ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ (ಗ್ರಾಹಕ ವ್ಯವಹಾರಗಳ ಇಲಾಖೆ) 2020ರ ವರ್ಷಾಂತ್ಯದ ಅವಲೋಕನ

Posted On: 21 DEC 2020 12:38PM by PIB Bengaluru

ಗ್ರಾಹಕ ವ್ಯವಹಾರಗಳ ಇಲಾಖೆ 2020ನೇ ಸಾಲಿನ ಸಾಧನೆಗಳ ಪ್ರಮುಖಾಂಶ

I. ಗ್ರಾಹಕರ ರಕ್ಷಣೆ

  • ಗ್ರಾಹಕರ ಹಿತರಕ್ಷಣಾ ಕಾಯ್ದೆ 1986ರ ಬದಲಿಗೆ 2019ರ ಗ್ರಾಹಕ ಹಕ್ಕುಗಳ ರಕ್ಷಣೆ ಕಾಯ್ದೆಯ ಜಾರಿಗೆ 2020ರ ಜುಲೈನಲ್ಲಿ ಅಧಿಸೂಚನೆ ಪ್ರಕಟಿಸಲಾಯಿತು. ಇ-ವಾಣಿಜ್ಯ ನಿಯಮಗಳು ಮತ್ತು ಇ-ವಾಣಿಜ್ಯ ಸಂಸ್ಥೆಗಳು ಮತ್ತು ಮಾರಾಟಗಾರರಿಗೆ ಕೆಲವೊಂದು ನಿರ್ದಿಷ್ಟ ಕರ್ತವ್ಯಗಳು ಮತ್ತು ನಿಬಂಧನೆಗಳನ್ನು ಒಳಗೊಂಡಂತೆ ಸೂಕ್ತ ನಿಯಮ ಮತ್ತು ನಿಬಂಧನೆಗಳ ಕುರಿತು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ.
  • ನಿಯಮಗಳ ಅಧಿಸೂಚನೆ ಪ್ರಕಟಿಸುವುದರೊಂದಿಗೆ ಗ್ರಾಹಕ ಹಕ್ಕುಗಳ ಉಲ್ಲಂಘನೆ, ಅನ್ಯಾಯದ ವ್ಯಾಪಾರ ಪದ್ಧತಿಗಳು ಮತ್ತು ಸುಳ್ಳು ಹಾಗೂ ದಾರಿ ತಪ್ಪಿಸುವಂತಹ ಜಾಹಿರಾತುಗಳಿಗೆ ಸಂಬಂಧಿಸಿದ ವಿಚಾರಣೆಗಳ ನಿಯಂತ್ರಣಕ್ಕೆ ಕೇಂದ್ರೀಯ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ(ಸಿಸಿಪಿಎ) ಕಾರ್ಯಾರಂಭವಾಗಲಿದೆ ಮತ್ತು ಅದರಿಂದ ಗ್ರಾಹಕ ಹಕ್ಕುಗಳನ್ನು ಒಂದು ವರ್ಗವನ್ನಾಗಿ ಪರಿಗಣಿಸಲಾಗುವುದು.
  • ಗ್ರಾಹಕರ ಹಕ್ಕುಗಳ(ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ) ನಿಯಮ 2020 ಅಡಿಯಲ್ಲಿ ಸೆಕ್ಷನ್ 8ರ ಪ್ರಕಾರ ಆನ್ ಲೈನ್ ಪೋರ್ಟಲ್ https://edaakhil.nic.in ಅನ್ನು 2020ರ ಸೆಪ್ಟೆಂಬರ್ 7ರಂದು ಆರಂಭಿಸಲಾಯಿತು.ಅದರಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಎಲೆಕ್ಟ್ರಾನಿಕ್ ಫೈಲಿಂಗ್ ಮೂಲಕ ಗ್ರಾಹಕರು ಪ್ರಕರಣಗಳನ್ನು ದಾಖಲಿಸಬಹುದಾಗಿದೆ.

