ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರಿಂದ ಸರ್ದಾರ್ ಸರೋವರ ಅಣೆಕಟ್ಟೆಯ ಡೈನಾಮಿಕ್ ಬೆಳಕಿನ ವ್ಯವಸ್ಥೆ ಉದ್ಘಾಟನೆ


ವಿಶ್ವಸಂಸ್ಥೆಯ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಏಕತಾ ಪ್ರತಿಮೆಯ ವೆಬ್‌ಸೈಟ್ ಅನಾವರಣ

ಕೆವಾಡಿಯಾ ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ

ಯೂನಿಟಿ ಗ್ಲೋ ಗಾರ್ಡನ್ ಉದ್ಘಾಟಿಸಿ, ಭೇಟಿ ನೀಡಿದ ಪ್ರಧಾನಿ

Posted On: 30 OCT 2020 8:23PM by PIB Bengaluru

ಸರ್ದಾರ್ ಸರೋವರ ಅಣೆಕಟ್ಟೆಯ ಡೈನಾಮಿಕ್ ಬೆಳಕಿನ ವ್ಯವಸ್ಥೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಅವರು ವಿಶ್ವಸಂಸ್ಥೆಯ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಏಕತಾ ಪ್ರತಿಮೆಯ ವೆಬ್ಸೈಟ್ ಅನ್ನು ಅನಾವರಣಗೊಳಿಸಿದರು ಮತ್ತು ಯೂನಿಟಿ ಗ್ಲೋ ಗಾರ್ಡನ್ನಲ್ಲಿ ಕೆವಾಡಿಯಾ ಆ್ಯಪ್ ಗೆ ಚಾಲನೆ ನೀಡಿದರು. ಅವರು ಪಾಪಾಸು ಕಳ್ಳಿ ಉದ್ಯಾನ (ಕ್ಯಾಕ್ಟಸ್ ಗಾರ್ಡನ್) ವನ್ನು ಉದ್ಘಾಟಿಸಿ, ಅಲ್ಲಿಗೆ ಭೇಟಿ ನೀಡಿದರು.

ಸರ್ದಾರ್ ಸರೋವರ ಅಣೆಕಟ್ಟೆಯ ಡೈನಾಮಿಕ್ ಬೆಳಕಿನ ವ್ಯವಸ್ಥೆ

ಯೂನಿಟಿ ಗ್ಲೋ ಗಾರ್ಡನ್

ಇದು 3.61 ಎಕರೆ ಪ್ರದೇಶದಲ್ಲಿ ಹರಡಿರುವ ವಿಶಿಷ್ಟ ಥೀಮ್ ಪಾರ್ಕ್ ಆಗಿದೆ. ಇದು ಆಪ್ಟಿಕಲ್ ಕಲ್ಪನಾಲೋಕ ಸೃಷ್ಟಿಸುವ ವ್ಯವಸ್ಥೆಯನ್ನು ಹೊಂದಿದೆ. ರಾತ್ರಿಯ ವೇಳೆ ಪ್ರವಾಸದ  ಸಂತೋಷವನ್ನು ಅನುಭವಿಸಲು  ಇಲ್ಲಿಗೆ ಬರುವಂತೆ ಪ್ರವಾಸಿಗರಿಗೆ ಪ್ರಧಾನಮಂತ್ರಿಯವರು ಸ್ವಾಗತ ಕೋರಿದರು.

ಪಾಪಾಸು ಕಳ್ಳಿ ಉದ್ಯಾನ (ಕ್ಯಾಕ್ಟಸ್ ಗಾರ್ಡನ್)

ಉದ್ಯಾನವು 17 ದೇಶಗಳ 450 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಾಪಾಸು ಕಳ್ಳಿ ಪ್ರಭೇದಗಳನ್ನು ಹೊಂದಿರುವ ಭವ್ಯವಾದ ಹಸಿರುಮನೆಯಾಗಿದೆ. ಇದು 25 ಎಕರೆ ಪ್ರದೇಶದಲ್ಲಿದ್ದು 1.9 ಲಕ್ಷ ಪಾಪಾಸು ಕಳ್ಳಿ ಗಿಡಗಳು ಸೇರಿದಂತೆ ಸುಮಾರು 6 ಲಕ್ಷ ಗಿಡಗಳನ್ನು ಹೊಂದಿದೆ.

***



(Release ID: 1669005) Visitor Counter : 174