ಸಂಪುಟ
ಪರವಾನಗಿ ಶುಲ್ಕವಿಲ್ಲದೆ ಸಾರ್ವಜನಿಕ ದತ್ತಾಂಶ ಕಚೇರಿಗಳ ಮೂಲಕ ಸಾರ್ವಜನಿಕ ವೈ-ಫೈ ಸೇವೆಗೆ ಸಾರ್ವಜನಿಕ ದತ್ತಾಂಶ ಕಚೇರಿಗಳನ್ನು ಒಟ್ಟುಗೂಡಿಸುವವರಿಂದ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸಂಪುಟದ ಅನುಮೋದನೆ
Posted On:
09 DEC 2020 3:47PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಸಾರ್ವಜನಿಕ ದತ್ತಾಂಶ ಕಚೇರಿಗಳ (ಪಿಡಿಒ) ಮೂಲಕ ಸಾರ್ವಜನಿಕ ವೈ-ಫೈ ಸೇವೆಯನ್ನು ಒದಗಿಸಲು ಸಾರ್ವಜನಿಕ ದತ್ತಾಂಶ ಕಚೇರಿ ಒಟ್ಟುಗೂಡಿಸುವವರು (ಪಿಡಿಒಎ) ದೇಶದ ಉದ್ದಗಲಗಳಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳ ಪ್ರಸರಣವನ್ನು ವೇಗಗೊಳಿಸುವ ಉದ್ದೇಶಕ್ಕಾಗಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿತು. ಈ ಸಾರ್ವಜನಿಕ ವೈ-ಫೈ ಜಾಲಗಳ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಒದಗಿಸಲು ಯಾವುದೇ ಪರವಾನಗಿ ಶುಲ್ಕವಿರುವುದಿಲ್ಲ.
ಈ ಪ್ರಸ್ತಾವನೆಯು ದೇಶದಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಹಾಗು ಅದಕ್ಕೆ ಪ್ರತಿಯಾಗಿ, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ನ ಪ್ರಸರಣ, ಆದಾಯ ಮತ್ತು ಉದ್ಯೋಗ ಹೆಚ್ಚಳ ಮತ್ತು ಜನರ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ.
ಪ್ರಮುಖ ಅಂಶಗಳು:
ಈ ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಇಂಟರ್ಫೇಸ್ ಅನ್ನು ಪಿ.ಎಮ್.-ಡಬ್ಳ್ಯೂ ಎ ಎನ್ ಐ( PM-WANI) ಎಂದು ಕರೆಯಲಾಗುತ್ತದೆ. ಪಿಎಂ-ವಾಣಿ ಪರಿಸರ ವ್ಯವಸ್ಥೆಯನ್ನು ಇಲ್ಲಿ ವಿವರಿಸಿದಂತೆ ವಿವಿಧ ವಿಭಾಗಗಳು ನಿರ್ವಹಿಸುತ್ತವೆ:
- ಪಬ್ಲಿಕ್ ಡಾಟಾ ಆಫೀಸ್ (ಪಿಡಿಒ): ಇದು ವಾಣಿಗೆ ಹೊಂದುವಂತ ವೈ-ಫೈ ಕೇಂದ್ರಗಳನ್ನು ಸ್ಥಾಪಿಸುತ್ತದೆ, ನಿರ್ವಹಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಮತ್ತು ಚಂದಾದಾರರಿಗೆ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತದೆ.
- ಪಬ್ಲಿಕ್ ಡಾಟಾ ಆಫೀಸ್ ಅಗ್ರಿಗೇಟರ್ (ಪಿಡಿಒಎ): ಇದು ಪಿಡಿಒಗಳ ಒಟ್ಟುಗೂಡಿಸುವಿಕೆಯಾಗಿರುತ್ತದೆ ಮತ್ತು ಅಧಿಕಾರ ಮತ್ತು ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತದೆ.
- ಅಪ್ಲಿಕೇಶನ್ ಒದಗಿಸುವವರು: ಇದು ಬಳಕೆದಾರರನ್ನು ನೋಂದಾಯಿಸಲು ಮತ್ತು ಹತ್ತಿರದ ಪ್ರದೇಶದಲ್ಲಿ ವಾಣಿಗೆ ಹೊಂದುವಂತ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಕಂಡುಹಿಡಿಯಲು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಇಂಟರ್ನೆಟ್ ಸೇವೆಯನ್ನು ಲಭ್ಯತೆಯನ್ನು ಅಪ್ಲಿಕೇಶನ್‌ನಲ್ಲಿಯೇ ತೋರಿಸುತ್ತದೆ.
