ವಾರ್ತಾ ಮತ್ತು ಪ್ರಸಾರ ಸಚಿವಾಲಯ

‘ಸಿಖ್ ಜನಾಂಗದೊಂದಿಗೆ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ವಿಶೇಷ ಬಾಂಧವ್ಯ’ ಪುಸ್ತಕವನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಬಿಡುಗಡೆ ಮಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್

Posted On: 30 NOV 2020 4:45PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರಿಂದು ನಾಗರಿಕ ವಿಮಾನ ಯಾನ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆಸಿಖ್ಖರೊಂದಿಗೆ ಪ್ರಧಾನಮಂತ್ರಿ ಮೋದಿ ಮತ್ತು ಅವರ ಸರ್ಕಾರದ ವಿಶೇಷ ಬಾಂಧವ್ಯಕೈಪಿಡಿಯನ್ನು ಬಿಡುಗಡೆ ಮಾಡಿದರು. ಹಿಂದಿ, ಪಂಜಾಬಿ ಮತ್ತು ಇಂಗ್ಲಿಷ್ ಮೂರು ಭಾಷೆಯಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.

Fotor_160672728577271.jpg

ಸಂದರ್ಭದಲ್ಲಿ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಪುಸ್ತಕ ಹೊರತಂದಿರುವುದಕ್ಕಾಗಿ ಶ್ರೀ ಪ್ರಕಾಶ್ ಜಾವಡೇಕರ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸಿದರು. ಶ್ರೀ ಪುರಿ ಅವರು ಶ್ರೀ ಗುರುನಾನಕ್ ದೇವ್ ಅವರ 550ನೇ ಜನ್ಮ ಜಯಂತಿ ಆಚರಿಸಲು ಒಂದು ವರ್ಷದ ಹಿಂದೆ ಕೈಗೊಂಡ ಮಹತ್ವದ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿ, ಇಂದು ಬಿಡುಗಡೆಯಾದ ಕೈಪಿಡಿ ಅದರಲ್ಲಿ ಸೇರಿದೆ ಎಂದರು.

ಸಂದರ್ಭದಲ್ಲಿ ಮಾತನಾಡಿದ ಸಚಿವರು, ಯುನೈಟೆಡ್ ಕಿಂಗ್ಡಮ್ ಮತ್ತು ಕೆನಡಾದ ವಿಶ್ವವಿದ್ಯಾಲಯವೊಂದರಲ್ಲಿ ಗುರುನಾನಕ್ ದೇವ್ ಅವರ ಬೋಧನೆಗಳ ಕುರಿತ ಪೀಠವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಮತ್ತು ಅದನ್ನು ಕೆನಡಾದಲ್ಲಿ ಸ್ಥಾಪಿಸಲು ಮಾತುಕತೆ ನಡೆಯುತ್ತಿದೆ ಎಂದರು. ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ಅದನ್ನು ದಾಖಲೆ ಸಮಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದೂ ತಿಳಿಸಿದರು. ಸಣ್ಣ ಸಣ್ಣ ವ್ಯವಸ್ಥೆಗಳನ್ನೂ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವ ಪ್ರಧಾನಮಂತ್ರಿಯವರಿಗೆ, ಕರ್ತಾರ್ಪುರ ಕಾರಿಡಾರ್ಮೊದಲ ಜಾತ್ತಾವನ್ನು ಖುದ್ದು ವೀಕ್ಷಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ಹರ್ಮೀಂದರ್ ಸಾಹೀಬ್ ಎಫ್.ಸಿ.ಆರ್.. ನೋಂದಣಿಯ ಲಂಗರು ಮೇಲಿನ ತೆರಿಗೆ ಹಾಕದೆ, ಜಾಗತಿಕ ಸಂಗತ್ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ, ಸಿಖ್ ಸಮುದಾಯದ ಬೇಡಿಕೆಯ ರೀತ್ಯ ಕಪ್ಪು ಪಟ್ಟಿ ಪರಿಷ್ಕರಣೆಯಂಥ ಇತರ ಮಹತ್ವದ ನಿರ್ಧಾರಗಳ ಬಗ್ಗೆ ಸಚಿವರು ಒತ್ತಿ ಹೇಳಿದರು.

ಸುಸ್ಥಿರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಕುರಿತಂತೆ ಗುರುನಾನಕ್ ದೇವ್ ಅವರ ಬೋಧನೆಗಳಿಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವರು ಗುರು ಮಹಾರಾಜರ ಬೋಧನೆಗಳನ್ನು ಸರ್ಕಾರದ ಕಾರ್ಯಸೂಚಿಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಉಪಸ್ಥಿತರಿದ್ದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಜನಸಂಪರ್ಕ ಸಂವಹನ ಶಾಖೆ ಹೊರತಂದಿರುವ ಕೈಪಿಡಿಯನ್ನು ಶ್ರೀ ಗುರುನಾನಕ್ ದೇವ್ ಅವರ ಜನ್ಮದಿನದಂದು ಬಿಡುಗಡೆ ಮಾಡಲಾಗಿದೆ.

https://static.pib.gov.in/WriteReadData/userfiles/English.pdf ನಲ್ಲಿ ಕೈಪಿಡಿ ನೋಡಬಹುದು.

***



(Release ID: 1677181) Visitor Counter : 179