ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಕುಂಬಾರಿಕೆ ವೃತ್ತಿಪರ ಕುಟುಂಬಗಳಿಗೆ ವಿದ್ಯುತ್ ಕುಂಬಾರಿಕಾ ಚಕ್ರ ಉಪಕರಣಗಳವಿತರಣೆ ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ.

Posted On: 28 OCT 2020 3:56PM by PIB Bengaluru

ಸಣ್ಣ, ಮಧ್ಯಮ, ಸೂಕ್ಷ್ಮ ಕೈಗಾರಿಕೆ (ಎಮ್ ಎಸ್ ಎಮ್ ಇ)  ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದ ನಾಂದೇಡ್ ಮತ್ತು ಪರಭಾನಿ ಜಿಲ್ಲೆಗಳಲ್ಲಿನ 100 ಕುಂಬಾರಿಕೆ ವೃತ್ತಿಪರ ಕುಟುಂಬಗಳಿಗೆ ವಿದ್ಯುತ್ ಕುಂಬಾರಿಕಾ ಚಕ್ರ ಉಪಕರಣಗಳನ್ನು ವಿತರಿಸಿದರು.  

ಖಾದಿ ಮತ್ತು ಗ್ರಾಮೊದ್ಯೋಗ ಆಯೋಗ (ಕೆವಿಐಸಿ)ದ ಮಹತ್ವದ ಕಾರ್ಯಕ್ರಮ ಕುಂಬಾರ್ ಸಶಕ್ತೀಕರಣ ಯೋಜನೆಯಾಗಿದ್ದು, ವೀಡಿಯೊ-ಕಾನ್ಫರೆನ್ಸ್ ಮೂಲಕ, ಕೆವಿಐಸಿಯಿಂದ 10 ದಿನಗಳ ತರಬೇತಿಯನ್ನು ನೀಡಲಾಗಿದೆ.

ಸುಮಾರು 15 ಗ್ರಾಮಗಳಲ್ಲಿ  ಕುಂಬಾರಿಕೆ ವೃತ್ತಿಪರರು - ನಾಂದೇಡ್‌ನ 10 ಗ್ರಾಮಗಳು ಮತ್ತು ಪರಭಾನಿ ಜಿಲ್ಲೆಗಳ 5 ಗ್ರಾಮಗಳು – ಇವರುಗಳಿಗೆ ಕುಂಬಾರಿಕಾ ಉಪಕರಣಗಳನ್ನು ವಿತರಿಸಲಾಯಿತು.  ಈ ಉಪಕರಣಗಳ ವಿತರಣೆಯು ಸಮುದಾಯದ ಕನಿಷ್ಠ 400 ಸದಸ್ಯರಿಗೆ ಅವರ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸುವ ಮೂಲಕ ಪ್ರಯೋಜನಕಾರಿಯಾಗಲಿದೆ,  ಇದು ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರ ಕನಸಾಗಿದೆ.

