ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಯುಕೆಯಲ್ಲಿ ಹೊಸ ಕೋವಿಡ್ -19 ವೈರಾಣು ರೂಪಾಂತರದ ಹಿನ್ನೆಲೆಯಲ್ಲಿ ಪರೀಕ್ಷೆ, ಚಿಕಿತ್ಸೆ ಮತ್ತು ಕಣ್ಗಾವಲು ತಂತ್ರಗಳ ಕುರಿತಂತೆ ಚರ್ಚಿಸಿದ ರಾಷ್ಟ್ರೀಯ ಕಾರ್ಯಪಡೆ

Posted On: 26 DEC 2020 5:59PM by PIB Bengaluru

ನೀತಿ ಆಯೋಗದ ಸದಸ್ಯ ಪ್ರೊ. ವಿನೋದ್ ಪಾಲ್ ಮತ್ತು ಆರೋಗ್ಯ ಸಂಶೋಧನೆ ಇಲಾಖೆ ಕಾರ್ಯದರ್ಶಿ ಹಾಗೂ ಐಸಿಎಂಆರ್ ಮಹಾ ನಿರ್ದೇಶಕ ಪ್ರೊ. ಬಲರಾಮ್ ಭಾರ್ಗವ ಅವರ ಸಹ ಅಧ್ಯಕ್ಷತೆಯಲ್ಲಿ  ಕೋವಿಡ್ -19 ಕುರಿತ ರಾಷ್ಟ್ರೀಯ ಕಾರ್ಯಪಡೆ (ಎನ್.ಟಿ.ಎಫ್.)ಯ ಸಭೆಯನ್ನು ಐ.ಸಿ.ಎಂ.ಆರ್. ಇಂದು ಕರೆದಿತ್ತು. ಈ ಸಭೆಯಲ್ಲಿ ಏಮ್ಸ್ ನಿರ್ದೇಶಕ ಪ್ರೊ. ರಣದೀಪ್ ಗುಲೇರಿಯಾ; ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು (ಡಿಜಿಎಚ್ಎಸ್) ; ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ); ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರ(ಎನ್.ಸಿ.ಡಿ.ಸಿ.)ದ ನಿರ್ದೇಶಕರು; ಆರೋಗ್ಯ ಸಚಿವಾಲಯ ಮತ್ತು ಐ.ಸಿ.ಎಂ.ಆರ್.ನ ಇತರ ಪ್ರತಿನಿಧಿಗಳು ಮತ್ತು ಸ್ವತಂತ್ರ ವಿಷಯ ತಜ್ಞರು ಭಾಗಿಯಾಗಿದ್ದರು. 

ಯುಕೆಯಿಂದ ವೈರಸ್ ನ ಹೊಸ ರೂಪಾಂತರ ತಳಿ ಹೊರಹೊಮ್ಮುತ್ತಿರುವ ಇತ್ತೀಚಿನ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಎಸ್.ಎ.ಆರ್.ಎಸ್.- ಸಿಓವಿ-2ಗಾಗಿ ಪರೀಕ್ಷೆ, ಚಿಕಿತ್ಸೆ ಮತ್ತು ಕಣ್ಗಾವಲು ತಂತ್ರಗಳಲ್ಲಿ ಸಾಕ್ಷ್ಯಾಧಾರಿತ ಮಾರ್ಪಾಡುಗಳ ಕುರಿತು ಚರ್ಚಿಸುವುದು ರಾಷ್ಟ್ರೀಯ ಕಾರ್ಯಪಡೆಯ ಮುಖ್ಯ ಉದ್ದೇಶವಾಗಿತ್ತು.  ವೈರಾಣುವಿನ ರೂಪಾಂತರದಲ್ಲಿ  ಸಮಾನಾರ್ಥಕವಲ್ಲದ 14 ಬಗೆ (ಅಮೈನೊ ಆಸಿಡ್ ಮಾರ್ಪಟಿನ) ರೂಪಾಂತರಗಳು, 6 ಸಮಾನಾರ್ಥಕ (ಅಮೈನೊ-ಆಸಿಡ್ ಅಲ್ಲದ ಮಾರ್ಪಾಟು) ಮತ್ತು 3 ಅಳಿಸುವಿಕೆಗಳನ್ನು ಹೊಂದಿದೆ. ಎಸಿಇ 2 ರೆಸೆಪ್ಟರ್ ಗಳು (ರಿಸೆಪ್ಟರ್ ಬೈಂಡಿಂಗ್ ಡೊಮೇನ್) ಸ್ಪೈಕ್ (ಎಸ್) ಜೀನ್‌ ನಲ್ಲಿ ಎಂಟು ರೂಪಾಂತರಗಳು ಇವೆ, ಅವು ಮಾನವನ ಉಸಿರಾಟದ ಕೋಶಗಳಲ್ಲಿ ವೈರಸ್‌ ನ ಪ್ರವೇಶದ ಹಂತವಾಗಿವೆ.

