಗವಹಿಸುವಿಕೆಯ ತತ್ವಗಳಿಗೆ ಇದು ಆಧಾರವಾಗಿದ್ದು ದೇಶಾದ್ಯಂತದ ನಡೆಯುವ ಬೃಹತ್ ಕಸರತ್ತಾಗಿದೆ; ಚುನಾವಣೆಗಳ (ಬೂತ್ ತಂತ್ರ) ಮತ್ತು ಸಾರ್ವತ್ರಿಕ ಲಸಿಕೀಕರಣ ಕಾರ್ಯಕ್ರಮ (ಯುಐಪಿ) ಅನುಭವ ಬಳಸಿಕೊಂಡು; ಅಸ್ತಿತ್ವದಲ್ಲಿರುವ ಆರೋಗ್ಯ ಸೇವೆಗಳೊಂದಿಗೆ ಯಾವುದೇ ರಾಜಿ ಇಲ್ಲದೆ, ವಿಶೇಷವಾಗಿ ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆ; ವೈಜ್ಞಾನಿಕ ಮತ್ತು ನಿಯಂತ್ರಕ ಮಾನದಂಡಗಳು, ಇತರ ಎಸ್‌..ಪಿ.ಗಳಲ್ಲಿ ಯಾವುದೇ ರಾಜಿ ಇಲ್ಲದೆ; ಮತ್ತು ತಂತ್ರಜ್ಞಾನ ಚಾಲಿತ ಕ್ರಮಬದ್ಧ ಮತ್ತು ಸುಗಮ ಅನುಷ್ಠಾನ ಇದಾಗಿರುತ್ತದೆ.

ಕೋವಿಡ್ 19 ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಮಿಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದ್ದು, ಅವರು ಸುಮಾರು 3 ಕೋಟಿ ಎಂದು ಅಂದಾಜಿಸಲಾಗಿದೆ, ನಂತರ 50 ವರ್ಷ ಮೇಲ್ಪಟ್ಟವರಿಗೆ ಮತ್ತು ಸಹ ಅಸ್ವಸ್ಥತೆ ಇರುವ 50 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಲಾಗುವುದು ಸಂಖಅಯೆ 27 ಕೋಟಿ ಆಗಲಿದೆ.

ಸ್ಥಿರ ತಂತ್ರಜ್ಞಾನದ ಚೌಕಟ್ಟು ಲಸಿಕೆ ನೀಡಿಕೆಯ ಅನುಷ್ಠಾನವನ್ನು ಕ್ರಮಬದ್ಧಗೊಳಿಸುತ್ತದೆ.

ಹೊಸ ಯುಕೆ ರೂಪಾಂತರ ಜೀನೋಮ್‌ ನೊಂದಿಗೆ ಸಕಾರಾತ್ಮಕವಾಗಿರುವ ಒಟ್ಟು ವ್ಯಕ್ತಿಗಳ ಸಂಖ್ಯೆ ಇಂದು 102 ಆಗಿದೆ.                                                                                           

***(Release ID: 1688284) Visitor Counter : 227