ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಡಿಬಿಟಿ-ಬಿಐಆರ್ ಎಸಿ ಬೆಂಬಲಿತ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಸ್ವದೇಶಿ ಡಿಎನ್ ಎ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಅನುಮೋದನೆ

Posted On: 03 JAN 2021 5:51PM by PIB Bengaluru

ಮೆಸರ್ಸ್ ಜೈಡಸ್ ಕ್ಯಾಡಿಲಾ ಸಂಸ್ಥೆ, ಕೋವಿಡ್-19, ಝಡ್ ವೈ ಕೋವ್-ಡಿ ವಿರುದ್ಧ ದೇಶದ ಮೊದಲ ಸ್ವದೇಶಿ ಅಭಿವೃದ್ಧಿ ಡಿಎನ್ ಎ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ಮಹಾನಿಯಂತ್ರಕರು(ಡಿಸಿಜಿಐ) ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಬಿಐಆರ್ ಎಸಿ ನೇತೃತ್ವದಲ್ಲಿ ರಾಷ್ಟ್ರೀಯ ಬಯೋಫಾರ್ಮ ಮಿಷನ್ (ಎನ್ ಬಿಎಂ)   ಅಭಿವೃದ್ಧಿಪಡಿಸಿದೆ.

ಜೈಡಸ್ ಕ್ಯಾಡಿಲಾ ಭಾರತದಲ್ಲಿ ಡಿಎನ್ ಎ ಲಸಿಕೆಯ ಒಂದು ಮತ್ತು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಪೂರ್ಣಗೊಳಿಸಿದ್ದು, ಒಂದು ಸಾವಿರಕ್ಕೂ ಅಧಿಕ ಮಂದಿ ಅದರಲ್ಲಿ ಪಾಲ್ಗೊಂಡಿದ್ದರು ಮತ್ತು ಮಧ್ಯಂತರ ವರದಿಯಲ್ಲಿ ಲಸಿಕೆ ಸುರಕ್ಷಿತವಾಗಿದೆ ಮತ್ತು ಅದನ್ನು ಹಾಕಿದ ನಂತರ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂಬ ಅಂಶ ವ್ಯಕ್ತವಾಗಿದೆ. ಅದನ್ನು ಆದರಿಸಿ ವಿಷಯ ತಜ್ಞರ ಸಮಿತಿ ನೀಡಿದ ಶಿಫಾರಸು ಅನುಗುಣವಾಗಿ ಮಧ್ಯಂತರ ವರದಿಯನ್ನು ಪರಾಮರ್ಶೆ ನಡೆಸಿ ಡಿಸಿಜಿಐ, 26 ಸಾವಿರ ಮಂದಿ ಭಾರತೀಯರ ಮೇಲೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮೋದನೆಯನ್ನು ನೀಡಿದೆ.

 ಡಿಬಿಟಿಯ ಕಾರ್ಯದರ್ಶಿ ಮತ್ತು ಬಿಐಆರ್ ಎಸಿ ಮುಖ್ಯಸ್ಥೆ ಡಾ.ರೇಣು ಸ್ವರೂಪ್ ಇದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಲಸಿಕೆ ಸಕಾರಾತ್ಮಕ ಫಲಿತಾಂಶ ನೀಡುವುನ್ನು ಮುಂದುವರಿಸಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಜೈಡಸ್ ಕ್ಯಾಡಿಲಾ ಜೊತೆ ಪಾಲುದಾರಿಕೆ ಹೊಂದಿ, ಕೋವಿಡ್-19ಗೆ ಸ್ವದೇಶಿ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವ ಅಗತ್ಯತೆ ಪೂರೈಸಲು ಮುಂದಾಗಿತ್ತು. ಇಂತಹ ಸಂಶೋಧನಾ ಕಾರ್ಯಗಳ ಮೂಲಕ ಸರ್ಕಾರ ಪೂರಕ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಮತ್ತು ಇದರಿಂದ ಸಮಾಜಕ್ಕೆ ಪ್ರಸ್ತುತವಾಗಿ ಹೊಸ ಉತ್ಪನ್ನಗಳ ಆವಿಷ್ಕಾರಕ್ಕೆ ಉತ್ತೇಜನ ದೊರಕಲಿದೆ ‘’ಎಂದರು.

ಅಲ್ಲದೆ, “ ದೇಶದ ಮೊದಲ ಡಿಎನ್ ಎ ಲಸಿಕೆ ವೇದಿಕೆ ಸ್ಥಾಪನೆ, ಆತ್ಮ ನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಮತ್ತು ಭಾರತೀಯ ವೈಜ್ಞಾನಿಕ ಸಂಶೋಧನೆ ಮುನ್ನಡೆಗೆ ಒಂದು ದೊಡ್ಡ ಗರಿಮೆಯಾಗಿದೆ’’ಎಂದು ಅವರು ಹೇಳಿದ್ದಾರೆ.


***



(Release ID: 1685862) Visitor Counter : 247