ಪ್ರಧಾನ ಮಂತ್ರಿಯವರ ಕಛೇರಿ

ಭೂತಾನ್ ನಲ್ಲಿ ಎರಡನೇ ಹಂತದ ರುಪೆ ಕಾರ್ಡ್ ಬಿಡುಗಡೆಯ ವರ್ಚುವಲ್ ಕಾರ್ಯಕ್ರಮ

प्रविष्टि तिथि: 19 NOV 2020 7:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಮಂತ್ರಿ ಲಿಯೊನ್ಚೆನ್ ಡಾ. ಲೋಟೇ ತ್ಸೆರಿಂಗ್ ಅವರು ಇದೇ ನವೆಂಬರ್ 20ರಂದು ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಜಂಟಿಯಾಗಿ ಎರಡನೇ ಹಂತದ ರುಪೆ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ

ಆಗಸ್ಟ್ 2019ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭೂತಾನ್ ಪ್ರವಾಸದ ವೇಳೆ ಪ್ರಧಾನಿ ಮತ್ತು ಭೂತಾನ್ ಪ್ರಧಾನಮಂತ್ರಿ ಜಂಟಿಯಾಗಿ ಮೊದಲನೇ ಹಂತದ ರುಪೇ ಕಾರ್ಡ್ ಯೋಜನೆಗೆ ಚಾಲನೆ ನೀಡಿದ್ದರು. ಭೂತಾನ್ ನಲ್ಲಿ ಮೊದಲ ಹಂತದ ರುಪೆ ಕಾರ್ಡ್ ಅನುಷ್ಠಾನದಿಂದಾಗಿ ಅಲ್ಲಿಗೆ ಭೇಟಿ ನೀಡುವ ಭಾರತೀಯರು ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್ ಸೇವೆಗಳನ್ನು ಪಡೆಯುವಂತಾಗಿದೆ. ಇದೀಗ ಎರಡನೇ ಹಂತದಿಂದಾಗಿ ಕಾರ್ಡ್ ಹೊಂದಿರುವ ಭೂತಾನ್ ಪ್ರಜೆಗಳು ಭಾರತದಲ್ಲಿನ ರುಪೆ ಜಾಲದ ಸೇವೆಯನ್ನು ಪಡೆಯಬಹುದಾಗಿದೆ.

ಭಾರತ ಮತ್ತು ಭೂತಾನ್ ವಿಶೇಷ ಪಾಲುದಾರಿಕೆ ಹಂಚಿಕೊಂಡಿದ್ದು, ಪರಸ್ಪರ ಗೌರವ ಮತ್ತು ತಿಳಿವಳಿಕೆಯೊಂದಿಗೆ ಮುನ್ನಡೆಯುತ್ತಿದ್ದು, ಉಭಯ ದೇಶಗಳು ಸಮಾನ ಹಂಚಿಕೆಯ ಸಾಂಸ್ಕೃತಿಕ ಪರಂಪರೆ ಮತ್ತು ಜನರ ನಡುವಿನ ಬಲಿಷ್ಠ ಸಂಬಂಧದೊಂದಿಗೆ ಮುನ್ನಡೆಯುತ್ತಿವೆ.

***


(रिलीज़ आईडी: 1674227) आगंतुक पटल : 286
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam