ಪ್ರಧಾನ ಮಂತ್ರಿಯವರ ಕಛೇರಿ

ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಸಿಇಓಗಳೊಂದಿಗೆ ಪ್ರಧಾನಮಂತ್ರಿ ಸಂವಾದ


ತ್ವರಿತವಾಗಿ ವೃದ್ಧಿಸುತ್ತಿರುವ ಭಾರತದ ಇಂಧನ ಕ್ಷೇತ್ರ ಹೂಡಿಕೆದಾರರಿಗೆ ಅದ್ಭುತ ಅವಕಾಶ ಕಲ್ಪಿಸಿದೆ

ಎಲ್ಲ ಭಾರತೀಯರಿಗೆ ಶುದ್ಧ, ಕೈಗೆಟಕುವ ಮತ್ತು ಸುಸ್ಥಿರ ಇಂಧನದ ಸಮಾನ ಪ್ರವೇಶ ಕಲ್ಪಿಸುವುದು ಸರ್ಕಾರದ ನೀತಿಯಲ್ಲಿ ಪ್ರಮುಖವಾಗಿದೆ

ಅನಿಲ ಆಧಾರಿತ ಆರ್ಥಿಕತೆಯೆಡೆಗೆ ಸಾಗಲು ದೇಶ ಕ್ರಮಗಳನ್ನು ಕೈಗೊಂಡಿದೆ

ಮಾನವನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ನೈಸರ್ಗಿಕ ಸುತ್ತಮುತ್ತಲಿನೊಂದಿಗೆ ಸಂಘರ್ಷಕ್ಕೆ ಒಳಗಾಗಲು ಸಾಧ್ಯವಿಲ್ಲ: ಪ್ರಧಾನಮಂತ್ರಿ

Posted On: 26 OCT 2020 11:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನೀತಿ ಆಯೋಗ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಸಿಇಓಗಳೊಂದಿಗೆ ಸಂವಾದ ನಡೆಸಿದರು.

ಸಂವಾದದ ವೇಳೆ, ಪ್ರಧಾನಮಂತ್ರಿಯವರು ಇಂಧನ ಮಾನವನ ಅಭಿವೃದ್ಧಿಯ ಕೇಂದ್ರಬಿಂದುವಾಗಿದ್ದು, ಇಂಧನ ವಲಯದ ಸುತ್ತಮ ಮಾತುಕತೆಗಳು ಮಹತ್ವದ್ದಾಗಿವೆ ಎಂದರು. ಸರ್ಕಾರದ ನೀತಿಯಲ್ಲಿ ಎಲ್ಲ ಭಾರತೀಯರಿಗೂ ಸಮಾನವಾಗಿ ಶುದ್ಧ ಮತ್ತು ಕೈಗೆಟಕುವ ದರದಲ್ಲಿ ಇಂಧನ ಲಭ್ಯತೆ ಪ್ರಮುಖವಾಗಿದ್ದು, ಇದಕ್ಕಾಗಿ ದೇಶ ಸಮಗ್ರ ದೃಷ್ಟಿಕೋನ ಅಳವಡಿಸಿಕೊಂಡಿದೆ ಎಂದು ತಿಳಿಸಿದರು.

