ನೀತಿ ಆಯೋಗ

ನೀತಿ ಆಯೋಗದ ‘ಮುನ್ನೋಟ 2035: ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಕಣ್ಣಾವಲು’ ಬಿಡುಗಡೆ

Posted On: 14 DEC 2020 1:28PM by PIB Bengaluru

ನೀತಿ ಆಯೋಗ ಇಂದು ಮುನ್ನೋಟ 2035: ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಕಣ್ಗಾವಲು ಶ್ವೇತಪತ್ರವನ್ನು ಹೊರಡಿಸಿದೆ. ಈ ಕೆಳಕಂಡ ದೃಷ್ಟಿಕೋನವನ್ನು ಹೊಂದಿದೆ:

  • ಭಾರತದ ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆಯನ್ನು ಹೆಚ್ಚು ಸ್ಪಂದನಾತ್ಮಕ, ಊಹಾತ್ಮಕ ಮತ್ತು ಎಲ್ಲಾ ಹಂತಗಳಲ್ಲಿನ ಕ್ರಮಕ್ಕೆ ಸನ್ನದ್ಧತೆ ಹೆಚ್ಚಿಸಲು.
  • ನಾಗರಿಕ-ಸ್ನೇಹಿ ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆಯು ವೈಯಕ್ತಿಕ ಖಾಸಗಿತನ ಮತ್ತು ಗೌಪ್ಯತೆಯ ಖಚಿತತೆ, ಗ್ರಾಹಕರ ಪ್ರತಿಕ್ರಿಯೆ ಕಾರ್ಯವಿಧಾನ ಸಕ್ರಿಯಗೊಳಿಸುವಿಕೆ.
  • ರೋಗ ಪತ್ತೆ, ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸುಧಾರಿತ ದತ್ತಾಂಶ-ಹಂಚಿಕೆ ಕಾರ್ಯವಿಧಾನಕ್ಕಾಗಿ.
  • ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ರೂಪಿಸುವ ಘಟನೆಗಳನ್ನು ನಿರ್ವಹಿಸಲು ಪ್ರಾದೇಶಿಕ ಮತ್ತು ಜಾಗತಿಕ ನಾಯಕತ್ವವನ್ನು ನೀಡುವ ಗುರಿಯನ್ನು ಭಾರತವು ಹೊಂದಿದೆ.

ನೀತಿ ಆಯೋಗದ ಉಪಾಧ್ಯಕ್ಷ, ಡಾ. ರಾಜೀವ್ ಕುಮಾರ್; ಸದಸ್ಯ (ಆರೋಗ್ಯ) ಡಾ. ವಿನೋದ್ ಕೆ ಪಾಲ್; ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಅಮಿತಾಬ್ ಕಾಂತ್; ಮತ್ತು ಹೆಚ್ಚುವರಿ ಕಾರ್ಯದರ್ಶಿ, ಡಾ. ರಾಕೇಶ್ ಸರ್ವಾಲ್ ಈ ಶ್ವೇತ ಪತ್ರವನ್ನು ಬಿಡುಗಡೆ ಮಾಡಿದರು.

‘ಮುನ್ನೋಟ 2035: ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಕಣ್ಗಾವಲು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಕಾರ್ಯದ ಮುಂದುವರಿಕೆಯಾಗಿದೆ. ವೈಯಕ್ತಿಕ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳನ್ನು ಕಣ್ಗಾವಲು ಆಧಾರವಾಗಿಸುವ ಮೂಲಕ ಕಣ್ಗಾವಲಿನ ಮುಖ್ಯವಾಹಿನಿಗೆ ಸೂಚಿಸಲು ಇದು ಕೊಡುಗೆ ನೀಡುತ್ತದೆ. ಸಾರ್ವಜನಿಕ ಆರೋಗ್ಯ ಕಣ್ಗಾವಲು (ಪಿಎಚ್‌.ಎಸ್) ಒಂದು ಪ್ರಮುಖ ಕಾರ್ಯವಾಗಿದ್ದು ಅದು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಆರೈಕೆಯನ್ನು ಕಡಿತಗೊಳಿಸುತ್ತದೆ. ಕಣ್ಗಾವಲು ಎಂದರೆ ‘ಕ್ರಮಕ್ಕಾಗಿ ಮಾಹಿತಿ’ಯಾಗಿದೆ.

