ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಕೆವಾಡಿಯಾದಲ್ಲಿ ಅಕ್ಟೋಬರ್ 31ರಂದು ಏಕತಾ ದಿವಸ್ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿ


ಏಕತಾ ಪ್ರತಿಜ್ಞಾವಿಧಿ ಬೋಧನೆ ಮತ್ತು ಏಕತಾ ದಿನದ ಪರೇಡ್ ನಲ್ಲಿ ಭಾಗಿ

ಸಮಗ್ರ ಫೌಂಡೇಷನ್ ಕೋರ್ಸ್ ‘ಆರಂಭ್’ನ ಎರಡನೇ ಆವೃತ್ತಿಯಲ್ಲಿ ಭಾರತೀಯ ನಾಗರಿಕ ಸೇವೆಯ ತರಬೇತಿ ನಿರತ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿರುವ ಶ್ರೀ ನರೇಂದ್ರ ಮೋದಿ

ಕೆವಾಡಿಯಾದಲ್ಲಿ ಸಮಗ್ರ ಅಭಿವೃದ್ಧಿ ಅಡಿಯಲ್ಲಿ ಅಕ್ಟೋಬರ್ 30 ಮತ್ತು 31ರಂದು ಹಲವು ಯೋಜನೆಗಳ ಉದ್ಘಾಟನೆ

