ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಆರ್ಚರಿ ತಂಡದ ಸದಸ್ಯರ ನೆರವಿನ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಸೋಂಕು ದೃಢ; ಬಿಡುವಿನ ನಂತರ ಮತ್ತೆ ಶಿಬಿರ ಪುನಾರಂಭ

Posted On: 03 NOV 2020 5:01PM by PIB Bengaluru

ಪುಣೆಯ ಸೇನಾ ಕ್ರೀಡಾ ಕೇಂದ್ರದಲ್ಲಿ ತರಬೇತಿಯಲ್ಲಿದ್ದ ರಾಷ್ಟ್ರೀಯ ಆರ್ಚರಿ ತಂಡಕ್ಕೆ ಸಹಾಯ ನೀಡಲು ನಿಯೋಜಿತವಾಗಿದ್ದ ಒರ್ವ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಂಬಂಧಿಸಿದ ಸಹಾಯಕ ಸಿಬ್ಬಂದಿಯ ಸದಸ್ಯರಿಗೆ ಅಕ್ಟೋಬರ್ 30ರಂದು ಸೋಂಕು ಇರುವುದು ಖಚಿತವಾಗಿತ್ತು. ಅಕ್ಟೋಬರ್ 7ರಂದು ತರಬೇತಿ ಶಿಬಿರವನ್ನು ಸೇರಿದ ನಂತರ ವ್ಯಕ್ತಿ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಿದ್ದರು ಮತ್ತು ಆನಂತರ 9 ದಿನ ತರಬೇತಿಯ ಭಾಗವಾಗಿದ್ದರು. ಕ್ವಾರಂಟೈನ್ ಅವಧಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ನಿಗದಿಪಡಿಸಿರುವ ನಿರ್ದಿಷ್ಠ ಮಾರ್ಗಸೂಚಿಯಂತೆ ಎರಡು ಬಾರಿ ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಅವರಿಗೆ ನಡೆಸಲಾಗಿತ್ತು. ತರಬೇತಿಯಲ್ಲಿದ್ದವರ ಜೊತೆ ಸೇರುವ ಮುನ್ನ ಅವರಿಗೆ ಸೋಂಕು ಇರಲಿಲ್ಲ. ಆನಂತರ ಸೋಂಕು ಕಾಣಿಸಿಕೊಂಡ ಕಾರಣ ಅವರಿಗೆ ಎಎಸ್ಐ ಆವರಣದ ಹೊರಗೆ ಪುಣೆಯ ವಿಶೇಷ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಎರಡು ದಿನ ತರಬೇತಿಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಶಿಬಿರಾರ್ಥಿಗಳನ್ನು ಐಸೋಲೇಟ್ ಮಾಡಲಾಗಿತ್ತು, ಅವರುಗಳನ್ನು ಅವರ ಕೊಣೆಗಳಿಗೇ ಸೀಮಿತಗೊಳಿಸಲಾಗಿತ್ತು. ಕೋವಿಡ್ ಮುನ್ನೆಚ್ಚರಿಕೆ ಮತ್ತು ತಾಪಮಾನ ಮೇಲ್ವಿಚಾರಣೆಯೊಂದಿಗೆ ನವೆಂಬರ್ 2ರಿಂದ ತರಬೇತಿ ಶಿಬಿರ ಪುನಾರಂಭಗೊಂಡಿದೆ. ಎಸ್ ಎಐ ನಿಗದಿತ ನಿಯಮದಂತೆ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಿದೆ.

***



(Release ID: 1669883) Visitor Counter : 135