ಆಯುಷ್

2020ರ ವರ್ಷದ ವಾರ್ಷಿಕ ವರದಿ


ಕೋವಿಡ್ -19 ಬಿಕ್ಕಟ್ಟಿನ ಅವಧಿಯಲ್ಲಿ ಸ್ವ-ರಕ್ಷಣೆಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮಗಳನ್ನು ಪುನರುಚ್ಚರಿಸಿದ ಸಚಿವಾಲಯ

ಸ್ಪರ್ಧಾತ್ಮಕ ಕ್ರೀಡೆಯಾಗಿ ಯೋಗಾಸನಕ್ಕೆ ಔಪಚಾರಿಕ ಮಾನ್ಯತೆ

Posted On: 24 DEC 2020 4:06PM by PIB Bengaluru

2020 ನೇ ವರ್ಷದಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು  ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಉಂಟು ಮಾಡಿತ್ತು. ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವ ಮಾರಕ ರೋಗದಿಂದ ಸಂತ್ರಸ್ತವಾಗಿದೆ. ಭಾರತ ಕೂಡಾ ಕೊರೊನಾ ವೈರಸ್ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡುತ್ತಿದೆ ಮತ್ತು ಆಯುಷ್ ಸಚಿವಾಲಯ ಕೈಗೊಂಡ ಕ್ರಮಗಳು ಹೇಗೆ ಇದುವರೆಗೆ ಚೇತರಿಕೆ ದರವನ್ನು ಹೆಚ್ಚಿಸಿವೆ ಎಂಬುದನ್ನು ನಾವು ನೋಡಿದ್ದೇವೆ. ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಸಚಿವಾಲಯದ ಪಾತ್ರ ಬಹಳ ಪ್ರಮುಖವಾದುದಾಗಿದೆ. ಹಲವಾರು ಉಪಕ್ರಮಗಳ ಜೊತೆಗೆ ಸಚಿವಾಲಯವು ಆಧುನಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಸಮಗ್ರಗೊಳಿಸಿ ಎರಡು ಪದ್ಧತಿಗಳ ಸಹಯೋಗದೊಂದಿಗೆ ಅರ್ಥಪೂರ್ಣ , ಮತ್ತು ಪರಸ್ಪರ ಕಲಿಕೆಗೆ ಅನುಕೂಲ ಮಾಡಿಕೊಟ್ಟಿದೆ.

ಕೋವಿಡ್ 19 ವಿರುದ್ಧ ಆಯುಷ್ ಸಚಿವಾಲಯದ ಉಪಕ್ರಮಗಳು: ಆಯುಷ್ ಸಚಿವಾಲಯ ಸ್ವರಕ್ಷಣೆಗಾಗಿ ಮಾರ್ಗದರ್ಶಿಗಳ ಸಲಹಾ ಸೂಚಿಯನ್ನು ಹೊರಡಿಸಿದ್ದಲ್ಲದೆ ರೋಗ ನಿರೋಧಕ ಶಕ್ತಿಗಾಗಿ ಆರೋಗ್ಯ ರಕ್ಷಣಾ ಕ್ರಮಗಳನ್ನೂ ಸಲಹೆ ಮಾಡಿತ್ತು. ಸಚಿವಾಲಯವುರೋಗ ನಿರೋಧಕ ಶಕ್ತಿಗಾಗಿ ಆಯುಷ್ಎಂಬ ಶೀರ್ಷಿಕೆಯಲ್ಲಿ ಮೂರು ತಿಂಗಳ ಪ್ರಚಾರಾಂದೋಲನವನ್ನು ಆರಂಭಿಸಿತ್ತು. ಆಯುಷ್ ಗಾಗಿ ಟೆಲಿಮೆಡಿಸಿನ್ ಮಾರ್ಗದರ್ಶಿಗಳನ್ನು ಕೂಡಾ ಸಚಿವಾಲಯ ಅಭಿವೃದ್ಧಿ ಮಾಡಿತ್ತು.

ಕೋವಿಡ್ 19 ಕ್ಕೆ ಸಂಬಂಧಿಸಿ ಆಯುಷ್ ಸಂಶೋಧನಾ ಅಧ್ಯಯನಗಳು: ರೋಗ ಪ್ರತಿಬಂಧಕ, ಹೊಸ ಸೇರ್ಪಡೆ, ಅದ್ವಿತೀಯ, ನಿಗಾ, ಮತ್ತು   ಕ್ಲಿನಿಕಲ್ ಪೂರ್ವ/ ಪರೀಕ್ಷಾರ್ಥ ಅಧ್ಯಯನಗಳು ಸಹಿತ ಒಟ್ಟು 104 ಅದ್ಯಯನಗಳು ದೇಶದ 135 ಕೇಂದ್ರಗಳಲ್ಲಿ ನಡೆಯುತ್ತಿವೆ. ಕೋವಿಡ್ 19 ನಿಭಾವಣೆಯಲ್ಲಿ ಮತ್ತು ನಿವಾರಣೆಯಲ್ಲಿ ಮದ್ಯಂತರ ಅವಧಿಯ ಫಲಿತಾಂಶಗಳು ಭರವಸೆದಾಯಕ ಫಲಿತಾಂಶಗಳನ್ನು ನೀಡಿವೆ. ಮತ್ತು ಆಯುಷ್ ಮಧ್ಯಪ್ರವೇಶಗಳು ಉತ್ತಮವಾಗಿ ಫಲಿತಗಳನ್ನು ನೀಡಿವೆ ಮತ್ತು ಯಾವುದೇ ಗಂಭೀರ ಪ್ರತಿಕೂಲ ಘಟನೆಗಳಿಗೆ ಕಾರಣವಾಗಿಲ್ಲ ಹಾಗು ಯಾವುದೇ ಗಂಭೀರ ಪ್ರತಿಕೂಲ ಔಷಧಿ ಪರಿಣಾಮಗಳಾವುವೂ ಕಂಡುಬಂದಿಲ್ಲ. ಸಚಿವಾಲಯವು ಕೋವಿಡ್ -19 ತಡೆಗೆ ಆಯುಷ್ ಸಲಹಾ ಸೂಚಿಗಳು ಮತ್ತು ಕ್ರಮಗಳ ದಕ್ಷತೆ, ಅಂಗೀಕಾರಾರ್ಹತೆ ಮತ್ತು ಬಳಸುವಿಕೆಗೆ ಸಂಬಂಧಿಸಿ  ಆಯುಷ್ ಸಂಜೀವಿನಿ ಮೊಬೈಲ್ ಆಪ್ ಮೂಲಕ 1.47 ಕೋಟಿ ಜನರನ್ನೊಳಗೊಂಡು  ಮೌಲ್ಯಮಾಪನ ಮಾಡಿದೆ. ಪ್ರತಿಕ್ರಿಯೆಯಲ್ಲಿ 85.1% ಜನರು ತಾವು ಆಯುಷ್ ಪರಿಹಾರಗಳನ್ನು ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸಿರುವುದಾಗಿ ಹೇಳಿದ್ದಾರೆ.

ಭಾರತೀಯ ವೈದ್ಯ ಪದ್ಧತಿಗಾಗಿ ರಾಷ್ಟ್ರೀಯ ಆಯೋಗ (ಎನ್.ಸಿ..ಎಂ.) ಕಾಯ್ದೆ 2020 ಮತ್ತು ಹೋಮಿಯೋಪಥಿಗಾಗಿ ರಾಷ್ಟ್ರೀಯ ಆಯೋಗ (ಎನ್.ಸಿ.ಎಚ್.) ಕಾಯ್ದೆ 2020 ಜಾರಿಹೊಸ ಶಾಸನಗಳ ಜಾರಿ: ಎನ್.ಸಿ..ಎಂ. ಕಾಯ್ದೆ, 2020 ಮತ್ತು ಎನ್.ಸಿ.ಎಚ್. ಕಾಯ್ದೆ 2020 ಗಳನ್ನು 2020 ಸೆಪ್ಟೆಂಬರ್ 21 ರಂದು ಜಾರಿಗೆ ತರಲಾಗಿದೆ. ಇವು ಹಾಲಿ ಇರುವ ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ ಕಾಯ್ದೆ 1970 ಮತ್ತು 1973 ಹೋಮಿಯೋಪಥಿ ಕೇಂದ್ರೀಯ ಮಂಡಳಿ ಕಾಯ್ದೆ ಅಡಿಯಲ್ಲಿ ಸ್ಥಾಪಿಸಲಾದ ಭಾರತೀಯ ವೈದ್ಯ ಪದ್ಧತಿಯ ಕೇಂದ್ರೀಯ ಮಂಡಳಿಯನ್ನು  ಅನುಕ್ರಮವಾಗಿ ಸ್ಥಳಾಂತರಿಸಿವೆ. ಕಾಯ್ದೆಗಳ ಮೂಲ ಉದ್ದೇಶ ಆಯುಷ್ ಶಿಕ್ಷಣ ವಲಯದಲ್ಲಿ ಸುಧಾರಣೆಗಳನ್ನು ತರುವುದಾಗಿದೆ.

ರಾಷ್ಟ್ರೀಯ ಮಹತ್ವದ ಸಂಸ್ಥೆಯ (.ಎನ್..)  ಸ್ಥಾಪನೆ : ಆಯುರ್ವೇದ ಕಾಯ್ದೆ 2020 ರಡಿಯಲ್ಲಿ ಆಯುರ್ವೇದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು 2020 ಸೆಪ್ಟೆಂಬರ್ 22 ರಂದು ಜಾರಿಗೆ ತರಲಾಗಿದ್ದು, ಜಾಮ್ ನಗರದ ಆಯುರ್ವೇದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (.ಟಿ.ಆರ್..)ಗೆ ಗುಜರಾತಿನ ನಾಲ್ಕು ಸಂಸ್ಥೆಗಳನ್ನು ವಿಲಯನಗೊಳಿಸಿ .ಎನ್.. ಸ್ಥಾನ ಮಾನವನ್ನು ನೀಡಲಾಗಿದೆ. ಗುಜರಾತಿನ ಆಯುರ್ವೇದ ವಿಶ್ವವಿದ್ಯಾಲಯದ ಜಾಮ್ ನಗರ ಕ್ಯಾಂಪಸ್ಸಿನಲ್ಲಿ ಸಂಸ್ಥೆ ಇದೆ.

