ಇಂಧನ ಸಚಿವಾಲಯ

“ವಿದ್ಯುತ್ (ಬಳಕೆದಾರರ ಹಕ್ಕುಗಳು) ನಿಯಮ 2020” ಮೂಲಕ ವಿದ್ಯುತ್ ಬಳಕೆದಾರರಿಗೆ ಮೊದಲ ಬಾರಿಗೆ ಹಕ್ಕುಗಳನ್ನು ನೀಡಿದ ಕೇಂದ್ರ ಸರ್ಕಾರ


ಬಳಕೆದಾರರನ್ನು ಕೇಂದ್ರವಾಗಿರಿಸಿ ಮಾದರಿ ಬದಲಾವಣೆ ಮೂಲಕ ವಿದ್ಯುತ್ ಬಳಕೆದಾರರನ್ನು ಸಶಕ್ತೀಕರಿಸುವ ಶಕೆಯ ಆರಂಭ

ಹೊಸ ವಿದ್ಯುತ್ ಸಂಪರ್ಕ ಪಡೆಯಲು ಮತ್ತು ಬಿಲ್ ಪಾವತಿಸಲು ಆನ್ ಲೈನ್ ಅವಕಾಶ ಲಭ್ಯ

ವಿದ್ಯುತ್ ಬಳಕೆದಾರರಿಗೆ ನಿಗದಿತ ಅವಧಿಯೊಳಗೆ ವಿದ್ಯುತ್ ಸಂಪರ್ಕ ಲಭ್ಯ, ಮೆಟ್ರೋ ನಗರಗಳಲ್ಲಾದರೆ 7 ದಿನಗಳು, ಇತರ ನಗರಗಳಲ್ಲಾದರೆ 15 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಾದರೆ 30 ದಿನಗಳು; ಈ ಸಮಯ ಮಿತಿ ಉಲ್ಲಂಘಿಸಿದರೆ ದಂಡ

ಈ ನಿಯಮಗಳಿಂದ ದೇಶದಲ್ಲಿ ಈಗಿರುವ ಸುಮಾರು 30 ಕೋಟಿ ಮತ್ತು ವಿದ್ಯುತ್ ಸಂಪರ್ಕ ಪಡೆಯಲಿರುವ ಬಳಕೆದಾರರಿಗೆ ಪ್ರಯೋಜನಗಳಾಗಲಿವೆ

ದೇಶಾದ್ಯಂತ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ನಿರ್ಮಿಸುವ ನಿಟ್ಟಿನಲ್ಲಿ ಈ ನಿಯಮಗಳು ಪ್ರಮುಖ ಹೆಜ್ಜೆಗಳು: ಕೇಂದ್ರ ಇಂಧನ ಸಚಿವ ಶ್ರೀ ಆರ್. ಕೆ. ಸಿಂಗ್

