ನೀತಿ ಆಯೋಗ

ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಶಿಕ್ಷಣ ಉತ್ತೇಜನಕ್ಕೆ ದೇಶಾದ್ಯಂತ 100 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ದತ್ತು ಪಡೆಯಲಿರುವ ಇಸ್ರೋ

Posted On: 11 JAN 2021 3:58PM by PIB Bengaluru

STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ), ಬಾಹ್ಯಾಕಾಶ ಶಿಕ್ಷಣ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂಬಂಧಿತ ಅನುಶೋಧನಾ ಕ್ಷೇತ್ರದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಉತ್ತೇಜಿಸಲು ದೇಶಾದ್ಯಂತ 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದತ್ತು ಪಡೆಯುವುದಾಗಿ ಇಸ್ರೋ ತಿಳಿಸಿದೆ.

ನೀತಿ  ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ನಡೆಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಯಿತು.

ವರ್ಚುವಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, “ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಸಮನ್ವಯದೊಂದಿಗೆಆತ್ಮನಿರ್ಭರ ಭಾರತ್ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ನೀತಿ ಆಯೋಗ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡುವಿನ ಸಹಯೋಗವು ಅಂತಹ ಪ್ರಯತ್ನದ ಒಂದು ಪ್ರಮುಖ ಉದಾಹರಣೆಯಾಗಿದೆಎಂದರು.

ನಮ್ಮ ಯುವ ಉದಯೋನ್ಮುಖ ಬಾಹ್ಯಾಕಾಶ ಸಂಶೋಧಕರು ಮತ್ತು ಗಗನಯಾತ್ರಿಗಳು ದೇಶದ ಪ್ರಖ್ಯಾತ ಅನುಭವಿಗಳಿಂದ ಕಲಿಯಲು ಮತ್ತು ಅವರ ಶಾಲೆ, ಕುಟುಂಬ ಮತ್ತು ಸ್ಥಳೀಯ ಸಮುದಾಯಗಳಿಗೆ ಸ್ಫೂರ್ತಿಯಾಗಲು ಇದೊಂದು ಉತ್ತಮ ಅವಕಾಶವಾಗಿದೆ”  ಎಂದು ಅವರು ಹೇಳಿದರು.

ಸಾಂಪ್ರದಾಯಿಕ ಕಲಿಕೆಗೆ ಹೋಲಿಸಿದರೆ ಶಾಲಾ ಮಕ್ಕಳಲ್ಲಿ ಅನುಶೋಧನೆ ಮತ್ತು ಅನುಭವಿ ಕಲಿಕೆಯ ಮನೋಭಾವವನ್ನು ಉತ್ತೇಜಿಸಲು ಕ್ರಮ ನೆರವಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಭರವಸೆ ವ್ಯಕ್ತಪಡಿಸಿದರು. ಯೋಜನೆ ಆಧಾರಿತ ಕಲಿಕೆಯು ಶಾಲಾ ದಿನಗಳಿಂದಲೇ ಸಂಶೋಧನೆಯ ಬಗೆಗಿನ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದತ್ತು ಸ್ವೀಕರಿಸುವ ಇಂದಿನ ನಿರ್ಧಾರದ ಮೂಲಕ, ಇಸ್ರೊ ಭೌಗೋಳಿಕವಾಗಿ ಎಲ್ಲೆಡೆ ಉಪಸ್ಥಿತವಿರುತ್ತದೆ. ‘ಆತ್ಮ ನಿರ್ಭರ ಭಾರತ ಭಾಗವಾಗಿ ವಿದ್ಯಾರ್ಥಿಗಳು ತಮ್ಮ ಬಾಹ್ಯಾಕಾಶ ಕನಸುಗಳನ್ನು ಈಡೇರಿಸಿಕೊಳ್ಳಲು ನಿರ್ದೇಶನ ನೀಡಲು ಸಂಸ್ಥೆಯು ಒಂದು ಸಣ್ಣ ಹೆಜ್ಜೆ ಇಟ್ಟಿದೆ. ಇಸ್ರೋ ಕೇಂದ್ರಗಳ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು, ಇಸ್ರೋ ಪ್ರಧಾನ ಕೇಂದ್ರದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಕಚೇರಿಯ ನಿಕಟ ಸಮನ್ವಯದೊಂದಿಗೆ, ಮಕ್ಕಳಿಗೆ ಸಕ್ರಿಯವಾಗಿ ಮಾರ್ಗದರ್ಶನ ಮಾಡುವುದರ ಜೊತೆಗೆ ಪ್ರಯೋಗಗಳನ್ನು ಉತ್ತೇಜಿಸಲು, ಆಲೋಚನೆಗಳನ್ನು ಚುರುಕುಗೊಳಿಸಲು ಮತ್ತು ಬಾಹ್ಯಾಕಾಶ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಎಟಿಎಲ್ಗಳಲ್ಲಿನ ಶಿಕ್ಷಕರೊಂದಿಗೆ ಸಂವಹನ ನಡೆಸುತ್ತಾರೆ. ಅಟಲ್ ಟಿಂಕರಿಂಗ್ ಲ್ಯಾಬ್ಗಳ ವಿದ್ಯಾರ್ಥಿಗಳು, ಶ್ರೀಹರಿಕೋಟಾದಿಂದ ನಡೆಯುವ ಉಡಾವಣೆಯೊಂದರಲ್ಲಿ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದು ಡಾ. ಶಿವನ್ ಘೋಷಿಸಿದರು.

ಅಟಲ್ ಟಿಂಕರಿಂಗ್ ಲ್ಯಾಬ್ ತಯಾರಕರಿಗೆ ವೇಗವನ್ನು ಒದಗಿಸುತ್ತದೆ, ಇಲ್ಲಿ ಯುವ ಪ್ರತಿಭೆಗಳು ನೀವೇ ಮಾಡಿ ನೋಡಿ ಮಾದರಿಯಲ್ಲಿ ತಮ್ಮ ಆಲೋಚನೆಗಳನ್ನು ನೀಡಬಹುದು ಮತ್ತು ನಾವೀನ್ಯತಾ ಕೌಶಲ್ಯಗಳನ್ನು ಕಲಿಯಬಹುದು. ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು, ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಇದುವರೆಗೆ ದೇಶಾದ್ಯಂತ 7000 ಎಟಿಎಲ್ ಗಳನ್ನು ಸ್ಥಾಪಿಸಿದೆ, 6 ನೇ ತರಗತಿಯಿಂದ 12 ನೇ ತರಗತಿಯವರೆಗಿನ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮಸ್ಯೆ ಪರಿಹಾರ, ಟಿಂಕರ್ ಮತ್ತು ನಾವೀನ್ಯತೆಯ ಮನಸ್ಥಿತಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಸಹಯೋಗದ ಮೂಲಕ, ಬಾಹ್ಯಾಕಾಶ ಒಳಗೊಂಡಂತೆ 21 ನೇ ಶತಮಾನದ ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಇಸ್ರೋ ನೆರವಾಗುತ್ತದೆ. ವಿದ್ಯಾರ್ಥಿಗಳು ಕೇವಲ ಎಲೆಕ್ಟ್ರಾನಿಕ್ಸ್, ಭೌತಶಾಸ್ತ್ರ, ಆಪ್ಟಿಕ್ಸ್, ಬಾಹ್ಯಾಕಾಶ ತಂತ್ರಜ್ಞಾನ, ವಸ್ತು ವಿಜ್ಞಾನ ಮತ್ತಿತರ ವಿಷಯಗಳಲ್ಲಿ ಎಸ್ಇಟಿಇಎಂ ಮತ್ತು ಬಾಹ್ಯಾಕಾಶ ಶಿಕ್ಷಣ ಸಂಬಂಧಿತ ಪರಿಕಲ್ಪನೆಗಳ ಸೈದ್ಧಾಂತಿಕ, ಪ್ರಾಯೋಗಿಕ ಮತ್ತು ಅಪ್ಲಿಕೇಶನ್ ಆಧಾರಿತ ಜ್ಞಾನವನ್ನು ಪಡೆಯುತ್ತಾರೆ.

