ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಆನ್ ಲೈನ್ ಜೂಜು, ಫ್ಯಾಂಟಸಿ ಕ್ರೀಡೆ ಮತ್ತಿತರ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸಲಹಾ ಸೂಚನೆಗಳನ್ನು ಬಿಡುಗಡೆ ಮಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ
Posted On:
04 DEC 2020 9:07PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆನ್ ಲೈನ್ ಜೂಜು, ಫ್ಯಾಂಟಸಿ ಕ್ರೀಡೆ ಮತ್ತಿತರ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸಲಹಾ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಜಾಹೀರಾತು ಮಾನದಂಡ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸಚಿವಾಲಯ ಎಲ್ಲ ಪ್ರಸಾರಕರಿಗೆ ಸೂಚನೆ ನೀಡಿದೆ. ಕಾನೂನು ಅಥವಾ ನಿಯಮಗಳಲ್ಲಿ ನಿಷೇಧಿಸಲಾದ ಎಲ್ಲ ಬಗೆಯ ಜಾಹೀರಾತುಗಳನ್ನು ಯಾವುದೇ ಕಾರಣಕ್ಕೂ ಉತ್ತೇಜಿಸಬಾರದು ಎಂದು ಸಚಿವಾಲಯ ಸೂಚನೆ ನೀಡಿದೆ.
ಈ ಕೆಳಗಿನ ಲಿಂಕ್ ನಲ್ಲಿ ಸಲಹಾ ಸೂಚನೆಯ ವಿವರಗಳನ್ನು ಪಡೆಯಬಹುದಾಗಿದೆ.
https://mib.gov.in/sites/default/files/Kannada_Advisory.pdf
***
(Release ID: 1678521)
Visitor Counter : 192