ಎನ್... ಜೈಪುರಕ್ಕೆ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನ ಮಾನ: ಆಯುಷ್ ಸಚಿವಾಲಯದ ಜೈಪುರದಲ್ಲಿರುವ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯ ಸಂಸ್ಥೆ ಎಂದು ಘೋಷಿಸಲಾಗಿದೆ. ಪ್ರಧಾನ ಮಂತ್ರಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಜೈಪುರ ಎನ್...ಯನ್ನು 2020 ನವೆಂಬರ್ 13 ರಂದು ಡೀಮ್ಡ್ ವಿಶ್ವವಿದ್ಯಾಲಯ ಎಂದು ಘೋಷಿಸಿ ದೇಶಕ್ಕೆ ಸಮರ್ಪಿಸಿದ್ದಾರೆ.

ಭಾರತದಲ್ಲಿ ಸಾಂಪ್ರದಾಯಿಕ ವೈದ್ಯಕೀಯಕ್ಕಾಗಿ ಡಬ್ಲ್ಯು.ಎಚ್.. ಜಾಗತಿಕ ಕೇಂದ್ರ ಸ್ಥಾಪನೆ: ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯು.ಎಚ್..) ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧನೋಮ್ ಘೆಬ್ರೆವೆಸಸ್ 2020 ನವೆಂಬರ್ 13 ರಂದು 5 ನೇ ಆಯುರ್ವೇದ ದಿನ ಆಚರಣೆಯ ಸಂದರ್ಭದಲ್ಲಿ ನೀಡಿರುವ ವೀಡಿಯೋ ಸಂದೇಶದಲ್ಲಿ ಆಯುಷ್ಮಾನ್ ಭಾರತ ಅಡಿಯಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ಖಾತ್ರಿಪಡಿಸುವ ಪ್ರಧಾನ ಮಂತ್ರಿ ಅವರ ಬದ್ಧತೆಯನ್ನು ಕೊಂಡಾಡಿದ್ದಾರೆ ಮತ್ತು ಆರೋಗ್ಯ ಸಂಬಂಧಿ ಉದ್ದೇಶಗಳನ್ನು ಈಡೇರಿಸಲು ಸಾಕ್ಷ್ಯಾಧಾರ ಆಧಾರಿತ ಸಾಂಪ್ರದಾಯಿಕ ವೈದ್ಯ ಪದ್ದತಿಯ ಔಷಧಿಗಳನ್ನು ಉತ್ತೇಜಿಸುವ ಕ್ರಮಗಳನ್ನೂ ಅವರು ಶ್ಲಾಘಿಸಿದ್ದಾರೆ. ಭಾರತದಲ್ಲಿ ಸಾಂಪ್ರದಾಯಿಕ ವೈದ್ಯ ಮತ್ತು ಔಷಧಿಗಳ ಜಾಗತಿಕ ಕೇಂದ್ರ ಸ್ಥಾಪನೆಯನ್ನೂ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ಅವರು ಡಬ್ಲ್ಯು.ಎಚ್.. ಮತ್ತು ಡಿ.ಜಿ.ಅವರಿಗೆ ಸಾಂಪ್ರದಾಯಿಕ ವೈದ್ಯಪದ್ಧತಿಗಳ ಜಾಗತಿಕ ಕೇಂದ್ರ ಸ್ಥಾಪನೆಗೆ ಭಾರತವನ್ನು ಆಯ್ಕೆ ಮಾಡಿದುದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಡಬ್ಲ್ಯು.ಎಚ್.. ವೈದ್ಯರ ಜನಸಂಖ್ಯಾ ಅನುಪಾತದಲ್ಲಿ ಆಯುಷ್ ಪದ್ದತಿ ಅನುಸರಿಸುವವರ ಸೇರ್ಪಡೆ: ಆಯುಷ್ ನೊಂದಾಯಿತ ವೈದ್ಯರನ್ನು ನೊಂದಾಯಿತ ವೈದ್ಯಕೀಯ ಪ್ರಾಕ್ಟೀಶನರ್ ದತ್ತಾಂಶದಲ್ಲಿ ಸೇರಿಸಿಕೊಳ್ಳುವುದರಿಂದ ಡಬ್ಲ್ಯು.ಎಚ್.. ವೈದ್ಯರ ಜನಸಂಖ್ಯಾ ಅನುಪಾತ ಸುಧಾರಣೆಯಾಗಲಿದೆ.