ಪ್ರಸ್ತುತ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರ, ಪರೀಕ್ಷೆಯ ಕಾರ್ಯತಂತ್ರ ಮತ್ತು ಯುಕೆ ರೂಪಾಂತರಕ್ಕೆ ಸಂಬಂಧಿಸಿದ ಎಸ್.ಎ.ಆರ್.ಎಸ್.-ಸಿಓವಿ-2 ನ ಕಣ್ಗಾವಲಿಗೆ ಸಂಬಂಧಿಸಿದ ಅಂಶಗಳನ್ನು ಎನ್‌.ಟಿ.ಎಫ್ ವಿವರವಾಗಿ ಚರ್ಚಿಸಿತು. ವೈರಾಣು ಪ್ರಸರಣ ಹೆಚ್ಚಾಗುವುದನ್ನು ಯುಕೆ ರೂಪಾಂತರದಲ್ಲಿ ಸೂಚಿಸಲಾಗಿರುವುದರಿಂದ, ಈ ತಳಿಯ ಸೋಂಕಿತ ವ್ಯಕ್ತಿಗಳನ್ನು ಗುರುತಿಸುವುದು ನಿರ್ಣಾಯಕವಾಗಿದೆ ಮತ್ತು ಭಾರತದಲ್ಲಿ ಅದರ ಪ್ರಸರಣ ತಡೆಗಟ್ಟಲು ಅವರುಗಳನ್ನು ಸಮರ್ಪಕವಾಗಿ ಪ್ರತ್ಯೇಕಿಸಬೇಕಿದೆ.

ತಳಿಯಲ್ಲಿ ರೂಪಾಂತರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಚಿಕಿತ್ಸಾ ಶಿಷ್ಟಾಚಾರಗಳನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಎನ್.ಟಿ.ಎಫ್ ಬಂದಿದೆ. ಇದಲ್ಲದೆ, ಎಸ್.ಎ.ಆರ್.ಎಸ್.-ಸಿಓವಿ-2 ಅನ್ನು ಪರೀಕ್ಷಿಸಲು ಐಸಿಎಂಆರ್ ಯಾವಾಗಲೂ ಎರಡು ಅಥವಾ ಹೆಚ್ಚಿನ ಜೀನ್ ವಿಶ್ಲೇಷಣೆಗಳನ್ನು ಬಳಸಬೇಕೆಂದು ಪ್ರತಿಪಾದಿಸುತ್ತಿರುವುದರಿಂದ, ಪ್ರಸ್ತುತ ಪರೀಕ್ಷಾ ತಂತ್ರವನ್ನು ಬಳಸಿಕೊಂಡು ಸೋಂಕಿತ ಪ್ರಕರಣಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿಲ್ಲ.

ಅಸ್ತಿತ್ವದಲ್ಲಿರುವ ಕಣ್ಗಾವಲು ಕಾರ್ಯತಂತ್ರಗಳ ಜೊತೆಗೆ, ಯುಕೆಯಿಂದ ಬರುವ ಪ್ರಯಾಣಿಕರಲ್ಲಿ ವಿಶೇಷವಾಗಿ ಎಸ್.ಎ.ಆರ್.ಎಸ್-ಸಿಓವಿ-2ಗಾಗಿ ವರ್ಧಿತ ಜೀನೋಮಿಕ್ ಕಣ್ಗಾವಲು ನಡೆಸುವುದು ಅತ್ಯಂತ ಮಹತ್ವ ಎಂದು ಎನ್.ಟಿ.ಎಫ್ ಶಿಫಾರಸು ಮಾಡಿದೆ. ಇದಲ್ಲದೆ, ಲ್ಯಾಬ್ ರೋಗ ನಿರ್ಣಯದಲ್ಲಿ ಎಸ್ ಜೀನ್‌ ನ ದ್ರವ ಇದ್ದಿರುವ ಮಾದರಿಗಳಲ್ಲಿ, ಮರು-ಸೋಂಕಿನ ಸಾಬೀತಾದ ಪ್ರಕರಣಗಳು ಇತ್ಯಾದಿಗಳಲ್ಲಿ ಜೀನೋಮ್ ಅನುಕ್ರಮಣಿಕೆ ನಡೆಸುವುದು ಸಹ ಮಹತ್ವದ್ದಾಗಿರುತ್ತದೆ. ಮಾದರಿಗಳ ಅಗತ್ಯತೆಗಳಾದ್ಯಂತ ಪ್ರಾತಿನಿಧಿಕ ಮಾದರಿಗಳಿಂದ ಎಸ್.ಎ.ಆರ್.ಎಸ್-ಸಿಓವಿ-2ನ ಸಾಮಾನ್ಯ ಜೀನೋಮಿಕ್ ಕಣ್ಗಾವಲು ನಿರಂತರ ಮತ್ತು ಯೋಜಿತ ಚಟುವಟಿಕೆಯಾಗಿದೆ.

ಭಾರತ ಸರ್ಕಾರ ಯು.ಕೆ.ಯಲ್ಲಿ ವರದಿಯಾಗಿರುವ ರೂಪಾಂತರಿತ ಎಸ್.ಎ.ಆರ್.ಎಸ್-ಸಿಓವಿ-2 ವಿಚಾರದ ಬಗ್ಗೆ ಅರಿವು ಹೊಂದಿದ್ದು, ಈ ವರದಿಗಳಿಗೆ ಇತರ ದೇಶಗಳ ಪ್ರತಿಕ್ರಿಯೆಯನ್ನೂ ಅರಿತುಕೊಂಡಿದೆ ಎಂದು ಎನ್.ಸಿ.ಡಿ.ಸಿ. ಹೇಳಿದೆ. ಪರಿಸ್ಥಿತಿಯನ್ನು ಪೂರ್ವಭಾವಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರೂಪಾಂತರಿತ ಸೋಂಕನ್ನು ಕಂಡುಹಿಡಿಯಲು ಮತ್ತು ಅದನ್ನು ತಡೆಗಟ್ಟಲು ಕಾರ್ಯತಂತ್ರ ಜಾರಿಗೆ ತರಲಾಗಿದೆ.

 

ಈ ಕಾರ್ಯತಂತ್ರದ ಪ್ರಮುಖಾಂಶಗಳು:

ಎ.  ಪ್ರವೇಶದ ಹಂತಗಳಲ್ಲಿ (ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು):

• ಯುಕೆಯಿಂದ 2020 ಡಿಸೆಂಬರ್ 21 ರಿಂದ  ಡಿಸೆಂಬರ್ 23 ರವರೆಗೆ ಬಂದ ಎಲ್ಲ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗಿದೆ 

• ಆರ್‌.ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶ ಲಭ್ಯವಾದ ನಂತರವೇ, ಸೋಂಕು ಇಲ್ಲದ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಿಂದ ನಿರ್ಗಮಿಸಲು ಅನುಮತಿ ನೀಡಾಲಾಗಿದೆ

• ಎಲ್ಲಾ ಸೋಂಕು ದೃಢಪಟ್ಟ ಪ್ರಯಾಣಿಕರನ್ನು ಸಾಂಸ್ಥಿಕ ಪ್ರತ್ಯೇಕೀಕರಣಕ್ಕೆ ಒಳಪಡಿಸಲಾಗುತ್ತಿದೆ ಮತ್ತು ಅವರ ಮಾದರಿಗಳನ್ನು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ (ಡಬ್ಲ್ಯುಜಿಎಸ್) ಗೆ ಕಳುಹಿಸಲಾಗುತ್ತಿದೆ.