Posted On: 21 DEC 2020 3:48PM by PIB Bengaluru

ಕೇಂದ್ರ ಇಂಧನ ಸಚಿವಾಲಯವು ದೇಶದ ಇಂಧನ ಬಳಕೆದಾರರಿಗೆ ಹಕ್ಕುಗಳನ್ನು ಒದಗಿಸುವ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ನಿಯಮಾವಳಿಗಳನ್ನು ಪ್ರಕಟಿಸಿದ ಕೇಂದ್ರ ಇಂಧನ ಮತ್ತು ಹೊಸ ಹಾಗು ಮರುನವೀಕೃತ ಇಂಧನ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ರಾದ ಶ್ರೀ ಆರ್.ಕೆ.ಸಿಂಗ್ ನಿಯಮಗಳು ವಿದ್ಯುತ್ ಬಳಕೆದಾರರನ್ನು ಸಶಕ್ತೀಕರಣಗೊಳಿಸಲಿವೆ ಎಂದರಲ್ಲದೆ ನಿಯಮಗಳು ವಿದ್ಯುತ್ ವ್ಯವಸ್ಥೆ ಇರುವುದು ಬಳಕೆದಾರರಿಗೆ ಸೇವೆ ಒದಗಿಸಲು ಎಂಬ ಬದ್ಧತೆಯಿಂದ ರೂಪಿಸಲ್ಪಟ್ಟಿವೆ   ಮತ್ತು ಬಳಕೆದಾರರಿಗೆ ನಂಬಲರ್ಹ ಸೇವೆಗಳನ್ನು ಮತ್ತು ಗುಣಮಟ್ಟದ ವಿದ್ಯುತ್ತನ್ನು ಪಡೆಯಲು ಹಕ್ಕು ಇದೆ ಎಂಬುದನ್ನು ಸ್ಪಷ್ಟಪಡಿಸುತ್ತವೆಎಂದೂ ಹೇಳಿದರು. ದೇಶಾದ್ಯಂತ ವಿತರಣಾ ಕಂಪೆನಿಗಳು ಏಕಸ್ವಾಮ್ಯವನ್ನು ಹೊಂದಿವೆ-ಅದು ಸರ್ಕಾರದ್ದಿರಲಿ ಅಥವಾ ಖಾಸಗಿಯವರದಾಗಿರಲಿ-ಬಳಕೆದಾರರಿಗೆ ಪರ್ಯಾಯ ಇಲ್ಲವೆನ್ನುವಂತಾಗಿದೆ-ಆದುದರಿಂದ ಬಳಕೆದಾರರ ಹಕ್ಕುಗಳನ್ನು ನಿಯಮಗಳ ಮೂಲಕ ನಿಗದಿ ಮಾಡಿ ಮತ್ತು ಹಕ್ಕುಗಳ ಜಾರಿಗಾಗಿ ವ್ಯವಸ್ಥೆಯೊಂದನ್ನು ರೂಪಿಸುವುದು ಅವಶ್ಯವಾಗಿದೆ. “ನಿಯಮಗಳು ಇದನ್ನು ಒದಗಿಸುತ್ತವೆಎಂದು ಶ್ರೀ ಸಿಂಗ್ ಹೇಳಿದರು

ನಿಯಮಗಳು ವ್ಯಾಪಾರೋದ್ಯಮಕ್ಕೆ ದೇಶದಲ್ಲಿ ಇನ್ನಷ್ಟು ಅನುಕೂಲಕರ ತಾಣವನ್ನು ರೂಪಿಸುವ  ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಸಚಿವರು ಬಣ್ಣಿಸಿದರು. ನಿಯಮಗಳ ಅನುಷ್ಟಾನದಿಂದ ಹೊಸ ವಿದ್ಯುತ್ ಸಂಪರ್ಕಗಳು, ಮರುಪಾವತಿಗಳು, ಮತ್ತು ಇತರ ಸೇವೆಗಳನ್ನು ಕಾಲ ಮಿತಿಯೊಳಗೆ ಒದಗಿಸುವುದನ್ನು ಖಾತ್ರಿಪಡಿಸಲಾಗುವುದು. ಬಳಕೆದಾರರ ಹಕ್ಕುಗಳ ಬಗ್ಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿದರೆ ಸೇವಾ ಒದಗಣೆದಾರರ ಮೇಲೆ ದಂಡ ವಿಧಿಸಲಾಗುತ್ತದೆಎಂದೂ ಅವರು ವಿವರಿಸಿದರು. ಇದನ್ನು ಪ್ರಮುಖ ಉಪಕ್ರಮ ಎಂದು ಬಣ್ಣಿಸಿದ ಅವರು ಸಾರ್ವಜನಿಕ ಸೌಲಭ್ಯಗಳ ಸೇವೆಗಳಲ್ಲಿ ಗ್ರಾಹಕರನ್ನು ಕೇಂದ್ರ ಬಿಂದುವಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಇನ್ನೊಂದು ಪ್ರಮುಖ ಹೆಜ್ಜೆ ಎಂದೂ ಹೇಳಿದರು. ನಿಯಮಗಳಿಂದ ದೇಶದಲ್ಲಿ ಹಾಲಿ ಇರುವ ಸುಮಾರು 30 ಕೋಟಿ ಮತ್ತು ವಿದ್ಯುತ್ ಸಂಪರ್ಕ ಪಡೆಯಲಿರುವ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದ ಸಚಿವರು ವಿಶೇಷವಾಗಿ ಗ್ರಾಮೀಣ ಪ್ರದೇಶಗಳು/ ಗ್ರಾಮಗಳು ಸೇರಿದಂತೆ ಎಲ್ಲಾ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸರ್ಕಾರದ ಗ್ರಾಹಕ ಸ್ನೇಹಿ ನಿಯಮಗಳ ಬಗ್ಗೆ ವ್ಯಾಪಕ ಪ್ರಚಾರಾಂದೋಲನ ನಡೆಸುವಂತೆ ರಾಜ್ಯಗಳು ಮತ್ತು ಡಿಸ್ಕಾಂಗಳಿಗೆ ಸಲಹೆ ಮಾಡಲಾಗುವುದು ಎಂದೂ ಅವರು ತಿಳಿಸಿದರು.  