ರೋಗಗಳ ಅಂತಾರಾಷ್ಟ್ರೀಯ ವರ್ಗೀಕರಣ (.ಸಿ.ಡಿ.) 11: ಆಯುರ್ವೇದ, ಸಿದ್ಧ ಮತ್ತು ಯುನಾನಿ ವೈದ್ಯ ಪದ್ಧತಿಗಳ ಪ್ರಮಾಣಿತ ಪರಿಭಾಷೆಗಳ ಅಭಿವೃದ್ಧಿ ಕಾರ್ಯದಲ್ಲಿ ಆಯುಷ್ ಸಚಿವಾಲಯವು ಡಬ್ಲ್ಯು.ಎಚ್.. ಜೊತೆ ಸಕ್ರಿಯವಾಗಿ ಕೈಜೋಡಿಸಿದೆ. ಮತ್ತು ರಾಷ್ಟ್ರೀಯ ಆಯುಷ್ ಅಸ್ವಸ್ಥತೆ ಹಾಗು ಪ್ರಮಾಣಿತ ಪರಿಭಾಷೆಗಳ ಇಲೆಕ್ಟ್ರಾನಿಕ್ (ನಮಸ್ತೇ) ಪೋರ್ಟಲ್ ನ್ನು ಕೂಡಾ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ರಾಷ್ಟ್ರೀಯ ಆಯುರ್ವೇದ, ಸಿದ್ಧ ಮತ್ತು ಯುನಾನಿ ಅಸ್ವಸ್ಥತೆ ಸಂಹಿತೆ/ಸಂಕೇತಗಳ ಮೂಲಕ ಅಸ್ವಸ್ಥತೆ ಅಂಕಿ ಅಂಶಗಳ ಸಂಗ್ರಹವನ್ನು   ಪೋರ್ಟಲ್ ಮೂಲಕ ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ. ಸಾಂಪ್ರದಾಯಿಕ ಔಷಧಿಗಳ 2 ನೇ ಮಾದರಿ ಅಭಿವೃದ್ಧಿಗಾಗಿ ಭಾಗೀದಾರ ದೇಶಗಳ ಸಚಿವಾಲಯ ಮಟ್ಟದ ಸಭೆಯನ್ನು 2020 ಫೆಬ್ರವರಿ 25-26 ರಂದು ಆಯುಷ್ ಸಚಿವಾಲಯ ಮತ್ತು ಡಬ್ಲ್ಯು.ಎಚ್..ಗಳು ಜಂಟಿಯಾಗಿ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದವು. ನಿಟ್ಟಿನಲ್ಲಿ ಡಬ್ಲ್ಯು.ಎಚ್.. ಜೊತೆಗೆ 2020 ಫೆಬ್ರವರಿ 11 ರಂದು ದಾನ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.

ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು (.ಎಚ್.ಡಬ್ಲ್ಯು.ಸಿ.ಗಳು) : ವರ್ಷದ ಏಪ್ರಿಲ್ ನಿಂದ , ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ , .ಎಚ್.ಡಬ್ಲ್ಯು.ಸಿ.ಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ನೆರವಿನಿಂದ ಸ್ಥಾಪಿಸಲಾಗುತ್ತಿದೆ. 2024 ವೇಳೆಗೆ 12,500 .ಎಚ್.ಡಬ್ಲ್ಯು.ಸಿ.ಗಳನ್ನು ಕಾರ್ಯಾಚರಿಸುವಂತೆ ಮಾಡಲಾಗುವುದು.

ಚಾಂಪಿಯನ್ ಸೇವಾ ವಲಯದ ಯೋಜನೆ: ಆಯುಷ್ ಸಚಿವಾಲಯವು ಆಯುಷ್ ಆರೋಗ್ಯ ರಕ್ಷಣಾ ಸ್ಪೆಷಾಲಿಟಿ ಡೇ ಕೇರ್/ಆಸ್ಪತ್ರೆಗಳು, ಆಯುಷ್ ವಲಯದಲ್ಲಿ ಕೌಶಲ್ಯ ಅಭಿವೃದ್ದಿ ಮತ್ತು ಆಯುಷ್ ಗ್ರಿಡ್ ಸ್ಥಾಪನೆಯನ್ನು ಚಾಂಪಿಯನ್ ಸೇವಾ ಯೋಜನೆ ಅಡಿಯಲ್ಲಿ ರೂಪಿಸಲು ಉಪಕ್ರಮಗಳನ್ನು ಕೈಗೊಂಡಿದೆ. ವಾಣಿಜ್ಯ ಸಚಿವಾಲಯದ ಸಹಯೋಗದಲ್ಲಿ ಮೂರು ವರ್ಷಗಳ ಅವಧಿಗೆ 769 ಕೋ.ರೂ.ಗಳ ಪ್ರಸ್ತಾವನೆಯನ್ನು ಇದು ಒಳಗೊಂಡಿದೆ.

ಆಯುಷ್ ಸಚಿವಾಲಯ ಮತ್ತು ಮಹಿಳಾ ಹಾಗು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ನಡುವೆ ತಿಳುವಳಿಕಾ ಒಡಂಬಡಿಕೆ (ಎಂ..ಯು.) : ಪೋಷಣ್ ಅಭಿಯಾನದ ಅಂಗವಾಗಿ ನ್ಯೂನ ಪೋಷಣೆ ನಿಯಂತ್ರಣಕ್ಕಾಗಿ 2020 ಸೆಪ್ಟೆಂಬರ್ 20 ರಂದು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಎಂ..ಯು. ಕೆಲವು ವೈಜ್ಞಾನಿಕವಾಗಿ ಸಿದ್ದವಾದ  ಮತ್ತು ಕಾಲಾನುಕ್ರಮದಲ್ಲಿ ಪರೀಕ್ಷಿಸಲ್ಪಟ್ಟ  ಆಯುಷ್ ಆಧಾರಿತ ಪರಿಹಾರಗಳನ್ನು ದೇಶದಲ್ಲಿ ನ್ಯೂನ ಪೋಷಣೆ ನಿಯಂತ್ರಣಕ್ಕೆ ಬಳಸಿಕೊಳ್ಳುತ್ತಿದೆ.

ಅಧೀನ ಕಚೇರಿಯಾಗಿ ಭಾರತೀಯ ಔಷಧಿ ಮತ್ತು ಹೋಮಿಯೋಪಥಿಗಾಗಿ ಫಾರ್ಮಾಕೋಪಿಯಾ(ಔಷಧಿ ತಯಾರಿಕಾ ವಿಧಾನಆಯೋಗ ಸ್ಥಾಪನೆ (ಪಿ.ಸಿ..ಎಂ. ಮತ್ತು ಎಚ್.):  ಹಾಲಿ ಇರುವ ಮೂರು ಸಂಸ್ಥೆಗಳಾದ ಭಾರತೀಯ ಔಷಧಿ ಪದ್ದತಿಗಳ ಫಾರ್ಮಾಕೋಪಿಯಲ್ (ಔಷದಿ ತಯಾರಿಕಾ ವಿಧಾನ) ಪ್ರಯೋಗಾಲಯ ಮತ್ತು ಹೋಮಿಯೋಪಥಿಕ್ ಫಾರ್ಮಾಕೋಪಿಯಾ ಪ್ರಯೋಗಾಲಯ (ಎಚ್.ಪಿ.ಎಲ್.) – ಎರಡು ಅಧೀನ ಕಚೇರಿಗಳ ಸಹಿತ ಮತ್ತು ಭಾರತೀಯ ವೈದ್ಯಪದ್ದತಿ ಹಾಗು ಹೋಮಿಯೋಪಥಿಗಾಗಿರುವ ಫಾರ್ಮಾಕೋಪಿಯಾ ಆಯೋಗ (ಪಿ.ಸಿ..ಎಂ. ಮತ್ತು ಎಂ.)ಗಳನ್ನು ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪಥಿ ಔಷಧಿಗಳ ಸಮರ್ಪಕ ನಿಯಂತ್ರಣ ಮತ್ತು ಗುಣಮಟ್ಟ ನಿಯಂತ್ರಣಕ್ಕಾಗಿ ಅವುಗಳ ಫಲಿತಾಂಶಗಳ ಗುಣಮಟ್ಟ ವೃದ್ಧಿಗಾಗಿ ವಿಲಯನಗೊಳಿಸಲಾಗಿದೆ.

ಸೋವಾ-ರಿಗ್ಪಾ ವೈದ್ಯಕೀಯ ಪದ್ಧತಿಯನ್ನು ಆಯುಷ್ ಪದ್ದತಿಗೆ ಸೇರ್ಪಡೆ ಮಾಡುವುದು: ಸರಕಾರವು ವ್ಯವಹಾರಗಳ ಹಂಚಿಕೆ ನಿಯಮಗಳನ್ವಯ ಮಂಜೂರಾತಿಯ ನಿಯಮಗಳಿಗೆ ತಿದ್ದುಪಡಿ ತಂದಿದೆ ಮತ್ತು ಆಯುಷ್ ಸಚಿವಾಲಯದ ವ್ಯಾಪ್ತಿಯ ಅಡಿಯಲ್ಲಿ ಸೋವಾ-ರಿಗ್ಪಾಕ್ಕೆ ಉತ್ತೇಜನ ಹಾಗು ಅಭಿವೃದ್ಧಿಗಾಗಿ ನೀತಿಯನ್ನು ರೂಪಿಸುವುದಕ್ಕೆ ನೀತಿ ರೂಪಣಾ ವ್ಯವಹಾರವನ್ನು ಸೇರ್ಪಡೆ ಮಾಡಿದೆ.

ಸೋವಾ ರಿಗ್ಪಾಕ್ಕಾಗಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆ: ಸೋವಾರಿಗ್ಪಾಕ್ಕಾಗಿರುವ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯನ್ನುಸೋವಾ ರಿಗ್ಪಾ ರಾಷ್ಟ್ರೀಯ ಸಂಸ್ಥೆಎಂಬುದಾಗಿ ಉನ್ನತೀಕರಿಸಲಾಗಿದೆ. ಕೇಂದ್ರಾಡಳಿತ ಪ್ರದೇಶ ಲಡಾಕ್ ಲೇಹ್ ನಲ್ಲಿ ಸಂಸ್ಥೆ ಇದೆ. 2019 ನವೆಂಬರ್ 20ರಂದು ಸಂಪುಟವು ಉನ್ನತೀಕರಣಕ್ಕೆ ಅನುಮೋದನೆ ನೀಡಿದೆ.

ಕೇಂದ್ರೀಯ ಆಯುಷ್ ಔಷಧಿಗಳ ನಿಯಂತ್ರಣ ಚೌಕಟ್ಟು ಸ್ಥಾಪನೆ: ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪಥಿ (.ಎಸ್.ಯು. ಮತ್ತು ಎಚ್) ಔಷಧಿಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಸ್ವತಂತ್ರ ಲಂಬ ರಚನೆಯನ್ನು ಕೇಂದ್ರೀಯ ಔಷಧಿಗಳ ಗುಣಮಟ್ಟ ನಿಯಂತ್ರಣ ಸಂಸ್ಥೆಯಲ್ಲಿ 9 ನಿಯಂತ್ರಣ ಹುದ್ದೆಗಳ ಸೃಜನೆಯೊಂದಿಗೆ ರೂಪಿಸುವ ಹೊಸ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಔಷಧಿ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940 ನಿಬಂಧನೆಗಳನ್ನು ಜಾರಿಗೊಳಿಸುವ ವ್ಯವಸ್ಥೆ ಬಲಗೊಳ್ಳಲಿದೆ ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳ ಅನುಷ್ಟಾನ ಸಾಧ್ಯವಾಗಲಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಔಷಧಿಗಳು ಲಭ್ಯವಾಗಲಿವೆ.

ಸ್ಪರ್ಧಾತ್ಮಕ ಕ್ರೀಡೆಯಾಗಿ ಯೋಗಾಸನ:- ಆಯುಷ್ ಸಚಿವಾಲಯ ಯೋಗಾಸನವನ್ನು ಜಾಗತಿಕ ಮಟ್ಟದಲ್ಲಿ ಕ್ರೀಡೆಯಾಗಿ ಉತ್ತೇಜಿಸಲು ಮತ್ತು ಪರಿಗಣಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. “ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಉತ್ತೇಜಿಸುವಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರಿನಲ್ಲಿ 16-11-2019ರಂದು ಆಯೋಜಿಸಲಾಗಿತ್ತು. ಯುವಜನ ವ್ಯವಹಾರಗಳ ಮತ್ತು ಕ್ರೀಡೆಗಳ ಸಚಿವಾಲಯ ಎನ್.ವೈ.ಎಸ್.ಎಫ್.ನ್ನು ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿಸಲು ಯೋಗಾಸನಕ್ಕಾಗಿರುವ  ಒಕ್ಕೂಟವೆಂದು ಮಾನ್ಯತೆ ನೀಡಿದೆ. ವಿವಿಧ ವಿದೇಶೀ ಒಕ್ಕೂಟಗಳನ್ನು .ವೈ.ಎಸ್.ಎಫ್. ಕೊಡೆಯಡಿ ಮತ್ತು ರಾಜ್ಯ ಒಕ್ಕೂಟಗಳನ್ನು ಎನ್.ವೈ.ಎಸ್.ಎಫ್. ಅಡಿಯಲ್ಲಿ ತರುವ ಪ್ರಯತ್ನಗಳು ನಡೆಯುತ್ತಿವೆ.

ಆಯುಷ್ ರಾಷ್ಟ್ರೀಯ ಸಂಸ್ಥೆಗಳ ನಾಲ್ಕು ಉಪಗ್ರಹ ಕೇಂದ್ರಗಳ ಸ್ಥಾಪನೆ:

2017 ರಾಷ್ಟ್ರೀಯ ಆರೋಗ್ಯ ನೀತಿಯ ಹಿನ್ನೆಲೆಯಲ್ಲಿ, ಆಯುಷ್ ಸಚಿವಾಲಯವು ಭಾರತದಲ್ಲಿರುವ ಆಯುಷ್ ಶಿಕ್ಷಣ ಸೌಲಭ್ಯಗಳನ್ನು ಕ್ರೋಢೀಕರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಆಯುರ್ವೇದ, ಹೋಮಿಯೋಪಥಿ, ಮತ್ತು ಯುನಾನಿ ಕ್ಷೇತ್ರಗಳಲ್ಲಿ ಹಾಲಿ ಇರುವ ರಾಷ್ಟ್ರೀಯ ಸಂಸ್ಥೆಗಳಲ್ಲಿ ಉಪಗ್ರಹ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆ 2017 ರಲ್ಲಿ ಆರಂಭಗೊಂಡಿದೆ. ಜೊತೆಗೆ ಹಣಕಾಸು ಸಚಿವಾಲಯದಿಂದ ಬಂದ ನಿರ್ದೇಶನಗಳ ಹಿನ್ನೆಲೆಯಲ್ಲಿ .ಎಫ್.ಸಿ.ಯಿಂದ ಅನುಮೋದನೆ ಕೋರಿದ  ಬಳಿಕದ ಪ್ರಸ್ತಾಪ ಸಂಪುಟದ ಅನುಮೋದನೆಗಾಗಿ ಸಲ್ಲಿಕೆಯಾಗುವ ಹಂತದಲ್ಲಿದೆ. ನಾಲ್ಕು ಉಪಗ್ರಹ ಕೇಂದ್ರಗಳಿಗೆ ವೇತನದ ಆವರ್ತನ ವೆಚ್ಚ ಮತ್ತು ಧನಸಹಾಯ ಮೊತ್ತವು ಅಂದಾಜು 1782.45 ಕೋ.ರೂ.ಗಳಷ್ಟಾಗಿರುತ್ತದೆ.

