ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ದೇಶದ ಎಂ.ಎಸ್‌.ಎಂ.ಇ.ಗಳಿಗೆ ಸಹಾಯ ಮಾಡಲು ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ಅನ್ನು ತನ್ನ ಏಕ ಗವಾಕ್ಷಿ ವ್ಯವಸ್ಥೆಯ ಪೋರ್ಟಲ್ ‘ಚಾಂಪಿಯನ್ಸ್’ ನಲ್ಲಿ ಪರಿಚಯಿಸಿದ ಎಂ.ಎಸ್‌.ಎಂ.ಇ. ಸಚಿವಾಲಯ

ತ್ವರಿತ ಮತ್ತು ಪರಿಣಾಮಕಾರಿ ಪರಿಹಾರಕ್ಕಾಗಿ ಎಂ.ಎಸ್‌.ಎಂ.ಇ. ಸಂಬಂಧಿತ ಸಮಸ್ಯೆಗಳು ಮತ್ತು ಕುಂದುಕೊರತೆಗಳಿಗೆ ಒಳನೋಟವನ್ನು ಪಡೆಯಲು ಸಚಿವಾಲಯವು ಎಐ ಮತ್ತು ಎಂಎಲ್ ಪರಿಕರಗಳನ್ನು ಕಾರ್ಯಗತಗೊಳಿಸುತ್ತಿದೆ

Posted On: 14 OCT 2020 6:38PM by PIB Bengaluru

ಎಐ ಮತ್ತು ಎಂ.ಎಲ್ ವಿಶ್ಲೇಷಣೆಯನ್ನು ಸಚಿವಾಲಯದ ಚಾಂಪಿಯನ್ಸ್ ಪೋರ್ಟಲ್‌ ನಲ್ಲಿ ಕೆಳಗಿನ ಸಂಪರ್ಕದಲ್ಲಿಎಐ ಕಾರ್ನರ್ನಲ್ಲಿ ನೋಡಬಹುದು.

https://champions.gov.in/msme_grievances/news_opinion/analytics.htm

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌.ಎಂಇ) ಸಮಸ್ಯೆಗಳಿಗೆ ನೆರವು ಮತ್ತು ಪರಿಹಾರಗಳನ್ನು ಒದಗಿಸಲು ಎಂ.ಎಸ್‌.ಎಂ.. ಸಚಿವಾಲಯವು ಒಂದು ಪ್ರಮುಖ ಉಪಕ್ರಮದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ಇತ್ತೀಚಿನ ಐಟಿ ಸಾಧನಗಳನ್ನು ಚಿರಪರಿಚಿತಗೊಳಿಸುತ್ತಿದೆ. ಸಚಿವಾಲಯವು ಎಐ ಮತ್ತು ಎಂ.ಎಲ್. ಅನ್ನು ತನ್ನ ಏಕ ಗವಾಕ್ಷಿ ವ್ಯವಸ್ಥೆಚಾಂಪಿಯನ್ಸ್ನಲ್ಲಿ ಅನುಷ್ಠಾನಗೊಳಿಸಿದ್ದು ಇದನ್ನು 2020 ಜೂನ್ 1ರಂದು ಪ್ರಧಾನಮಂತ್ರಿಯವರು ಉದ್ಘಾಟಿಸಿದ್ದರು. ಬಹು ಮಾದರಿ ವ್ಯವಸ್ಥೆಯು ವರ್ಚುವಲ್ ಮಟ್ಟದಲ್ಲಿ ಪೋರ್ಟಲ್ ಅನ್ನು ಹೊಂದಿದ್ದು, ತಂತ್ರಜ್ಞಾನವು ದೇಶದ ಸುಮಾರು 69 ಸ್ಥಳಗಳಲ್ಲಿ ಭೌತಿಕ ನಿಯಂತ್ರಣ ಕೊಠಡಿಗಳನ್ನು ಹೊಂದಿದೆ. ಇದು ಬಹಳ ಕಡಿಮೆ ಅವಧಿಯಲ್ಲಿ ಹೊರಹೊಮ್ಮಿದ ಎಂಎಸ್‌.ಎಂಇಗಳ ಮುಂಚೂಣಿಯ ವೇದಿಕೆಗಳಲ್ಲಿ ಒಂದಾಗಿದೆ.