I I. ಕೋವಿಡ್ ಸಂಬಂಧಿ ಉಪಕ್ರಮಗಳು

ಅಗತ್ಯ ವಸ್ತುಗಳ ಕಾಯಿದೆ ಅಡಿಯಲ್ಲಿ

  • ಮಾಸ್ಕ್(2 ಪದರ ಮತ್ತು 3 ಪದರದ ಸರ್ಜಿಕಲ್ ಮಾಸ್ಕ್, ಎನ್ 95 ಮಾರ್ಕ್ಉಳ್ಳ ಮಾಸ್ಕ್) ಮತ್ತು ಸ್ಯಾನಿಟೈಸರ್ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಯಿತು. ಆ ಮೂಲಕ 30.06.2020ರ ವರೆಗೆ ಅವುಗಳ ಲಭ್ಯತೆ ಮತ್ತು ಕೊರತೆಯಾಗದಂತೆ ಹಾಗೂ ಅಕ್ರಮವಾಗಿ ದಾಸ್ತಾನು ಮಾಡದಂತೆ ಕ್ರಮ ಕೈಗೊಳ್ಳಲಾಯಿತು.
  • ಮದ್ಯಸಾರ ಆಧರಿಸಿ ಉತ್ಪಾದಿಸಿದ ಹ್ಯಾಂಡ್ ಸ್ಯಾನಿಟೈಸರ್ ಬೆಲೆಗಳನ್ನು ನಿಯಂತ್ರಿಸಲಾಯಿತು.
  • ಮಾಸ್ಕ್ ಬೆಲೆಯನ್ನು(2 ಪದರದ ಮತ್ತು 3 ಪದರದ) ಕೈಯಿಂದ ನೇಯ್ಗೆ ಮಾಡಲಾದ ಬಟ್ಟೆ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಸುಲಭವಾಗಿ ದೊರಕುವಂತೆ ಮಾಡಲು ಬೆಲೆಯನ್ನು ನಿಗದಿಪಡಿಸಲಾಯಿತು. 

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ

  • ಕೋವಿಡ್-19 ಸಂಕಷ್ಟದಲ್ಲಿ ಆರ್ಥಿಕ ತೊಂದರೆಗಳ ಕಾರಣಕ್ಕಾಗಿ ಬಡಜನರ ಸಂಕಷ್ಟಗಳನ್ನು ದೂರಮಾಡಲು ಪ್ರಕಟಿಸಲಾದ ಕೋವಿಡ್-19 ಆರ್ಥಿಕ ಸಂಕಷ್ಟ ಪ್ಯಾಕೇಜ್ ನ ಭಾಗವಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ), ಅಡಿಯಲ್ಲಿ ಎನ್ಎಫ್ಎಸ್ಎ ಫಲಾನುಭವಿಗಳಿಗೆ  ಪ್ರತಿ ಕುಟುಂಬಕ್ಕೆ ಒಂದು ಕೆಜಿ ಹೆಸರು, ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆ ಕಾಳನ್ನು ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಮಟ್ಟಿಗೆ ವಿಶೇಷ ಪ್ಯಾಕೇಜ್ ನ ಅಡಿ ನೀಡಲು ನಿರ್ಧರಿಸಲಾಯಿತು. ಆ ಮೂಲಕ ಬಡವರಿಗೆ ಪ್ರೊಟೀನ್ ಲಭ್ಯತೆಯನ್ನು ಖಾತ್ರಿಪಡಿಸಲಾಯಿತು. 18.3 ಕೋಟಿ ಫಲಾನುಭವಿ  ಕುಟುಂಬಗಳಿಗೆ 5.48 ಲಕ್ಷ ಮಿಲಿಯನ್ ಟನ್ ವಿತರಿಸಲಾಯಿತು.    
  • ಪಿಎಂಜಿಕೆಎವೈ ಅಡಿಯಲ್ಲಿನ ಪ್ಯಾಕೇಜ್ ಅವಧಿಯನ್ನು ಮೂರು ತಿಂಗಳ ನಂತರವೂ 2020ರ ನವೆಂಬರ್ ಅಂತ್ಯದವರೆಗೆ ವಿಸ್ತರಿಸಲು ಜೂನ್ ತಿಂಗಳಲ್ಲಿ ನಿರ್ಧರಿಸಲಾಯಿತು. 5 ತಿಂಗಳ ಅವಧಿಯಲ್ಲಿ ಎನ್ಎಫ್ಎಸ್ಎ ಫಲಾನುಭವಿ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಒಂದು ಕೆಜಿ ಕಡಲೆಕಾಳನ್ನು ಉಚಿತವಾಗಿ ವಿತರಿಸಲಾಯಿತು. 5 ತಿಂಗಳ ಕಾಲ 6.57 ಲಕ್ಷ ಮೆಟ್ರಿಕ್ ಟನ್ ವಿತರಿಸಲಾಗಿದೆ.

ಆತ್ಮ ನಿರ್ಭರ ಭಾರತ ಪ್ಯಾಕೇಜ್

  • ವಲಸೆ ಕಾರ್ಮಿಕರ ಸಂಕಷ್ಟವನ್ನು ತಪ್ಪಿಸುವ ಉದ್ದೇಶದಿಂದ ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ ವಲಸೆ ಕಾರ್ಮಿಕರ ಕುಟುಂಬಕ್ಕೆ ಸರ್ಕಾರದ ದಾಸ್ತಾನಿನಿಂದ 2 ಕೆಜಿ ಕಡಲೆಕಾಳನ್ನು ಪೂರೈಸಲು ಅವಕಾಶ ನೀಡಲಾಯಿತು. ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸೇರದ ಅಥವಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪಡಿತರ ಕಾರ್ಡ್ ಹೊಂದಿಲ್ಲದವರಿಗೂ ಇದನ್ನು ನೀಡಲಾಯಿತು. 1.66 ಕೋಟಿ ಫಲಾನುಭವಿ ಕುಟುಂಬಗಳಿಗೆ  1.66 ಲಕ್ಷ ಮೆಟ್ರಿಕ್ ಟನ್ ವಿತರಿಸಲಾಯಿತು.

III. ಉದ್ಯಮಸ್ನೇಹಿ ವಾತಾವರಣ

  • ಕೋವಿಡ್-19 ಸಮಯದಲ್ಲಿ ಗ್ರಾಹಕರ ಹಿತವನ್ನು ರಕ್ಷಿಸುವ ಉದ್ದೇದಿಂದ ಎರಡು ಹಂತಗಳಲ್ಲಿ ಆರು ತಿಂಗಳ ಅವಧಿಗೆ ಸಲಹೆ ಸೂಚನೆಗಳನ್ನು ವಿಸ್ತರಿಸಲಾಯಿತು ಮತ್ತು ತೂಕ ಹಾಗೂ ಅಳತೆ ಯಂತ್ರಗಳನ್ನು ಮೊಹರು ಮಾಡುವುದು ಮತ್ತು ತಪಾಸಣಾ ಅವಧಿಯನ್ನು ಹೆಚ್ಚಿಸಲಾಯಿತು.
  • ಕೋವಿಡ್-19 ಸ್ಥಿತಿಗತಿ ಹಿನ್ನೆಲೆಯಲ್ಲಿ ನಿಯಮದಲ್ಲಿ ಉಲ್ಲೇಖಿಸಲಾಗಿರುವ ಮಿತಿಯನ್ನು ಆಧರಿಸಿ ಎಲ್ಲ ಉತ್ಪಾದಕರು ಮತ್ತು ಪ್ಯಾಕರ್ ಗಳಿಗೆ 30.09.2020ರ ವರೆಗೆ ಮೊದಲೇ ಮುದ್ರಿಸಿದ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ವಸ್ತು ಮತ್ತು ಕವರ್ ಗಳನ್ನು ಬಳಸಲು ಅವಕಾಶ ನೀಡಲಾಯಿತು.
  • ಕೋವಿಡ್-19 ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಉದ್ಯಮದ ಸಂಕಷ್ಟಗಳನ್ನು ದೂರ ಮಾಡಲು ಬಿಐಎಸ್ ನಿಯಂತ್ರಣ, ಯೋಜನೆಗಳು ಮತ್ತು ಮಾರ್ಗಸೂಚಿಗಳು ಸೇರಿ ಹಲವು ವರ್ಗದಲ್ಲಿ ಬಿಐಎಸ್ ತಾತ್ಕಾಲಿಕ ವಿನಾಯಿತಿಗಳನ್ನು ನೀಡಿತು, ಇದರಿಂದ ಎಂಎಸ್ಎಂಇ ಉತ್ಪಾದನಾ ವಲಯದವರಿಗೆ ವಿನಾಯಿತಿ ಹಾಗೂ ಅರ್ಜಿ ಶುಲ್ಕಗಳ ಇಳಿಕೆ ಮೂಲಕ ಸುಮಾರು 54.38 ಕೋಟಿ ಬಿಐಎಸ್ ಪರವಾನಗಿದಾರರಿಗೆ ಅನುಕೂಲವಾಯಿತು.
  • ಆಭರಣದ ಅಂಗಡಿಗಳ ನೋಂದಣಿ ಮತ್ತು ನವೀಕರಣಕ್ಕೆ ಆನ್ ಲೈನ್ ವ್ಯವಸ್ಥೆ ಮಾಡಲಾಯಿತು ಮತ್ತು ಹಾಲ್ ಮಾರ್ಕ್ ಕೇಂದ್ರಗಳು ಮತ್ತು ಪ್ರಮಾಣೀಕರಣಕ್ಕಾಗಿ ಆನ್ ಲೈನ್ ವ್ಯವಸ್ಥೆಯನ್ನು ಆರಂಭಿಸಲಾಯಿತು.
