ವಾರ್ತಾ ಮತ್ತು ಪ್ರಸಾರ ಸಚಿವಾಲಯ

51 ನೇ ಐಎಫ್‌ಎಫ್‌ಐನಿಂದ ಒಟಿಟಿ ಪ್ಲಾಟ್‌ಫಾರ್ಮ್‌ ಕಾರ್ಯಕ್ರಮಗಳ ಘೋಷಣೆ


ಮಾಸ್ಟರ್‌ ಕ್ಲಾಸ್, ಸಂವಾದ ಅಧಿವೇಶನಗಳು, ನೇರ ಪ್ರಸಾರ, ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರ ಪ್ರದರ್ಶನ, ಪ್ರಶ್ನೋತ್ತರ ಅಧಿವೇಶನಗಳು ಮತ್ತು ಸಿನಿಮಾ ಮೆಚ್ಚುಗೆಯ ಅಧಿವೇಶನ

Posted On: 10 JAN 2021 5:59PM by PIB Bengaluru

ಏಷ್ಯಾದ ಅತ್ಯಂತ ಹಳೆಯ ಮತ್ತು ಭಾರತದ ಅತಿದೊಡ್ಡ ಚಲನ ಚಿತ್ರೋತ್ಸವ  ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‌ಎಫ್‌ಐ) ದ 51 ನೇ ಆವೃತ್ತಿಯು, 2021ರ ಜನವರಿ 16 ರಿಂದ 24 ರವರೆಗೆ ಗೋವಾದಲ್ಲಿ ನಡೆಯಲಿದ್ದು, ಚಿತ್ರೋತ್ಸವದ ಸಮಯದಲ್ಲಿ ಒಟಿಟಿಯಲ್ಲಿ ಪ್ರದರ್ಶಿಸಲಾಗುವ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ತನ್ನ ಮೊದಲ ‘ಹೈಬ್ರಿಡ್’ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಈ ವರ್ಷ ಪ್ರೇಕ್ಷಕರಿಗಾಗಿ ಐಎಫ್‌ಎಫ್‌ಐ ಕೆಲವು ಕಾರ್ಯಕ್ರಮಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸುತ್ತಿದೆ.

ಕೆಲವು ಮುಖ್ಯಾಂಶಗಳು:

ಹಳೆಯ  ಚಲನಚಿತ್ರಗಳು

ಎ. ಪೆಡ್ರೊ ಅಲ್ಮೋಡಾವರ್

      ಲೈವ್ ಫ್ಲೆಶ್ | ಬ್ಯಾಡ್ ಎಜಿಕೇಶನ್ | ವೋಲ್ವರ್

ಬಿ. ರುಬೆನ್ ಓಸ್ಟ್ಲಂಡ್

      ದ ಸ್ಕ್ವೇರ್ | ಫೋರ್ಸ್ ಮಜೂರಿ

 

• ಮಾಸ್ಟರ್‌ಕ್ಲಾಸ್

ಶ್ರೀ ಶೇಖರ್ ಕಪೂರ್, ಶ್ರೀ ಪ್ರಿಯದರ್ಶನ್, ಶ್ರೀ ಪೆರ್ರಿ ಲ್ಯಾಂಗ್, ಶ್ರೀ ಸುಭಾಷ್ ಘಾಯ್, ತನ್ವೀರ್ ಮೊಕಮ್ಮಲ್

• ಸಂವಾದ ಅಧಿವೇಶನ

ಶ್ರೀ ರಿಕಿ ಕೇಜ್, ಶ್ರೀ ರಾಹುಲ್ ರವಾಯಿಲ್, ಶ್ರೀ ಮಧುರ್ ಭಂಡಾರ್ಕರ್, ಶ್ರೀ  ಪ್ಯಾಬ್ಲೊ ಸೀಸರ್, ಶ್ರೀ ಅಬೂಬಕರ್ ಶಾಕಿ, ಶ್ರೀ ಪ್ರಸೂನ್ ಜೋಶಿ, ಶ್ರೀ ಜಾನ್ ಮ್ಯಾಥ್ಯೂ ಮ್ಯಾಥನ್, ಶ್ರೀಮತಿ  ಅಂಜಲಿ ಮೆನನ್, ಶ್ರೀ ಆದಿತ್ಯ ಧರ್, ಶ್ರೀ ಪ್ರಸನ್ನ ವಿಠಾನಗೆ, ಶ್ರೀ ಹರಿಹರನ್, ಶ್ರೀ ವಿಕ್ರಮ್ ಘೋಷ್, ಶ್ರೀಮತಿ  ಅನುಪಮಾ ಚೋಪ್ರಾ, ಶ್ರೀ ಸುನಿಲ್ ದೋಶಿ, ಶ್ರೀ ಡೊಮಿನಿಕ್ ಸಂಗ್ಮಾ, ಶ್ರೀ ಸುನೀತ್ ಟಂಡನ್

• ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ವರ್ಲ್ಡ್ ಪನೋರಮಾ ಚಿತ್ರಗಳು 

• ಸಮಾರಂಭದ ನೇರ ಪ್ರಸಾರ ಮತ್ತು ಸಮಾರೋಪ ಸಮಾರಂಭ

• ಪ್ರಶ್ನೋತ್ತರ ಅವಧಿಗಳು

• ಚಲನಚಿತ್ರ ಮೆಚ್ಚುಗೆಯ ಅಧಿವೇಶನಗಳು

ಪ್ರೊ.ಮಜಾರ್ ಕಮ್ರಾನ್, ಪ್ರೊ.ಮಧು ಅಪ್ಸರಾ, ಪ್ರೊ.ಪಂಕಜ್ ಸಕ್ಸೇನಾ ಅವರಿಂದ

 

• ಮಿಡ್ ಫೆಸ್ಟ್ ಫಿಲ್ಮ್ - ಜಾಗತಿಕವಾಗಿ ಪ್ರಥಮ ಪ್ರದರ್ಶನ

ಮೆಹ್ರೂನಿಸಾ

 

ಐಎಫ್‌ಎಫ್‌ಐ ವೆಬ್‌ಸೈಟ್: https://iffigoa.org/

ಐಎಫ್‌ಎಫ್‌ಐ ಸಾಮಾಜಿಕ ಮಾಧ್ಯಮಗಳು:

Instagram - https://instagram.com/iffigoa?igshid=1t51o4714uzle

ಟ್ವಿಟರ್ - https://twitter.com/iffigoa?s=21

ಫೇಸ್‌ಬುಕ್ - https://www.facebook.com/IFFIGoa/

ಐಎಫ್‌ಎಫ್‌ಐ ಬಗ್ಗೆ:

1952 ರಲ್ಲಿ ಸ್ಥಾಪನೆಯಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‌ಎಫ್‌ಐ) ಏಷ್ಯಾದ ಅತ್ಯಂತ ಮಹತ್ವದ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ.. ಪ್ರಸ್ತುತ ಗೋವಾದಲ್ಲಿ ವಾರ್ಷಿಕವಾಗಿ ನಡೆಯುತ್ತಿದೆ. ಉತ್ಸವವು ಚಿತ್ರರಂಗದ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಜಾಗತಿಕ ಸಿನಿಮಾಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತಿದೆ.; ಸಾಮಾಜಿಕ ಮತ್ತು ಸಾಂಸ್ಕೃತಿಕ ನೀತಿಗಳ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಚಲನಚಿತ್ರ ಸಂಸ್ಕೃತಿಗಳ ತಿಳುವಳಿಕೆ ಮತ್ತು ಮೆಚ್ಚುಗೆಗೆ ಕೊಡುಗೆ ನೀಡುವುದು; ಮತ್ತು ಜಗತ್ತಿನ ಜನರಲ್ಲಿ ಸ್ನೇಹ ಮತ್ತು ಸಹಕಾರವನ್ನು ಉತ್ತೇಜಿಸುತ್ತಿದೆ. ಉತ್ಸವವನ್ನು ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ಮತ್ತು ಗೋವಾ ರಾಜ್ಯ ಸರ್ಕಾರ ಜಂಟಿಯಾಗಿ ಆಯೋಜಿಸುತ್ತಿವೆ.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Wizspk Communications | PR

ಅರ್ಚನಾ ಪ್ರಧಾನ್ | archana.pradhan@wizspk.com | 9987099265

***



(Release ID: 1687496) Visitor Counter : 256