• ಡಬ್ಲ್ಯುಜಿಎಸ್ ಫಲಿತಾಂಶದಲ್ಲಿ ಪರಿವರ್ತನೆಯಾಗಿರುವ ವೈರಾಣು ಇಲ್ಲ ಎಂಬುದು ಖಚಿತವಾದ ಬಳಿಕವಷ್ಟೇ, ಸೋಂಕಿತರನ್ನು ಹಾಲಿ ಇರುವ ವ್ಯವಸ್ಥಿತ ಶಿಷ್ಟಾಚಾರಗಳ ರೀತ್ಯ ಸಾಂಸ್ಥಿಕ ಪ್ರತ್ಯೇಕೀಕರಣದಿಂದ ಹೋಗಲು ಅವಕಾಶ ನೀಡಲಾಗುತ್ತದೆ

• ಸೋಂಕು ದೃಢಪಟ್ಟಿರುವ ಎಲ್ಲ ಸಂಪರ್ಕಿತರನ್ನು ಕ್ವಾರಂಟೈನ್ ವ್ಯವಸ್ಥೆಯಡಿ ಇಡಲಾಗಿದ್ದು, ಐ.ಸಿ.ಎಂ.ಆರ್. ಮಾರ್ಗಸೂಚಿಯ ರೀತ್ಯ ಅವರ ಪರೀಕ್ಷೆಯನ್ನೂ ಮಾಡಲಾಗಿದೆ.

ಬಿ. ಸಮುದಾಯ ಕಣ್ಗಾವಲು:

• ಕಳೆದ 28 ದಿನಗಳಲ್ಲಿ ಯುಕೆಯಿಂದ ಆಗಮಿಸಿದ ಎಲ್ಲರ ಪಟ್ಟಿಯನ್ನೂ ವಲಸೆ ಶಾಖೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಹಂಚಿಕೊಂಡಿದೆ

• ಯುಕೆಯಿಂದ ನವೆಂಬರ್ 25 ರಿಂದ 2020ರ ಡಿಸೆಂಬರ್ 20 ರವರೆಗೆ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಐಡಿಎಸ್.ಪಿ. ರಾಜ್ಯ ಕಣ್ಗಾವಲು ಘಟಕಗಳು (ಎಸ್‌.ಎಸ್‌.ಯು) ಮತ್ತು ಜಿಲ್ಲಾ ಕಣ್ಗಾವಲು ಘಟಕಗಳು (ಡಿಎಸ್‌.ಯು) ಪತ್ತೆ ಮಾಡುತ್ತಿವೆ.

• ಈ ಪ್ರಯಾಣಿಕರುಗಳನ್ನು ಐ.ಸಿ.ಎಂ.ಆರ್ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಎಲ್ಲಾ ಸೋಂಕಿತ ಪ್ರಕರಣಗಳನ್ನು ಕಡ್ಡಾಯ ಪ್ರತ್ಯೇಕತೆ ಸೌಲಭ್ಯಕ್ಕೆ ಒಳಪಡಿಸಲಾಗುತ್ತಿದೆ

• ಎಲ್ಲಾ ಸೋಂಕಿತ ಪ್ರಕರಣಗಳ ಮಾದರಿಗಳನ್ನು ಡಬ್ಲ್ಯು.ಜಿ.ಎಸ್‌.ಗಾಗಿ ಕಳುಹಿಸಲಾಗುತ್ತಿದೆ

• ಸೋಂಕು ದೃಢಪಟ್ಟ ಪ್ರಕರಣಗಳ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಹೆಚ್ಚಿನ ರೀತಿ ಕೈಗೊಳ್ಳಲಾಗುತ್ತಿದೆ ಮತ್ತು ಈ ಸಂಪರ್ಕಗಳನ್ನು ಸೌಲಭ್ಯದ ಸಂಪರ್ಕ ತಡೆಗೆ ಒಳಪಡಿಸಲಾಗುತ್ತಿದೆ

• 14 ದಿನಗಳ ನಂತರ ಎರಡು ಮಾದರಿಗಳೂ ಸೋಂಕುಮುಕ್ತ ಎಂಬ ಪರೀಕ್ಷಾ ವರದಿಯನ್ನು ಖಚಿತಪಡಿಸಿದ ನಂತರವೇ ಸೋಂಕು ದೃಢಪಟ್ಟ ಪ್ರಕರಣಗಳವರನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಿ. ನಿರೀಕ್ಷೆತ ಕಣ್ಗಾವಲು: 

• ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶೇ.5ರಷ್ಟು ಸೋಂಕಿತ ಪ್ರಕರಣಗಳನ್ನು ಡಬ್ಲ್ಯುಜಿ.ಎಸ್. ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

