ಹಣಕಾಸು ಸಚಿವಾಲಯ

ಸುಧಾರಣೆ ಆಧರಿತ ಸಾಲ ಅನುಮತಿ: ರಾಜ್ಯಗಳಲ್ಲಿ ಜನಸ್ನೇಹಿ ಸುಧಾರಣೆ


ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯಶಸ್ವಿ ಅನುಷ್ಠಾನ

ರಾಜ್ಯಗಳಿಗೆ 23,523 ಕೋಟಿ ರೂ. ಸುಧಾರಣೆ ಆಧರಿತ ಸಾಲಕ್ಕೆ ಅನುಮತಿ

Posted On: 09 DEC 2020 10:55AM by PIB Bengaluru

ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಹಣಕಾಸು ಸಂಪನ್ಮೂಲಗಳ ಕ್ರೂಢೀಕರಣ ಸವಾಲನ್ನು ಎದುರಿಸಲು, ಭಾರತ ಸರ್ಕಾರ ಹಲವು ಕ್ರಮಗಳ ಮೂಲಕ ರಾಜ್ಯಗಳ ಸಾಮರ್ಥ್ಯ ಬಲಪಡಿಸಿದೆ. ಇದರಲ್ಲಿ 2020-21ನೇ ಸಾಲಿಗೆ ಒಟ್ಟು ರಾಜ್ಯ ದೇಶಿಯ ಉತ್ಪನ್ನ (ಜಿಎಸ್ ಡಿಪಿ)ಯ ಶೇ.2ರಷ್ಟು ಹೆಚ್ಚುವರಿ ಸಾಲ ಪಡೆಯಲು ಅನುಮೋದನೆ ನೀಡಿರುವುದು ಸೇರಿದೆ. ಇದರಿಂದಾಗಿ ರಾಜ್ಯಗಳು ಸಾಂಕ್ರಾಮಿಕದ ವಿರುದ್ದ ಹೋರಾಡಲು ಮತ್ತು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹೆಚ್ಚುವರಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ, ದೀರ್ಘಾವಧಿಯಲ್ಲಿ ಸಾಲದ ಸುಸ್ಥಿರತೆ ಕಾಯ್ದುಕೊಳ್ಳಲು ಮತ್ತು ಭವಿಷ್ಯದಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗುವುದನ್ನು ತಡೆಯಲು, ಹೆಚ್ಚುವರಿ ಸಾಲಗಳನ್ನು  ನಾಗರಿಕರಿಗೆ ನೀಡುವ ಮಹತ್ವದ ಸೇವೆಗಳಲ್ಲಿ ಕೈಗೊಳ್ಳುವ ಸುಧಾರಣೆಗಳ ಜೊತೆ ಸಂಯೋಜಿಸಲಾಗಿದೆ.

ಕರ್ನಾಟಕ ಸೇರಿದಂತೆ ಈವರೆಗೆ 9 ರಾಜ್ಯಗಳು ಪಡಿತರ ವಿತರಣಾ ವ್ಯವಸ್ಥೆಯ, ಒಂದು ರಾಷ್ಟ್ರ ಒಂದು ಪಡಿತರ ವ್ಯವಸ್ಥೆಯ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿವೆ ಮತ್ತು ಒಂದು ರಾಷ್ಟ್ರ ಒಂದು ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂಗಣಾ, ತ್ರಿಪುರ ಮತ್ತು ಉತ್ತರಪ್ರದೇಶ, ರಾಜ್ಯವಾರು ಹೆಚ್ಚುವರಿ ಸಾಲಕ್ಕೆ ನೀಡಿರುವ ಅನುಮತಿಯ ವಿವರಗಳು ಈ ಕೆಳಗಿನಂತಿವೆ.

ರಾಜ್ಯಗಳ ಹೆಸರು

ಸಾಲದ ಮೊತ್ತೆಕ್ಕೆ ಅನುಮೋದನೆ ನೀಡಿರುವುದು

(ಕೋಟಿ ರೂ.ಗಳಲ್ಲಿ )

ಆಂಧ್ರಪದೇಶ

2,525.00

ಗೋವಾ

223.00

ಗುಜರಾತ್

4,352.00

ಹರಿಯಾಣ

2146.00

ಕರ್ನಾಟಕ

4,509.00

ಕೇರಳ

2,261.00

ತೆಲಂಗಣಾ

2,508.00

ತ್ರಿಪುರ

148.00

ಉತ್ತರಪ್ರದೇಶ

4,851.00

ಒಟ್ಟು

23,523.00

 

 

 

 

 

 

 

 

 

 

 

 

 

 

 

 

 

 

 

 

ಜಿಎಸ್ ಡಿಪಿಯ ಶೇ.2ರಷ್ಟು ಹೆಚ್ಚುವರಿಗೆ ಅವಕಾಶ ನೀಡಿದ್ದರೂ, ಅದರಲ್ಲಿ ಶೇ 0.25ರಷ್ಟನ್ನು ‘ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್’ ಯೋಜನೆ ಅನುಷ್ಠಾನಕ್ಕೆ ಲಿಂಕ್ ಮಾಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(ಎನ್ ಎಫ್ ಎಸ್ ಎ) ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳು, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರು ದೇಶದ ಯಾವುದೇ ನ್ಯಾಯಬೆಲೆ ಅಂಗಡಿ(ಎಫ್ ಪಿಎಸ್ )ಗಳಲ್ಲಿ ಪಡಿತರವನ್ನು ಒದಗಿಸುವ ಗುರಿ ಹೊಂದಲಾಗಿದೆ. ಜೊತೆಗೆ ನಿಗದಿತ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲದೆ ಪಡಿತರ ತಲುಪಿಸುವುದು, ಬೋಗಸ್/ನಕಲಿ/ಅನರ್ಹ ಪಡಿತರ ಕಾರ್ಡ್ ಗಳನ್ನು ರದ್ದುಗೊಳಿಸುವುದು ಮತ್ತು ಕಲ್ಯಾಣ ಕಾರ್ಯಕ್ರಮ ಖಾತ್ರಿ ಮತ್ತು ಸೋರಿಕೆಯನ್ನು ತಡೆಗಟ್ಟುವ ಉದ್ದೇಶವನ್ನೂ ಸಹ ಹೊಂದಲಾಗಿದೆ. ಇದಕ್ಕಾಗಿ ಎಲ್ಲ ಪಡಿತರ ಕಾರ್ಡ್ ಗಳನ್ನು ಆಧಾರ್ ಜೊತೆ ಜೋಡಿಸುವ, ಫಲಾನುಭವಿಗಳ  ಬಯೋಮೆಟ್ರಿಕ್ ದೃಢೀಕರಣ ಮತ್ತು ರಾಜ್ಯಗಳಲ್ಲಿನ ಎಲ್ಲ ನ್ಯಾಯಬೆಲೆ ಅಂಗಡಿ(ಎಫ್ ಪಿಎಸ್ ) ಗಳಲ್ಲಿ ಸ್ವಯಂ ಚಾಲಿತ ಯಂತ್ರಗಳನ್ನು ಅಳವಡಿಸುವ ಷರತ್ತು ವಿಧಿಸಲಾಗಿದೆ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಇಲಾಖೆ ಈ ಯೋಜನೆ ಅನುಷ್ಠಾನದ ನೋಡಲ್ ಎಜೆನ್ಸಿಯಾಗಿದ್ದು, ಅದು ನಿರ್ದಿಷ್ಠ ಸುಧಾರಣಾ ಷರತ್ತುಗಳನ್ನು ಪಾಲನೆ ಮಾಡಿರುವ ಬಗ್ಗೆ ಪ್ರಮಾಣೀಕರಿಸಲಿದೆ. ಅಲ್ಲದೆ, ಹೆಚ್ಚುವರಿ ಸಾಲಕ್ಕೆ ಅರ್ಹತೆ ಪಡೆಯಲು, ರಾಜ್ಯಗಳು 2020ರ ಡಿಸೆಂಬರ್ 31ರೊಳಗೆ ಸುಧಾರಣಾ ಕಾರ್ಯಗಳನ್ನು ಪೂರ್ಣಗೊಳಿಸಬೇಕಿದೆ. ನಿಗದಿತ ಅವಧಿಯೊಳಗೆ ಇನ್ನೂ ಹೆಚ್ಚಿನ ರಾಜ್ಯಗಳು ಸುಧಾರಣಾ ಕಾರ್ಯಗಳನ್ನು ಪೂರ್ಣಗೊಳಿಸುತ್ತವೆ ಎಂದು ನಿರೀಕ್ಷಿಸಲಾಗುತ್ತಿದೆ.

ಒಂದು ರಾಷ್ಟ್ರ ಒಂದು ಪಡಿತರ ವ್ಯವಸ್ಥೆಗೆ, ಹೆಚ್ಚುವರಿಯಾಗಿ ಸಾಲಗಳನ್ನು ಪಡೆಯಲು ಇನ್ನೂ ಕೆಲವು ಪೂರ್ವ ಷರತ್ತುಗಳನ್ನು ವಿಧಿಸಲಾಗಿದೆ, ವ್ಯಾಪಾರ ವಹಿವಾಟಿಗೆ ಪೂರಕ ವಾತಾವರಣ ನಿರ್ಮಾಣ, ನಗರ ಸ್ಥಳೀಯ ಸಂಸ್ಥೆ/ ಸೌಕರ್ಯದ ಸುಧಾರಣೆಗಳು ಮತ್ತು ವಿದ್ಯುತ್ ವಲಯದ ಸುಧಾರಣೆಗಳು.

***


(Release ID: 1679299) Visitor Counter : 289