Posted On: 28 OCT 2020 5:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿಯ ಅಂಗವಾಗಿ ಅಕ್ಟೋಬರ್ 31ರಂದು ಗುಜರಾತ್ ನ ಕೆವಾಡಿಯಾದಲ್ಲಿ ನಡೆಯಲಿರುವ ಏಕತಾ ದಿನದ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. 
ಶ್ರೀ ನರೇಂದ್ರ ಮೋದಿ ಅವರು ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದು, ಏಕತಾ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಏಕತಾ ದಿನದ ಪರೇಡ್ ವೀಕ್ಷಿಸಲಿದ್ದಾರೆ. 
ಪ್ರಧಾನಮಂತ್ರಿಯವರು ಕೆವಾಡಿಯಾದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಸ್ಸೂರಿಯ ಎಲ್.ಬಿ.ಎಸ್.ಎನ್.ಎ.ಎ.ನಲ್ಲಿನ ಭಾರತೀಯ ನಾಗರಿಕ ಸೇವೆಯ ಪ್ರೊಬೇಷನರ್ಸ್ ಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದು 2019ರಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ ಆರಂಭ್ ಸಮಗ್ರ ಫೌಂಡೇಷನ್ ಕೋರ್ಸ್ ನ ಭಾಗವಾಗಿದೆ. 
ಕೆವಾಡಿಯಾದ  ಸಮಗ್ರ ಅಭಿವೃದ್ಧಿಯ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳಿಗೆ 2020ರ ಅಕ್ಟೋಬರ್ 30 ಮತ್ತು 31ರಂದು ಉದ್ಘಾನೆ ನೆರವೇರಿಸಲಿದ್ದಾರೆ.
ಇವುಗಳಲ್ಲಿ ಏಕತಾ ಪ್ರತಿಮೆಗೆ ಏಕತಾ ಕ್ಯ್ರೂಸ್ ಸೇವೆಯ ಉದ್ಘಾಟನೆ, ಏಕತಾ ಮಾಲ್ ಮತ್ತು ಮಕ್ಕಳ ಪೌಷ್ಟಿಕ ಪಾರ್ಕ್ ಉದ್ಘಾಟನೆಯೂ ಸೇರಿದೆ. ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಎಲ್ಲ ಅಧಿಕೃತ ಭಾಷೆಗಳಲ್ಲೂ ಏಕತಾ ಪ್ರತಿಮೆಯ ಅಂತರ್ಜಾಲ ತಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಕೇವಾಡಿಯಾ ಆಪ್ ಗೆ ಯುನಿಟಿ ಗ್ಲೌ ಉದ್ಯಾನದಲ್ಲಿ ಚಾಲನೆ ನೀಡಲಿದ್ದಾರೆ.
ಅಹಮದಾಬಾದ್ ನ ಸಬರಮತಿ ರಿವರ್ ಫ್ರಂಟ್ ನಿಂದ ಕಾವಾಡಿಯಾದ ಏಕತಾ ಪ್ರತಿಮೆಯನ್ನು ಸಂಪರ್ಕಿಸಲಿರುವ ಸಮುದ್ರ ವಿಮಾನ ಸೇವೆಯನ್ನೂ ಅವರು ಆರಂಭಿಸಲಿದ್ದಾರೆ.
ಏಕತಾ ಕ್ರ್ಯೂಸ್ ಸೇವೆ
ಏಕತಾ ಕ್ರೂಸ್ ಸೇವೆಯಲ್ಲಿ ಶ್ರೇಷ್ಠ ಭಾರತ್ ಭವನದಿಂದ ಏಕತಾ ಪ್ರತಿಮೆವರೆಗೆ 6 ಕಿ.ಮೀ ದೂರವನ್ನು ಕ್ರಮಿಸಿ ದೋಣಿಯಿಂದ ಏಕತಾ ಪ್ರತಿಮೆಯನ್ನು ವೀಕ್ಷಿಸುವ ಅನುಭವ ಪಡೆಯಬಹುದು. 40 ನಿಮಿಷಗಳ ದೋಣಿ ವಿಹಾರ ಇದಾಗಿದ್ದು, ಫೆರ್ರಿ ಏಕಕಾಲದಲ್ಲಿ 200 ಪ್ರಯಾಣಿಕರನ್ನು ಕರೆದೊಯ್ಯಬಲ್ಲುದಾಗಿದೆ. ದೋಣಿ ಸೇವೆಯ ಕಾರ್ಯಾಚರಣೆಗಾಗಿ ಹೊಸ ಗೋರಾ ಸೇತುವೆಯನ್ನು ನಿರ್ಮಿಸಲಾಗಿದೆ. ಏಕತಾ ಪ್ರತಿಮೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಬೋಟಿಂಗ್ ಸೇವೆಗಳನ್ನು ಒದಗಿಸಲು ಬೋಟಿಂಗ್ ಕಾಲುವೆ ನಿರ್ಮಿಸಲಾಗಿದೆ.
ಏಕತಾ ಮಾಲ್
ಈ ಮಾಲ್ ನಲ್ಲಿ ಭಾರತದಾದ್ಯಂತದ ವಿವಿಧ ಶ್ರೇಣಿಯ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಇದು ಅನೇಕತೆಯಲ್ಲಿ ಏಕತೆಯ ಸಂಕೇತವಾಗಿದೆ. ಇದು 35 ಸಾವಿರ ಚದರ ಅಡಿ ವಿಸ್ತೀರ್ಣವನ್ನೊಳಗೊಂಡಿದೆ. ಮಾಲ್ ನಲ್ಲಿ 20 ಎಂಪೋರಿಯಾಗಳಿದ್ದು, ಪ್ರತಿಯೊಂದೂ ಭಾರತದ ನಿರ್ದಿಷ್ಟ ರಾಜ್ಯವನ್ನು ಪ್ರತಿನಿಧಿಸುತ್ತದೆ. ಇದನ್ನು ಕೇವಲ 110 ದಿನಗಳಲ್ಲಿ ನಿರ್ಮಿಸಲಾಗಿದೆ.