  • ಇಸಿ ಕಾಯ್ದೆ ಅಡಿ ಪರವಾನಗಿಗಳ ನವೀಕರಣ – ಇಸಿ ಕಾಯ್ದೆ ಅಡಿಯಲ್ಲಿ ವಾರ್ಷಿಕ/ಕಾಲ ಕಾಲಕ್ಕೆ ಪರವಾನಗಿಗಳ ನವೀಕರಣ ಅಗತ್ಯತೆಯ ಕುರಿತ ಆತಂಕಗಳನ್ನು ನಿವಾರಿಸಲು ಮತ್ತು ಉದ್ಯಮಸ್ನೇಹಿ ವಾತಾವರಣ ಸುಧಾರಣೆಗೆ ಹಾಗೂ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಒತ್ತು ನೀಡುವ ಸಲುವಾಗಿ ಎಲ್ಲ ಆಡಳಿತ ಸಚಿವಾಲಯಗಳು/ಇಲಾಖೆಗಳು ಪರವಾನಗಿ ವಿತರಣೆ ಮಾಡಿದ ದಿನಾಂಕದಿಂದ ಕನಿಷ್ಠ 5 ವರ್ಷಗಳ ವರೆಗೆ ಅದು ಮಾನ್ಯತೆ ಹೊಂದಿರುವುದನ್ನು ಖಾತ್ರಿಪಡಿಸಲು ಅಗತ್ಯ ಆದೇಶಗಳನ್ನು ಹೊರಡಿಸುವಂತೆ ಸೂಚಿಸಲಾಯಿತು.  
  • ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ – ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ಪಡೆದ ನಂತರ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ 2020 ಅನ್ನು 2020ರ ಸೆಪ್ಟೆಂಬರ್ 27ರಂದು ಅಧಿಸೂಚನೆ ಹೊರಡಿಸಲಾಯಿತು. 65 ವರ್ಷಗಳ ಹಿಂದಿನ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಅದರಲ್ಲಿ ಸಿರಿ ಧಾನ್ಯಗಳು, ತೈಲ, ಬೇಳೆಗಳು, ಎಣ್ಣೆ ಬೀಜಗಳು, ಆಲೂಗಡ್ಡೆ ಮತ್ತು ಈರುಳ್ಳಿ ಇವುಗಳ ಮೇಲಿನ ನಿಯಂತ್ರಣಗಳನ್ನು ತೆಗೆದು ಹಾಕಲಾಯಿತು. ಇದು ದೂರದೃಷ್ಟಿಯ ಕ್ರಮವಾಗಿದ್ದು, ಇದರಿಂದಾಗಿ ರೈತರಿಗೆ ಆದಾಯ ಮತ್ತು ಬೆಳವಣಿಗೆಯ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಗುತ್ತಿಗೆ ಕೃಷಿ ಖರೀದಿದಾರರಿಗೆ ವಿನಾಯಿತಿ ಸಿಗಲಿದೆ. ಇಸಿ ಕಾಯ್ದೆ ಅಡಿ ಪರವಾನಗಿಗಳ ಮಾನ್ಯತಾ ಅವಧಿ ಹೆಚ್ಚಾಗಲಿದೆ. ಅಲ್ಲದೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೃಷಿ ವಲಯದಲ್ಲಿ ಪರಿವರ್ತನೆ ತರಲು ಸಹಾಯಕವಾಗುವುದಲ್ಲದೆ, ರೈತರಿಗೆ ಕೃಷಿ-ತೋಟಗಾರಿಕಾ ಉತ್ಪನ್ನಗಳ ಪೂರೈಕೆ ಸರಣಿಯಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಮೂಲಕ ರೈತರ ಬೆಳವಣಿಗೆಗೆ ಒತ್ತು ಸಿಗಲಿದೆ. ಭಾರತೀಯ ಮಾನಕ ಬ್ಯೂರೋ ಕೃಷಿ ಮತ್ತು ಆಹಾರ ಉತ್ಪನ್ನಗಳ ಮೇಲಿನ ನಿಯಂತ್ರಣ ತೆಗೆದು ಹಾಕಿರುವುದರಿಂದ ಪೂರೈಕೆ ಸರಣಿ ನಿರ್ವಹಣೆಯಲ್ಲಿ ಹೆಚ್ಚಿನ ಹೂಡಿಕೆಗೆ ಮತ್ತು ದಾಸ್ತಾನು ಮೂಲಸೌಕರ್ಯ ವೃದ್ಧಿಗೆ ಹಾಗೂ ಉಗ್ರಾಣಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವಂತೆ ಸೂಚಿಸಲಾಗಿದೆ.
