ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶ ಜನವರಿ 4ರಂದು ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ರಾಷ್ಟ್ರೀಯ ಪರಮಾಣು ಕಾಲಮಾಪಕ ಮತ್ತು ಭಾರತೀಯ ನಿರ್ದೇಶಕ್ ದ್ರಾವ್ಯ ಪ್ರಧಾನಿ ಅವರಿಂದ ರಾಷ್ಟ್ರಕ್ಕೆ ಸಮರ್ಪಣೆ

ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯದ ಸ್ಥಾಪನೆಗೆ ಶಂಕುಸ್ಥಾಪನೆ: ಪ್ರಧಾನಿ ನರೇಂದ್ರ ಮೋದಿ

Posted On: 02 JAN 2021 6:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಜನವರಿ 4ರಂದು ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಅವರು ರಾಷ್ಟ್ರೀಯ ಅಟಾಮಿಕ್ ಟೈಮ್ ಸ್ಕೇಲ್ ಮತ್ತು ಭಾರತೀಯ ನಿರ್ದೇಶಕ್ ದ್ರಾವ್ಯ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ ಮತ್ತು ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯದ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸುವರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಪರಮಾಣು ಕಾಲ ಮಾಪಕದಿಂದ 2.8 ನ್ಯಾನೋ ಸೆಕೆಂಡ್ ಖಚಿತತೆಯೊಂದಿಗೆ ಭಾರತೀಯ ಕಾಲಮಾನ ಸೃಷ್ಟಿಯಾಗಲಿದೆ. ಭಾರತೀಯ ನಿರ್ದೇಶಕ್ ದ್ರಾವ್ಯ, ಇದು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಗುಣಮಟ್ಟ ಖಾತ್ರಿಗೆ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಕೈಗೊಳ್ಳಲು ನೆರವಾಗಲಿದೆ. ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯ, ಸೂಕ್ತ ವಾಯು ಮತ್ತು ಕೈಗಾರಿಕಾ ಮಾಲಿನ್ಯ ನಿಗಾ ಸಾಧನಕ್ಕೆ ಪ್ರಮಾಣೀಕರಣದಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ.

ಸಮಾವೇಶದ ಕುರಿತು

ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ( ಸಿಎಸ್ ಐಆರ್-ಎನ್ ಪಿಎಲ್ ) ತನ್ನ ಸ್ಥಾಪನೆಯ 75ನೇ ವರ್ಷದ ಅಂಗವಾಗಿ ರಾಷ್ಟ್ರೀಯ ಮಾಪನಶಾಸ್ತ್ರ ಶೃಂಗಸಭೆ 2021 ಅನ್ನು ಆಯೋಜಿಸಿದೆ. ಈ ಸಮಾವೇಶದ ಘೋಷವಾಕ್ಯ “ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಮಾಪನಶಾಸ್ತ್ರ’’ ಎಂಬುದಾಗಿದೆ.

****



(Release ID: 1685769) Visitor Counter : 196