ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿನದ ಪರೇಡ್ ವೇಳೆ ಪ್ರಧಾನಮಂತ್ರಿ ಅವರ ಭಾಷಣ

Posted On: 31 OCT 2020 1:54PM by PIB Bengaluru

ನಾವೆಲ್ಲರೂ ಈಗಷ್ಟೇ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ದೂರದೃಷ್ಟಿಯಿಂದ ಕೂಡಿದ ಮಾತುಗಳನ್ನು ಆಲಿಸಿದೆವು. ನಾನು ಮಾತನಾಡುವ ಮೊದಲು ನಾನು ಮೊದಲಿಗೆ ನಿಮ್ಮಲ್ಲರಿಗೂ ಭಾರತ್ ಮಾತಾ ಕಿ ಜಯ್ ಎಂಬ ಜಯಘೋಷ ಮಾಡಿಸುತ್ತೇನೆ. ಸಮವಸ್ತ್ರ ಧರಿಸಿರುವ ಯೋಧರು ಮತ್ತು ದೂರ ದೂರದ ಬೆಟ್ಟದ ಮೇಲೆ ಕುಳಿದ ಬುಡಕಟ್ಟು ಸೋದರ ಮತ್ತು ಸಹೋದರಿಯರೇನಿಮ್ಮಲ್ಲರಲ್ಲೂ ನನ್ನ ಮನವಿ ಏನೆಂದರೆ ನೀವೆಲ್ಲರೂ ಒಂದು ಕೈಯನ್ನು ಮೇಲಕ್ಕೆತ್ತಿ ಸಂಪೂರ್ಣ ಶಕ್ತಿಯಿಂದ ಸರ್ದಾರ್ ಸಾಬ್ ಅವರನ್ನು ಸ್ಮರಿಸುತ್ತಾ, ಭಾರತ್ ಮಾತಾ ಕಿ ಜೈ ಎಂಬ ಜಯಘೋಷ ಮೊಳಗಿಸೋಣ. ನಾನು ಮೂರು ಬಾರಿ ಹೇಳುತ್ತೇನೆ. ಪೊಲೀಸ್ ಪಡೆಯ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರ ಹೆಸರಿನಲ್ಲಿ - ಭಾರತ್ ಮಾತಾ ಕಿ ಜೈ, ಕರೋನಾ ಕಾಲದಲ್ಲಿ ಸೇವೆ ಸಲ್ಲಿಸುತ್ತಿರುವ ಕರೋನಾ ಯೋಧರ ಹೆಸರಿನಲ್ಲಿ - ಭಾರತ್ ಮಾತಾ ಕಿ ಜೈ, ಸ್ವಾವಲಂಬನೆಗಾಗಿ ತಮ್ಮ ಸಂಕಲ್ಪವನ್ನು ಸಾಬೀತುಪಡಿಸಲು ಒಗ್ಗೂಡಿ ಪ್ರಯತ್ನಿಸುತ್ತಿರುವ ಜನರ ಹೆಸರಿನಲ್ಲಿ- ಭಾರತ್ ಮಾತಾ ಕಿ ಜೈ, ನಾನು ಸರ್ದಾರ್ ಪಟೇಲ್ ಎಂದು ಹೇಳುತ್ತೇನೆ, ನೀವು ಎರಡು ಬಾರಿ ಹೇಳಬೇಕು - ಅಮರ್ ರಹೆ, ಅಮರ್ ರಹೆ, ಸರ್ದಾರ್ ಪಟೇಲ್ ಅಮರ್ ರಹೆ  - ಅಮರ್ ರಹೆ, ಸರ್ದಾರ್ ಪಟೇಲ್ ಅಮರ್ ರಹೆ  - ಅಮರ್ ರಹೆ, ಸರ್ದಾರ್ ಪಟೇಲ್ ಅಮರ್ ರಹೆ - ಎಲ್ಲಾ ದೇಶವಾಸಿಗಳಿಗೆ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ಜಯಂತಿಯ ಶುಭಾಶಯಗಳು. ಸರ್ದಾರ್ ಪಟೇಲ್  ಅವರು ಭಾರತಕ್ಕೆ ಪ್ರಸ್ತುತ ರೂಪವನ್ನು ನೀಡಲು, ನೂರಾರು ರಾಜಪ್ರಭುತ್ವಗಳನ್ನುಸಂಸ್ಥಾನಗಳನ್ನು ಒಂದುಗೂಡಿಸುವ ಮೂಲಕ ದೇಶದ ವೈವಿಧ್ಯತೆಯನ್ನು ಸ್ವತಂತ್ರ ಭಾರತದ ಶಕ್ತಿಯನ್ನಾಗಿ ಮಾಡಿದರು 2014ರಲ್ಲಿ ನಾವೆಲ್ಲರೂ ಅವರ ಜಯಂತಿಯನ್ನು ಏಕತಾ ದಿನವಾಗಿ ಆಚರಿಸಲು ಆರಂಭಿಸಿದೆವು. ಆರು ವರ್ಷಗಳಲ್ಲಿ, ದೇಶದ ಪ್ರತಿಯೊಬ್ಬರೂ ಅಂದರೆ ಹಳ್ಳಿಯಿಂದ ನಗರದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರೂ  ಏಕ ಭಾರತ, ಶ್ರೇಷ್ಠ ಭಾರತಸಂಕಲ್ಪ ಸಾಕಾರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇಂದು ಮತ್ತೊಮ್ಮೆ ದೇಶ ಇಂದು ಭಾರತ ಮಾತೆಯ ಶ್ರೇಷ್ಠ ಪುತ್ರ ಉಕ್ಕಿನ ಮನುಷ್ಯನಿಗೆ ಪುಷ್ಪ ನಮನ ಸಲ್ಲಿಸುತ್ತಿದೆ. ಸರ್ದಾರ್ ಪಟೇಲ್ ಅವರ ಗಗನಚುಂಬಿ ಪ್ರತಿಮೆಯ ನೆರಳಿನಲ್ಲಿ ದೇಶವು ಪ್ರಗತಿಯ ಪ್ರತಿಜ್ಞೆಯನ್ನು ಪುನರುಚ್ಚರಿಸುತ್ತಿದೆ. ಸ್ನೇಹಿತರೇ, ನಾನು ನಿನ್ನೆ ಕೆವಾಡಿಯಾವನ್ನು ತಲುಪಿದೆ. ಕೆವಾಡಿಯಾಗೆ ಬಂದ ಬಳಿಕ ಜಂಗಲ್ ಸಫಾರಿ, ಏಕತಾ ಮಾಲ್, ಮಕ್ಕಳ ಪೌಷ್ಟಿಕ ಉದ್ಯಾನ ಮತ್ತು ಆರೋಗ್ಯವನ ಸೇರಿ ಹಲವು ಹೊಸ ಹೆಗ್ಗುರುತಿನ ಯೋಜನೆಗಳಿಗೆ ನಿನ್ನೆ ಚಾಲನೆ ನೀಡಿದೆ. ಅಲ್ಪ ಸಮಯದಲ್ಲಿ ಏಕ ಭಾರತ, ಶ್ರೇಷ್ಠ ಭಾರತಸ್ಫೂರ್ತಿಯಲ್ಲಿ ಸರ್ದಾರ್ ಸರೋವರದೊಂದಿಗೆ ಹೊಂದಿಕೊಂಡಿರುವ ಅದ್ಭುತ ನಿರ್ಮಾಣ ನವ ಭಾರತದ ಯಾತ್ರಾ ಸ್ಥಳವಾಗಿ ಪರಿವರ್ತಿತವಾಗಿದೆಮುಂದಿನ ದಿನಗಳಲ್ಲಿ ತಾಯಿ ನರ್ಮದೆಯ ತಟದಲ್ಲಿರುವ ತಾಣ ಭಾರತದ ಪ್ರವಾಸೋದ್ಯಮ ಭೂಪಟದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಛಾಪು ಮೂಡಿಸಲಿದೆ.

ಇಂದು ಸರ್ತಾರ್ ಸರೋವರ ಮತ್ತು ಸಬರಮತಿ ರಿವರ್ ಫ್ರಂಟ್ ನಡುವೆ ಸಮುದ್ರ ವಿಮಾನ ಯಾನ ಸೇವೆಯನ್ನೂ ಉದ್ಘಾಟಿಸಲಾಗಿದೆ. ದೇಶದಲ್ಲಿ ಇದು ಪ್ರಪ್ರಥಮ ಸೌಲಭ್ಯವಾಗಿದೆ. ಸರ್ದಾರ್ ಸಾಹೇಬ್ ಅವರ ಪುತ್ಥಳಿಯನ್ನು ನೋಡಲು ಈಗ ದೇಶವಾಸಿಗಳಿಗೆ ಸಮುದ್ರ ವಿಮಾನ ಸೇವೆಯ ಆಯ್ಕೆಯೂ ಇರುತ್ತದೆ. ಎಲ್ಲ ಪ್ರಯತ್ನಗಳೂ ಪ್ರದೇಶದ ಪ್ರವಾಸೋದ್ಯಮದ ಉನ್ನತಿಗೆ ಸಹಕಾರಿಯಾಗಲಿದೆ. ಇದು ಸ್ಥಳೀಯ ಯುವಕರಿಗೆ ಮತ್ತು ಬುಡಕಟ್ಟು ಸೋದರ ಸೋದರಿಯರಿಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ. ನಾನು ಗುಜರಾತ್ ಸರ್ಕಾರಕ್ಕೂ, ಗುಜರಾತ್ ಎಲ್ಲ ಜನರಿಗೂ ಮತ್ತು ದೇಶದ ಎಲ್ಲ 130 ಕೋಟಿ ಜನರಿಗೂ ಸಾಧನೆಗಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೆ, ನಾನು ನಿನ್ನೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಹತ್ತಿರದ ಹಳ್ಳಿಗಳ ನಮ್ಮ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಪ್ರಶ್ನೆಗಳಿಗೆ ತ್ವರಿತ ಉತ್ತರ ನೀಡಿ ನನಗೆ ಮಾರ್ಗದರ್ಶನ ನೀಡುತ್ತಿದ್ದುದು ನನಗೆ ನಿಜಕ್ಕೂ ಹೆಮ್ಮೆ ಎನಿಸಿತು. ನನ್ನ ದೇಶದ ಬುಡಕಟ್ಟು ಬಾಲಕಿಯರ ಸಾಮರ್ಥ್ಯ ಮತ್ತು ದಕ್ಷತೆ ತುಂಬಾ ಅಗಾಧವಾಗಿತ್ತು. ಪರಿಣತಿಯನ್ನು ಮತ್ತು ವೃತ್ತಿಪರತೆಯೊಂದಿಗೆ ವಿಲೀನಗೊಳಿಸುವ ಮೂಲಕ ಇಷ್ಟು ಕಡಿಮೆ ಸಮಯದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ಎಲ್ಲಾ ಬುಡಕಟ್ಟು ಹೆಣ್ಣುಮಕ್ಕಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಸ್ನೇಹಿತರೆ, ಇಂದು ಒಂದು ವಿಶೇಷ ಸಮಾಗಮವಿದೆ. ಇಂದು ಮಹರ್ಷಿ ವಾಲ್ಮೀಕಿ ಅವರ ಜಯಂತಿಯೂ ಆಗಿದೆ. ನಾವು ಭಾರತದಲ್ಲಿ ಕಾಣುತ್ತಿರುವ ಸಾಂಸ್ಕೃತಿಕ ಏಕತೆಯನ್ನು ಶತಮಾನಗಳ ಹಿಂದೆಯೇ ಆದಿ ಕವಿ ವಾಲ್ಮೀಕಿ ಅವರು ಚೈತನ್ಯಶೀಲವಾಗಿ ಮತ್ತು ಚಲನಶೀಲಗೊಳಿಸಿದ್ದರು. ಭಾರತದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಭಗವಾನ್ ಶ್ರೀರಾಮನ ಆದರ್ಶಗಳಿಂದ ನಾವು ಒಗ್ಗೂಡಿದ್ದರೆ ಅದರ ದೊಡ್ಡ ಶ್ರೇಯ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲಬೇಕು. ಮಹರ್ಷಿ ವಾಲ್ಮೀಕಿಯವರು ದೇಶ ಮೊದಲು ಎಂಬ  ಮಂತ್ರ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (‘ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದ್ದು’) ನೀಡಿದರು, ಇದು ಭಾರತ ಮೊದಲುಪ್ರತಿಜ್ಞೆಗೆ ಬಲವಾದ ಅಡಿಪಾಯವಾಗಿದೆ.

ನಾನು ಮಹರ್ಷಿ ವಾಲ್ಮೀಕಿ ಅವರ ಜಯಂತಿಯಂದು ದೇಶವಾಸಿಗಳೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ನೇಹಿತರೆ, ತಮಿಳು ಭಾಷೆಯ ಶ್ರೇಷ್ಠ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣಿಯಂ ಭಾರತಿ ಅವರು ಬರೆಯುತ್ತಾರೆ ಮನ್ನುಮ್ ಇಮಯಮಾಲೈ ಎಂಗಳ್ ಮಾಲೈಯೇ, ಮಾನಿಲ್ ಮಿದು ಇದು ಪೋಲ ಪಿರಿದು ಇಲ್ಲಯೇ, ಇನ್ನಾರು ನೀರ ಗಂಗೈ ಅರೈಂಗಲ್ ಆರೆ ಇಂಗಿತನ್ ಮಾಂಬಿನಿರ್ ಎದಿರೇದು, ವೇರೆ, ಪನ್ನೂರೂಮ್ ಉಪನೀತ ನೂಲೆಂಗಲ್ ನೂಲೆ ಪಾರ ಮಿಸೈ ಏದೋರು ನೂಲ್ ಇದು ಪೋಲೆ, ಪೋನನೋಲಿರ್ ಭಾರತ ನಾಡೆಂಗಲ್ ನಾಡೇ ಪೋಟ ರುವೋಮ ಇಂತೈ ಎಮಕ್ಕಿಲ್ಲೋ ಈಡೆ. (मन्नुम इमयमलै एंगल मलैये,मानिल मीधु इधु पोल पिरिधु इल्लैये, इन्नरु नीर गंगै आरेंगल आरे इ॑गिथन मान्बिर एधिरेधु वेरे, पन्नरुम उपनिट नूलेन्गल नूले पार मिसै एधोरु नूल इधु पोले, पोननोलिर भारत नाडेंगल नाडे पोट रुवोम इग्तै एमक्किल्लै ईडे ) --  ಸುಬ್ರಮಣಿಯಂ ಭಾರತಿ ಅವರ ಪದ್ಯದ ಅರ್ಥ  ದೂರದ ಪ್ರದೇಶಗಳನ್ನು ವಿವರಿಸುವುದಾಗಿದ್ದು ಬಹಳ ಪ್ರೇರಣಾತ್ಮಕವಾಗಿದೆ.

ಸುಬ್ರಹ್ಮಣಿಯಂ ಭಾರತಿ ಅವರು ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳು ಭಾಷೆಯಲ್ಲಿ ಭಾವನೆಯನ್ನು ವ್ಯಕ್ತಪಡಿಸಿದ್ದು, ಅದ್ಭುತವಾಗಿ ತಾಯಿ ಭಾರತಿಯನ್ನು ವಿವರಿಸಲಾಗಿದೆ. ಸುಬ್ರಹ್ಮಣಿಯಂ ಭಾರತಿ ಕವಿತೆಯ ಭಾವ ಹೀಗಿದೆ ಉತ್ತುಂಗದ ಹಿಮಾಲಯ ಹೊಳೆಯುತ್ತಿದೆ, ನಗರಾಜ ನಮ್ಮದು. ಭೂಮಿಯ ಮೇಲೆ ಇದಕ್ಕೆ ಯಾವುದೂ ಸಮವಲ್ಲ, ನಗರಾಜ ನಮ್ಮದೇ ಆಗಿದೆ. ನದಿ ನಮ್ಮದೇ ಗಂಗಾ, ಮಾಧುರಸದ ಹೊಳೆಯನ್ನು ಹರಿಸುತ್ತಿದೆ, ಬೇರೆಲ್ಲಿಯಾದರೂ ಹರಿಯುತ್ತದೆಯೇ, ನಾಳೆ ಅಂತಹ ಪವಿತ್ರ ಹೊಳೆ? ಉಪನಿಷತ್ತಿನಂತ ಅನೇಕ ಅಮರ ಗ್ರಂಥಗಳನ್ನು ಹೊಂದಿರುವವರ ಮಹಿಮೆಯ ದೇಶ ನಮ್ಮದು, ವಿಶ್ವದಲ್ಲಿ ಇದಕ್ಕೆ ಸರಿಸಮನಾದ ಕೃತಿ ಇಲ್ಲ, ನಾವೆಲ್ಲರೂ ಇದರ ಬಗ್ಗೆ ಹಾಡೋಣ, ಇದು ನಮ್ಮ ಸುವರ್ಣ ದೇಶ, ಜಗತ್ತಿನಲ್ಲಿ ಯಾರಿದ್ದಾರೆ ನಮ್ಮ ಮುಂದೆ, ಗುಲಾಮಗಿರಿಯ ಅವಧಿಯಲ್ಲಿಯೂ ಸಹ, ಸುಬ್ರಹ್ಮಣ್ಯಂ ಭಾರತಿ  ಅವರ ನಂಬಿಕೆಯನ್ನು ನೋಡಿ, ಅವರು  ಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಜಗತ್ತಿನಲ್ಲಿ ನಮ್ಮ ಮುಂದೆ ಯಾರಿದ್ದಾರೆ, ಭಾರತ ದೇಶ ನಮ್ಮದು”.

ನಾವು ಭಾರತದ ಅದ್ಭುತ ಅನುಭವವನ್ನು ತಾಯಿ ನರ್ಮದೆಯ ತಟದಲ್ಲಿ, ಭವ್ಯ ಸರ್ದಾರ್ ಸಾಹೇಬ್ ಅವರ ಪುತ್ಥಳಿಯ ನೆರಳಲ್ಲಿ ನಿಂತು ಆಸ್ವಾದಿಸಬಹುದುಭಾರತದ ಬಲ ನಮಗೆ ಎಲ್ಲ ವೈರುಧ್ಯಗಳನ್ನು ಮತ್ತು ಪ್ರತಿಯೊಂದ ಸಮಸ್ಯೆಯ ವಿರುದ್ಧ ಹೋರಾಡಿ ಗೆಲ್ಲುವುದನ್ನು ಕಲಿಸುತ್ತದೆ. ನಾನು ಕಳೆದ ವರ್ಷ ಇದೇ ದಿನ ಏಕತಾ ಓಟದಲ್ಲ ಭಾಗಿಯಾದಾಗ, ಯಾರೊಬ್ಬರೂ ಇಡೀ ಮನುಕುಲ ಇಂಥ ಮಹಾಮಾರಿಯ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಊಹಿಸಿಕೊಂಡಿರಲಿಲ್ಲ. ವಿಪತ್ತು ದಿಢೀರನೆ ಬಂದೊದಗಿತು. ಇದು ವಿಶ್ವದಾದ್ಯಂತ ಜನ ಜೀವನದ ಮೇಲೆ ಪ್ರಭಾವ ಬೀರಿತು. ಆದರೆ 130 ಕೋಟಿ ದೇಶವಾಸಿಗಳು ತಮ್ಮ ಸಂಘಟಿತ ಶಕ್ತಿ ಪ್ರದರ್ಶಿಸಿದರು ಮತ್ತು ಅಭೂತಪೂರ್ವವಾಗಿ ಸಾಂಕ್ರಾಮಿಕವನ್ನು ಎದುರಿಸುತ್ತೇವೆ ಎಂದು ತೋರಿಸಿದರು. ಇತಿಹಾಸದಲ್ಲಿ ಇಂಥ ಉದಾಹರಣೆ ಇಲ್ಲ.

ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಲೆಹ್ ನಿಂದ ಲಕ್ಷದ್ವೀಪದ ತನಕ, ಅತಕ್ ನಿಂದ ಕಟಕ್ ವರೆಗೆ, ಕಚ್ ನಿಂದ ಕೋಹಿಮಾವರೆಗೆ, ತ್ರಿಪುರಾದಿಂದ ಸೋಮನಾಥ್ ವರೆಗೆ ದೇಶದ 130 ಕೋಟಿ ಜನರು ಸಾರಿರುವ ಏಕತೆಯ ಸಂದೇಶ, ಕಳೆದ 8 ತಿಂಗಳುಗಳಿಂದ ಮಹಾಮಾರಿಯ ವಿರುದ್ಧ ಹೋರಾಡುತ್ತಾ ಜಯದ ಹಾದಿಯಲ್ಲಿ ಮುನ್ನಡೆಯಲು ಸ್ಫೂರ್ತಿ ನೀಡಿದೆ. ಅವರ ಗೌರವಾರ್ಥ ದೇಶ ದೀಪ ಹಚ್ಚಿ ತನ್ನ ಕೃತಜ್ಞತೆಯನ್ನು ಸಮರ್ಪಿಸಿತು. ಪೊಲೀಸ್ ಇಲಾಖೆಯ ನಮ್ಮ ಹಲವು ಭರವಸೆಯ ಸಹೋದ್ಯೋಗಿಗಳೂ ಸೇರಿದಂತೆಹಲವು ಕೊರೊನಾ ಯೋಧರು ಇತರರ ಜೀವವನ್ನು ಉಳಿಸಲು ತಮ್ಮ ಜೀವವನ್ನೇ ಬಲಿದಾನ ಮಾಡಿದರು. ಸ್ವಾತಂತ್ರ್ಯದ ಬಳಿಕ ಮಾನವ ಸೇವೆಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡುವುದು ನಮ್ಮ ಪೊಲೀಸರ ಹಿರಿಮೆಯಾಗಿದೆ. ನಮ್ಮ ಪೊಲೀಸ್ ಪಡೆಯ ಸುಮಾರು 35,000 ಸಿಬ್ಬಂದಿ ಸ್ವಾತಂತ್ರ್ಯಾ ನಂತರ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಕರೋನಾ ಅವಧಿಯಲ್ಲಿ ಪೊಲೀಸ್ ಪಡೆಯಲ್ಲಿದ್ದ ಅನೇಕರು ಇತರರ ಸೇವೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಇತಿಹಾಸವು ಅವಧಿಯನ್ನು ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಮತ್ತು 130 ಕೋಟಿ ದೇಶವಾಸಿಗಳನ್ನು ಪೊಲೀಸ್ ಸಿಬ್ಬಂದಿಯ ನಿಸ್ವಾರ್ಥ ಸೇವೆಗೆ ತಲೆಬಾಗುವಂತೆ ಪ್ರೇರೇಪಿಸುತ್ತದೆ.

ಸ್ನೇಹಿತರೆ, ವಿಶ್ವದ ದೊಡ್ಡ ದೇಶಗಳನ್ನೇ ಊನ ಮಾಡಿರುವ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ದೃಢವಾಗಿ ಹೋರಾಡುತ್ತಿರುವುದಕ್ಕೆ ದೇಶದ ಏಕತೆಯ ಬಲವೇ ಕಾರಣ. ಇಂದು, ದೇಶವು ಕರೋನಾದಿಂದ ಹೊರಬರುತ್ತಿರುವುದು ಮಾತ್ರವಲ್ಲದೆ ಒಟ್ಟಾಗಿ ಮುನ್ನಡೆಯುತ್ತಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಕಲ್ಪಿಸಿದ ಅದೇ ಏಕತೆ. ಕರೋನಾದ ಅವಧಿಯಲ್ಲಿ ನಮ್ಮ ಏಕತೆಯು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ನಿಜವಾದ ಶ್ರದ್ಧಾಂಜಲಿಯಾಗಿದೆ.

