ಪ್ರಧಾನ ಮಂತ್ರಿಯವರ ಕಛೇರಿ

ಸಂಸದರ ಬಹುಮಹಡಿ ವಸತಿ ಉದ್ಘಾಟನೆಯ ವೇಳೆ ಪ್ರಧಾನಮಂತ್ರಿಯವರ ಭಾಷಣ

Posted On: 23 NOV 2020 1:42PM by PIB Bengaluru

ನಮಸ್ಕಾರ,

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಪ್ರಹ್ಲಾದ ಜೋಶಿ ಅವರೇ, ಶ್ರೀ ಹರ್ದೀಪ್ ಪುರಿ ಅವರೇ, ಸಮಿತಿಯ ಅಧ್ಯಕ್ಷರಾದ ಶ್ರೀ ಸಿ.ಆರ್. ಪಾಟೀಲ್ ಅವರೇ, ಸಂಸದರೇ, ಮಹಿಳೆಯರೇ ಮತ್ತು ಮಹನೀಯರೇ !! ದೆಹಲಿಯ ಜನ ಪ್ರತಿನಿಧಿಗಳಿಗಾಗಿ ಹೊಸ ವಸತಿ ಸೌಲಭ್ಯಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ಇಂದು ಆಹ್ಲಾದಕರ ಸಂದರ್ಭ ಇದಕ್ಕೆ ಸೇರಿಕೊಂಡಿದೆ. ಇಂದು ನಮ್ಮ ಸ್ಪೀಕರ್ ಹಾಗೂ ಬದ್ಧತೆಯ ಮತ್ತು ಮೃದುಭಾಷಿ ಶ್ರೀ ಓಂ ಬಿರ್ಲಾ ಅವರ ಜನ್ಮದಿನವೂ ಆಗಿದೆ. ಓಂ ಬಿಲ್ಲಾ ಅವರಿಗೆ ಶುಭಾಶಯಗಳು. ನೀವು ಆರೋಗ್ಯವಾಗಿರಿ, ದೀರ್ಘಕಾಲ ಜೀವಿಸಿ, ದೇಶದ ಸೇವೆಯನ್ನು ಮುಂದುವರಿಸುವಂತಾಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.

ಸ್ನೇಹಿತರೆ,

ಕಳೆದ ವರ್ಷ ಉತ್ತರದ ವಿಶಾಲ ರಸ್ತೆಯಲ್ಲಿ ಸಂಸದರ ಮನೆಗಳನ್ನು ಸಿದ್ಧಪಡಿಸಲಾಯಿತು. ಮತ್ತು ಬಿ.ಡಿ. ರಸ್ತೆಯ ಮೂರು ಗೋಪುರಗಳು ಹಂಚಿಕೆಗೆ ಸಿದ್ಧವಾಗಿವೆ. ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಗೋಪುರಗಳ ಸಂಗಮವು ಇಲ್ಲಿ ವಾಸಿಸುವ ಜನ ಪ್ರತಿನಿಧಿಗಳನ್ನು ಆರೋಗ್ಯಕರ, ಕಾರ್ಯಶೀಲ ಮತ್ತು ಆಪ್ತವಾಗಿ ಇಡುತ್ತದೆ ನಾನು ಬಯಸುತ್ತೇನೆ. ಫ್ಲ್ಯಾಟ್‌ ಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸಂಸದರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಸಂಸತ್ ಭವನಕ್ಕೆ ಹತ್ತಿರದಲ್ಲಿರುವುದರಿಂದ ಸಂಸದರಿಗೆ ಹೋಗಿ ಬರಲು ಹೆಚ್ಚು ಸುಲಭವಾಗುತ್ತದೆ.

ಸ್ನೇಹಿತರೆ,

ಸಂಸತ್ ಸದಸ್ಯರಿಗೆ ದೆಹಲಿಯಲ್ಲಿ ವಸತಿ ಕಲ್ಪಿಸುವುದು ಬಹಳ ದೀರ್ಘ ಕಾಲೀನ ಸಮಸ್ಯೆಯಾಗಿದೆ. ಈಗಷ್ಟೇ ಶ್ರೀ ಬಿರ್ಲಾ ಅವರು ಹೇಳಿದಂತೆ ಸಂಸತ್ ಸದಸ್ಯರು ದೀರ್ಘಕಾಲದವರೆಗೆ ಹೊಟೆಲ್ ಗಳಲ್ಲಿ ತಂಗಬೇಕಾಗಿ ಬರುತ್ತಿತ್ತು. ಇದು ಆರ್ಥಿಕ ಹೊರೆಗೂ ಕಾರಣವಾಗುತ್ತಿತ್ತು. ಅವರು ಕೂಡ ಇದನ್ನು ಆನಂದಿಸುತ್ತಿರಲಿಲ್ಲ, ಆದರೆ ಬಲವಂತದಲ್ಲಿರುತ್ತಿದ್ದರು. ಆದರೆ ಸಮಸ್ಯೆಯನ್ನು ನಿವಾರಿಸಲು ಗಂಭೀರವಾದ ಪ್ರಯತ್ನಗಳು ವಿಶೇಷವಾಗಿ 2014 ನಂತರ ಪ್ರಾರಂಭವಾದವು. ದಶಕಗಳ ಹಳೆಯ ಸಮಸ್ಯೆಗಳಿಗೆ ಸ್ಪಂದಿಸದೆ ತಪ್ಪಿಸಿಕೊಳ್ಳುವುದರಿಂದ ಅವು ಬಗೆಹರಿಯುವುದಿಲ್ಲ, ಬದಲಾಗಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಪರಿಹರಿಸಬೇಕು. ಸಂಸದರಿಗೆ ವಸತಿ ಮಾತ್ರವಲ್ಲ, ದೆಹಲಿಯಲ್ಲಿ ಹಲವಾರು ಯೋಜನೆಗಳು ಹಲವು ವರ್ಷಗಳಿಂದ ಅಪೂರ್ಣವಾಗಿ ಉಳಿದಿದ್ದವು ಮತ್ತು ಅವುಗಳು ನಿರುಪಯುಕ್ತವಾಗಿದ್ದವು. ಸರ್ಕಾರದ ಅವಧಿಯಲ್ಲಿ ಹಲವಾರು ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು ಮತ್ತು ನಿಗದಿತ ಸಮಯಕ್ಕಿಂತ ಮುಂಚೆ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಂಡಿತು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಇದ್ದಾಗ, ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಕುರಿತು ಚರ್ಚೆ ಪ್ರಾರಂಭವಾಯಿತು. ಇದರ ನಿರ್ಮಾಣಕ್ಕೆ ಹಲವಾರು ವರ್ಷಗಳು ಬೇಕಾದವು ಮತ್ತು ಸರ್ಕಾರ ರಚನೆಯಾದ ನಂತರವೇ ಅದು ಪೂರ್ಣಗೊಂಡಿತು. ಡಾಕ್ಟರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸರ್ಕಾರವು 23 ವರ್ಷಗಳ ಸುದೀರ್ಘ ನಿರೀಕ್ಷೆಯ ನಂತರ ನಿರ್ಮಾಣ ಮಾಡಿತು. ಕೇಂದ್ರ ಮಾಹಿತಿ ಆಯೋಗದ ಹೊಸ ಕಟ್ಟಡವನ್ನು ಸರ್ಕಾರ ಪೂರ್ಣಗೊಳಿಸಿತು. ದೇಶ ದಶಕಗಳ ಕಾಲ ಯುದ್ಧ ಸ್ಮಾರಕದ ಬಗ್ಗೆ ಚರ್ಚೆ ಮಾಡುತ್ತಲೇ ಇತ್ತು. ದೇಶದ ವೀರ ಯೋಧರು ಇದನ್ನು ನಿರೀಕ್ಷಿಸುತ್ತಿದ್ದರು ಮತ್ತು ದೀರ್ಘ ಕಾಲದಿಂದ ಒತ್ತಾಯಿಸುತ್ತಿದ್ದರು. ನಮ್ಮ ಸರ್ಕಾರ ಇಂಡಿಯಾ ಗೇಟ್ ಬಳಿ ಹುತಾತ್ಮ ಯೋಧರ ಸ್ಮರಣಾರ್ಥ ಯುದ್ಧ ಸ್ಮಾರಕ ನಿರ್ಮಿಸುವ ಗೌರವ ಪಡೆಯಿತು. ನಮ್ಮ ದೇಶದಲ್ಲಿ ಸಾವಿರಾರು ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಸಾವಿರಾರು ಪೊಲೀಸರು ಹುತಾತ್ಮರಾಗಿದ್ದಾರೆ. ಅವರ ಸ್ಮರಣೆಯಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಸರ್ಕಾರವು ನಿರ್ಮಿಸಿದೆ. ಇಂದು ಸಂಸದರಿಗೆ ಹೊಸ ಮನೆಗಳ ಉದ್ಘಾಟನೆ ಅದೇ ಸರಣಿಯ ತುರ್ತು ಮತ್ತು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಸಂಸದರ ದೀರ್ಘ ಕಾಯುವಿಕೆ ಈಗ ಮುಗಿಯುತ್ತಿರುವುದು ನನಗೆ ಸಂತಸ ತಂದಿದೆ. ಫ್ಲ್ಯಾಟ್‌ ಗಳನ್ನು ನಿರ್ಮಿಸುವಾಗ ಪರಿಸರದ ಕಾಳಜಿ ವಹಿಸಲಾಗಿದೆ. ಇಂಧನ ಸಂರಕ್ಷಣಾ ಕ್ರಮಗಳು, ಸೌರ ವಿದ್ಯುತ್ ಸ್ಥಾವರಗಳು, ಒಳಚರಂಡಿ ಸಂಸ್ಕರಣಾ ಘಟಕಗಳು, ಹಸಿರು ಕಟ್ಟಡಗಳ ಪರಿಕಲ್ಪನೆಗಳು ಫ್ಲ್ಯಾಟ್‌ ಗಳನ್ನು ಹೆಚ್ಚು ಆಧುನಿಕಗೊಳಿಸಿವೆ.

ಸ್ನೇಹಿತರೆ,

ನಾನು ಲೋಕಸಭಾ ಸ್ಪೀಕರ್, ಲೋಕಸಭಾ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ ಮತ್ತು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡು ಇಷ್ಟು ಅಲ್ಪಾವಧಿಯಲ್ಲಿ ಇಷ್ಟು ಉತ್ತಮ ಸೌಲಭ್ಯ ನೀಡಿದ ಇತರ ಇಲಾಖೆಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಲೋಕಸಭಾ ಸ್ಪೀಕರ್ ಗುಣಮಟ್ಟ ಮತ್ತು ಉಳಿತಾಯ ಎರಡನ್ನೂ ನಂಬುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸಂಸತ್ತಿನಲ್ಲಿ, ಅವರು ಸಮಯ ಉಳಿತಾಯ ಮತ್ತು ಚರ್ಚೆಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಇದರ ನಿರ್ಮಾಣದಲ್ಲಿ ಎಲ್ಲ ವಿಷಯಗಳನ್ನು ನಿಖರವಾಗಿ ಜಾರಿಗೆ ತರಲಾಗಿದೆ. ಮುಂಗಾರು ಅಧಿವೇಶನದಲ್ಲೂ ಸ್ಪೀಕರ್ ಅವರ ಕಾರ್ಯಶೈಲಿಯ ಒಂದು ನೋಟವನ್ನು ನೋಡಿದ್ದೇವೆ. ಕರೋನಾ ಅವಧಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಹೊಸ ವ್ಯವಸ್ಥೆಗಳ ನಡುವೆ ಸಂಸತ್ತಿನ ಅಧಿವೇಶನ ನಡೆಯಿತು. ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿನ ಎಲ್ಲಾ ಸಹೋದ್ಯೋಗಿಗಳು ಪ್ರತಿಯೊಂದು ಕ್ಷಣವನ್ನೂ ಚೆನ್ನಾಗಿ ಬಳಸಿಕೊಂಡರು. ಉಭಯ ಸದನಗಳಿಂದ ಪರ್ಯಾಯ ಕಾರ್ಯವಾಗಿರಲಿ ಮತ್ತು ಶನಿವಾರ ಮತ್ತು ಭಾನುವಾರದಂದು ಕಲಾಪ ನಡೆಸುವುದಾಗಿರಲಿ ಎಲ್ಲರೂ ಸಹಕರಿಸಿದರು. ಎಲ್ಲಾ ಪಕ್ಷಗಳು ಸಹಕರಿಸಿದವು.

ಸ್ನೇಹಿತರೆ,

ನಮ್ಮ ಸಂಸತ್ತಿನಲ್ಲಿ ಶಕ್ತಿಯು ಗಗನಕ್ಕೇರಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣವಿದೆ. ಇದು 2014 ರಿಂದಲೂ ಒಂದು ರೀತಿಯಲ್ಲಿ ಪ್ರಾರಂಭವಾಗಿದೆ. ಆಗ ದೇಶವು ಹೊಸ ದಿಕ್ಕಿನತ್ತ ಸಾಗಲು ಬಯಸುತ್ತಿದೆ, ಬದಲಾವಣೆಯನ್ನು ಬಯಸುತ್ತಿದೆ ಮತ್ತು ಆದ್ದರಿಂದ ದೇಶದ ಸಂಸತ್ತಿನಲ್ಲಿ 300 ಕ್ಕೂ ಹೆಚ್ಚು ಮೊದಲ ಬಾರಿಗೆ ಆಯ್ಕೆಯಾದ ಸಂಸದರಿದ್ದಾರೆ ಮತ್ತು ಮೊದಲ ಬಾರಿಗೆ ಆಯ್ಕೆಯಾದವರಲ್ಲಿ ನಾನೂ ಒಬ್ಬನಾಗಿದ್ದೆ. 17ನೇ ಲೋಕಸಭೆಯಲ್ಲಿ ಕೂಡ 260 ಸಂಸತ್ ಸದಸ್ಯರು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅಂದರೆ, 400ಕ್ಕೂ ಹೆಚ್ಚು ಸಂಸದರು ಮೊದಲ ಬಾರಿಗೆ ಬಂದಿದ್ದಾರೆ ಅಥವಾ ಬಾರಿ ಎರಡನೇ ಬಾರಿಗೆ ಸಂಸತ್ತನ್ನು ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲ, 17ನೇ ಲೋಕಸಭೆಯು ಅತಿ ಹೆಚ್ಚು ಮಹಿಳಾ ಸಂಸದರನ್ನು ಆಯ್ಕೆ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದೆ. ದೇಶದ ಯುವ ಮನಃಸ್ಥಿತಿ, ಹೊಸ ಮನೋಭಾವ ಸಂಸತ್ತಿನ ನಡಾವಳಿಯಲ್ಲಿಯೂ ಪ್ರತಿಫಲಿಸುತ್ತಿದೆ. ಕಾರಣದಿಂದಲೇ ಇಂದು ದೇಶದ ಕಾರ್ಯಶೈಲಿ ಮತ್ತು ಆಡಳಿತದಲ್ಲಿ ಹೊಸ ಮನೋಸ್ಥಿತಿ ಮತ್ತು ಹೊಸ ವಿಧಾನವನ್ನು ಕಂಡುಕೊಳ್ಳಬಹುದು. ಇಂದು ದೇಶದ ಸಂಸತ್ತು ನವ ಭಾರತಕ್ಕಾಗಿ ಹೊಸ ಹೆಜ್ಜೆ ಇಡುತ್ತಿದೆ ಮತ್ತು ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ 16ನೇ ಲೋಕಸಭೆಯು ಮೊದಲಿಗೆ ಹೋಲಿಸಿದರೆ ಪ್ರತಿಶತ 15ಕ್ಕೂ ಹೆಚ್ಚಿನ ಮಸೂದೆಗಳನ್ನು ಅಂಗೀಕರಿಸಿದೆ. 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಶೇಕಡಾ 135 ರಷ್ಟು ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಲಾಗಿದೆ. ರಾಜ್ಯಸಭೆಯೂ ಶೇಕಡಾ 100ರಷ್ಟು ಕಾರ್ಯ ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಇದು ಅತ್ಯಧಿಕ ಸಾಧನೆಯಾಗಿದೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಫಲಪ್ರದತೆ ಶೇಕಡಾ 110 ಕ್ಕಿಂತ ಹೆಚ್ಚಾಗಿತ್ತು.

ಸ್ನೇಹಿತರೆ,

ಎಲ್ಲಾ ಸಂಸದರು ಸಂಸತ್ತಿನ ಫಲಪ್ರದತೆಯಲ್ಲಿ ವಸ್ತು ಮತ್ತು ಪ್ರಕ್ರಿಯೆ ಎರಡರ ಕಾಳಜಿ ವಹಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ದಿಕ್ಕಿನಲ್ಲಿ ಹೊಸ ಎತ್ತರವನ್ನು ಸಾಧಿಸಿದ್ದಾರೆ. ಮತ್ತು ಸಂಸತ್ತಿನಲ್ಲಿ ಈಗ ಇಲ್ಲದಿರುವ ಸಂಸದರ ಕೊಡುಗೆ ಕೂಡ ಇದೆ. ನಾವು ಎಷ್ಟು ಸಾಧಿಸಿದ್ದೇವೆ ನೋಡಿ, ಒಟ್ಟಿಗೆ ತುಂಬಾ ಹೊಸದನ್ನು ಮಾಡಲಾಗಿದೆ. ನಾವು ಕಳೆದ ಒಂದೂವರೆ ವರ್ಷಗಳ ಬಗ್ಗೆ ಮಾತ್ರ ಮಾತನಾಡಿದರೆ, ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ಮುಕ್ತಗೊಳಿಸಲು ದೇಶವು ಶ್ರಮಿಸಿದೆ. ದೇಶವು ಐತಿಹಾಸಿಕ ಕಾರ್ಮಿಕ ಸುಧಾರಣೆಗಳನ್ನು ಕೈಗೊಂಡಿದೆ ಮತ್ತು ಕಾರ್ಮಿಕರ ರಕ್ಷಣೆಯನ್ನು ಖಾತ್ರಿಪಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಮತ್ತು ಅನೇಕ ಕಾನೂನುಗಳೊಂದಿಗೆ ಸಂಪರ್ಕಿಸಲು ದೇಶವು ಶ್ರಮಿಸಿದೆ. ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರದ ವಿರುದ್ಧ ಇಂತಹ ಕಾನೂನುಗಳನ್ನು ಮಾಡಲಾಗಿದೆ.

ದೇಶ ತ್ರಿವಳಿ ತಲಾಖ್ ನಂತ ಸಾಮಾಜಿಕ ಪಿಡುಗುಗಳಿಂದ ಮಹಿಳೆಯರಿಗೆ ಮುಕ್ತಿ ನೀಡಿದೆ.

ಮಧ್ಯೆ, ಮುಗ್ಧ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸಲಾಗಿದೆ. ಆಧುನಿಕ ಆರ್ಥಿಕತೆಗಾಗಿ ಜಿಎಸ್ಟಿ, ದಿವಾಳಿ ಮತ್ತು ದಿವಾಳಿತನ ಸಂಹಿತೆಯಂತಹ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅಂತೆಯೇ, ಭಾರತದ ಸಂವೇದನಾತ್ಮಕ ಪರಿಚಯದ ಬದ್ಧತೆಯನ್ನು ಪೂರೈಸುವ ಮೂಲಕ ನಾವು ಒಟ್ಟಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದೇವೆ. ಕಾರ್ಯಗಳು, ಯಶಸ್ಸು ವಸ್ತುಗಳಾಗಿದ್ದರೆ ಅವುಗಳನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯು ಅಷ್ಟೇ ಅದ್ಭುತವಾಗಿದೆ. ಬಹುಶಃ, ಹೆಚ್ಚಿನ ಜನರು ಇದನ್ನು ಗಮನಿಸಿರಲಿಕ್ಕಿಲ್ಲ, ಆದರೆ 16ನೇ ಲೋಕಸಭೆಯಲ್ಲಿ 60 ಪ್ರತಿಶತದಷ್ಟು ಮಸೂದೆಗಳನ್ನು ಅನುಮೋದಿಸಲು ಸರಾಸರಿ 2-3 ಗಂಟೆಗಳ ಚರ್ಚೆಯಾಗಿದೆ. ಹಿಂದಿನ ಲೋಕಸಭೆಗಿಂತ ಹೆಚ್ಚಿನ ಮಸೂದೆಗಳನ್ನು ನಾವು ಅಂಗೀಕರಿಸಿದ್ದೇವೆ, ಆದಾಗ್ಯೂ ನಾವು ಎಂದಿಗಿಂತಲೂ ಹೆಚ್ಚು ಚರ್ಚಿಸಿದ್ದೇವೆ.

ನಾವು ವಸ್ತುವಿನ ಮೇಲೆ ಕೇಂದ್ರೀಕರಿಸಿದ್ದೇವೆ ಮತ್ತು ಪ್ರಕ್ರಿಯೆಯನ್ನು ಸುಧಾರಿಸಿದ್ದೇವೆ ಎಂದು ಇದು ತೋರಿಸುತ್ತದೆ. ಮತ್ತು ಇದನ್ನೆಲ್ಲ ನಮ್ಮೆಲ್ಲ ಗೌರವಾನ್ವಿತ ಸಂಸದರು ಮಾಡಿದ್ದಾರೆ. ಅದು ನಿಮ್ಮಿಂದಾಗಿ ಸಂಭವಿಸಿದೆ. ಇದಕ್ಕಾಗಿ ನಾನು ಎಲ್ಲ ಸಂಸತ್ ಸದಸ್ಯರನ್ನು ಸಾರ್ವಜನಿಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಸಾಮಾನ್ಯವಾಗಿ, ಯುವಕರಿಗೆ 16-17-18 ವಯಸ್ಸು, ಅಂದರೆ ಅವರು 10 ರಿಂದ 12 ನೇ ತರಗತಿಯಲ್ಲಿದ್ದಾಗ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. 16-17-18 ವಯಸ್ಸು ಯಾವುದೇ ಯುವ ಪ್ರಜಾಪ್ರಭುತ್ವಕ್ಕೂ ಅಷ್ಟೇ ಮುಖ್ಯವಾಗಿದೆ. ನೀವು ನೋಡಿ, ಈಗ, 2019 ಚುನಾವಣೆಯೊಂದಿಗೆ, ನಾವು 16 ನೇ ಲೋಕಸಭೆಯ ಅವಧಿಯನ್ನು ಪೂರ್ಣಗೊಳಿಸಿದ್ದೇವೆ. ಅವಧಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಬಹಳ ಐತಿಹಾಸಿಕವಾಗಿದೆ. 17ನೇ ಲೋಕಸಭೆಯ ಅವಧಿ 2019 ನಂತರ ಪ್ರಾರಂಭವಾಗಿದೆ.