ಎಂ.ಎಸ್.ಎಂ.. ಸಚಿವಾಲಯವು ಕೋವಿಡ್ -19ನ್ನು ಒಂದು ಸವಾಲಾಗಿ ಸ್ವೀಕರಿಸಿ, ಅದ್ಭುತ ಮಧ್ಯಸ್ಥಿಕೆಯೊಂದಿಗೆ ಸಂಕಷ್ಟವನ್ನು ಒಂದು ಅವಕಾಶವಾಗಿ ಪರಿವರ್ತಿಸಿತು. ಸಂಕಷ್ಟದ ಸಮಯದಲ್ಲಿ, ಸಚಿವಾಲಯ ಎಂ.ಎಸ್.ಎಂ..ಗಳಿಗೆ ಹೃತ್ಪೂರ್ವಕವಾಗಿ ಬೆಂಬಲ ನೀಡುತ್ತಿರುವುದಷ್ಟೇ ಅಲ್ಲ, ಇದು ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಲು ಯತ್ನಿಸಿತು, ಆದರೆ, ವಾಸ್ತವವಾಗಿ ಅವುಗಳ ಅಡೆತಡೆಗಳನ್ನು ನಿವಾರಿಸಲು, ಒಂದು ಮಾದರಿ ಬದಲಾವಣೆಯನ್ನು ಮಾಡಿ, ಚಾಂಪಿಯನ್ ಆಗುವಂತೆ ಮಾಡುತ್ತಿದೆ.

ಕೈಗಾರಿಕೆ 4.0 ದಿಕ್ಕಿನಲ್ಲಿ ಎಂ.ಎಸ್.ಎಂ.. ಮತ್ತು ರಾಷ್ಟ್ರವನ್ನು ತೆಗೆದುಕೊಂಡು ಹೋಗಲು ತಾನು ಆಕ್ರಮಣಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಎಂ.ಎಸ್.ಎಂ.. ಸಚಿವಾಲಯ ಹೇಳಿದೆ. ಅದು ಕೈಗಾರಿಕೆ 4.0 ಭಾಗವಾಗಿ ವರ್ಗೀಕರಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಎಂಎಸ್‌.ಎಂಇಗಳಿಗೂ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಸಂವೇದಕಗಳು, ಮೋಟರ್‌ ಗಳು, ಕಂಪ್ಯೂಟರ್ ಪ್ರದರ್ಶನಗಳು ಮತ್ತು ಇತರ ಅನಿಮೇಷನ್ ತಂತ್ರಜ್ಞಾನಗಳಂತಹ ಅಗತ್ಯ ಮತ್ತು ಶಕ್ತಗೊಳಿಸುವ ಉತ್ಪನ್ನಗಳನ್ನು ತಯಾರಿಸಲು ಎಂಎಸ್‌.ಎಂಇಗಳಿಗೆ ಸಹಾಯ ಮಾಡುತ್ತಿದೆ.