1.         ವಿದ್ಯುತ್ (ಬಳಕೆದಾರರ ಹಕ್ಕುಗಳು) ನಿಯಮಗಳಲ್ಲಿ ಕೆಳಗಿನ ಪ್ರಮುಖ ಅಂಶಗಳನ್ನು ಅಡಕಗೊಳಿಸಲಾಗಿದೆ.

a)         ಬಳಕೆದಾರರ ಹಕ್ಕುಗಳು ಮತ್ತು ವಿತರಣಾ ಅನುಮತಿ ಪಡೆದಿರುವ ಸಂಸ್ಥೆಗಳ ಬಾಧ್ಯತೆಗಳು

b)         ಹೊಸ ಸಂಪರ್ಕಗಳ ಬಿಡುಗಡೆ ಮತ್ತು ಹಾಲಿ ಇರುವ ಸಂಪರ್ಕಗಳ ಬದಲಾವಣೆ ಯಾ ಮಾರ್ಪಾಡು.

c)         ಮೀಟರಿಂಗ್ ವ್ಯವಸ್ಥೆ

d)         ಬಿಲ್ಲಿಂಗ್ ಮತ್ತು ಪಾವತಿ

e)         ಸಂಪರ್ಕ ಕಡಿತ ಮತ್ತು ಮರು ಜೋಡಣೆ

f)         ಪೂರೈಕೆಯ ವಿಶ್ವಾಸಾರ್ಹತೆ

g)         ಬಳಕೆದಾರನೆಂದರೆ ಉತ್ಪಾದಕ-ಬಳಕೆದಾರ (ಪ್ರೊಸ್ಯೂಮರ್)

h)         ಲೈಸೆನ್ಸ್ ಪಡೆದಿರುವ ಸಂಸ್ಥೆಯ ಸಾಧನೆಯ ಗುಣಮಟ್ಟ ಮಾನದಂಡಗಳು

i)          ಪರಿಹಾರ ವ್ಯವಸ್ಥೆ

j)          ಗ್ರಾಹಕ ಸೇವೆಗಳಿಗಾಗಿ ಕಾಲ್ ಸೆಂಟರ್ ಗಳು.

k)         ಕುಂದು ಕೊರತೆ ನಿವಾರಣಾ ವ್ಯವಸ್ಥೆ.

2.         ಹಕ್ಕುಗಳು ಮತ್ತು ಬಾಧ್ಯತೆಗಳು

•           ಕಾಯ್ದೆಯಲ್ಲಿ ಒದಗಿಸಲಾದ ಪ್ರಸ್ತಾವನೆಗಳ ಅನ್ವಯ ಯಾವುದೇ ಸ್ಥಳದಲ್ಲಿ ವಾಸಿಸುವ ವ್ಯಕ್ತಿ ಅಥವಾ ಮಾಲಿಕರು ವಿದ್ಯುತ್ ಪೂರೈಕೆಗೆ ಸಂಬಂಧಿಸಿ ಕೋರಿಕೆ ಮಂಡಿಸಿದರೆ ವಿದ್ಯುತ್ ಪೂರೈಕೆ ಮಾಡುವುದು ಪ್ರತೀ ವಿತರಣಾ ಲೈಸೆನ್ಸ್ ದಾರ ಸಂಸ್ಥೆಯ ಕರ್ತವ್ಯ.

•           ವಿತರಣಾ ಲೈಸೆನ್ಸ್ ದಾರ ಸಂಸ್ಥೆಯಿಂದ ವಿದ್ಯುತ್ ಪಡೆಯುವಾಗ ಸೇವೆಯಲ್ಲಿ ಕನಿಷ್ಟ ಗುಣಮಟ್ಟವಾದರೂ ಪಾಲನೆಯಾಗಿರುವುದನ್ನು ಖಚಿತಪಡಿಸುವುದು ಗ್ರಾಹಕರ ಹಕ್ಕು.