ಅವಧಿಯಲ್ಲಿ ದೇಶದಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ಕ್ರಮಗಳೊಂದಿಗೆ ಲೋಕಸಭೆಯು ಇತಿಹಾಸ ನಿರ್ಮಿಸಿದೆ. ಇದರ ನಂತರ 18 ನೇ ಲೋಕಸಭೆ ಬರಲಿದೆ. ಹೊಸ ದಶಕದಲ್ಲಿ ದೇಶವನ್ನು ಮುಂದೆ ಕೊಂಡೊಯ್ಯಲು ಮುಂದಿನ ಲೋಕಸಭೆಯು ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ, 16-17-18 ಮಹತ್ವವನ್ನು ನಾನು ನಿಮ್ಮ ಮುಂದೆ ಮಂಡಿಸಿದ್ದೇನೆ. ಅವಧಿಯಲ್ಲಿ ನಾವು ಸಾಧಿಸಬೇಕಾದ ಹಲವು ಸಂಗತಿಗಳು ದೇಶದ ಮುಂದೆ ಇವೆ. ಅವಧಿಯಲ್ಲಿ ಆತ್ಮನಿರ್ಭರ ಭಾರತ ಅಭಿಯಾನ, ಆರ್ಥಿಕತೆಗೆ ಸಂಬಂಧಿಸಿದ ಗುರಿಗಳು ಮತ್ತು ಇತರ ನಿರ್ಣಯಗಳು ಇರಲಿ ನಾವು ಎಲ್ಲವನ್ನೂ ಸಾಧಿಸಬೇಕಾಗಿದೆ.

ಆದ್ದರಿಂದ, 16, 17 ಮತ್ತು 18ನೇ ಲೋಕಸಭೆಯನ್ನು ಒಳಗೊಂಡ ಅವಧಿ ನಮ್ಮ ಯುವ ದೇಶಕ್ಕೆ ಬಹಳ ಮುಖ್ಯವಾಗಿದೆ. ದೇಶಕ್ಕೆ ಮಹತ್ವದ ಅವಧಿಯಲ್ಲಿ ಭಾಗವಾಗಿರುವ ನಾವು ಅದೃಷ್ಟವಂತರು. ಆದ್ದರಿಂದ, ಇತಿಹಾಸದಲ್ಲಿ ಲೋಕಸಭೆಯ ವಿವಿಧ ಅವಧಿಗಳ ಅಧ್ಯಯನ ಮಾಡಿದಾಗಲೆಲ್ಲಾ ಅವಧಿಯನ್ನು ದೇಶದ ಅಭಿವೃದ್ಧಿಗೆ ಸುವರ್ಣ ಅಧ್ಯಾಯವಾಗಿ ನೆನಪಿಸಿಕೊಳ್ಳಬೇಕು ಎನ್ನುವಂತೆ ಮಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.

ಸ್ನೇಹಿತರೇ,

क्रियासिद्धि: सत्वेभवति महताम् नोपकरणेಎಂದು ಹೇಳುತ್ತಾರೆ.

ಇದರ ಅರ್ಥ ನಮ್ಮ ನಿಜವಾದ ನಿರ್ಣಯಗಳು ಮತ್ತು ನಮ್ಮ ಉದ್ದೇಶಗಳ ಮೂಲಕ ನಾವು ಕರ್ಮವನ್ನು ಸಾಧಿಸಬಹುದು.

ಇಂದು, ನಮ್ಮಲ್ಲಿ ಸಂಪನ್ಮೂಲಗಳಿವೆ ಮತ್ತು ದೃಢ ನಿರ್ಧಾರವೂ ಇದೆ. ನಮ್ಮ ಸಂಕಲ್ಪಕ್ಕಾಗಿ ನಾವು ಶೀಘ್ರ ಮತ್ತು ದೊಡ್ಡ ಸಾಧನೆಗಾಗಿ ಹೆಚ್ಚು ಶ್ರಮವಹಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ 130 ಕೋಟಿ ದೇಶವಾಸಿಗಳ ಕನಸುಗಳನ್ನು ಈಡೇರಿಸುತ್ತೇವೆ, ಸ್ವಾವಲಂಬಿ ಭಾರತದ ಗುರಿಯನ್ನು ಪೂರೈಸುತ್ತೇವೆ ಎಂದು ನಂಬಿಕೆ ನನಗಿದೆ. ಶುಭಾಶಯಗಳೊಂದಿಗೆ, ಮತ್ತೊಮ್ಮೆ, ನಿಮ್ಮೆಲ್ಲರಿಗೂ ಅಭಿನಂದನೆಗಳು.

ತುಂಬಾ ಧನ್ಯವಾದಗಳು!

ಘೋಷಣೆ:ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣ ಹಿಂದಿಯಲ್ಲಿದೆ.

***


(Release ID: 1675274) Visitor Counter : 216