  •  29.09.2016ರ ಆದೇಶವನ್ನು ತಿದ್ದುಪಡಿ ಮಾಡಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕೃಷಿ ಉತ್ಪನ್ನ ಮತ್ತು ಜಾನುವಾರು ಗುತ್ತಿಗೆ ಕೃಷಿ ಮತ್ತು ಸೇವಾ(ಉತ್ತೇಜನಾ ಮತ್ತು ನೆರವು) ಕಾಯ್ದೆ ಅಡಿಯಲ್ಲಿ ಕೃಷಿ ಖರೀದಿದಾರರಿಗೆ ವಿನಾಯಿತಿ ನೀಡಲು ಗುತ್ತಿಗೆ ಕೃಷಿ ಅಡಿ ಅವರು ದಾಸ್ತಾನು ಮಾಡಿಕೊಳ್ಳಲು ಇದ್ದ ಮಿತಿಯನ್ನು ವಿಸ್ತರಿಸಲಾಯಿತು. ಇದರಿಂದಾಗಿ ಕೃಷಿ ವಲಯದಲ್ಲಿ ಮತ್ತು ಕೃಷಿ ಸಂಸ್ಕರಣಾ ಉದ್ಯಮದಲ್ಲಿ ಹೂಡಿಕೆಗೆ ಉತ್ತೇಜನ ದೊರಕಿದ್ದಲ್ಲದೆ, ರೈತರ ಆದಾಯ ದುಪ್ಪಟ್ಟುಗೊಳಿಸುವ ಗುರಿ ಸಾಧನೆಗೆ ನೆರವಾಗಲಿದೆ.  
  1. ಬೆಲೆ ಸ್ಥಿರೀಕರಣ ನಿಧಿ (ಪಿಎಸ್ ಎಫ್ )
  • ಪಿಎಸ್ಎಫ್ ಅಡಿಯಲ್ಲಿ ಪರಿಣಾಮಕಾರಿ ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಸುಮಾರು 20 ಲಕ್ಷ ಮೆಟ್ರಿಕ್ ಟನ್ ವರೆಗೆ ಬೇಳೆಕಾಳುಗಳ ದಾಸ್ತಾನು ಮಿತಿಗೆ ಅನುಮೋದನೆ ನೀಡಲಾಯಿತು ಮತ್ತು ದಾಸ್ತಾನಿಗಾಗಿ ಎಂ ಎಸ್ ಪಿ ಅಡಿ ಬೇಳೆಗಳ ಖರೀದಿಯಿಂದ ಸುಮಾರು 8.5 ಲಕ್ಷ ರೈತರಿಗೆ ಪ್ರಯೋಜನವಾಯಿತು.   
  • ದಾಸ್ತಾನು ಮಾಡಲಾಗಿದ್ದ ಧಾನ್ಯಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮದಡಿ ಬಳಕೆ ಮಾಡಿಕೊಳ್ಳಲಾಯಿತು.
  • ದಾಸ್ತಾನು ಮಾಡಲಾಗಿದ್ದ ಬೇಳೆಗಳನ್ನು ಸೇನೆ ಮತ್ತು ಅರೆಮಿಲಿಟರಿ ಪಡೆಗಳ ಅಗತ್ಯತೆಗಳಿಗೆ ಬಳಸಿಕೊಳ್ಳಲಾಯಿತು. ಇದರಿಂದ ಗುಣಮಟ್ಟ ಮತ್ತು ನಿರಂತರವಾಗಿ ಸಕಾಲದಲ್ಲಿ ನಿಗದಿತ ಮಾರ್ಗದ ಮೂಲಕ ದಾಸ್ತಾನು ವಿಲೇವಾರಿ ಮಾಡಲಾಯಿತು.
  • ಬೇಳೆ ಕಾಳುಗಳ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಅವುಗಳ ಲಭ್ಯತೆಯನ್ನು ಹೆಚ್ಚಿಸಲು ಬೇಳೆಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
  • ಬೆಲೆ ಸ್ಥಿರೀಕರಣ ನಿಧಿಯಡಿ ಒಂದು ಲಕ್ಷ ಮೆಟ್ರಿಕ್ ಟನ್ ಈರುಳ್ಳಿಗಳನ್ನು ಖರೀದಿಸಿ ದಾಸ್ತಾನು ಮಾಡಲಾಯಿತು.
  • ಸಫಲ್, ಕೇಂದ್ರೀಯ ಭಂಡಾರ ಮತ್ತು ರಾಜ್ಯಗಳ ಸಂಸ್ಥೆಗಳ ಮೂಲಕ ಆ ಈರುಳ್ಳಿ ದಾಸ್ತಾನನ್ನು ಪೂರೈಕೆ ಮಾಡಿ, ಬೆಲೆ ಇಳಿಕೆಯಾಗುವಂತೆ ಮಾಡಲಾಯಿತು.
  1. ಭಾರತೀಯ ಮಾನಕ ಬ್ಯೂರೋ (ಬಿಐಎಸ್) –

ಸರ್ಕಾರದ ಆತ್ಮನಿರ್ಭರ ಭಾರತ ಮತ್ತು  ಪಾಲುದಾರರು, ಗ್ರಾಹಕರು ಮತ್ತು ಉದ್ಯಮ, ಪ್ರಯೋಗಾಲಯಗಳು ಮತ್ತಿತರರಿಗೆ ಸಹಕಾರಿಯಾಗುವಂತೆ ಉದ್ಯಮಸ್ನೇಹಿ ವಾತಾವರಣ ನಿರ್ಮಿಸುವ ಸಲುವಾಗಿ ಬಿಐಎಸ್ ಸಕ್ರಿಯವಾಗಿ ಎಲ್ಲಾ ಚಟುವಟಿಕೆಗಳಿಗೆ ಸ್ವಯಂಚಾಲಿತವಾಗಿ ಮುಂದುವರಿಸಲು ಸಾಫ್ಟ್ ವೇರ್ ಅಪ್ಲಿಕೇಷನ್/ಆನ್ ಲೈನ್ ಪೋರ್ಟಲ್ ಅನುಷ್ಠಾನಕ್ಕೆ ಇ-ಬಿಐಎಸ್ ಯೋಜನೆ ಅಡಿ (www.manakonline.in) ಜಾರಿಗೊಳಿಸಿತು. ಇ-ಬಿಐಎಸ್ ನ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲಿದೆ ಮತ್ತು ಡಾಟಾ ಅನಾಲಿಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ಪರಿಣಾಮಕಾರಿ ನಿರ್ವಹಣೆಗೆ ಎಂಐಎಸ್ ಬಳಕೆ, ಬಳಕೆದಾರರ ಸ್ನೇಹಿ ಕ್ರಮಗಳು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಯಿತು.

  • ಮಾನದಂಡ ನಿಗದಿ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ನಿರ್ದಿಷ್ಟ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಯಿತು. ಈ ಪೋರ್ಟಲ್ ನಲ್ಲಿ ಮಾನದಂಡಗಳು ಲಭ್ಯವಾಗಲಿದ್ದು, ಅದನ್ನು ಪಾಲುದಾರರು ಮುಕ್ತವಾಗಿ ಪಡೆಯಬಹುದಾಗಿದೆ.
  • ಮಾನದಂಡ ಮತ್ತು ಗುಣಮಟ್ಟದ ಮಾನದಂಡಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಬಿಐಎಸ್, ಐಐಟಿಗಳ ನೆರವಿನಿಂದ ತಾಂತ್ರಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಮಾನದಂಡಗಳನ್ನು ಸೇರಿಸಲು ಕ್ರಮಗಳನ್ನು ಕೈಗೊಂಡಿದೆ.
  • ಗುಣಮಟ್ಟ ನಿಯಂತ್ರಣ ಆದೇಶಗಳು ಅಥವಾ ತಾಂತ್ರಿಕ ನಿರ್ಬಂಧಗಳನ್ನು ಗುಣಮಟ್ಟ ಕಾಯ್ದುಕೊಳ್ಳಲು ಕಡ್ಡಾಯ ಅಗತ್ಯತೆಗಳನ್ನಾಗಿ ಅಥವಾ ಅಗತ್ಯ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ. ಸದ್ಯ 270 ಭಾರತೀಯ ಮಾನದಂಡಗಳ ವ್ಯಾಪ್ತಿಯಲ್ಲಿ 263 ಉತ್ಪನ್ನಗಳು ಇದ್ದು, ಅವುಗಳಿಗೆ ಮಾನದಂಡ ಪ್ರಮಾಣೀಕರಣ(ಐಎಸ್ಐ ಮಾರ್ಕ್)ಅನ್ನು ಬಿಐಎಸ್ ಅಡಿ ಹಲವು ಸಚಿವಾಲಯಗಳು/ಇಲಾಖೆಗಳಿಂದ ನೀಡಲಾಗಿದೆ.  
  • 61 ಮಾಹಿತಿ ತಂತ್ರಜ್ಞಾನ ಮತ್ತು ಸೌರ ಉತ್ಪನ್ನಗಳು 29 ಭಾರತೀಯ ಮಾನದಂಡಗಳಿಗೆ ಒಳಪಟ್ಟಿದ್ದು, ಅವುಗಳಿಗೆ ಬಿಐಎಸ್ ನ ಕಡ್ಡಾಯ ನೋಂದಣಿ ಯೋಜನೆ ಅಡಿಯಲ್ಲಿ ಎಂಇಐಟಿವೈ ಮತ್ತು ಎಂಎನ್ಆರ್ ಇ ಯಿಂದ ಕ್ಯೂಸಿಒಗಳನ್ನು ನೀಡಲಾಗಿದೆ.
  • ಚಿನ್ನದ ಹಾಲ್ ಮಾರ್ಕ್ ಮತ್ತು ಚಿನ್ನದ ಆರ್ಟ್ ಫ್ಯಾಕ್ಟ್ಸ್ ಆದೇಶ 2020 ಅಡಿಯಲ್ಲಿ ಗುಣಮಟ್ಟ ನಿಯಂತ್ರಣ ಆದೇಶ ಅನುಸಾರ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸಲಾಗಿದ್ದು, ಅವುಗಳಡಿ ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕಿಂಗ್ ಕುರಿತಂತೆ ಅಧಿಸೂಚನೆ ಹೊರಡಿಸಲಾಗಿದೆ ಮತ್ತು ದೇಶದಲ್ಲಿ ಆರ್ಟಿ ಫ್ಯಾಕ್ಟ್ಸ್ ಅನ್ನು ಕಡ್ಡಾಯಗೊಳಿಸಲಾಗಿದ್ದು, ಅವು 2021ರ ಜುಲೈ 1 ರಿಂದ ಜಾರಿಗೆ ಬರಲಿದೆ.
  1. ಮಾಧ್ಯಮ ಚಟುವಟಿಕೆಗಳು
  • ಈ ವರ್ಷ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಮುದ್ರಣ ಮಾಧ್ಯಮದಲ್ಲಿ ಮಹತ್ವದ ಜಂಟಿ ಅಭಿಯಾನಗಳನ್ನು ಕೈಗೊಳ್ಳಲಾಯಿತು. ಮೊಬೈಲ್ ಟವರ್ ಗಳನ್ನು ಅಳವಡಿಸುವ ಕುರಿತಂತೆ ನಡೆಯುವ ವಂಚನೆಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಾನಾ ಬಗೆಯ ನಾಣ್ಯಗಳನ್ನು ಸ್ವೀಕರಿಸುವ ಕುರಿತಂತೆ ಭಾರತದಾದ್ಯಂತ ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಚಾರ ಕೈಗೊಳ್ಳಲಾಯಿತು.
  • ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುದ್ರಣ ಮಾಧ್ಯಮದ ಮೂಲಕ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಯಿತು. ಕೋವಿಡ್-19 ನಿರ್ವಹಣೆ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ಕುಂದುಕೊರತೆಗಳ ಪರಿಹಾರ ಕಾರ್ಯತಂತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಉತ್ಪಾದಕರು ಮತ್ತು ರಿಟೇಲ್ ಮಾರಾಟಗಾರರಿಗೆ ಅಗತ್ಯ ಸೂಚನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಯಿತು ಮತ್ತು ಕೋವಿಡ್-19 ನಿರ್ವಹಣೆ ವೇಳೆ ಅಗತ್ಯ ವಸ್ತುಗಳ ಪೂರೈಕೆ ನಿರ್ವಹಣೆ ಖಾತ್ರಿಗೆ ನೆರವು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಯಿತು.
  • ಇಲಾಖೆ, ಪಿಎಂಜಿಕೆಎವೈ ಕುರಿತಂತೆ ವಿಡಿಯೋ ಚಿತ್ರೀಕರಣವನ್ನು ಮಾಡಿ ಅದನ್ನು ಪಂಚಾಯಿತಿಗಳಿಗೆ ವಿತರಿಸಿ ಅಲ್ಲಿ ಎನ್ಎಫ್ಎಸ್ ಎ ಫಲಾನುಭವಿಗಳಿಗೆ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ಪ್ರಚಾರಕಾರ್ಯ ಕೈಗೊಳ್ಳಲಾಯಿತು. ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯಿತಿಗಳ ನೆರವಿನಿಂದ ಸ್ಥಳೀಯ ಭಾಷೆಗಳಲ್ಲಿ ವಿಡಿಯೋ ಚಿತ್ರಗಳನ್ನು ಪ್ರದರ್ಶಿಸಲಾಯಿತು.
  • ಪೋಸ್ಟರ್, ಆಡಿಯೋ ದೃಶ್ಯಾವಳಿಗಳು ವಿಡಿಯೋ ಚಿತ್ರಗಳ ಮೂಲಕ ಗ್ರಾಹಕರ ಹಿತರಕ್ಷಣಾ ಕಾಯ್ದೆ 2019 ಕುರಿತಂತೆ ವಿಶೇಷ ಜಾಗೃತಿ ಆಂದೋಲನ ಕೈಗೊಳ್ಳಲಾಯಿತು ಮತ್ತು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಹೇಗೆ ದೂರುಗಳನ್ನು ಸಲ್ಲಿಸಬೇಕು ಎಂಬುದರ ಕುರಿತು   ಪಂಚಾಯತ್ ರಾಜ್ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಅಂಚೆ ಕಚೇರಿಗಳು ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಗೋಡೆಗಳ ಮೇಲೆ ಜಾಗೃತಿ ಸಂದೇಶವನ್ನು ಬಿತ್ತರಿಸಲಾಯಿತು.
  1. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ
  • ನಾನಾ ಇಂಜಿನಿಯರಿಂಗ್ ಉತ್ಪನ್ನಗಳ ಪರೀಕ್ಷೆ, ಮೌಲ್ಯಮಾಪನ ಮತ್ತು ಗುಣಮಟ್ಟ ನಿಯಂತ್ರಣ ವಲಯದಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಪರೀಕ್ಷಾ ಕೇಂದ್ರ ಮತ್ತು ಉನ್ನತ ತಂತ್ರಜ್ಞಾನದ ಸಿದ್ಧ ಉತ್ಪನ್ನಗಳ ಪರೀಕ್ಷಾ ಸೌಲಭ್ಯಗಳನ್ನು ಪ್ರಾದೇಶಿಕ ಕಚೇರಿಗಳಲ್ಲಿ ಒದಗಿಸಲಾಯಿತು. ಅಲ್ಲದೆ ಅವುಗಳು ಪವರ್ ಕ್ವಾಲಿಟಿ ಅನಲೈಸರ್, ಸಿಮೆಂಟ್ ಆಟೋ ಕ್ಲೇವ್, ಥರ್ಮಲ್ ಎಂಡುರೆನ್ಸ್ ಚೇಂಬರ್, ಡಿಸಿ ಹೈ ವೋಲ್ಟೇಜ್ ಇನ್ಸುಲೇಷನ್ ಟೆಸ್ಟರ್ ಮತ್ತಿತರ ಹೊಸ ಸಾಧನಗಳನ್ನು ಖರೀದಿಸಲಾಗಿದೆ.

***



(Release ID: 1682630) Visitor Counter : 1197