ದೇಶದಲ್ಲಿ ಕುಂಬಾರಿಕೆ ವೃತ್ತಿಪರರ ಜೀವನವನ್ನು ಸಶಕ್ತಪಡಿಸಲು ಮತ್ತು ಸುಧಾರಿಸಲು ಸ್ವಾತಂತ್ರ್ಯದ ನಂತರ ಕೈಗೊಂಡ ಮೊದಲ ರೀತಿಯ ಪ್ರಯತ್ನ ಇದಾಗಿದೆ ಎಂದು ಕೆ.ವಿ.ಐ.ಸಿಯ ಕುಂಬಾರ್ ಸಶಕ್ತೀಕರಣ ಯೋಜನೆಯನ್ನು ಶ್ರೀ ಗಡ್ಕರಿಯವರು ಶ್ಲಾಘಿಸಿದರು.  “ಮೂಲೆಗುಂಪಾಗಿರುವ ಕುಂಬಾರಿಕೆ ವೃತ್ತಿಪರರ ಸಮುದಾಯ”ವನ್ನು ಸಬಲೀಕರಣಗೊಳಿಸುವುದು ಮತ್ತು ನಶಿಸುತ್ತಿರುವ ಕುಂಬಾರಿಕೆಯ ಕಲೆಯನ್ನು ಪುನರುಜ್ಜೀವನಗೊಳಿಸುವುದು ಪ್ರಧಾನ ಮಂತ್ರಿಯವರ ಕನಸು.  ಕುಂಬಾರ್ ಸಶಕ್ತೀಕರಣ ಯೋಜನೆಯಡಿ ಸುಧಾರಿತ ಉಪಕರಣಗಳ ಬಳಸುವಿಕೆಯ ಸರಿಯಾದ ತರಬೇತಿ ಮತ್ತು ವಿತರಣೆಯೊಂದಿಗೆ, ಕುಂಬಾರಿಕೆ ವೃತ್ತಿಪರರ ಉತ್ಪಾದಕತೆ ಮತ್ತು ಆದಾಯವು ಹಲವಾರು ಪಟ್ಟು ಹೆಚ್ಚಾಗಿದೆ.  ಈ ಯೋಜನೆಯನ್ನು ಮಹಾರಾಷ್ಟ್ರದ ಇತರ ದೂರದ ಪ್ರದೇಶಗಳಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಜಾರಿಗೆ ತರಲಾಗುವುದು” ಎಂದು ಶ್ರೀ ಗಡ್ಕರಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಸರ್ಕಾರದ ಬೆಂಬಲವನ್ನು ಪಡೆದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಕೆಲವು ಕುಶಲಕರ್ಮಿಗಳೊಂದಿಗೆ ಮಾತುಕತೆ ನಡೆಸಿದರು.   ವಿದ್ಯುತ್ ಕುಂಬಾರಿಕಾ ಚಕ್ರ ಉಪಕರಣಗಳನ್ನು ಬಳಸಿ ಉತ್ಪಾದನೆಯ ಹೆಚ್ಚಳದೊಂದಿಗೆ, ಅವರು ಈಗ ಗಳಿಸಿದ್ದಕ್ಕಿಂತ 3-4 ಪಟ್ಟು ಹೆಚ್ಚು ಗಳಿಸುತ್ತಿದ್ದಾರೆ ಎಂದು ಕುಶಲಕರ್ಮಿಗಳು ಹೇಳಿದರು.

ವಿಡಿಯೋ-ಕಾನ್ಫರೆನ್ಸ್ ಮೂಲಕ ಜೊತೆಗೂಡಿದ ಕೆವಿಐಸಿ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಸಕ್ಸೇನಾರವರು ಮಾತನಾಡಿ ದೇಶಾದ್ಯಂತ ಈವರೆಗೆ 18,000 ಕ್ಕೂ ಹೆಚ್ಚು ವಿದ್ಯುತ್ ಕುಂಬಾರಿಕಾ ಚಕ್ರ ಉಪಕರಣಗಳನ್ನು ವಿತರಿಸಲಾಗಿದ್ದು, ಸಮುದಾಯದ ಸುಮಾರು 80,000 ಜನರಿಗೆ ಅನುಕೂಲವಾಗಿದೆ.  ಕುಂಬಾರ್ ಸಶಕ್ತೀಕರಣ ಯೋಜನೆಯಡಿ ಕುಂಬಾರಿಕೆ ವೃತ್ತಿಪರರ ಸರಾಸರಿ ಆದಾಯವು ತಿಂಗಳಿಗೆ ಸುಮಾರು 3000 ರೂಪಾಯಿಗಳಿಂದ ಸುಮಾರು 10,000 ರೂಪಾಯಿಗಳಿಗೆ ಏರಿದೆ ಎಂದು ಅವರು ಹೇಳಿದರು. "ದೇಶದ ಪ್ರತಿ ಕುಂಬಾರಿಕೆ ವೃತ್ತಿಪರರನ್ನು ಸಭಲೀಕರಿಸುವುದು ಕಾರ್ಯಕ್ರಮದ ಏಕೈಕ ಉದ್ದೇಶವಾಗಿದೆ ಮತ್ತು ಕೆವಿಐಸಿ ಈ ಗುರಿಯನ್ನು ಸಾಧಿಸುವಲ್ಲಿ ಸಕಲ ಪ್ರಯತ್ನವನ್ನು ಮಾಡುವುದು " ಎಂದು ಅವರು ಹೇಳಿದರು.

*****



(Release ID: 1668263) Visitor Counter : 208