• ದೇಶದಲ್ಲಿ ಎಸ್.ಎ.ಆರ್.ಎಸ್.-ಸಿಓವಿ-2ನ ತಳಿಗಳನ್ನು ಪರಿಚಲನೆ ಮಾಡುವ ಪ್ರಯೋಗಾಲಯ ಮತ್ತು ಸಾಂಕ್ರಾಮಿಕ ರೋಗಗಳ ಕಣ್ಗಾವಲುಗಾಗಿ ನವದೆಹಲಿಯ ಎನ್‌.ಸಿ,ಡಿ.ಸಿ ನೇತೃತ್ವದಲ್ಲಿ ಇನ್ಸಕಾಗ್ (INSACOG) ಎಂಬ ಜೀನೋಮಿಕ್ ಕಣ್ಗಾವಲು ಒಕ್ಕೂಟವನ್ನು ರಚಿಸಲಾಗಿದೆ. ಇದಲ್ಲದೆ, ಯುಕೆಯಿಂದ ಹಿಂದಿರುಗಿದವರ 50ಕ್ಕೂ ಹೆಚ್ಚು ಮಾದರಿಗಳು ಪ್ರಸ್ತುತ ಅನುಕ್ರಮಣಿಕೆಯಲ್ಲಿ ಗೊತ್ತುಪಡಿಸಿದ ಪ್ರಯೋಗಾಲಯಗಳಲ್ಲಿವೆ. ಒಕ್ಕೂಟದ ಇತರ ಪ್ರಯೋಗಾಲಯಗಳು: ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ದೆಹಲಿ; ಸಿಎಸ್.ಐ.ಆರ್- ಜೀನೋಮಿಕ್ಸ್ ಮತ್ತು ಸಂಯೋಜಿತ ಜೀವಶಾಸ್ತ್ರ ಸಂಸ್ಥೆ, ದೆಹಲಿ; ಸಿ.ಎಸ್.ಐ.ಆರ್- ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ, ಹೈದರಾಬಾದ್; ಡಿಬಿಟಿ- ಜೀವ ವಿಜ್ಞಾನ ಸಂಸ್ಥೆ, ಭುವನೇಶ್ವರ; ಡಿಬಿಟಿ- ರಾಷ್ಟ್ರೀಯ ಜೈವಿಕ ವೈದ್ಯಕೀಯ ಜಿನೋಮಿಕ್ಸ್ ಸಂಸ್ಥೆ,  ಕಲ್ಯಾಣಿ; ಡಿಬಿಟಿ-ಇನ್‌ಸ್ಟೆಮ್- ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ,  ಬೆಂಗಳೂರು; ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಬೆಂಗಳೂರು; ಐಸಿಎಂಆರ್- ರಾಷ್ಟ್ರೀಯ ವೈರಾಣು ಸಂಸ್ಥೆ, ಪುಣೆ.

ಯುಕೆ ರೂಪಾಂತರ ತಳಿ ಎಸ್.ಎ.ಆರ್.ಎಸ್. ಸಿ.ಓವಿ-2 ತಳಿಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕಾಗಿ ವರ್ಧಿತ ಜೀನೋಮಿಕ್ ಕಣ್ಗಾವಲು ಮುಂದುವರಿಸಲು ಪ್ರಸ್ತಾಪಿಸಲಾಗಿದೆ. ಆದಾಗ್ಯೂ, ಎಲ್ಲಾ ಇತರ ಆರ್‌.ಎನ್‌.ಎ ವೈರಾಣುಗಳಂತೆ, ಎಸ್.ಎ.ಆರ್.ಎಸ್. -ಸಿಓವಿ-2 ರೂಪಾಂತರಗೊಳ್ಳುವುದನ್ನು ಮುಂದುವರಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ರೂಪಾಂತರಿತ ವೈರಸ್ ಅನ್ನು ಸಾಮಾಜಿಕ ಅಂತರ, ಕರ ನೈರ್ಮಲ್ಯ, ಮುಖಗವಸುಗಳನ್ನು ಧರಿಸುವುದು ಮತ್ತು ಲಭ್ಯವಾಗಲಿರುವ ಮತ್ತು ಪರಿಣಾಮಕಾರಿಯಾದ ಲಸಿಕೆ ಮುಂತಾದ ಕ್ರಮಗಳಿಂದ ತಡೆಯಬಹುದು.

*****


(Release ID: 1683897) Visitor Counter : 296