ಪ್ರಧಾನ ಮಂತ್ರಿಯವರ ಕಛೇರಿ

ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ


ಕೆವಾಡಿಯಾದ ಸಮಗ್ರ ಅಭಿವೃದ್ಧಿ ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

ಏಕತಾ ಪ್ರತಿಮೆಗೆ ಏಕತಾ  ಕ್ರ್ಯೂಸ್ ಸೇವೆಗೆ ಹಸಿರು ನಿಶಾನೆ

Posted On: 30 OCT 2020 6:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, ಬುಡಕಟ್ಟು ಹೋಂ ಸ್ಟೇ ಸೇರಿವೆ. ಜೊತೆಗೆ ಪ್ರಧಾನಿ ಏಕತಾ ಪ್ರತಿಮೆವರೆಗಿನ ಏಕತಾ ಕ್ರ್ಯೂಸ್ ಸೇವೆಗೂ ಹಸಿರು ನಿಶಾನೆ ತೋರಿದರು.

ಜಂಗಲ್ ಸಫಾರಿ ಮತ್ತು ಭೂಮಿಯಂತೆ ಗೋಳಾಕಾರಣ ಪಂಜರ

ಎತ್ತರಕ್ಕೆ ಹಾರಿ ಗೋಳಾಕಾರದ ಪಂಜರ, ಪಕ್ಷಿಗಳ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ತಾಣವಾಗಿದೆ. ಕೆವಾಡಿಯಾಕ್ಕೆ ಬಂದು ಜಂಗಲ್ ಸಫಾರಿ ಸಮುಚ್ಛಯದ ಒಂದು ಭಾಗವಾಗಿರುವ ಪಂಜರಕ್ಕೆ ಭೇಟಿ ನೀಡಿ. ಇದು ಉತ್ತಮ ಕಲಿಕೆಯ ಅನುಭವವಾಗಿರುತ್ತದೆ.ಎಂದು ಪ್ರಧಾನಮಂತ್ರಿ ಹೇಳಿದರು.

ಜಂಗಲ್ ಸಫಾರಿ ಅತ್ಯಾಧುನಿಕ ಪ್ರಾಣಿಗಳ ಉದ್ಯಾನವಾಗಿದ್ದು, 375 ಎಕರೆ ಪ್ರದೇಶದಲ್ಲಿ 29ರಿಂದ 180 ಮೀಟರ್ ವರೆಗಿನ ಎತ್ತರದ ಏಳು ವಿವಿಧ ಹಂತಗಳ ಶ್ರೇಣಿಯನ್ನೊಳಗೊಂಡಿದೆ. ಇದರಲ್ಲ 1100 ಹಕ್ಕಿಗಳು ಮತ್ತು ಪ್ರಾಣಿಗಳು ಹಾಗೂ 5 ಲಕ್ಷ ಗಿಡಮರಗಳಿವೆ. ಇದು ಅತ್ಯಂತ ವೇಗವಾಗಿ ನಿರ್ಮಿಸಲಾದ ಜಂಗಲ್ ಸಫಾರಿಯಾಗಿದೆ. ಪ್ರಾಣಿಗಳ ಉದ್ಯಾನದಲ್ಲಿ ಎರಡು ಪಂಜರಗಳಿವೆಒಂದರಲ್ಲಿ ದೇಶೀಯ ಹಕ್ಕಿಗಳಿದ್ದರೆ ಮತ್ತೊಂದರಲ್ಲಿ ವಿಶಿಷ್ಟ ಪಕ್ಷಿಗಳಿವೆ. ಇದು ವಿಶ್ವದ ಅತಿ ದೊಡ್ಡ ಭೂಮಿಯಾಕಾರದ ಪಕ್ಷಿ ಪಂಜರವಾಗಿದೆ. ಪಂಜರಗಳು ಸಾಕುಪಕ್ಷಿ ವಲಯದಿಂದ ಸುತ್ತುವರಿದಿದ್ದು, ಇಲ್ಲಿ ಮಕಾವ್, ಕಾಕಟೂ, ವಿವಿಧ ಜಾತಿಯ ಮೊಲ ಮುಂತಾದ ಪ್ರಾಣಿ ಪಕ್ಷಿಗಳನ್ನು ಎತ್ತಿ ಮುದ್ದಾಡುವ ವಿಶಿಷ್ಟ ಸ್ಪರ್ಶಾವಕಾಶವಿದೆ ಮತ್ತು ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಏಕತಾ ಕ್ರ್ಯೂಸ್ ಸೇವೆ

ಏಕತಾ ಕ್ರೂಸ್ ಸೇವೆಯಲ್ಲಿ ಶ್ರೇಷ್ಠ ಭಾರತ್ ಭವನದಿಂದ ಏಕತಾ ಪ್ರತಿಮೆವರೆಗೆ 6 ಕಿ.ಮೀ ದೂರವನ್ನು ಕ್ರಮಿಸಿ ದೋಣಿಯಿಂದ ಏಕತಾ ಪ್ರತಿಮೆಯನ್ನು ವೀಕ್ಷಿಸುವ ಅನುಭವ ಪಡೆಯಬಹುದು. 40 ನಿಮಿಷಗಳ ದೋಣಿ ವಿಹಾರ ಇದಾಗಿದ್ದು, ಫೆರ್ರಿ ಏಕಕಾಲದಲ್ಲಿ 200 ಪ್ರಯಾಣಿಕರನ್ನು ಕರೆದೊಯ್ಯಬಲ್ಲುದಾಗಿದೆ. ದೋಣಿ ಸೇವೆಯ ಕಾರ್ಯಾಚರಣೆಗಾಗಿ ಹೊಸ ಗೋರಾ ಸೇತುವೆಯನ್ನು ನಿರ್ಮಿಸಲಾಗಿದೆ. ಏಕತಾ ಪ್ರತಿಮೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಬೋಟಿಂಗ್ ಸೇವೆಗಳನ್ನು ಒದಗಿಸಲು ಬೋಟಿಂಗ್ ಕಾಲುವೆ ನಿರ್ಮಿಸಲಾಗಿದೆ.

***



(Release ID: 1668926) Visitor Counter : 262