ಪ್ರಧಾನ ಮಂತ್ರಿ ವೃಕ್ಷಾಯುಷ ಯೋಜನಾ

ಪ್ರಧಾನ ಮಂತ್ರಿ ವೃಕ್ಷಾಯುಷ ಯೋಜನಾವನ್ನು ಗೌರವಾನ್ವಿತ ಹಣಕಾಸು ಸಚಿವರು 2020 ಮೇ 15 ರಂದು ಘೋಷಿಸಿದ್ದಾರೆ. ಇದು 10 ಲಕ್ಷ ಹೆಕ್ಟೇರಿನಲ್ಲಿ 4000 ಕೋ.ರೂ. ಬಜೆಟ್ಟಿನಲ್ಲಿ ವೈದ್ಯಕೀಯ ಸಸ್ಯಗಳ ಬೆಳೆಸುವಿಕೆ, ಉತ್ಪನ್ನ ನಿರ್ವಹಣೆಯನ್ನು ಒಳಗೊಂಡಿದೆ. ಇದು ಗಂಗಾ ನದಿಯ ದಂಡೆಯಲ್ಲಿ 800 ಎಕರೆ  ಪ್ರದೇಶದಲ್ಲಿ ವೈದ್ಯಕೀಯ ಸಸ್ಯಗಳನ್ನು ಬೆಳೆಸುವುದನ್ನೂ ಒಳಗೊಂಡಿದೆ. .ಎಫ್.ಸಿ. ಟಿಪ್ಪಣಿಯನ್ನು ವೆಚ್ಚ ಇಲಾಖೆಯು 2020 ಜುಲೈ 22 ತನ್ನ ಸಭೆಯಲ್ಲಿ ಅನುಮೋದಿಸಿದೆ. ಸಂಪುಟ ಟಿಪ್ಪಣಿಯ ಕರಡನ್ನು ಸಂಪುಟ ಸಚಿವಾಲಯಕ್ಕೆ ಮತ್ತು ಪ್ರಧಾನ ಮಂತ್ರಿ ಅವರ ಕಚೇರಿಗೆ 2020 ಆಗಸ್ಟ್ 28 ರಂದು ಸಂಪುಟದ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ.

ಆಯುಷ್ ಜಾಲ(ಗ್ರಿಡ್): ರಾಷ್ಟ್ರೀಯ ಆರೋಗ್ಯ ನೀತಿ-2017 ರನ್ವಯ ಮತ್ತು ಭಾರತ ಸರಕಾರದ -ಆಡಳಿತದ ಉಪಕ್ರಮದನ್ವಯ ಆಯುಷ್ ಸಚಿವಾಲಯವು ಇಡೀ ಆಯುಷ್ ವಲಯಕ್ಕಾಗಿ .ಟಿ ಬೆನ್ನೆಲುಬನ್ನು ಆಯುಷ್ ಜಾಲ (ಗ್ರಿಡ್ ) ಮಾದರಿಯಲ್ಲಿ ರೂಪಿಸಲು ಹೊರಟಿದೆ. ಇಡೀ ಆಯುಷ್ ವಲಯದ ಡಿಜಿಟಲೀಕರಣದಿಂದ ಆಯುಷ್ ವಲಯವು ಆರೋಗ್ಯ ರಕ್ಷಣಾ ಸೇವೆ ಒದಗಣೆಯ ಎಲ್ಲಾ ಮಟ್ಟಗಳಲ್ಲಿ, ಸಂಶೋಧನಾ ಶಿಕ್ಷಣ, ವಿವಿಧ ಆರೋಗ್ಯ ಕಾರ್ಯಕ್ರಮಗಳು, ಔಷಧಿ ನಿಯಂತ್ರಣಗಳು ಇತ್ಯಾದಿಗಳಲ್ಲಿ ಪರಿವರ್ತನೆ ಬರಲಿದೆ. ಪ್ರಸ್ತುತ ಸಚಿವಾಲಯವು ಸುಮಾರು 15 ಪೈಲೆಟ್ ಉಪಕ್ರಮಗಳನ್ನು ಅಭಿವೃದ್ಧಿಪಡಿಸಿದ್ದು ಆಯುಷ್ ಜಾಲ (ಗ್ರಿಡ್) ಯೋಜನೆಯ ಡಿ.ಪಿ.ಆರ್. ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. 2 ವರ್ಷಗಳಲ್ಲಿ ಇಡೀ ಆಯುಷ್ ವಲಯ ಡಿಜಿಟಲ್ ಆಗುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

ಆಯುಷ್ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (-ಎಚ್.ಎಂ..ಎಸ್.): ಇದನ್ನು 2018 ನವೆಂಬರ್ 5 ರಂದು ಆರಂಭಿಸಲಾಗಿದ್ದು, ಪ್ರಸ್ತುತ ಸಚಿವಾಲಯದ ಸ್ವಾಯತ್ತ ಸಂಸ್ಥೆಗಳ ಸುಮಾರು 90 ಆರೋಗ್ಯ ಸವಲತ್ತು ಕೇಂದ್ರಗಳಲ್ಲಿ .-ಎಚ್.ಎಂ..ಎಸ್. ನ್ನು ದೈನಂದಿನ ಹೊರರೋಗಿ ಸೇವಾ ಕಾರ್ಯನಿರ್ವಹಣೆಯಲ್ಲಿ ಬಳಸಲಾಗುತ್ತಿದೆ

ಆಯುಷ್ ಸಚಿವಾಲಯವು ಭಾರತೀಯ ಗುಣಮಾನಕಗಳ ಬ್ಯೂರೋ (ಬಿ..ಎಸ್.)ನೊಂದಿಗೆ ಸಹಯೋಗದಲ್ಲಿ ಭಾರತೀಯ ಗುಣಮಟ್ಟ ಮಾನದಂಡಗಳು ಮತ್ತು ಅಂತಾರಾಷ್ಟ್ರೀಯ ಗುಣಮಟ್ಟ ಮಾನದಂಡಗಳನ್ನು (.ಎಸ್..) ಅಭಿವೃದ್ಧಿ ಮಾಡುತ್ತಿದೆ: ಆಯುರ್ವೇದಕ್ಕಾಗಿ ನಾಲ್ಕು ಭಾರತೀಯ ಗುಣಮಟ್ಟ ಮಾನಕಗಳನ್ನು (.ಎಸ್.) ಅಭಿವೃದ್ಧಿ ಮಾಡಲಾಗಿದೆ ಮತ್ತು ಎರಡು ಗುಣಮಟ್ಟ ಮಾನಕಗಳನ್ನು .ಎಸ್.. ಕೆಲಸದ  ಕಾರ್ಯಕ್ರಮದಲ್ಲಿ (ಪಿ..ಡಬ್ಲ್ಯು.) ಅಂಗೀಕರಿಸಲಾಗಿದೆ. ಯೋಗ ಸಲಕರಣೆಗಳು ಮತ್ತು ಪಂಚಕರ್ಮ ಸಲಕರಣೆ ಸಹಿತ ಸುಮಾರು 25 ಗುಣಮಟ್ಟ ಮಾನಕಗಳ ಕಾರ್ಯ ಪ್ರಗತಿಯಲ್ಲಿದೆ. ಗುಣಮಟ್ಟಗಳು ಅವಶ್ಯ ಇರುವ ಎಲ್ಲಾ ಹಾಲಿ ಗುಣಮಾನಕಗಳನ್ನು ಕೆಲವು ನಿರ್ದಿಷ್ಟ ಅಂಶಗಳೊಂದಿಗೆ ಅಂತಾರಾಷ್ಟ್ರೀಯ ಅನುಸರಣೆ ಮತ್ತು ಅವುಗಳ ಜಾಗತಿಕ ಅಂಗೀಕಾರಾರ್ಹತೆಗಾಗಿ ಅಳವಡಿಸಿಕೊಳ್ಳಲಾಗಿದೆ. ಇಂತಹ .ಎಸ್./.ಎಸ್.. ಗುಣಮಟ್ಟ ಮಾನಕಗಳು ದೇಶೀಯ ಮತ್ತು ಗಡಿಯಾಚೆ ಆಯುಷ್ ಉತ್ಪನ್ನಗಳ ಮತ್ತು ಸೇವೆಗಳ ವ್ಯಾಪಾರಕ್ಕೆ ಹೆಚ್ಚು ಅನುಕೂಲತೆಗಳನ್ನು ಒದಗಿಸಲಿವೆ.

ವಿಮಾ ವ್ಯಾಪ್ತಿ: ಆಯುಷ್ ಚಿಕಿತ್ಸೆಯನ್ನು ಆಯುಷ್ ಸಚಿವಾಲಯದ ಪ್ರಯತ್ನಗಳ ಫಲವಾಗಿ ವೈದ್ಯಕೀಯ ವಿಮಾ ವ್ಯಾಪ್ತಿಗೆ ತರಲಾಗಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (.ಆರ್.ಡಿ..) ನಿಟ್ಟಿನಲ್ಲಿ ಅವಶ್ಯ ಅಧಿಸೂಚನೆಯನ್ನು ಹೊರಡಿಸಿದೆ.

ಎನ್..ಬಿ.ಎಚ್. ಮಾನ್ಯತೆ: ಸಚಿವಾಲಯವು ತನ್ನ ಎಲ್ಲಾ ಆಸ್ಪತ್ರೆಗಳನ್ನು ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಸೇವೆ ಒದಗಣೆದಾರರಿಗಾಗಿರುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್..ಬಿ.ಎಚ್.) ಯಿಂದ ಮಾನ್ಯತೆ ಪಡೆದುಕೊಳ್ಳಲು ಕ್ರಮಗಳನ್ನು ಕೈಗೊಂಡಿದೆ. ಇದುವರೆಗೆ ಹೊಸದಿಲ್ಲಿಯ  ಅಖಿಲ ಭಾರತ ಆಯುರ್ವೇದ ಸಂಸ್ಥೆ; ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ ಮತ್ತು .ಟಿ.ಆರ್.., ಜಾಮನಗರ್ ಗಳಿಗೆ ಮಾನ್ಯತೆ ದೊರೆತಿದೆ.

ಆಯುರ್ವೇದ ಗ್ರಂಥ ಸಮುಚ್ಛಯ ಎಂಬ ವೆಬ್ ಜಾಲವನ್ನು ಆಯುರ್ವೇದದ ಎಲ್ಲಾ ಪ್ರಮುಖ ಶಾಸ್ತ್ರೀಯ ಸಾರಸಂಗ್ರಹವನ್ನು ಒಂದೆಡೆಏಕ ವೇದಿಕೆಯ ಮೇಲೆ ತರುವುದಕ್ಕಾಗಿ ಅಭಿವೃದ್ಧಿ ಮಾಡಲಾಗಿದೆ.

***(Release ID: 1684949) Visitor Counter : 273