ಮಕ್ಕಳ ಪೌಷ್ಟಿಕ ಉದ್ಯಾನ 
ಇದು ಮಕ್ಕಳಿಗಾಗಿ ವಿಶ್ವದ ಮೊಟ್ಟಮೊದಲ ತಂತ್ರಜ್ಞಾನ ಚಾಲಿತ ಪೌಷ್ಟಿಕಾಂಶ ಉದ್ಯಾನವನವಾಗಿದ್ದು, ಇದು 35000 ಚದರ ಅಡಿ ವಿಸ್ತೀರ್ಣದಲ್ಲಿದೆ. ನ್ಯೂಟ್ರಿ ರೈಲು ಉದ್ಯಾನವನದಾದ್ಯಂತ ಸಂಚರಿಸಲಿದ್ದು, ವಿವಿಧ ವಿಷಯ ಆಧಾರಿತ ನಿಲ್ದಾಣಗಳಾದ 'ಫಳಶಾಖಾ ಗೃಹಂ', 'ಪಯೋನಗರಿ', 'ಅನ್ನಪೂರ್ಣ', 'ಪೋಷಣ್ ಪುರಾಣ್', ಮತ್ತು 'ಸ್ವಸ್ಥ ಭಾರತಂ'ಗಳಿಗೆ ಸಾಗಲಿದೆ. ಇದು ಮಿರರ್ ಮೇಜ್, 5 ಡಿ ವರ್ಚುವಲ್ ರಿಯಾಲಿಟಿ ಥಿಯೇಟರ್ ಮತ್ತು ತ್ವರಿತ ವರ್ಚುವಲ್ ಕ್ರೀಡೆಗಳಂತಹ ವಿವಿಧ ಶಿಕ್ಷಣ ಚಟುವಟಿಕೆಗಳ ಮೂಲಕ ಪೌಷ್ಟಿಕಾಂಶದ ಅರಿವನ್ನು ಮೂಡಿಸುತ್ತದೆ.
ಆರಂಭ್ 2020
ಆರಂಭ ಎಲ್ಲ ಭಾರತೀಯ ಸೇವೆಯ ಅಂದರೆ ಗ್ರೂಪ್ ಎ ಕೇಂದ್ರ ಸೇವೆ ಮತ್ತು ವಿದೇಶಾಂಗ ಸೇವೆಯ ಪ್ರೊಬೇಷನರ್ ಗಳನ್ನು ಸಮಾನ ಫೌಂಡೇಷನ್ ಕೋರ್ಸ್ (ಸಿಎಫ್.ಸಿ.) ಗಾಗಿ ಒಗ್ಗೂಡಿಸುವ ಮೂಲಕ ಇಲಾಖೆಗಳ ನಡುವಿನ ಕಂದಕವನ್ನು ನಾಗರಿಕ ಸೇವಾ ಅಧಿಕಾರಿಗಳ ಆರಂಭಿಕ ಸೇವೆಯಿಂದಲೇ  ನಿವಾರಿಸುವ ಉದ್ದೇಶ ಹೊಂದಿದೆ. ಆರಂಭ್ ನಾಗರಿಕ ಸೇವಾ ಅಧಿಕಾರಿಗಳ ದಕ್ಷತೆಯನ್ನು ಪರಿವರ್ತನಾತ್ಮಕ ಮತ್ತು ಎಲ್ಲ ಇಲಾಖೆ ಮತ್ತು ಕ್ಷೇತ್ರಗಳಾದ್ಯಂತ ತಡೆಹರಿತಗೊಳಿಸುವ ಗುರಿ ಹೊಂದಿದೆ.
2019 ರಲ್ಲಿ 94 ನೇ ಫೌಂಡೇಶನ್ ಕೋರ್ಸ್‌ ನ ಭಾಗವಾಗಿ “ಆರಂಭ್” ಅನ್ನು ಪ್ರಾರಂಭಿಸಲಾಯಿತು, ಅಲ್ಲಿ 20 ಸೇವೆಗಳ ತರಬೇತಿ ನಿರತ ಅಧಿಕಾರಿಗಳು (ಒಟಿಗಳು) ಗುಜರಾತ್‌ ನ ಕೆವಾಡಿಯಾದ ಏಕತಾ ಪ್ರತಿಮೆಯಲ್ಲಿ ಒಂದು ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಮಾನ್ಯ ಪ್ರಧಾನ ಮಂತ್ರಿಗಳಿಗೆ ಪ್ರಸ್ತುತಿಯ ಪರಾಕಾಷ್ಟೆಯಾಗಿತ್ತು. ನಂತರ ತರಬೇತಿ ನಿರತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಅವರನ್ನುದ್ದೇಶಿಸಿ ಭಾಷಣ ಮಾಡಿದ್ದರು. 
ಈ ವರ್ಷ ಆರಂಭ 2020 ಎರಡನೇ ಆವೃತ್ತಿಯಾಗಿದ್ದು, 2020ರ ಅಕ್ಟೋಬರ್ 14ರಿಂದ ಅಕ್ಟೋಬರ್ 31ರವರೆಗೆ ಎಲ್.ಬಿ.ಎಸ್.ಎನ್.ಎಎಯಲ್ಲಿ ನಡೆಯುತ್ತಿದೆ.  18 ಸೇವೆಗಳ  428 ತರಬೇತಿ ನಿರತ ಅಧಿಕಾರಿಗಳು ಮತ್ತು ಮೂವರು ರಾಯಲ್ ಭೂತಾನ್ ಸೇವೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದಾಗ್ಯೂ, ಪ್ರಸಕ್ತ ಕೋವಿಡ್ ಸಾಂಕ್ರಾಮಿಕದ ಸನ್ನಿವೇಶದಲ್ಲಿ, ಈ ವರ್ಷ ಆರಂಭ್ 2020 ವರ್ಚುವಲ್ ಮೂಲಕ ನಡೆಯುತ್ತಿದ್ದು, ಆಯ್ಕೆ ಮಾಡಿಕೊಂಡಿರುವ ವಿಷಯ “ಭಾರತದಲ್ಲಿ ಆಡಳಿತ @ 100” ಎಂಬುದಾಗಿದೆ. ಉಪ ವಿಷಯಗಳು “ಏಕ ಭಾರತ ಶ್ರೇಷ್ಠ ಭಾರತ”, “ಆತ್ಮ ನಿರ್ಭರ ಭಾರತ” ಮತ್ತು “ನವೀನ ಭಾರತ” ಎಂಬುದಾಗಿದ್ದು, ಆರ್ಥಿಕ ವೈವಿಧ್ಯತೆ ಮತ್ತು ಒಮ್ಮತದ ಬಲ, ಇಂಧನದಲ್ಲಿ ಸ್ವಾವಲಂಬನೆ, ಆರೋಗ್ಯ, ಬ್ಲಾಕ್ ಸ್ವಾನ್ ಕಾರ್ಯಕ್ರಮಗಳಿಗೆ ಬೃಹತ್ ವ್ಯವಸ್ಥೆಯ ನಿರ್ಮಾಣ, ಶಿಕ್ಷಣದಲ್ಲಿ ಸಂಶೋಧನೆ ಮತ್ತು ನಾವಿನ್ಯತೆ, ಕೈಗಾರಿಕೆ ಮತ್ತು ಆಡಳಿತದ ಮೇಲೆ ಪ್ರಭಾವಬೀರುವುದಾಗಿ ಇದು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಮಷ್ಟಿಯ ಬಗ್ಗೆ ಗಮನ ಹರಿಸುತ್ತದೆ. 

***


(Release ID: 1668217) Visitor Counter : 210