ಕೋವಿಡ್ 19 ಸಾಂಕ್ರಾಮಿಕವು ಮಾನವ-ಪ್ರಾಣಿ-ಪರಿಸರದ ನಡುವಿನ ಹೆಚ್ಚಿದ ಪರಸ್ಪರ ಕ್ರಿಯೆಯಿಂದಾಗಿ (ಮರು) ಹೊರಹೊಮ್ಮುವ ರೋಗಗಳನ್ನು ಮರುಪರಿಶೀಲಿಸುವ ಅವಕಾಶವನ್ನು ನಮಗೆ ಒದಗಿಸಿದೆ. ಪ್ರಸರಣಗಳ ಸರಪಳಿಯನ್ನು ತುಂಡರಿಸಲು ಮತ್ತು ಸಂಕಲ್ಪಿತ ಕಣ್ಗಾವಲು ವ್ಯವಸ್ಥೆಯನ್ನು ರಚಿಸಲು ಈ ಮಧ್ಯಸ್ಥಿಕೆಯ ಆರಂಭಿಕ ಗುರುತಿಸುವಿಕೆ ಅವಶ್ಯಕವಾಗಿದೆ. ಈ ಮುನ್ನೋಟದ ದಸ್ತಾವೇಜು ಆ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ, ಇದು ಮುನ್ನೋಟವನ್ನು ನಿರೂಪಿಸುತ್ತದೆ ಮತ್ತು ನಿರ್ಮಾಣದ ಪ್ರಕ್ರಿಯೆಯನ್ನು ಎತ್ತಿ ತೋರಿಸುತ್ತದೆ. ಇದು ನಾಗರಿಕ-ಸ್ನೇಹಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರೂಪಿಸುತ್ತದೆ, ಇದು ವ್ಯಕ್ತಿಯ ಖಾಸಗಿತನ ಮತ್ತು ಗೌಪ್ಯತೆಯನ್ನು ಕಾಪಾಡುವಾಗ ಎಲ್ಲಾ ಹಂತಗಳಲ್ಲಿ ಅದು ವ್ಯಕ್ತಿ, ಸಮುದಾಯ, ಆರೋಗ್ಯ ಸೌಲಭ್ಯಗಳು ಅಥವಾ ಪ್ರಯೋಗಾಲಯಗಳೇ ಆಗಿರಲಿ ಆ ಎಲ್ಲ ಬಾಧ್ಯಸ್ಥರನ್ನು ಒಳಗೊಂಡಿರುತ್ತದೆ.’

ಈ ಶ್ವೇತಪತ್ರವು ಮೂರು ಹಂತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಆಯುಷ್ಮಾನ್ ಭಾರತದಲ್ಲಿ ಏಕೀಕರಿಸುವ ಮೂಲಕ ಸಾರ್ವಜನಿಕ ಆರೋಗ್ಯ ಕಣ್ಗಾವಲಿಗಾಗಿ ಭಾರತದ ಮುನ್ನೋಟ 2035ನ್ನು ಒದಗಿಸುತ್ತದೆ. ವಿಸ್ತರಿತ ರೆಫರಲ್ ನೆಟ್‌ ವರ್ಕ್‌ಗಳು ಮತ್ತು ವರ್ಧಿತ ಪ್ರಯೋಗಾಲಯ ಸಾಮರ್ಥ್ಯದ ಅಗತ್ಯವನ್ನು ಇದು ವಿವರಿಸುತ್ತದೆ. ಈ ಮುನ್ನೋಟದ ನಿರ್ಮಾಣ ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಅವಲಂಬಿತ ಸಂಯುಕ್ತ ಆಡಳಿತ ವ್ಯವಸ್ಥೆಯಾಗಿದ್ದು, ಹೊಸ ವಿಶ್ಲೇಷಣೆ, ಆರೋಗ್ಯ ಮಾಹಿತಿ ಮತ್ತು ದತ್ತಾಂಶ ವಿಜ್ಞಾನದ ಬಳಕೆಯನ್ನು ಒಳಗೊಂಡಿರುವ ಹೊಸ ದತ್ತಾಂಶ ಹಂಚಿಕೆ ಕಾರ್ಯವಿಧಾನವು ‘ಕ್ರಮಕ್ಕಾಗಿ ಮಾಹಿತಿಯನ್ನು’ ಪ್ರಸಾರ ಮಾಡುವ ನವೀನ ಮಾರ್ಗಗಳನ್ನು ಒಳಗೊಂಡಿದೆ. ಇಂದು ಹೊರಡಿಸಲಾದ ಶ್ವೇತಪತ್ರ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಕಣ್ಗಾವಲನ್ನು ಹೆಚ್ಚಿಸಲು ಮತ್ತು ಭಾರತವನ್ನು ಈ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ರೂಪಿಸಲು ಮುನ್ನೋಟದ ದಾಖಲೆಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ.

ಪೂರ್ಣ ದಸ್ತಾವೇಜಿಗೆ ಇಲ್ಲಿ ಕ್ಲಿಕ್ ಮಾಡಿ: https://niti.gov.in/sites/default/files/2020-12/PHS_13_dec_web.pdf

***



(Release ID: 1680548) Visitor Counter : 380