ಅನುಕ್ರಮಣಿಕೆಯಲ್ಲಿ, ಮೊದಲೇ ಭರವಸೆ ನೀಡಿದಂತೆ, ಸಚಿವಾಲಯವು ತಮ್ಮ ಚಾಂಪಿಯನ್ಸ್ ಪೋರ್ಟಲ್‌ ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ಅನ್ನು ಜಾರಿಗೆ ತಂದಿದೆ. ತಂತ್ರಜ್ಞಾನ ಕಂಪನಿ ಇಂಟೆಲ್ ಪಯಣದಲ್ಲಿ ಅದರ ಪಾಲುದಾರನಾಗಿದೆ. ಇಂಟೆಲ್ ಸಚಿವಾಲಯಕ್ಕೆ ಕಳೆದ ಐದು ತಿಂಗಳುಗಳಿಂದಲೂ ಎಐ ಮತ್ತು ಎಂ.ಎಲ್. ಕೆಲವು ಸಾಧನಗಳನ್ನು ಅನುಷ್ಠಾನಗೊಳಿಸಲು ಮಾರ್ಗದರ್ಶನ ಮಾಡಿದ್ದು, ಅದು ಇಂದಿನಿಂದ ಬಳಕೆಗೆ ಸಿದ್ಧವಿದೆ. ಇಂಟೆಲ್ ಮತ್ತು ಅದರ ತಂತ್ರಜ್ಞಾನ ಪಾಲುದಾರರು ಎಐ ಮತ್ತು ಎಂಎಲ್‌ ಸಂಪೂರ್ಣ ಡೊಮೇನ್ ಅನ್ನು ತಮ್ಮ ಚಾಂಪಿಯನ್ಸ್ ಪೋರ್ಟಲ್‌ ನಲ್ಲಿ ಸಂಪೂರ್ಣವಾಗಿ ಉಚಿತವಾಗಿ ಜಾರಿಗೆ ತಂದಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಇಂದು ಇಂಟೆಲ್ ಆಯೋಜಿಸಿದ್ದ .. ಶೃಂಗದ ವೇಳೆ ಎಂ.ಎಸ್.ಎಂ.. ಸಚಿವ ಶ್ರೀ ನಿತಿನ್ ಗಡ್ಕರಿ, ನಿಟ್ಟಿನಲ್ಲಿ ಸಚಿವಾಲಯ ಮಾಡಿರುವ ಕಾರ್ಯವನ್ನು ವಿವರಿಸಿದರು. ಇಂಡಿಯಾ ಪ್ರೊ-ಬೊನೊಗೆ ಸೇವೆಯನ್ನು ಮಾಡಿದ್ದಕ್ಕಾಗಿ ಇಂಟೆಲ್ ಮತ್ತು ಅದರ ಪಾಲುದಾರರಿಗೆ ವಿಶೇಷವಾಗಿ ಅವರು ಧನ್ಯವಾದ ಅರ್ಪಿಸಿದರು. ಎನ್‌.ಐಸಿಯ ಸಹಾಯದಿಂದ ಮತ್ತು ಇಂಟೆಲ್‌ ಸ್ಥಳೀಯ ತಂಡದ ಮಾರ್ಗದರ್ಶನದಲ್ಲಿ ಸಚಿವಾಲಯದಲ್ಲಿ ಸಂಪೂರ್ಣ ಪರಿಕಲ್ಪನೆ ಮತ್ತು ವ್ಯಾಪ್ತಿ ವಿಶ್ಲೇಷಣೆ ಹಾಗೂ ವಿನ್ಯಾಸವನ್ನು ಸ್ವತಃ ತನ್ನಲ್ಲೇ ರೂಪಿಸಲಾಗಿದೆ ಎಂದು ಅವರು ಹೇಳಿದರು. ಅವರು ತಂಡಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಎಐ ಬಗ್ಗೆ:

 • ಎಐ ಎಂದರೆ ಯಂತ್ರಗಳನ್ನು ಮನುಷ್ಯರಂತೆ ಯೋಚಿಸಲು, ಕಾರ್ಯ ನಿರ್ವಹಿಸಲು ಮತ್ತು ಕಲಿಯಲು ಸಮರ್ಥವಾಗಿಸುವ ಕಲ್ಪನೆಯಾಗಿದೆ.
 • ಪಾತ್ರಾಧಾರಿತವಾಗಿ (ಎಂಐಎಸ್) ಆಟೊಮೇಷನ್‌ಗಳುಮಾಡಲಾಗದಂತಹುಗಳನ್ನೂ ಕಲಿಯಲು, ಹೊಂದಿಕೊಳ್ಳಲು ಮತ್ತು ಮಾಡಲು ಯಂತ್ರಗಳನ್ನು ಸಕ್ರಿಯಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಹಂತದಲ್ಲಿ ಇದು ಇಂದು ಜಾರಿಗೆ ಬಂದಿದೆ:

 1. ಎಐ ತನ್ನ ನೀತಿ ಕ್ರಮಕ್ಕಾಗಿ ಎಂಎಸ್‌.ಎಂಇಗಳಿಗೆ ಸಂಬಂಧಿಸಿದ ಎಂಎಸ್‌.ಎಂಇ ಸಚಿವಾಲಯದ ಸಾಮಾಜಿಕ ಮಾಧ್ಯಮ ಒಳನೋಟಗಳನ್ನು ಫೇಸ್‌ ಬುಕ್, ಟ್ವಿಟರ್, ಇನ್‌ ಸ್ಟಾಗ್ರಾಮ್, ಬ್ಲಾಗ್, ಫೋರಂಗಳು ಮತ್ತು ಆನ್‌ ಲೈನ್ ಸುದ್ದಿಗಳ ಮೂಲಕ ನೀಡಲು ಪ್ರಾರಂಭಿಸಿದೆ;
 2. ಕುಂದುಕೊರತೆ ನಿವಾರಣೆಗಾಗಿ, ನಮ್ಮ ಚಾಂಪಿಯನ್ಸ್ ಪೋರ್ಟಲ್ ಮೂಲಕ ಮತ್ತು ಅದರ ಮೂಲಕ ಬರುವ ದೂರುಗಳು ಮತ್ತು ದತ್ತಾಂಶವನ್ನು ನಾವು ಈವರೆಗೆ ಅವಲಂಬಿಸಿದ್ದೇವೆ ಎಂದು ಸಚಿವಾಲಯ ಹೇಳಿದೆ. ಬಾಧ್ಯಸ್ಥರು ನಮ್ಮ ಪೋರ್ಟಲ್ ಗೆ ಹೋಗದೆಯೂ ಈಗ, ಎಂ.ಎಸ್.ಎಂ.. ವಲಯದ ಪೂರ್ಣ ನಾಡಿಮಿಡಿತವನ್ನು ತಿಳಿಯಬಲ್ಲವರಾಗಿದ್ದೇವೆ.;
 3. ಎಂ.ಎಸ್.ಎಂ.. ವಲಯದಲ್ಲಿ ತೊಡಗಿಕೊಂಡಿರುವ ಅಥವಾ ಅವಲಂಬಿತರಾಗಿರುವ ಜನರ ಭಾವನೆಗಳನ್ನು ಸಕಾಲದಲ್ಲಿ ತಿಳಿದುಕೊಳ್ಳಲು ಈಗ ಸಾಧ್ಯವಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ;
 4. ಇದಲ್ಲದೆ, .. ಪರಿಕರಗಳು ದತ್ತಾಂಶ-ಚಾಲಿತ ಒಳನೋಟಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗಿದೆ. ಮಾಹಿತಿ ನಿರ್ವಹಣಾ ವ್ಯವಸ್ಥೆಗಳ (ಎಂಐಎಸ್) ಸಾಂಪ್ರದಾಯಿಕ ಸಾಧನಗಳಲ್ಲಿ ಲಭ್ಯವಿಲ್ಲದ ದತ್ತಾಂಶವನ್ನು ಅವರು ನಾನಾ ರೀತಿಯಲ್ಲಿ ಕತ್ತರಿಸಬಹುದು ಮತ್ತು ದಾಳ ಮಾಡಬಹುದು;
 5. ಇದು ಕೇವಲ ತಜ್ಞರಿಗಷ್ಟೇ ಅಲ್ಲ, ನಮ್ಮ ಸಾಧಾರಣ ಸಿಬ್ಬಂದಿಗೂ ಸುಲಭವಾಗಿ ಕ್ರಿಯಾತ್ಮಕ ಅಂಶಗಳನ್ನು ಅನ್ವೇಷಿಸುವಂತಿದೆ.
 6. ದತ್ತಾಂಶ ವಿಶ್ಲೇಷಣೆಯನ್ನು ಕೇಂದ್ರೀಯ (ತಾಣ ಮಟ್ಟ) ತಂಡಗಳೊಂದಿಗೆ ನೈಜ-ಸಮಯದ ಲೈವ್-ಡೇಟಾ ಸಂಪರ್ಕಗಳಾಗಿ ಸುಲಭವಾಗಿ ಹಂಚಿಕೊಳ್ಳಬಹುದು ಮತ್ತು ಚಾಂಪಿಯನ್ಸ್ ನಿಯಂತ್ರಣ ಕೊಠಡಿಗಳ ಕೊಂಡಿಗಳು ಭಾರತದಾದ್ಯಂತ ಹರಡಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ;
 7. ಈಗ, ಎಐ ವಿಶ್ಲೇಷಣೆಗಾಗಿ ದತ್ತಾಂಶವನ್ನು ಸಿದ್ಧಪಡಿಸುವ ಪ್ರಾಯಾಸದ ಕಾರ್ಯವನ್ನು ಮಾಡಲಿದೆ ಎಂದು ಸಚಿವಾಲಯ ಭಾವಿಸುತ್ತದೆ; ಆದ್ದರಿಂದ, ಹೆಚ್ಚು ಉತ್ಪಾದಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅವರ ಮಾನವ ಸಂಪನ್ಮೂಲ ಮುಕ್ತವಾಗಲಿದೆ.

