ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ವ್ಯಕ್ತಿತ್ವ ವಿಕಸನ ಕೇಂದ್ರಗಳನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಶ್ರೀ ಅರ್ಜುನ್ ಮುಂಡ


ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪಾಲುದಾರಿಕೆ ಜೊತೆ ಎರಡು ಕೇಂದ್ರಗಳ ಆರಂಭ

Posted On: 26 OCT 2020 2:39PM by PIB Bengaluru

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡ ಅವರು ನಾಳೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಬುಡಕಟ್ಟು ಜನರ ಕಲ್ಯಾಣಕ್ಕೆ ಆರಂಭಿಸಿರುವ ಎರಡು ವ್ಯಕ್ತಿತ್ವ ವಿಕಸನ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸುವರು.ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಈ ಸಂದರ್ಭದಲ್ಲಿ ಆಶೀರ್ವಚನ ನೀಡಲಿದ್ದಾರೆ.

ಮೊದಲ ಹಂತದಲ್ಲಿ, ಜಾರ್ಖಂಡ್ ನ 5 ಜಿಲ್ಲೆಗಳ 30 ಗ್ರಾಮಪಂಚಾಯತ್ ಗಳನ್ನೊಳಗೊಂಡ 150 ಗ್ರಾಮಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ. ಬುಡಕಟ್ಟು ಕಾಯ್ದೆಗಳು ಮತ್ತು ನಿಯಮಗಳಿಗೆ ಸಂಬಂಧಿಸಿದಂತೆ ಚುನಾಯಿತ ಪಂಚಾಯತ್ ರಾಜ್ ಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಹಾಗೂ ಆ ಯೋಜನೆಗಳ ಬಗ್ಗೆ ತಿಳಿಸಿಕೊಡುವ ಉದ್ದೇಶವಿದೆ. ಬುಡಕಟ್ಟು ಸಮುದಾಯದ ಯುವಕರಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಸಾಮಾಜಿಕ ಹೊಣೆಗಾರಿಕೆ ಪ್ರಜ್ಞೆಯನ್ನು ಮೂಡಿಸುವ ಜೊತೆಗೆ ತಮ್ಮ ಸಮುದಾಯಕ್ಕಾಗಿ ಕೆಲಸ ಮಾಡುವ ಯುವ ಬುಡಕಟ್ಟು ನಾಯಕರು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಈ ಯೋಜನೆಯ ಎರಡನೆಯ ಭಾಗವೆಂದರೆ, ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಸುಮಾರು 10,000 ಬುಡಕಟ್ಟು ರೈತರಿಗೆ ಗೋ-ಆಧಾರಿತ ಕೃಷಿ ತಂತ್ರಜ್ಞಾನಗಳನ್ನು ಒಳಗೊಂಡ ಸುಸ್ಥಿರ ನೈಸರ್ಗಿಕ ಕೃಷಿಗಳ ಬಗ್ಗೆ ತರಬೇತಿ ನೀಡುವುದಾಗಿದೆ. ರೈತರಿಗೆ ಸಾವಯವ ಪ್ರಮಾಣಪತ್ರ ಪಡೆಯಲು ಸಹಾಯಕವಾಗುವುದಲ್ಲದೆ, ಅವರಿಗೆ ಮಾರುಕಟ್ಟೆ ಅವಕಾಶಗಳನ್ನು ಲಭ್ಯವಾಗುವಂತೆ ಮಾಡಿ, ಅವರನ್ನು ಆತ್ಮನಿರ್ಭರ ಬುಡಕಟ್ಟು ರೈತರನ್ನಾಗಿ ಮಾಡುವ ಗುರಿ ಹೊಂದಲಾಗಿದೆ.

***


(Release ID: 1667615) Visitor Counter : 170