- ಕೇಂದ್ರ ನೋಂದಾವಣೆ ಕೆಂದ್ರ: ಇದು ಅಪ್ಲಿಕೇಶನ್ ಪೂರೈಕೆದಾರರು, ಪಿಡಿಒಎಗಳು ಮತ್ತು ಪಿಡಿಒಗಳ ವಿವರಗಳನ್ನು ನಿರ್ವಹಿಸುತ್ತದೆ. ಪ್ರಾರಂಭದಲ್ಲಿ, ಸೆಂಟ್ರಲ್ ರಿಜಿಸ್ಟ್ರಿಯನ್ನು ಸಿ-ಡೊಟ್ ನಿರ್ವಹಿಸುತ್ತದೆ.
ಉದ್ದೇಶಗಳು
ಪಿಡಿಒಗಳಿಗೆ ಯಾವುದೇ ನೋಂದಣಿ ಅಗತ್ಯವಿಲ್ಲದಿದ್ದರೂ, ಪಿಡಿಒಎಗಳು ಮತ್ತು ಅಪ್ಲಿಕೇಶನ್ ಪೂರೈಕೆದಾರರು ಯಾವುದೇ ನೋಂದಣಿ ಶುಲ್ಕವನ್ನು ಪಾವತಿಸದೆ, ಡಿಒಟಿಯ ಆನ್‌ಲೈನ್ ನೋಂದಣಿ ಪೋರ್ಟಲ್ (ಸರಲ್ ಸಂಚಾರ್; https://saralsanchar.gov.in ) ಮೂಲಕ ತಮ್ಮನ್ನು ತಾವು ಡಿಒಟಿಯಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ನೋಂದಣಿಯನ್ನು ಅರ್ಜಿ ಸಲ್ಲಿಸಿದ 7 ದಿನಗಳೊಳಗೆ ನೀಡಲಾಗುವುದು..
ಇದು ಹೆಚ್ಚು ವ್ಯಾಪಾರ ಸ್ನೇಹಿಯಾಗಿರುತ್ತದೆ ಮತ್ತು ವ್ಯಾಪಾರವನ್ನು ಸುಲಭಗೊಳಿಸುವ ಪ್ರಯತ್ನಗಳಿಗೆ ಅನುಗುಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕವು 4 ಜಿ ಮೊಬೈಲ್ ವ್ಯಾಪ್ತಿಯನ್ನು ಹೊಂದಿಲ್ಲದ ಕಡೆಗಳಲ್ಲಿ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಂದಾದಾರರಿಗೆ ಸ್ಥಿರ ಮತ್ತು ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ (ಡೇಟಾ) ಸೇವೆಗಳನ್ನು ತಲುಪಿಸುವ ಅವಶ್ಯಕತೆಯನ್ನು ಉಂಟು ಮಾಡಿದೆ. ಇದನ್ನು ಸಾರ್ವಜನಿಕ ವೈ-ಫೈ ನಿಯೋಜನೆಯ ಮೂಲಕ ಸಾಧಿಸಬಹುದು.
ಇದಲ್ಲದೆ, ಸಾರ್ವಜನಿಕ ವೈ-ಫೈ ಪ್ರಸರಣವು ಉದ್ಯೋಗವನ್ನು ಸೃಷ್ಟಿಸುವುದಲ್ಲದೆ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಸಣ್ಣ ಆದಾಯದ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ದೇಶದ ಜಿಡಿಪಿಯನ್ನು ಹೆಚ್ಚಿಸುತ್ತದೆ.
ಸಾರ್ವಜನಿಕ ವೈ-ಫೈ ಮೂಲಕ ಬ್ರಾಡ್‌ಬ್ಯಾಂಡ್ ಸೇವೆಗಳ ಪ್ರಸರಣವು ಡಿಜಿಟಲ್ ಇಂಡಿಯಾದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಲಾಭದಾಯಕವಾಗಿದೆ.
ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಬಳಸಿಕೊಂಡು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಯಾವುದೇ ಪರವಾನಗಿ ಶುಲ್ಕವು ಇಲ್ಲದಿರುವುದರಿಂದ ದೇಶದ ಉದ್ದಗಲದಲ್ಲಿ ಬೃಹತ್ ಪ್ರಮಾಣದಲ್ಲಿ ಅದರ ಪ್ರಸರಣ ಮತ್ತು ಬಳಕೆಗೆ ಉತ್ತೇಜನ ಸಿಗುತ್ತದೆ. ಬ್ರಾಡ್‌ಬ್ಯಾಂಡ್‌ನ ಲಭ್ಯತೆ ಮತ್ತು ಬಳಕೆಯು ಆದಾಯ, ಉದ್ಯೋಗ, ಜೀವನದ ಗುಣಮಟ್ಟ, ವ್ಯಾಪಾರ ಮಾಡುವ ಸುಲಭ ವಿಧಾನ ಇತ್ಯಾದಿಗಳನ್ನು ಹೆಚ್ಚಿಸುತ್ತದೆ.
***
(Release ID: 1679437)
Visitor Counter : 355
Read this release in:
Malayalam
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu