ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಪರಿಷ್ಕೃತ ಸಿಬಿಐ ಅಪರಾಧ ಕೈಪಿಡಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

प्रविष्टि तिथि: 21 DEC 2020 6:49PM by PIB Bengaluru

ಕೇಂದ್ರ ಈಶಾನ್ಯ ವಲಯ ಅಭಿವೃದ್ಧಿ (ಸ್ವ/ನಿ) (ಡಿ..ಎನ್..ಆರ್), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇಂದು ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪರಿಷ್ಕೃತ ಸಿಬಿಐ ಅಪರಾಧ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ರಿಷಿ ಕುಮಾರ್ ಶುಕ್ಲಾ ಮತ್ತು ಸಿಬಿಐನ ಹಿರಿಯ ಅಧಿಕಾರಿಗಳು ಮತ್ತತರರು ಭಾಗವಹಿಸಿದ್ದರು.

ಹದಿನೈದು ವರ್ಷಗಳ ಬಳಿಕ ಕಾನೂನು, ತನಿಖೆ ತಾಂತ್ರಿಕತೆಗಳು ಮತ್ತು ಪ್ರಕ್ರಿಯೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನವೀಕೃತ ಸಿಬಿಐ ಅಪರಾಧ ಕೈಪಿಡಿ ಹೊರತಂದಿದ್ದಕ್ಕಾಗಿ ಡಾ. ಜಿತೇಂದ್ರ ಸಿಂಗ್ ಸಿಬಿಐಗೆ ಅಭಿನಂದನೆ ಸಲ್ಲಿಸಿದರು.

  

<><><>


(रिलीज़ आईडी: 1682627) आगंतुक पटल : 264
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Punjabi , Telugu