"ಅಟಲ್ ಇನ್ನೋವೇಶನ್ ಮಿಷನ್ ಮತ್ತು ಅದರ ಉಪಕ್ರಮಗಳಾದ ARISE, ಅಟಲ್ ಇನ್ಕ್ಯುಬೇಷನ್ ಸೆಂಟರ್, ಅಟಲ್ ಕಮ್ಯುನಿಟಿ ಇನ್ನೋವೇಶನ್ ಸೆಂಟರ್, ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್ಸ್ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಲು ನೀತಿ ಆಯೋಗ ಇಸ್ರೋ ಜೊತೆ ಸಮನ್ವಯ ಸಾಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆಎಂದು ನೀತಿ ಆಯೋಗದ ಸಿಇಒ ಶ್ರೀ ಅಮಿತಾಭ್ ಕಾಂತ್ ಹೇಳಿದರು.

ನಮ್ಮ ಭವಿಷ್ಯದ ಬಾಹ್ಯಾಕಾಶ ವಿಜ್ಞಾನಿಗಳನ್ನು ರೂಪಿಸಲು, ಇಸ್ರೋ ತಮ್ಮ ಪ್ರಾದೇಶಿಕ ಸಂಶೋಧನಾ ಕೇಂದ್ರಗಳ ಸಹಯೋಗದೊಂದಿಗೆ 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದತ್ತು ಪಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ, ಅಲ್ಲಿ ಇಸ್ರೋ ವಿಜ್ಞಾನಿಗಳು ಮತ್ತು ಸಂಶೋಧಕರು ಎಸ್ಇಟಿಇಎಂ ಶಿಕ್ಷಣ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡುತ್ತಾರೆಎಂದು ಅವರು ಹೇಳಿದರು.

ಅಟಲ್ ಇನ್ನೋವೇಶನ್ ಮಿಷನ್ನಿರ್ದೇಶಕ ಶ್ರೀ ರಾಮನಾಥನ್ ರಮಣನ್ ಮಾತನಾಡಿ, "ನಾವು ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅತ್ಯಂತ ರೋಮಾಂಚಕಾರಿ ಕಾಲದಲ್ಲಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅನೇಕ ಮಹತ್ವದ ಹೆಗ್ಗುರುತು ಸಾಧನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಇಸ್ರೋ ಜಾಗತಿಕ ಪ್ರವರ್ತಕ ಮತ್ತು ನಾವೀನ್ಯತಾ ನಾಯಕನ ಸ್ಥಾನದಲ್ಲಿದೆ. ಇತ್ತೀಚೆಗೆ ಇಸ್ರೋ, ಸ್ಟಾರ್ಟ್ಅಪ್ಗಳು ಮತ್ತು ಖಾಸಗಿ ಪಾಲುದಾರರಿಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಬಾಹ್ಯಾಕಾಶ ಉದ್ಯಮದ ಭವಿಷ್ಯವು ಬಹಳ ಭರವಸೆದಾಯಕವಾಗಿದೆ. ಇಸ್ರೋ ಜೊತೆಗಿನ ಸಹಯೋಗವು ಯುವ ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ದೇಶಕ್ಕೆ ಹೊಸತನವನ್ನು ನೀಡಲು ಹೆಚ್ಚಿನ ಉತ್ತೇಜನವನ್ನು ನೀಡುತ್ತದೆಎಂದು ಹೇಳಿದರು. ನೂತನ ತಂತ್ರಜ್ಞಾನಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ, ಇದು ಎನ್ಇಪಿ 2020 ದೃಷ್ಟಿಕೋನಕ್ಕೂ ಹೊಂದಿಕೆಯಾಗುತ್ತದೆ. ಅಲ್ಲದೆ, ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಮೊದಲು ಅಟಲ್ ಇನ್ನೋವೇಶನ್ ಮಿಷನ್, ಇಸ್ರೊ ಜೊತೆ ಆತ್ಮನಿರ್ಭರ ಭಾರತ್ ARISE-ANIC-ಉಪಕ್ರಮ ಮತ್ತು ಇತರ ನಾಲ್ಕು ಸಚಿವಾಲಯಗಳೊಂದಿಗೆ ಭಾರತೀಯ ಎಂಎಸ್ಎಂಇಗಳು ಮತ್ತು ಸ್ಟಾರ್ಟ್ಅಪ್ಗಳಲ್ಲಿ ಅನ್ವಯಿಕ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಸಹಯೋಗ ಮಾಡಿಕೊಂಡಿದೆ.

***


(Release ID: 1687665) Visitor Counter : 379