ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಹೊಸ ಉತ್ಪನ್ನ ಬಿಡುಗಡೆಯಿಂದ ಟ್ರೈಬ್ಸ್‌ ಇಂಡಿಯಾ ವಿಸ್ತರಣೆ

Posted On: 16 DEC 2020 3:26PM by PIB Bengaluru

ಟ್ರೈಬ್ಸ್‌ ಇಂಡಿಯಾ ತಾಜಾ ಅರಣ್ಯ ಮತ್ತು ಸಾವಯವ ಉತ್ಪನ್ನಗಳನ್ನು ಇನ್ನಷ್ಟು ಹೊಸದಾಗಿ ಪರಿಚಯಿಸುವ ಮೂಲಕ ತಮ್ಮ ವಲಯವನ್ನು ವಿಸ್ತರಿಸಿಕೊಂಡಿದ್ದು, ಹಲವು ಆಕರ್ಷಕ ಉತ್ಪನ್ನಗಳನ್ನು ಹೊಂದಿದೆ ಮತ್ತು ದೊಡ್ಡ ಮಾರುಕಟ್ಟೆಗಳಲ್ಲೂ ಸಹ ಲಕ್ಷಾಂತರ ಬುಡಕಟ್ಟು ಉದ್ದಿಮೆದಾರರಿಗೆ ಅವಕಾಶ ಒದಗಿಸಿಕೊಟ್ಟಿದೆ. ವಾರ 20ಕ್ಕೂ ಅಧಿಕ ಪರಿಣಾಮಕಾರಿ, ರೋಗ ನಿರೋಧಕ ಉತ್ಪನ್ನಗಳು ಭಾರತೀಯ ಬುಡಕಟ್ಟು ವಾಸಿಗಳ ಉತ್ಪನ್ನಗಳ ವಿಭಾಗಕ್ಕೆ ಸೇರ್ಪಡೆಯಾಗಿದೆ. ಬಹುತೇಕ ಹೊಸ ಉತ್ಪನ್ನಗಳು (ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು, ತಾಜಾ ಅರಣ್ಯ ಮತ್ತು ಸಾವಯವ ಉತ್ಪನ್ನಗಳು, ಬುಡಕಟ್ಟು ವಾಸಿಗಳ ಕರಕುಶಲ ಕಲೆ ಉತ್ಪನ್ನಗಳು) ಈಗಾಗಲೇ ಕಳೆದ ಎರಡು ತಿಂಗಳಿನಿಂದೀಚೆಗೆ ಭಾರತೀಯ ಬುಡಕಟ್ಟು ವಾಸಿಗಳ ಉತ್ಪನ್ನಗಳ ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿವೆ. ಕಳೆದ ಕೆಲವು ವಾರಗಳಿಂದೀಚೆಗೆ ಪರಿಚಯಿಸಲಾದ ಎಲ್ಲ ಹೊಸ ಉತ್ಪನ್ನಗಳೂ ಸಹ 125 ಭಾರತೀಯ ಬುಡಕಟ್ಟು ಮಳಿಗೆಗಳಲ್ಲಿ, ಭಾರತೀಯ ಬುಡಕಟ್ಟು ಸಂಚಾರಿ ವಾಹನಗಳಲ್ಲಿ ಮತ್ತು ಭಾರತೀಯ ಬುಡಕಟ್ಟು -ಮಾರುಕಟ್ಟೆ ತಾಣ(tribesindia.com) ಮತ್ತು -ಜಾಲ ಮತ್ತಿತರ ಆನ್ ಲೈನ್ ವೇದಿಕೆಗಳಲ್ಲೂ ಕೂಡ ದೊರಕಲಿವೆ.

ನಿನ್ನೆ ಬಿಡುಗಡೆ ಮಾಡಲಾದ ಉತ್ಪನ್ನಗಳಲ್ಲಿ ತಮಿಳುನಾಡಿನ ಕುರುಂಬಾಸ್ ಮತ್ತು ಇರುಳ ಬುಡಕಟ್ಟು ವಾಸಿಗಳ 10 ಉತ್ಪನ್ನಗಳು ಸೇರಿವೆ. ಇವುಗಳಲ್ಲಿ ಮೂರು ಸಾವಯವ ಉತ್ಪನ್ನಗಳಾದ ಸಿಗೆಕಾಯಿಪುಡಿ, ಕೆಂಪು ಅಕ್ಕಿ, ಸಾಂಬಾರ ಪದಾರ್ಥಗಳು ಅಂದರೆ ಜಾಯಿಕಾಯಿ, ಜಾಯಿಕಾಯಿ ಉಪ್ಪಿನಕಾಯಿ ಮತ್ತು ಎರಡು ಬಗೆಯ ಭತ್ತ(ಪೋಹಾ/ಫ್ಲಾಟೆಂಡ್ ರೈಸ್) ಹತ್ತು ಆಕರ್ಷಕ ದೋಕ್ರಾ ಲೋಹ ಉತ್ಪನ್ನಗಳು, ಮಧ್ಯಪ್ರದೇಶದ ಗೋಂಡ್ ಮತ್ತು ಕೊರ್ಕು ಬುಡಕಟ್ಟು ವಾಸಿಗಳ ಕರಕುಶಲ ಕಲೆಯ ಆಕರ್ಷಕ ಉತ್ಪನ್ನಗಳು ಭಾರತೀಯ ಬುಡಕಟ್ಟು ವಾಸಿಗಳ ಉತ್ಪನ್ನಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಸುಂದರವಾಗಿ ಕೆತ್ತಿರುವ ಲೋಹದ ತುಂಡುಗಳು, ಬೆಲೆ ಕೈಗೆಟಕುವಂತಿದ್ದು, ಎರಡೂ ಉತ್ಪನ್ನಗಳು ಅಲಂಕಾರಿಕ ವಸ್ತುಗಳನ್ನಾಗಿ ಹಾಗೂ ಬಳಕೆ ವಸ್ತುಗಳನ್ನಾಗಿ ಬಳಸಬಹುದಾಗಿದೆ. ಇವುಗಳಲ್ಲಿ ನಂದಿ, ಜಿಂಕೆ, ಕಾರ್ಡ್ ಗಳನ್ನಿಡಲು, ನ್ಯಾಪ್ ಕಿನ್ ಹೋಲ್ಡರ್ ಮತ್ತು ಪೆನ್ ಸ್ಟ್ಯಾಂಡ್ ಆಗಿ ಬಳಸಬಹುದು.

ಸಂದರ್ಭದಲ್ಲಿ ಮಾತನಾಡಿದ ಟ್ರೈಫೆಡ್ ಮಹಾ ನಿರ್ದೇಶಕ ಶ್ರೀ ಪ್ರವೀರ್ ಕೃಷ್ಣ, “ ಭಾರತದಾದ್ಯಂತ ಎಲ್ಲ ಆದಿವಾಸಿಗಳ ಹೊಸ ಬಗೆಯ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದರಿಂದ ಹಲವು ಬುಡಕಟ್ಟು ಜನರಿಗೆ ದೊಡ್ಡ ಮಾರುಕಟ್ಟೆಗಳು ಲಭ್ಯವಾಗುತ್ತವೆ. ನಮ್ಮ ಉದ್ದೇಶ ಬುಡಕಟ್ಟು ವಾಸಿಗಳ ಜೀವನದ ಮೇಲೆ ಪರಿಣಾಮವಾಗುವಂತೆ ಮಾಡುವುದು ಹಾಗೂ ಅವರ ಜೀವನೋಪಾಯ ಸುಧಾರಿಸುವುದಾಗಿದೆ. ಗೋ ವೋಕಲ್, ಫಾರ್ ಲೋಕಲ್, ಗೋ ಟ್ರೈಬಲ್ ಇದು ಟ್ರೈಫೆಡ್ ಮಂತ್ರವಾಗಿದ್ದು, ಅದರ ಮೂಲಕ ಬುಡಕಟ್ಟು ಜನರ ಸಬಲೀಕರಣ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’’ ಎಂದರು.

 

ಇತ್ತೀಚೆಗಷ್ಟೇ ಟ್ರೈಬ್ಸ್ ಇಂಡಿಯಾ -ಮಾರುಕಟ್ಟೆ ತಾಣವನ್ನು ಆರಂಭಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಕರಕುಶಲ ಮತ್ತು ಸಾವಯವ ಉತ್ಪನ್ನಗಳ ಮಾರುಕಟ್ಟೆ ತಾಣವಾಗಿದ್ದು, ಇದರ ಮೂಲಕ 5 ಲಕ್ಷ ಬುಡಕಟ್ಟು ಉದ್ದಿಮೆದಾರರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಂಪರ್ಕಿಸುವಂತೆ ಮಾಡುವ ಗುರಿ ಹೊಂದಲಾಗಿದೆ. ಜೊತೆಗೆ ಅವರು ದೇಶಾದ್ಯಂತ ಗ್ರಾಹಕರಿಗೆ ಬುಡಕಟ್ಟು ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಲಭ್ಯವಾಗುವಂತೆ ಮಾಡುವ ಉದ್ದೇಶವಿದೆ.

ಹಲವು ಬಗೆಯ ನೈಸರ್ಗಿಕ ಮತ್ತು ಸುಸ್ಥಿರ ಉತ್ಪನ್ನಗಳಿಂದಾಗಿ ಟ್ರೈಬ್ಸ್ ಇಂಡಿಯಾ -ಮಾರುಕಟ್ಟೆ ತಾಣದ ಮೂಲಕ ನಮ್ಮ ಬುಡಕಟ್ಟು ಸಹೋದರರ ಶತಮಾನಗಳಷ್ಟು ಹಳೆಯದಾದ ಪರಂಪರೆಯತ್ತ ನೋಟವನ್ನು ಹರಿಸೋಣ. ನೀವು ಕೂಡ market.tribesindia.com ಇಲ್ಲಿ ಪರಿಶೀಲಿಸಬಹುದು. ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ, ಬುಡಕಟ್ಟು ಉತ್ಪನ್ನಗಳನ್ನೇ ಖರೀದಿಸಿ(ಬೈ ಲೋಕಲ್ ಬೈ ಟ್ರೈಬಲ್)

A picture containing text, indoorDescription automatically generated

***


(Release ID: 1681124) Visitor Counter : 214