ಪ್ರಧಾನ ಮಂತ್ರಿಯವರ ಕಛೇರಿ

ಯುನೈಟೆಡ್ ಕಿಂಗ್ ಡಂ ನ ಪ್ರಧಾನಿ ಶ್ರೀ ಬೋರಿಸ್ ಜಾನ್ಸನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೂರವಾಣಿ ಮೂಲಕ ಸಮಾಲೋಚನೆ

Posted On: 05 JAN 2021 8:05PM by PIB Bengaluru

ನವದೆಹಲಿ, ಜನವರಿ 05 2021 : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ - ಯುನೈಟೆಡ್ ಕಿಂಗ್ ಡಂನ ಪ್ರಧಾನಿ ಶ್ರೀ ಬೋರಿಸ್ ಜಾನ್ಸನ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ತಮಗೆ ಭಾರತ ನೀಡಿರುವ ಆಹ್ವಾನಕ್ಕೆ ಪ್ರಧಾನಿ ಶ್ರೀ ಬೋರಿಸ್ ಜಾನ್ಸನ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಆದರೆ ಯುಕೆಯಲ್ಲಿ ಬದಲಾದ ಕೋವಿಡ್ 19 ಸಂಕಷ್ಟದ  ಹಿನ್ನೆಲೆಯಲ್ಲಿ ತಾವು ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಪರಿಸ್ಥಿತಿಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಭಾರತಕ್ಕೆ ಭೇಟಿ ನೀಡಲು ಉತ್ಸುಕರಾಗಿರುವುದಾಗಿಯೂ ಪುನರುಚ್ಚರಿಸಿದ್ದಾರೆ. 
ಈ ಸಂದರ್ಭದಲ್ಲಿ ;ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಯುಕೆಯಲ್ಲಿನ ಅಸಾಧಾರಣ ಪರಿಸ್ಥಿತಿ ಅರ್ಥವಾಗುತ್ತದೆ. ತ್ವರಿತವಾಗಿ ಸಂಕ್ರಾಮಿಕ ನಿಯಂತ್ರಣಕ್ಕೆ ಬರಲಿ ಎಂದು ಶುಭ ಹಾರೈಸಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸಲು ಕಾತರದಿಂದ ಕಾಯುತ್ತಿರುವುದಾಗಿಯೂ ಪ್ರಧಾನಮಂತ್ರಿ ಅವರು ತಿಳಿಸಿದ್ದಾರೆ. 
ಈ ಸಂದರ್ಭಧಲ್ಲಿ ಉಭಯ ನಾಯಕರು ಜಗತ್ತಿನಲ್ಲಿ ಕೋವಿಡ್ 19 ಸೋಂಕಿಗೆ ಲಭ್ಯವಿರುವ ಲಸಿಕೆ ಸೇರಿದಂತೆ ಉಭಯ ದೇಶಗಳ ನಡುವೆ ನಡೆಯುತ್ತಿರುವ ಸಹಕಾರ ಕುರಿತು ಪ್ರಗತಿ ಪರಿಶೀಲನೆ ಮಾಡಿದರು. ಭಾರತ – ಯುಕೆ ನಡುವೆ ಬ್ರಿಕ್ಸಿಟ್ ನಂತರದ, ಕೋವಿಡ್ ಬಳಿಕದ ಪರಿಸ್ಥಿತಿ ಕುರಿತು ಉಭಯ ದೇಶಗಳ ಪಾಲುದಾರಿಕೆ, ಪರಸ್ಪರ ನಂಬಿಕೆ ಮತ್ತು ಸಮಗ್ರ ನೀಲನಕ್ಷೆಯೆಡೆಗೆ ಕಾರ್ಯನಿರ್ವಹಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ.

***

 



(Release ID: 1686375) Visitor Counter : 248