ಕೃಷಿ ಸಚಿವಾಲಯ

ಕಿರು ನೀರಾವರಿ ನಿಧಿಯಿಂದ ಬಡ್ಡಿ ರಿಯಾಯತಿ ಸಾಲ ಬಿಡುಗಡೆ

Posted On: 20 NOV 2020 11:46AM by PIB Bengaluru

ನಬಾರ್ಡ್ ನಲ್ಲಿ ರೂಪಿಸಲಾದ 5000 ಕೋ.ರೂ.ಗಳ ಮೂಲನಿಧಿಯ ಕಿರು ನೀರಾವರಿ ನಿಧಿ 2019-20 ರಲ್ಲಿ ಕಾರ್ಯಾರಂಭ ಮಾಡಿದೆ. ರಾಜ್ಯಗಳು ಕಿರು ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸಲು ವಿಶೇಷ ಮತ್ತು ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಡ್ಡಿ ರಿಯಾಯತಿಯ ಸಾಲವನ್ನು ಒದಗಿಸುವುದು ನಿಧಿಯ ಉದ್ದೇಶವಾಗಿದೆ. ಜೊತೆಗೆ ಪಿ.ಎಂ.ಕೆ.ಎಸ್.ವೈ.-ಅಡಿಯಲ್ಲಿ ಲಭ್ಯ ಇರುವ ಅವಕಾಶಗಳ ಮಿತಿಯನ್ನು ದಾಟಿ ಹನಿ ನೀರಿಗೆ ಹೆಚ್ಚು ಬೆಳೆ ಬೆಳೆಯುವಂತೆ ರೈತರನ್ನು ಉತ್ತೇಜಿಸುವುದಕ್ಕಾಗಿ ಕಿರು ನೀರಾವರಿ ಯೋಜನೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವುದೂ ಇದರಲ್ಲಿ ಸೇರಿದೆ.

ಎಂ..ಎಫ್. ಚಾಲನಾ ಸಮಿತಿಯು 3971.31 ಕೋ.ರೂ.ಗಳ ಸಾಲದ ಯೋಜನೆಗಳಿಗೆ ಅನುಮೋದನೆ ನೀಡಿದೆ.ಇದರಲ್ಲಿ  ಗುಜರಾತಿಗೆ 764.13 ಕೋ.ರೂ., ತಮಿಳುನಾಡಿಗೆ 1357.93 ಕೋ.ರೂ. , ಆಂಧ್ರ ಪ್ರದೇಶಕ್ಕೆ 616.13 ಕೋ.ರೂ., ಪಶ್ಚಿಮ ಬಂಗಾಳಕ್ಕೆ 276.55 ಕೋ.ರೂ., ಹರಿಯಾಣಕ್ಕೆ 790.94 ಕೋ.ರೂ., ಪಂಜಾಬಿಗೆ 150.00 ಕೋ.ರೂ. ಮತ್ತು ಉತ್ತರಾಖಂಡಕ್ಕೆ 15.63 ಕೋ.ರೂ. ಗಳಿಗೆ  ಅನುಮೋದನೆ ನೀಡಲಾಗಿದೆ.

ಹರಿಯಾಣ, ತಮಿಳು ನಾಡು, ಮತ್ತು ಗುಜರಾತ್ ಗಳಿಗೆ ನಬಾರ್ಡ್ 659.70 ಕೋ.ರೂ. ಗಳ ಸಾಲವನ್ನು ನಬಾರ್ಡ್ ಬಿಡುಗಡೆ ಮಾಡಿದೆ. ಮೂಲಕ ಒಟ್ಟು 1754.60 ಕೋ.ರೂ. ಗಳನ್ನು ಇದುವರೆಗೆ ಬಿಡುಗಡೆ ಮಾಡಿದಂತಾಗಿದೆ. ಇದರಲ್ಲಿ ಆಂಧ್ರ ಪ್ರದೇಶಕ್ಕೆ 616.13 ಕೋ.ರೂ, ತಮಿಳು ನಾಡಿಗೆ 937.47 ಕೋ.ರೂ. , ಹರ್ಯಾಣಾಕ್ಕೆ 21.57 ಕೋ.ರೂ . ಮತ್ತು ಗುಜರಾತಿಗೆ 179.43 ಕೋ.ರೂ ಲಭಿಸಿದೆ.

***


(Release ID: 1674543)