3.         ಹೊಸ ಸಂಪರ್ಕಗಳ ಬಿಡುಗಡೆ ಮತ್ತು ಹಾಲಿ ಇರುವ ಸಂಪರ್ಕಗಳ ಮಾರ್ಪಾಡು ಯಾ ಬದಲಾವಣೆ:

•           ಪಾರದರ್ಶಕ, ಸರಳ ಮತ್ತು ಕಾಲಮಿತಿಯ ಪ್ರಕ್ರಿಯೆ.

•           ಅರ್ಜಿದಾರರಿಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೂ ಅವಕಾಶ

•           ಹೊಸ ಸಂಪರ್ಕಗಳನ್ನು ಒದಗಿಸಲು ಮತ್ತು ಇರುವ ಸಂಪರ್ಕಗಳನ್ನು ಮಾರ್ಪಾಡು ಮಾಡಲು ಮೆಟ್ರೋ ನಗರಗಳಲ್ಲಾದರೆ ಗರಿಷ್ಟ 7 ದಿನಗಳು ಮತ್ತು ಇತರ ಮುನ್ಸಿಪಲ್ ಪ್ರದೇಶಗಳಲ್ಲಾದರೆ 15 ದಿನಗಳು ಹಾಗು ಗ್ರಾಮೀಣ ಪ್ರದೇಶಗಳಲ್ಲಾದರೆ 30 ದಿನಗಳ ಗರಿಷ್ಟ ಕಾಲಮಿತಿ.

4.         ಮೀಟರಿಂಗ್-

•           ಮೀಟರ್ ರಹಿತವಾಗಿ ಯಾವುದೇ ಸಂಪರ್ಕ ನೀಡುವಂತಿಲ್ಲ

•           ಮೀಟರ್ ಸ್ಮಾರ್ಟ್ ಪೂರ್ವ-ಪಾವತಿ ಮೀಟರ್ ಆಗಿರತಕ್ಕದ್ದು ಇಲ್ಲವೇ ಪೂರ್ವ-ಪಾವತಿ ಮೀಟರ್ ಆಗಿರತಕ್ಕದ್ದು.

•           ಮೀಟರ್ ಗಳ ಪರೀಕ್ಷೆಗೆ ಅವಕಾಶ.

•           ದೋಷಪೂರಿತ ಮೀಟರು ಅಥವಾ ಸುಟ್ಟು ಹೋದ ಮೀಟರು ಅಥವಾ ಮೀಟರು ಕಳವು ಮಾಡಲಾದ ಸಂದರ್ಭಗಳಲ್ಲಿ ಅವುಗಳ ಬದಲಾವಣೆಗೆ ಅವಕಾಶ.

5.         ಬಿಲ್ಲಿಂಗ್ ಮತ್ತು ಪಾವತಿ-

* ಬಳಕೆದಾರ ದರಪಟ್ಟಿಯಲ್ಲಿ ಮತ್ತು ಬಿಲ್ ಗಳಲ್ಲಿ ಪಾರದರ್ಶಕತೆ

* ಗ್ರಾಹಕರಿಗೆ ಆನ್ ಲೈನ್ ಅಥವಾ ಆಫ್ ಲೈನಿನಲ್ಲಿ ಬಿಲ್ ಪಾವತಿಗೆ ಅವಕಾಶ.

* ಬಿಲ್ ಗಳ ಮುಂಚಿತ/ಮುಂಗಡ ಪಾವತಿಗೆ ಅವಕಾಶ.

6. ಸಂಪರ್ಕ ಕಡಿತ ಮತ್ತು ಮರುಜೋಡಣೆಯ ಪ್ರಸ್ತಾವನೆಗಳು/ ನಿಬಂಧನೆಗಳು

7. ಪೂರೈಕೆಯಲ್ಲಿ ವಿಶ್ವಾಸಾರ್ಹತೆ

* ವಿತರಣಾ ಲೈಸೆನ್ಸ್ ದಾರರು ಎಲ್ಲಾ ಬಳಕೆದಾರರಿಗೆ 24*7 ವಿದ್ಯುತ್ತನ್ನು ಪೂರೈಸತಕ್ಕದ್ದು. ಆದಾಗ್ಯೂ ಕೃಷಿಯಂತಹ ಬಳಕೆದಾರರಿಗೆ , ಕೆಲವು ವರ್ಗದವರಿಗೆ ಪೂರೈಕೆ ಅವಧಿಯನ್ನು ಕಡಿಮೆ ಮಾಡಲು ಆಯೋಗವು ಅವಕಾಶ ಕೊಡಬಹುದು.