ಸ್ನೇಹಿತರೆ, ಪ್ರತೀಕೂಲ ಪರಿಸ್ಥಿತಿ ಮತ್ತು ಸವಾಲುಗಳ ನಡುವೆಯೂ ಅಸಾಧ್ಯ ಎನಿಸಿದ್ದ ಹಲವು ಸವಾಲುಗಳನ್ನು ದೇಶ ಸಾಧಿಸಿ ತೋರಿಸಿದೆ. ಕಷ್ಟದ ಕಾಲದಲ್ಲೇ ಕಾಶ್ಮೀರ ವಿಧಿ 370 ಹಿಂಪಡೆದ ಬಳಿಕ ಸೇರ್ಪಡೆಯ ಒಂದು ವರ್ಷ ಪೂರೈಸಿದೆ. ಒಂದು ವರ್ಷದ ಹಿಂದೆ ಅಕ್ಟೋಬರ್ 31ರಂದು ಇದು ಕಾರ್ಯರೂಪಕ್ಕೆ ಬಂದಿತುಸರ್ದಾರ್ ಸಾಹೇಬ್ ಅವರು ಜೀವಂತವಾಗಿದ್ದಾಗ ಇತರ ಅರಸು ಸಂಸ್ಥಾನಗಳನ್ನು ಏಕೀಕರಿಸುವ ಜೊತೆಗೆ ಜವಾಬ್ದಾರಿಯನ್ನು ಅವರಿಗೆ ನೀಡಿದ್ದರೆ, ಸ್ವಾತಂತ್ರ್ಯ ಬಂದ ಹಲವು ವರ್ಷಗಳ ನಂತರ ನಾನು ಇದನ್ನು ಮಾಡಬೇಕಾಗಿರಲಿಲ್ಲ. ಆದರೆ ಸರ್ದಾರ್ ಸಾಹೇಬರ ಕೆಲಸ ಅಪೂರ್ಣವಾಗಿಯೇ ಉಳಿದಿತ್ತು, ಆದರೆ 130 ಕೋಟಿ ದೇಶವಾಸಿಗಳು ಕಾರ್ಯವನ್ನು ಅವರ ಪ್ರೇರಣೆಯಿಂದ ಸಾಧಿಸುವಲ್ಲಿ ಅದೃಷ್ಟಶಾಲಿಗಳಾಗಿದ್ದಾರೆ. ಕಾಶ್ಮೀರ ಈಗ ಅಭಿವೃದ್ಧಿಯ ಹೊಸ ಪಥದಲ್ಲಿ ಸಾಗಿದ್ದು, ಅದರ ಅಭಿವೃದ್ಧಿಯಲ್ಲಿ ಬರುತ್ತಿದ್ದ ಅಡೆತಡೆಗಳನ್ನು ನಿವಾರಿಸಿದೆ. ಈಶಾನ್ಯದಲ್ಲಿ ಶಾಂತಿ ಸ್ಥಾಪಿಸುವ ಮೂಲಕ ಮತ್ತು ಅದರ ಅಭಿವೃದ್ಧಿಗೆ ಕೈಗೊಂಡ ಉಪಕ್ರಮಗಳ ಮೂಲಕ ದೇಶವು ಏಕತೆಯ ಹೊಸ ಆಯಾಮಗಳನ್ನು ಸ್ಥಾಪಿಸುತ್ತಿದೆ. ಸೋಮನಾಥದ ಪುನರ್ನಿರ್ಮಾಣದ ಮೂಲಕ ಭಾರತದ ಸಾಂಸ್ಕೃತಿಕ ವೈಭವವನ್ನು ಮರಳಿ ತರುವ ಯಜ್ಞವನ್ನು ಸರ್ದಾರ್ ಪಟೇಲರು ಆರಂಭಿಸಿದ್ದರು. ದೇಶ ಅಯೋಧ್ಯಯಲ್ಲೂ ಇದನ್ನು ನೋಡಿದೆ. ಇಂದು ದೇಶ ಅಯೋಧ್ಯೆಯ ರಾಮ ಮಂದಿರದ ಕುರಿತ ಸುಪ್ರೀಂಕೋರ್ಟ್ ತೀರ್ಪಿಗೆ ಸಾಕ್ಷಿಯಾಗಿದೆ. ಮತ್ತು ಭವ್ಯ ರಾಮಮಂದಿರ ನಿರ್ಮಾಣಕ್ಕೂ ಸಾಕ್ಷಿಯಾಗಿದೆ.

ಸ್ನೇಹಿತರೆ ಇಂದು ದೇಶದ 130 ಕೋಟಿ ಜನರು ಒಟ್ಟಾಗಿ ಎಲ್ಲರಿಗೂ ಸಮಾನ ಅವಕಾಶ ಇರುವ ಸಮರ್ಥ ಮತ್ತು ಬಲಿಷ್ಠ ದೇಶವನ್ನು ಕಟ್ಟುತ್ತಿದ್ದಾರೆ. ಸರ್ದಾರ್ ಸಾಹೇಬ್ ಆಗಾಗ ಹೇಳುತ್ತಿದ್ದರು, ಅದೇನೆಂದರೆ ರೈತರು ಮತ್ತು ಶ್ರಮಿಕರು ವಿಶ್ವದ ಬುನಾದಿ ಎಂದು. ರೈತರು ಬಡವರಾಗಿ ಮತ್ತು ದುರ್ಬಲರಾಗಿ ಇರುವಂತೆ ನಾನು ಬಿಡಲು ಸಾಧ್ಯವಿಲ್ಲ, ನಾನು ಅವರನ್ನು ಹೇಗೆ ಸಶಕ್ತರನ್ನಾಗಿ ಮಾಡಬಹುದು, ಅವರು ಹೇಗೆ ತಮ್ಮ ತಲೆ ಎತ್ತಿ ನಡೆಯಬಹುದು ನಾನು ಯೋಚಿಸುತ್ತೇನೆ;

ಸ್ನೇಹಿತರೆ, ರೈತರು, ಕಾರ್ಮಿಕರು ಮತ್ತು ಬಡವರು ಯಾವಾಗ ಸ್ವಾವಲಂಬಿಗಳಾಗುತ್ತಾರೋ ಆಗ ಸಶಕ್ತರಾಗುತ್ತಾರೆ. ಇದು ಸರ್ದಾರ್ ಸಾಹೇಬ್ ಅವರ ಕನಸಾಗಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು, ಯಾವಾಗ ರೈತರು ಮತ್ತು ಕಾರ್ಮಿಕರು ಹಾಗೂ ಬಡವರು ಸಶಕ್ತರಾಗುತ್ತಾರೋ ಆಗ ನಾವು ಸ್ವಾವಲಂಬಿಯಾಗುತ್ತೇವೆ ಎಂದು. ಯಾವಾಗ ರೈತರು ಮತ್ತು ಕಾರ್ಮಿಕರು ಸ್ವಾವಲಂಬಿಗಳಾಗುತ್ತಾರೋ ಆಗ ಮಾತ್ರವೇ ದೇಶ ಸ್ವಾವಲಂಬಿಯಾಗುತ್ತದೆ. ಸ್ನೇಹಿತರೆ, ಸ್ವಾವಲಂಬಿಯಾದ ದೇಸ ಮಾತ್ರ ತನ್ನ ಪ್ರಗತಿಯ ಬಗ್ಗೆ ಮತ್ತು ಭದ್ರತೆಯ ಬಗ್ಗೆ ಆತ್ಮವಿಶ್ವಾಸದಿಂದ ಇರಲು ಸಾಧ್ಯ. ಹೀಗಾಗಿ ದೇಶ ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದೆ. ಇದಿಷ್ಟೇ ಅಲ್ಲ, ಗಡಿಯ ವಿಚಾರದಲ್ಲಿ ಭಾರತದ ಕಲ್ಪನೆ, ಚಿಂತನೆ ಎರಡೂ ಬದಲಾಗಿದೆ. ಇಂದು ನಮ್ಮ ವೀರ ಯೋಧರು ಭಾರತದ ನೆಲದ ಮೇಲೆ ಕಣ್ಣು ಹಾಕುವವರಿಗೆ ತಕ್ಕ ಉತ್ತರ ನೀಡುವ ಎದೆಗಾರಿಕೆ ತೋರಿದ್ದಾರೆ. ಇಂದಿನ ಭಾರತ ನೂರಾರು ಕಿಲೋ ಮೀಟರ್ ರಸ್ತೆಗಯನ್ನು, ಹನ್ನೆರಡಕ್ಕೂ ಹೆಚ್ಚು ಸೇತುವೆಗಳನ್ನು ಮತ್ತು ಹಲವು ಸುರಂಗಗಳನ್ನು ಗಡಿಯಲ್ಲಿ ನಿರ್ಮಿಸಿದೆ. ಇಂದಿನ ಭಾರತ ತನ್ನ ಸಾರ್ವಭೌಮತೆ ಮತ್ತು ಆತ್ಮಗೌರವದ ಸಂರಕ್ಷಣೆಗೆ ಬದ್ಧವಾಗಿದೆ ಮತ್ತು ಸಿದ್ಧವಾಗಿದೆ.

ಆದರೆ ಸ್ನೇಹಿತರೆ, ಎಲ್ಲ ಪ್ರಗತಿಯ ಪ್ರಯತ್ನಗಳ ನಡುವೆಯೂ, ಹಲವು ಸವಾಲುಗಳು ಇದ್ದು ಭಾರತ ಮತ್ತು ಇಡೀ ವಿಶ್ವ ಇದನ್ನು ಎದುರಿಸುತ್ತಿದೆ. ಕೆಲವು ಸಮಯದಿಂದ ವಿಶ್ವದ ಅನೇಕ ದೇಶಗಳಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಭಯೋತ್ಪಾದನೆಯನ್ನು ಬೆಂಬಲಿಸಿ ಕೆಲವರು ಬಹಿರಂಗವಾಗಿ ಹೊರಬಂದ ರೀತಿ ಮಾನವೀಯತೆ, ಜಗತ್ತಿಗೆ ಮತ್ತು ಶಾಂತಿ ಪ್ರಿಯರಿಗೆ ಜಾಗತಿಕ ಕಾಳಜಿಯ ವಿಷಯವಾಗಿದೆ. ಚಾಲ್ತಿಯಲ್ಲಿರುವ ವಾತಾವರಣದಲ್ಲಿ, ಪ್ರಪಂಚದ ಎಲ್ಲಾ ದೇಶಗಳು, ಎಲ್ಲಾ ಸರ್ಕಾರಗಳು, ಎಲ್ಲಾ ಧರ್ಮಗಳು ಭಯೋತ್ಪಾದನೆಯ ವಿರುದ್ಧ ಒಂದಾಗಬೇಕಾದ ತುರ್ತು ಅವಶ್ಯಕತೆಯಿದೆ. ಶಾಂತಿ, ಸಹೋದರತ್ವ ಮತ್ತು ಪರಸ್ಪರ ಗೌರವದ ಭಾವನೆ ಮಾನವೀಯತೆಯ ನಿಜವಾದ ಗುರುತಾಗಿದೆ. ಶಾಂತಿ, ಏಕತೆ ಮತ್ತು ಸಾಮರಸ್ಯವು ಅದರ ಮಾರ್ಗವಾಗಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಯಾರೂ ಪ್ರಯೋಜನ ಪಡೆಯುವುದಿಲ್ಲ. ಕಳೆದ ಹಲವು ದಶಕಗಳಿಂದ ಭಾರತ ಭಯೋತ್ಪಾದನೆಗೆ ಬಲಿಯಾಗಿದೆ. ಭಾರತವು ತನ್ನ ಸಾವಿರಾರು ಧೈರ್ಯಶಾಲಿ ಸೈನಿಕರನ್ನು, ಸಾವಿರಾರು ಮುಗ್ಧ ನಾಗರಿಕರನ್ನು ಕಳೆದುಕೊಂಡಿದೆ, ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ ಮತ್ತು ಅನೇಕ ಸಹೋದರಿಯರು ತಮ್ಮ ಸಹೋದರರನ್ನು ಕಳೆದುಕೊಂಡಿದ್ದಾರೆ. ಭಯೋತ್ಪಾದನೆಯ ನೋವನ್ನು ಭಾರತ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ. ಭಾರತ ಯಾವಾಗಲೂ ಭಯೋತ್ಪಾದನೆಗೆ ಏಕತೆ ಮತ್ತು ಬಲವಾದ ಇಚ್ಠಾ ಶಕ್ತಿಯಿಂದ ಪ್ರತಿಕ್ರಿಯಿಸಿದೆ. ಭಯೋತ್ಪಾದನೆಯೊಂದಿಗಿರುವ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಪ್ರತಿಯೊಂದು ಶಕ್ತಿಯನ್ನು ಮಣಿಸಲು ಇಂದು, ಇಡೀ ಜಗತ್ತು ಒಂದಾಗಬೇಕಿದೆ.

ಭಾರತವು ಭಯೋತ್ಪಾದನೆಯ ನೋವನ್ನು ಸಂಪೂರ್ಣ ಅರಿತಿದೆ. ಭಾರತ ಸದಾ ತನ್ನ ಸ್ನೇಹಿತರಿಗೆ ಸ್ಪಂದಿಸಿದೆ. ಭಾರತ ಸದಾ ಏಕತೆಯ ಕಲ್ಪನೆಗೆ ಆದ್ಯತೆ ನೀಡಿದೆ. ನಾವು ಸರ್ವೇ ಭವಂತು ಸುಖಿನಃ  -ಎಲ್ಲರೂ ಸುಖವಾಗಿರಲಿ ಎಂಬ ವಾಕ್ಯದಿಂದ ಸ್ಫೂರ್ತಿ ಪಡೆದವರು. ನಾವು ವಸುದೈವ ಕುಟುಂಬಕಮ್ ಅಂದರೆ ಇಡೀ ಜಗತ್ತೆ ಒಂದು ಕುಟುಂಬ ಎಂದು ತಿಳಿದವರು. ಇದು ನಮ್ಮ ಬದುಕಿನ ಮಂತ್ರ. ಭಗವಾನ್ ಬುದ್ಧನಿಂದ ಮಹಾತ್ಮಾಗಾಂಧೀವರೆಗೆ ಭಾರತ ಶಾಂತಿ ಮತ್ತು ಏಕತೆಯ ಸಂದೇಶವನ್ನು ಜಗತ್ತಿಗೆ ನೀಡಿದೆ. ಸ್ನೇಹಿತರೆ, ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಜೀ ಅವರು ಹೀಗೆ ಬರೆಯುತ್ತಾರೆ: "ಭಾರತ ಸ್ವರ್ಗವನ್ನೇ ಭುವಿಗೆ ಇಳಿಸುವ ಕಲ್ಪನೆಯಾಗಿದೆ, ಭಾರತ ಜನರನ್ನು ಜಾಗೃತಿಗೊಳಿಸುವ ಅಭಿವ್ಯಕ್ತಿಯಾಗಿದೆ.ನಮ್ಮ ದೇಶದ ಅಸ್ತಿತ್ವ ನಮ್ಮ ಚಿಂತನೆಯಲ್ಲಿದೆ, ನಮ್ಮ ಭಾವನೆಯಲ್ಲಿದೆ, ನಮ್ಮ ಒಮ್ಮತದಲ್ಲಿದೆ ಮತ್ತು ಪ್ರಯತ್ನದಲ್ಲಿದೆ. ವೈವಿದ್ಯತೆ ಭಾರತದ ದೊಡ್ಡ ಶಕ್ತಿಯಾಗಿದೆ. ಇಷ್ಟೊಂದು ಬಗೆಯ ಆಡು ಭಾಷೆ, ಭಾಷೆ, ವಿವಿಧ ರೀತಿಯ ಉಡುಗೆ ತೊಡುಗೆ, ಆಹಾರ ಪದ್ಧತಿ, ಸಂಪ್ರದಾಯ, ನಂಬಿಕೆಯನ್ನು ಬೇರೆ ಯಾವುದೇ ದೇಶದಲ್ಲಿ ನೋಡಲು ಸಾಧ್ಯವಿಲ್ಲ. ಇದನ್ನು ನಮ್ಮ ವೇದಗಳಲ್ಲೂ ಬರೆಯಲಾಗಿದೆ - जनं बिभ्रति बहुधा विवाचसं नानाधर्माणं पृथ्वीवी यथौकसम्। सहस्त्रं धारा द्रविणस्य में दुहां ध्रुवेव धेनुरन-पस्फुरन्ति। ಅಂದರೆ, ನಮ್ಮ ತಾಯಿನಾಡು ವಿಭಿನ್ನ ಭಾಷೆಗಳು, ವಿಭಿನ್ನ ನೀತಿಗಳು, ಆಲೋಚನೆಗಳು, ನಡವಳಿಕೆಗಳನ್ನು ಹೊಂದಿರುವ ಜನರನ್ನು ಕುಟುಂಬದಂತೆಯೇ ಹೊಂದಿದೆ. ಆದ್ದರಿಂದ, ನಮ್ಮ ವೈವಿಧ್ಯತೆಯು ನಮ್ಮ ಗುರುತಾಗಿದೆ. ವೈವಿಧ್ಯತೆಯ ನಡುವೆಯೂ ಏಕತೆಯನ್ನು ಜೀವಂತವಾಗಿಡುವುದು ನಮ್ಮದೇಶಕ್ಕೆ ನಾವು ಮಾಡುವ ಕರ್ತವ್ಯವಾಗಿದೆ. ನಾವು ಒಂದಾಗಿದ್ದರೆ ನಾವು ಅಜೇಯರಾಗಿರುತ್ತೇವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ನಾವು ಒಗ್ಗಟ್ಟಾಗಿದ್ದರೆ ನಾವು ಅಸಾಮಾನ್ಯರು. ನಾವು ಒಗ್ಗಟ್ಟಾಗಿದ್ದರೆ ನಾವು ಅನನ್ಯರು. ಆದರೆ ಸ್ನೇಹಿತರೇ, ನಮ್ಮ ಏಕತೆ ಮತ್ತು ಬಲವು ಇತರರೊಂದಿಗೆ ಇಳಿಯಬಾರದು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ವೈವಿಧ್ಯತೆಯನ್ನು ನಮ್ಮ ದೌರ್ಬಲ್ಯವನ್ನಾಗಿ ಮಾಡಲು ಅವರು ಬಯಸುತ್ತಾರೆ. ವೈವಿಧ್ಯತೆಯ ಆಧಾರದ ಮೇಲೆ ಪರಸ್ಪರರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಅವರು ಬಯಸುತ್ತಾರೆ. ಶಕ್ತಿಗಳನ್ನು ಗುರುತಿಸುವುದು ಬಹಳ ಅವಶ್ಯಕ ಮತ್ತು ಪ್ರತಿಯೊಬ್ಬ ಭಾರತೀಯರೂ ಅಂತಹ ಶಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು.

ಸ್ನೇಹಿತರೆ, ಇಂದು ಅರೆ ಸೇನಾ ಪಡೆಯ ಪರೇಡ್ ವೀಕ್ಷಿಸುವಾಗ ನಿಮ್ಮ ಅದ್ಭುತ ಕೌಶಲ್ಯ ನೋಡಿದಾಗ, ನನ್ನ ಮನದಲ್ಲಿ ಬೇರೆಯದೇ ಒಂದು ಚಿತ್ರ ಮೂಡಿತು. ಅದು ಪುಲ್ವಾಮಾ ದಾಳಿಯ ಚಿತ್ರಣ. ಅಂದು ದಾಳಿಯಲ್ಲಿ ಅರೆ ಸೇನಾ ಪಡೆಗಳಿಗೆ ಸೇರಿದ ವೀರ ಯೋಧರು ಹುತಾತ್ಮರಾಗಿದ್ದರು. ದೇಶ ಎಂದಿಗೂ ಘಟನೆಯನ್ನು ಮರೆಯುವುದಿಲ್ಲ ಮತ್ತು ಇಡೀ ದೇಶ ತನ್ನ ವೀರ ಯೋಧರ ಅಗಲಿಕೆಯಿಂದ ದುಃಖಿತವಾಗಿದೆ. ಪುಲ್ವಾಮಾ ದಾಳಿಯಲ್ಲೂ ಕೆಲವರು ರಾಜಕೀಯ ಲಾಭಕ್ಕಾಗಿ ಹವಣಿಸಿದರು. ಘಟನೆಯ ಬಗ್ಗೆ ನೀಡಲಾದ ಬೇಜವಾಬ್ದಾರಿ ಹೇಳಿಕೆಗಳನ್ನೂ ದೇಶ ಮರೆಯುವುದಿಲ್ಲ. ಸ್ವಾರ್ಥದಿಂದ ಕೂಡಿದ ಕುರೂಪ ರಾಜಕಾರಣವನ್ನು ಮತ್ತು ಉದ್ಧಟತನದಿಂದ ದೇಶ ಘಾಸಿಗೊಂಡಿದೆ. ಸಮಯದಲ್ಲಿ, ವೀರರನ್ನು ನೋಡುತ್ತಾ, ವಿವಾದಗಳಿಂದ ನನ್ನನ್ನು ನಾನು ದೂರವಿರುವ ಮೂಲಕ ನಾನು ಆರೋಪಗಳನ್ನು ಕೇಳುತ್ತಲೇ ಇದ್ದೆ. ಹುತಾತ್ಮರಾದ ಸೈನಿಕರಿಂದ ನನ್ನ ಹೃದಯವು ಘಾಸಿಗೊಂಡಿತ್ತು. ಆದರೆ ಇತ್ತೀಚೆಗೆ ನಮ್ಮ ನೆರೆಯ ದೇಶದಿಂದ ಬಂದ ಹೇಳಿಕೆಗಳು, ಅವರ ಸಂಸತ್ತಿನಲ್ಲಿ ಒಪ್ಪಿಕೊಂಡಿರುವ ಅಂಶವು ಜನರ ನೈಜ ಮುಖಗಳನ್ನು ಬಯಲು ಮಾಡಿವೆ. ಪುಲ್ವಾಮಾ ದಾಳಿಯ ನಂತರ ಮಾಡಿದ ರಾಜಕೀಯವು ಜನರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹೆಚ್ಚಿಸಿಕೊಳ್ಳಲು ಎಷ್ಟು ಕೆಳಮಟ್ಟದಲ್ಲಿ ಇಳಿಯಬಹುದು ಎಂಬುದಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ. ನಾನು ಮಹಾನ್ ವ್ಯಕ್ತಿಯ  ದೈತ್ಯ ಪ್ರತಿಮೆಯ ಮುಂದೆ ನಿಂತು ಜನರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ವಿಶೇಷ ವಿನಂತಿ ಮಾಡುತ್ತೇನೆ, ದೇಶದ ಭದ್ರತೆಯ ಹಿತದೃಷ್ಟಿಯಿಂದ ದಯವಿಟ್ಟು ಅಂತಹ ರಾಜಕೀಯವನ್ನು ಮಾಡಬೇಡಿ ಮತ್ತು ನಮ್ಮ ಭದ್ರತಾ ಪಡೆಗಳ ಸ್ಥೈರ್ಯವನ್ನು ಕುಗ್ಗಿಸಬೇಡಿ. ನಿಮ್ಮ ಸ್ವಾರ್ಥಕ್ಕಾಗಿ ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೆ ರಾಷ್ಟ್ರ ವಿರೋಧಿ ಶಕ್ತಿಗಳ ಕೈಗೆ ಆಟದ ವಸ್ತುವಾಗುವ ಮೂಲಕ ನೀವು ದೇಶಕ್ಕೆ ಅಥವಾ ನಿಮ್ಮ ಪಕ್ಷಕ್ಕೆ ಯಾವುದೇ ಒಳಿತು ಮಾಡಲು ಸಾಧ್ಯವಾಗುವುದಿಲ್ಲ.

ಸ್ನೇಹಿತರೆ, ನಾವು ಸದಾ ನೆನಪಿನಲ್ಲಿಡಬೇಕಾದ ಅಂಶವೆಂದರೆ, ದೇಶದ ಹಿತಾಸಕ್ತಿ ನಮಗೆಲ್ಲರಿಗೂ ಪರಮೋಚ್ಛವಾಗಿದೆ. ನಾವು ಪ್ರತಿಯೊಬ್ಬರ ಹಿತದ ಬಗ್ಗೆ ಚಿಂತಿಸಿದಾಗ ಮಾತ್ರ ನಾವು ಪ್ರಗತಿ ಸಾಧಿಸಬಹುದು. ಸೋದರ ಮತ್ತು ಸೋದರಿಯರೇ ಇಂದು ಸರ್ದಾರ್ ಪಟೇಲ್ ಅವರ ಕಲ್ಪನೆಯ ಅದೇ ಪ್ರತಿಜ್ಞೆಯನ್ನು ಪುನರುಚ್ಚರಿಸುವ ಸಂದರ್ಭ ಬಂದಿದೆ. ಸಶಕ್ತ, ಸಮೃದ್ಧ ಮತ್ತು ಸ್ವಾವಲಂಬಿ ಭಾರತ. ಶುಭ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ದೇಶದ ಹೆಮ್ಮೆ ಮತ್ತು ವೈಭವವನ್ನು ಹೆಚ್ಚಿಸುವ ಪ್ರತಿಜ್ಞೆಯನ್ನು ನಾವು ತೆಗೆದುಕೊಳ್ಳೋಣ ಮತ್ತು ಸರ್ದಾರ್ ಪಟೇಲ್ ಅವರ ಮುಂದೆ ನಮಿಸುವ ಮೂಲಕ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ.

ಪ್ರತಿಜ್ಞೆಯೊಂದಿಗೆ, ನಾನು ಏಕತಾ ದಿನದ ಸಂದರ್ಭದಲ್ಲಿ ಎಲ್ಲ ದೇಶವಾಸಿಗಳಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸರ್ದಾರ್ ಸಾಹೇಬ್ ಅವರಿಗೆ ನನ್ನ ಗೌರವಪೂರ್ವ ನಮನಗಳನ್ನು ಸಲ್ಲಿಸುತ್ತಾ, ವಾಲ್ಮೀಕಿ ಜಯಂತಿಯಂದು ಮತ್ತು ಸರ್ದಾರ್ ಸಾಹೇಬ್ ಅವರ ಜಯಂತಿಯಂದು ಶುಭಾಶಯಗಳನ್ನು ಸಲ್ಲಿಸುತ್ತಾ ನನ್ನ ಮಾತು ಮುಗಿಸುತ್ತೇನೆ.

ತುಂಬಾ ತುಂಬಾ ಧನ್ಯವಾದಗಳು!

***


(Release ID: 1669846) Visitor Counter : 229