ಹಣಕಾಸು ಸಚಿವಾಲಯ
ತಮಿಳುನಾಡಿನಲ್ಲಿ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳಿಂದ ಶೋಧ ಕಾರ್ಯ
Posted On:
29 NOV 2020 12:55PM by PIB Bengaluru
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2020ರ ನವೆಂಬರ್ 27ರಂದು ಚೆನ್ನೈನ ಐಟಿ ವಿಶೇಷ ವಿತ್ತ ವಲಯ ಅಭಿವೃದ್ಧಿದಾರರು, ಅದರ ಮಾಜಿ ನಿರ್ದೇಶಕರು ಮತ್ತು ಪ್ರಮುಖ ಸ್ಟೈನ್ ಲೆಸ್ ಸ್ಟೀಲ್ ಪೂರೈಕೆದಾರರೊಬ್ಬರ ಪ್ರಕರಣದಲ್ಲಿ ಶೋಧ ಕಾರ್ಯ ನಡೆಸಿದರು. ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಕಡಲೂರಿನ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಕಳೆದ ಮೂರು ವರ್ಷಗಳಲ್ಲಿ ಮಾಜಿ ನಿರ್ದೇಶಕರು ಮತ್ತು ಅವರ ಕುಟುಂಬದವರು ವರ್ಗಕ್ಕೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸೇರಿದಂತೆ ಹಲವು ಆಸ್ತಿಗಳ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. ಶೋಧನಾ ಕಾರ್ಯದ ವೇಳೆ, ಮಾಹಿತಿ ತಂತ್ರಜ್ಞಾನ ವಿಶೇಷ ವಿತ್ತ ವಲಯದ ಡೆವಲಪ್ಪರ್ ಕಡೆಯಿಂದ ಸುಮಾರು 160 ಕೋಟಿ ರೂ.ಮೌಲ್ಯದ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ನಡೆಯುತ್ತಿದೆ ಎಂದು ಹೇಳಲಾದ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಹ ಸಂಗ್ರಹಿಸಲಾಗಿದೆ. ಅಲ್ಲದೆ, ಕಂಪನಿ ಕಾರ್ಯಾಚರಣೆಯಲ್ಲಿರುವ ಯೋಜನೆಯೊಂದಕ್ಕೆ ಬೋಗಸ್ ಸಲಹಾ ಶುಲ್ಕ ಸುಮಾರು 30 ಕೋಟಿ ರೂ.ಗಳನ್ನು ಖುರ್ಚು ಮಾಡಿರುವುದಾಗಿ ಮತ್ತು ಅದಕ್ಕಾಗಿ ಬಡ್ಡಿ ಖರ್ಚು ಸೇರಿ ಸುಮಾರು 20 ಕೋಟಿ ವ್ಯಯ ಮಾಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಐ ಟಿ ವಿಶೇಷ ವಿತ್ತ ವಲಯದ ಅಭಿವೃದ್ಧಿದಾರರಿಗೆ ಸಂಬಂಧಿಸಿದ ಕೆಲವು ಷೇರು ಖರೀದಿ ವಹಿವಾಟುಗಳನ್ನು ನಡೆಸಿರುವುದೂ ಸಹ ಶೋಧ ಕಾರ್ಯದ ವೇಳೆ ತಿಳಿದುಬಂದಿದೆ. ಆ ಸಂಸ್ಥೆಗೆ ಸೇರಿದ ಷೇರುಗಳನ್ನು ನಿವಾಸಿಗಳು ಮತ್ತು ನಿವಾಸಿಗಳಲ್ಲದ ಕಂಪನಿಯ ಹಿಂದಿನ ಷೇರುದಾರರಿಗೆ ಮಾರಾಟ ಮಾಡಲಾಗಿದೆ, ಆ ಹೂಡಿಕೆಯನ್ನು ಮಾರಿಷಸ್ ಮೂಲದ ಸಂಸ್ಥೆಯಿಂದ ಮಾಡಿಸಲಾಗಿದೆ. 2017-18ನೇ ಹಣಕಾಸು ವರ್ಷದಲ್ಲಿ ಸುಮಾರು 2300 ಕೋಟಿ ಮೌಲ್ಯದ ಮಾರಾಟ ವಹಿವಾಟು ನಡೆಸಲಾಗಿದೆ ಮತ್ತು ಆದರೆ ಆ ಬಗ್ಗೆ ಇಲಾಖೆಗೆ ಮಾಹಿತಿಯನ್ನೇ ನೀಡಿಲ್ಲ.