* ವಿತರಣಾ ಲೈಸೆನ್ಸ್ ದಾರರು ಕಡಿತವನ್ನು ಮರುಸ್ಥಾಪಿಸಲು ಮತ್ತು ನಿಗಾ ವಹಿಸಲು ಸಾಧ್ಯವಾದಷ್ಟು ಸ್ವಯಂಚಾಲಿತ ಸಲಕರಣೆಗಳನ್ನು ಹೊಂದಿರುವ ವ್ಯವಸ್ಥೆಯನ್ನು ರೂಪಿಸಿರತಕ್ಕದ್ದು.

8. ಉತ್ಪಾದಕ-ಬಳಕೆದಾರನಾಗಿ ಗ್ರಾಹಕ

* ಉತ್ಪಾದಕ-ಬಳಕೆದಾರರು (ಪ್ರೊಸ್ಯೂಮರ್) ಬಳಕೆದಾರರಿಗಿರುವ ಸ್ಥಾನ ಮಾನವನ್ನು ಉಳಿಸಿಕೊಂಡಿರುತ್ತಾರೆ ಮತ್ತು ಸಾಮಾನ್ಯ ಬಳಕೆದಾರರಿಗಿರುವ ಹಕ್ಕನ್ನು ಹೊಂದಿರುತ್ತಾರೆ. ಅವರು ಛಾವಣಿಯ ಮೇಲೆ ಸೌರ ವಿದ್ಯುತ್ ಫಲಕ (ಪಿ.ವಿ.) ವ್ಯವಸ್ಥೆಯನ್ನು ಒಳಗೊಂಡಂತೆ ಮರು ನವೀಕೃತ ಇಂಧನ (ಆರ್..) ಉತ್ಪಾದನೆ ಘಟಕವನ್ನು ತಾವೇ ಅಥವಾ ಸೇವಾ ಪೂರೈಕೆದಾರ ಮೂಲಕ  ಸ್ಥಾಪಿಸುವುದಕ್ಕೂ ಹಕ್ಕನ್ನು ಹೊಂದಿರುತ್ತಾರೆ

* 10 ಕೆ.ಡಬ್ಲ್ಯು ವರೆಗಿನ ಲೋಡಿಗೆ ನಿವ್ವಳ ಮೀಟರಿಂಗ್ ಮತ್ತು 10 ಕೆ.ಡಬ್ಲ್ಯು. ಗಿಂತ ಹೆಚ್ಚಿನ ಲೋಡಿಗೆ ಒಟ್ಟು ಮೀಟರಿಂಗ್ ವ್ಯವಸ್ಥೆ.

9. ಕಾರ್ಯಕ್ಷಮತೆಯ ಗುಣಮಟ್ಟಗಳು

* ವಿತರಣಾ ಲೈಸೆನ್ಸ್ ದಾರರಿಗೆ ಕಾರ್ಯಕ್ಷಮತೆಯ ಗುಣಮಟ್ಟಗಳನ್ನು ಆಯೋಗವು ನಿಗದಿ ಮಾಡತಕ್ಕದ್ದು.

* ಕಾರ್ಯಕ್ಷಮತೆಯ ಗುಣಮಟ್ಟ ಉಲ್ಲಂಘಿಸಿದಲ್ಲಿ ವಿತರಣಾ ಲೈಸೆನ್ಸ್ ದಾರರು ಗ್ರಾಹಕರಿಗೆ ಪರಿಹಾರ ಮೊತ್ತವನ್ನು ಪಾವತಿಸತಕ್ಕದ್ದು.

10. ಪರಿಹಾರ ವ್ಯವಸ್ಥೆ

* ಗ್ರಾಹಕರಿಗೆ ಸ್ವಯಂಚಾಲಿತ ರೀತಿಯಲ್ಲಿ ಪರಿಹಾರ ಒದಗಿಸಲು ದೂರ ನಿಯಂತ್ರಿತ ನಿಗಾ ವ್ಯವಸ್ಥೆಯ ಮೂಲಕ ಸಾಧನಾ ಗುಣಮಟ್ಟಗಳನ್ನು ಮೇಲುಸ್ತುವಾರಿ ಮಾಡತಕ್ಕದ್ದು.

* ವಿತರಣಾ ಲೈಸೆನ್ಸ್ ಪಡೆದವರು ಪರಿಹಾರ ನೀಡಲು ಅವಶ್ಯವಾದ ಕಾರ್ಯಕ್ಷಮತೆ ಗುಣಮಟ್ಟಗಳಲ್ಲಿ ಕೆಳಗಿನವುಗಳು  ಸೇರಿರತಕ್ಕದ್ದು, ಆದರೆ ಇದಕ್ಕೆ ಮಾತ್ರ ಸೀಮಿತವಾಗಿರತಕ್ಕದ್ದಲ್ಲ.

i. ಬಳಕೆದಾರರಿಗೆ/ಗ್ರಾಹಕರಿಗೆ ನಿಗದಿಪಡಿಸಿದ ಅವಧಿಯ ಬಳಿಕ ಪೂರೈಕೆ ಇಲ್ಲದಿರುವುದು, ಇದನ್ನು ಆಯೋಗವು ನಿರ್ದಿಷ್ಟಪಡಿಸತಕ್ಕದ್ದು.

ii. ಆಯೋಗವು ನಿರ್ದಿಷ್ಟಪಡಿಸಿದಂತಹ ಮಿತಿಯನ್ನು ದಾಟಿದ ಸಂದರ್ಭದಲ್ಲಿ ಪೂರೈಕೆಯಲ್ಲಿ ಆಗಿರುವ ಅಡಚಣೆಗಳ ಸಂಖ್ಯೆ

iii. ಸಂಪರ್ಕ ಒದಗಿಸಲು, ಸಂಪರ್ಕ ಕಡಿತಕ್ಕೆ , ಮರು ಜೋಡಣೆಗೆ  ತೆಗೆದುಕೊಂಡ ಕಾಲಾವಧಿ.

iv. ಬಳಕೆದಾರ ವರ್ಗ ಬದಲಾವಣೆಗೆ, ಹೊರೆ (ಲೋಡ್) ಬದಲಾವಣೆಗೆ ತೆಗೆದುಕೊಂಡ ಕಾಲಾವಧಿ.

v. ಬಳಕೆದಾರರ/ಗ್ರಾಹಕರ ವಿವರಗಳ ಬದಲಾವಣೆಗೆ ತೆಗೆದುಕೊಂಡ ಕಾಲಾವಧಿ

vi. ದೋಷಪೂರಿತ ಮೀಟರುಗಳ ಬದಲಾವಣೆಗೆ ತೆಗೆದುಕೊಂಡ ಕಾಲಾವಧಿ.

vii. ಬಿಲ್ ಗಳನ್ನು ನೀಡಬೇಕಾದ ಕಾಲಾವಧಿ

viii. ವೋಲ್ಟೇಜ್ ಸಂಬಂಧಿ ಸಮಸ್ಯೆಗಳ/ದೂರುಗಳ  ನಿವಾರಣೆಗೆ ಸಂಬಂಧಿಸಿ ಕಾಲಾವಧಿ; ಮತ್ತು

ix. ಬಿಲ್ ಸಂಬಂಧಿ ದೂರುಗಳು

11. ಗ್ರಾಹಕ ಸೇವೆಗಳಿಗಾಗಿ ಕಾಲ್ ಸೆಂಟರ್

* ವಿತರಣಾ ಲೈಸೆನ್ಸ್ ಪಡೆದಿರುವವರು ಕೇಂದ್ರೀಕೃತ 24*7 ಉಚಿತ ಕಾಲ್ ಸೆಂಟರ್ ಗಳನ್ನು ಸ್ಥಾಪಿಸತಕ್ಕದ್ದು.

* ಲೈಸೆನ್ಸ್ ದಾರರು ಏಕೀಕೃತ ನೋಟ ಲಭಿಸುವಂತಾಗಲು ಸಾಮಾನ್ಯ ಗ್ರಾಹಕ ಸಂಪರ್ಕ ಮ್ಯಾನೇಜರ್ (ಸಿ.ಆರ್.ಎಂ.) ವ್ಯವಸ್ಥೆಯ ಮೂಲಕ ಎಲ್ಲಾ ಸೇವೆಗಳನ್ನು ಒದಗಿಸುವಂತಿರಬೇಕು

12. ಕುಂದುಕೊರತೆ ಪರಿಹಾರ ವ್ಯವಸ್ಥೆ:

  • ಗ್ರಾಹಕ ಕುಂದು ಕೊರತೆ ವೇದಿಕೆ (ಸಿ.ಜಿ.ಆರ್.ಎಫ್.) ಬಳಕೆದಾರರು ಮತ್ತು ... ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ.
  • ಗ್ರಾಹಕ ದೂರು/ಕುಂದುಕೊರತೆಗಳ ಪರಿಹಾರವನ್ನು ಬಹುಸ್ಥರೀಯವನ್ನಾಗಿಸಿ ಸುಲಭ ಮಾಡಲಾಗಿದೆ ಮತ್ತು ಬಳಕೆದಾರರ ಪ್ರತಿನಿಧಿಗಳ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೇರಿಸಲಾಗಿದೆ.
  • ಲೈಸೆನ್ಸ್ ಪಡೆದಿರುವವರು ವಿವಿಧ ರೀತಿಯ ಕುಂದುಕೊರತೆಗಳನ್ನು ವಿವಿಧ ಮಟ್ಟದಲ್ಲಿ ಪರಿಹರಿಸಲ್ಪಡಲು ತಗಲುವ ಅವಧಿಯನ್ನು ಸ್ಪಷ್ಟಪಡಿಸತಕ್ಕದ್ದು. ಕುಂದು ಕೊರತೆ ಪರಿಹಾರಕ್ಕೆ ಗರಿಷ್ಟ ಕಾಲಮಿತಿ 45 ದಿನಗಳನ್ನು ನಿಗದಿ ಮಾಡಲಾಗಿದೆ.

13. ಸಾಮಾನ್ಯ ಪ್ರಸ್ತಾವನೆಗಳು/ ನಿಬಂಧನೆಗಳು-

  • ಅರ್ಜಿಗಳ ಸಲ್ಲಿಕೆ, ಅರ್ಜಿಗಳ ಸ್ಥಿತಿ ಗತಿ, ಬಿಲ್ ಗಳ ಪಾವತಿ, ದೂರುಗಳ ಸ್ಥಿತಿ ಗತಿ ಇತ್ಯಾದಿಗಳಿಗೆ ಸಂಬಂಧಿಸಿ ತಿಳಿಯಲು ಗ್ರಾಹಕರಿಗೆ ಅನುಕೂಲವಾಗುವಂತೆ ಜಾಲತಾಣ, ವೆಬ್ ಪೋರ್ಟಲ್, ಮೊಬೈಲ್ ಆಪ್ ಮತ್ತು ಇತರ ನಿರ್ದಿಷ್ಟಪಡಿಸಿದ ವಿವಿಧ ಪ್ರದೇಶವಾರು ಕಚೇರಿಗಳ ಮೂಲಕ ಆನ್ ಲೈನ್ ಸೌಲಭ್ಯದ ಲಭ್ಯತಾ ವ್ಯವಸ್ಥೆ.
  • ವಿತರಣಾ ಲೈಸೆನ್ಸ್ ಪಡೆದವರು ಅರ್ಜಿ ಸಲ್ಲಿಕೆ, ಬಿಲ್ ಗಳ ಪಾವತಿ, ಇತ್ಯಾದಿ ಸಹಿತ ಎಲ್ಲಾ ಸೇವೆಗಳನ್ನೂ ಒದಗಿಸಬೇಕು, ಹಿರಿಯ ನಾಗರಿಕರಿಗೆ ಅವರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಬೇಕು.
  • ನಿಗದಿತ ವಿದ್ಯುತ್ ನಿಲುಗಡೆಗಳನ್ನು ಬಳಕೆದಾರರಿಗೆ ತಿಳಿಸತಕ್ಕದ್ದು. ಯೋಜಿತವಲ್ಲದ ನಿಲುಗಡೆಗಳಾದರೆ ಅಥವಾ ದೋಷಗಳುಂಟಾದ ಸಂದರ್ಭದಲ್ಲಿ ಬಳಕೆದಾರರಿಗೆ ಎಸ್.ಎಂ.ಎಸ್. ಗಳ ಮೂಲಕ ಅಥವಾ ಇತರ ಯಾವುದೇ ಇಲೆಕ್ಟ್ರಾನಿಕ್ ಮಾದರಿಯಲ್ಲಿ  ಮಾಹಿತಿಯನ್ನು ಮರು ಸ್ಥಾಪನೆಗೆ ತಗಲುವ ಅವಧಿಯ ಸಹಿತ ತಿಳಿಸತಕ್ಕದ್ದು.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ: Electricity (Rights of Consumers) Rules, 2020

***


(Release ID: 1682632) Visitor Counter : 784