ಭಾರತವನ್ನು ಒಂದು ಆಕರ್ಷಕ ಹೂಡಿಕೆ ತಾಣವಾಗಿ ಮಾಡಲು ಸರ್ಕಾರ ಹಲವಾರು ನೀತಿ ಕ್ರಮಗಳನ್ನು ಕೈಗೊಂಡಿದೆ, ಭಾರತದ ಇಂಧನ ಕ್ಷೇತ್ರದಲ್ಲಿ ಅದ್ಭುತವಾದ ಹೂಡಿಕೆ ಅವಕಾಶಗಳಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪರಿಶೋಧನೆ ಮತ್ತು ಉತ್ಪಾದನಾ ಯೋಜನೆಗಳಲ್ಲಿ ಭಾರತ ಈಗ ಶೇ.100ರಷ್ಟು ಎಫ್.ಡಿ..ಗೆ ಮತ್ತು ಸಾರ್ವಜನಿಕ ವಲಯದ ಸಂಸ್ಕರಣೆಯಲ್ಲಿ ಶೇ.49ರಷ್ಟು ಎಫ್.ಡಿ..ಗೆ. ಸ್ವಯಂಚಾಲಿತ ಮಾರ್ಗದಲ್ಲಿ ಅವಕಾಶ ನೀಡಿದೆ. ಸುಧಾರಣೆಗಳು ವಲಯದಲ್ಲಿ ಎಫ್.ಡಿ.. ಹೆಚ್ಚಿನ ಹರಿವಿಗೆ ಕಾರಣವಾಗಿದೆ ಎಂದು ತಿಳಿಸಿದರು. ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗಲು ದೇಶವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ ಅವರು. ‘ಒಂದು ದೇಶ ಒಂದು ಅನಿಲ ಗ್ರಿಡ್ಸಾಧಿಸಲು ಅನಿಲ ಕೊಳವೆ ಮಾರ್ಗ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಶುದ್ಧ ಅಡುಗೆ ಮತ್ತು ಸಾರಿಗೆ ಇಂಧನಗಳ ಪೂರೈಕೆಗೆ ನೆರವಾಗಲು ನಗರ ಅನಿಲ ವಿತರಣಾ ಜಾಲಗಳನ್ನು ವಿಸ್ತರಿಸುವ ಪ್ರಯತ್ನಗಳ ಬಗ್ಗೆಯೂ ಅವರು ಮಾತನಾಡಿದರು. ರಾಸಾಯನಿಕಗಳು ಮತ್ತು ಪೆಟ್ರೋ-ರಾಸಾಯನಿಕಗಳ ಉತ್ಪಾದನೆ ಮತ್ತು ರಫ್ತು ಮಾಡುವ ತಾಣವಾಗುವ ಗುರಿಯನ್ನು ಭಾರತವೂ ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

ಮಾನವನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ನೈಸರ್ಗಿಕ ಸುತ್ತಮುತ್ತಲಿನೊಂದಿಗೆ ಸಂಘರ್ಷಕ್ಕಿಳಿಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಮಾನವ ಸಬಲೀಕರಣ ಮತ್ತು ಪರಿಸರದ ಕಾಳಜಿ ಎರಡನ್ನೂ ಭಾರತ ನಂಬುತ್ತದೆ ಎಂದು ಅವರು ಹೇಳಿದರು. ಎಥೆನಾಲ್, ಎರಡನೇ ತಲೆಮಾರಿನ ಎಥೆನಾಲ್, ಸಂಕುಚಿತ ಜೈವಿಕ ಅನಿಲ ಮತ್ತು ಜೈವಿಕ ಡೀಸೆಲ್ ಬಳಕೆಯ ಮೂಲಕ ಇಂಧನದ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ದೇಶವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಸುಸ್ಥಿರ ಅಭಿವೃದ್ಧಿಯ ತತ್ತ್ವದ ಆಧಾರದ ಮೇಲೆ ಭಾರತವು ಅಂತಾರಾಷ್ಟ್ರೀಯ ಸೌರ ಸಹಯೋಗದಂತಹ ಹೊಸ ಸಂಸ್ಥೆಗಳನ್ನು ಪೋಷಿಸುವ ಪ್ರಯತ್ನಗಳನ್ನು ಮಾಡಿದೆ, ನಮ್ಮ ಗುರಿಒಂದು ವಿಶ್ವ, ಒಂದು ಸೂರ್ಯ, ಒಂದು ಗ್ರಿಡ್ಎಂದು ಹೇಳಿದರು. ಭಾರತದನೆರೆಹೊರೆ ಪ್ರಥಮನೀತಿಯ ಮಹತ್ವವನ್ನು ತಿಳಿಸಿದ ಪ್ರಧಾನಮಂತ್ರಿ, ಭಾರತ ತನ್ನ ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್ ಮತ್ತು ಮ್ಯಾನ್ಮಾರ್‌ ಗಳೊಂದಿಗೆ ಇಂಧನ ಕಾರ್ಯಕ್ರಮಗಳನ್ನು ಬಲಪಡಿಸುತ್ತಿದೆ ಎಂದು ಹೇಳಿದರು. ವೇಗವಾಗಿ ಬೆಳೆಯುತ್ತಿರುವ ಭಾರತದ ಇಂಧನ ಕ್ಷೇತ್ರವು ಹೂಡಿಕೆದಾರರಿಗೆ ಅದ್ಭುತ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. , ಭಾರತ ಎಲ್ಲಾ ರೀತಿಯ ಇಂಧನ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತದ ಪ್ರಗತಿ ಮತ್ತು ಹಿಂಚಿಕೆಯ ಸಮೃದ್ಧಿಯಲ್ಲಿ ಪಾಲುದಾರರಾಗಲು ಅವರು ಜಾಗತಿಕ ಉದ್ಯಮಕ್ಕೆ ಆಹ್ವಾನ ನೀಡಿದರು.