ಇಬ್ಬರು ಷೇರುದಾರರು ಬಹಿರಂಗಪಡಿಸಲಾಗದ ಎಷ್ಟು ಬಂಡವಾಳ ಲಾಭ ಪಡೆದಿದ್ದಾರೆ ಎಂಬ ಕುರಿತು ತನಿಖೆ ಪ್ರಗತಿಯಲ್ಲಿದೆ. ನಗದು ಪಾವತಿಗಳನ್ನು ಒಳಗೊಂಡ ಇತರೆ ಭೂ ವಹಿವಾಟುಗಳು ಮತ್ತು ಕಡ್ಡಾಯ ಪರಿವರ್ತಿಸಲಾಗುವ ಡಿಬೆಂಚರ್ಸ್ ಗೆ ಸಂಬಂಧಿಸಿದ ವಿಷಯಗಳೂ ಸಹ ಪರಿಶೀಲನೆಯಲ್ಲಿವೆ.
ಸ್ಟೈನ್ ಲೆಸ್ ಸ್ಟೀಲ್ ಪೂರೈಕೆದಾರರಿಗೆ ಸೇರಿದ ಆವರಿಗೆ ಸೇರಿದ ಆವರಣದಲ್ಲಿ ದೊರಕಿರುವ ಸಾಕ್ಷ್ಯಗಳಿಂದ ಆ ಪೂರೈಕೆ ಬಳಗ ಮೂರು ಬಗೆಯ ಮಾರಾಟದ ದಾಖಲೆಗಳನ್ನು ನಿರ್ವಹಿಸುತ್ತಿತ್ತು, ಲೆಕ್ಕವಿಟ್ಟಿರುವುದು, ಲೆಕ್ಕವಿಲ್ಲದಿರುವುದು ಮತ್ತು ಭಾಗಶಃ ಲೆಕ್ಕ ಇರುವಂತಹುದು. ಪ್ರತಿ ವರ್ಷದ ಮಾರಾಟ ವಹಿವಾಟಿನಲ್ಲಿ ಲೆಕ್ಕವಿಲ್ಲದ ಮತ್ತು ಭಾಗಶಃ ಲೆಕ್ಕವಿರುವ ಮಾರಾಟದ ಪ್ರಮಾಣ ಶೇ.25ಕ್ಕೂ ಅಧಿಕವಾಗಿದೆ. ಅಲ್ಲದೆ, ಆ ಬಳಗ ಹಲವು ಗ್ರಾಹಕರಿಗೆ ಮಾರಾಟ ಬಿಲ್ ಗಳನ್ನು ನೀಡಿದೆ ಮತ್ತು ಆ ವಹಿವಾಟುಗಳ ಮೇಲೆ ಶೇ.10ಕ್ಕೂ ಅಧಿಕ ಕಮೀಷನ್ ಪಡೆಯಲಾಗಿದೆ. ಸದ್ಯ ಲೆಕ್ಕವಿಲ್ಲದ ಆದಾಯದ ಮೌಲ್ಯವನ್ನು ಅಂದಾಜಿಸಲಾಗಿದ್ದು, ಅದರ ಪ್ರಮಾಣ ಸದ್ಯ ಸುಮಾರು 100 ಕೋಟಿ ಎನ್ನಲಾಗಿದೆ. ಅಲ್ಲದೆ, ಆ ಕಂಪನಿ ಆರ್ಥಿಕ ನೆರವು ನೀಡುವುದು, ಸಾಲ ನೀಡುವುದು ಮತ್ತು ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆಗಳು ನಡೆಸುತ್ತಿರುವ ಲೆಕ್ಕವಿಲ್ಲದ ವಹಿವಾಟುಗಳು ಮತ್ತು ಲೆಕ್ಕವಿಲ್ಲದ ಹೂಡಿಕೆ/ಸಾಲದ ಒಳಹರಿವು ಸುಮಾರು 50 ಕೋಟಿ ರೂ.ಗೂ ಅಧಿಕ ಎಂದು ಹೇಳಲಾಗಿದೆ.
ಶೋಧ ಕಾರ್ಯದ ವೇಳೆ ಈವರೆಗೆ 450 ಕೋಟಿ ರೂ. ಗೂ ಅಧಿಕ ಮೊತ್ತದ ಬಹಿರಂಗಪಡಿಸಲಾಗದ ಆದಾಯವನ್ನು ಪತ್ತೆ ಹಚ್ಚಲಾಗಿದೆ.
ಮುಂದಿನ ತನಿಖೆ ಪ್ರಗತಿಯಲ್ಲಿದೆ.
****
(Release ID: 1677010)
Visitor Counter : 173