ಕಾರ್ಯಕ್ರಮದ ತೈಲ ಮತ್ತು ಅನಿಲ ಕ್ಷೇತ್ರದ ಸುಮಾರು 40 ಸಿಇಒಗಳು ಭಾಗವಹಿಸುವಿಕೆಗೆ ಸಾಕ್ಷಿಯಾಗಿತ್ತು, ಸುಮಾರು 28 ನಾಯಕರು ತಮ್ಮ ಅಭಿಪ್ರಾಯಗಳನ್ನು ಪ್ರಧಾನ ಮಂತ್ರಿ ಅವರಿಗೆ ಮಂಡಿಸುರು. ಪ್ರಮುಖ ಬಾಧ್ಯಸ್ಥರಾದ ಅಂದರೆ, ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ ಸಿಇಒ ಮತ್ತು ಯುಎಇಯ ಕೈಗಾರಿಕೆ ಮತ್ತು ಸುಧಾರಿತ ತಂತ್ರಜ್ಞಾನ ಸಚಿವ ಡಾ. ಸುಲ್ತಾನ್ ಅಹ್ಮದ್ ಅಲ್ ಜಾಬರ್; ಖತಾರ್ ಇಂಧನ ವ್ಯವಹಾರಗಳ ರಾಜ್ಯ ಸಚಿವ, ಉಪಾಧ್ಯಕ್ಷರು, ಅಧ್ಯಕ್ಷರು ಮತ್ತು ಸಿಇಒ ಶ್ರೀ ಸಾದ್ ಶೆರಿದಾ ಅಲ್- ಕಾಬಿ; ಒಪೆಕ್ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಸಾನುಸಿ ಬಾರ್ಕಿಂಡೋ; ಐಇಎ ಕಾರ್ಯನಿರ್ವಾಹಕ ನಿರ್ದೇಶಕ ಡಾ ಫೇಯ್ತ್ ಬಿರೋಲ್; ಜಿಇಸಿಎಫ್ ಯೂರಿ ಸೆಂಟ್ಯುರಿಯನ್; ಮತ್ತು ಯುಕೆಯ ಐಹೆಚ್.ಎಸ್ ಮಾರ್ಕಿಟ್ ಉಪಾಧ್ಯಕ್ಷ ಡಾ. ಡೇನಿಯಲ್ ಯೆರ್ಗಿನ್ ವಲಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ರೋಸೆನೆಫ್ಟ್, ಬಿಪಿ, ಟೋಟಲ್, ಲಿಯಾಂಡೆಲ್ ಬಾಸೆಲ್, ಟೆಲ್ಲುರಿಯನ್, ಶುಲಂಬರ್ಗರ್, ಬೇಕರ್ ಹ್ಯೂಸ್, ಜೆರಾ, ಎಮರ್ಸನ್ ಮತ್ತು ಎಕ್ಸ್-ಕೋಲ್ ಸೇರಿದಂತೆ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.

***


(Release ID: 1667747) Visitor Counter : 208