ಸ್ಫೂರ್ತಿ ಮತ್ತು ಸಾಧ್ಯತೆಯೊಂದಿಗೆ ಪ್ರಸ್ತುತ ಅವರು ಆರಂಭಿಸಿರುವುದಾಗಿ ಸಚಿವಾಲಯ ಹೇಳಿದೆ:

 • ಒಳನೋಟಗಳನ್ನು ಪಡೆಯಲು ಎಐ ಮತ್ತು ವಿಶ್ಲೇಷಣಾ ತಂತ್ರಜ್ಞಾನದೊಂದಿಗೆ ಅವರ ಚಾಂಪಿಯನ್ಸ್ ಪೋರ್ಟಲ್ ಅನ್ನು ಸಕ್ರಿಯಗೊಳಿಸುವುದು ಮತ್ತು ಉತ್ತಮಗೊಳಿಸುವುದು;
 • ಇದು ವ್ಯಾಪಕವಾಗಿ ಲಭ್ಯವಿರುವ ಸಾಮಾಜಿಕ ಮಾಧ್ಯಮ ಮತ್ತು ಆನ್‌ ಲೈನ್ ದತ್ತಾಂಶದ ಆಧಾರದ ಮೇಲೆ ಮಾಹಿತಿ ಬುದ್ಧಿಮತ್ತೆ ಮತ್ತು ಭಾವನೆಗಳ ವಿಶ್ಲೇಷಣೆಯನ್ನು ಒಳಗೊಂಡು ನೈಜ ಸಮಯದಲ್ಲಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.
 • ಇನ್ಪುಟ್ ಮತ್ತು ಹಸ್ತಕ್ಷೇಪವು ನಮ್ಮ ಮಾಹಿತಿ ಸಂಪನ್ಮೂಲಗಳನ್ನು ಒಂದೆಡೆ ಹೆಚ್ಚಿಸುತ್ತದೆ ಮತ್ತು ಮತ್ತೊಂದೆಡೆ ನಮ್ಮ ಮಾನವ ಸಂಪನ್ಮೂಲವನ್ನು ಮುಕ್ತಗೊಳಿಸುತ್ತದೆ ಎಂದು ಕಚೇರಿ ತಿಳಿಸಿದೆ.

ಈಗ ಮುಂದಿನ ಹಂತವು ತುಲನಾತ್ಮಕವಾಗಿ ಸುಲಭವಾಗಿದೆ, ಇದಕ್ಕಾಗಿ ಪರೀಕ್ಷೆ ನಡೆಯುತ್ತಿದೆ ಎಂದು ಎಂ.ಎಸ್.ಎಂ.. ಸಚಿವಾಲಯವು ಹೇಳಿದೆ. ಎರಡನೇ ಹಂತವನ್ನು ನೈಜ-ಸಮಯದ ಕುಂದುಕೊರತೆ ಪರಿಹಾರ ಮತ್ತು ನಿರ್ವಹಣೆಯ ಕಡೆಗೆ ನಿರ್ದೇಶಿಸಲಾಗುತ್ತದೆ. ಅದು ಕೆಳಕಂಡವುಗಳನ್ನು ಒಳಗೊಂಡಿದೆ:

 • ಪೋರ್ಟಲ್ ಬಳಕೆದಾರರ ವಿಚಾರಣೆಗಳ ತ್ವರಿತ ಸ್ಪಂದನೆಗಾಗಿ .. ಸಂಪರ್ಕಿತ ಚಾಟ್ ಬೂಟ್ಸ್ ನೊಂದಿಗೆ ನಿಯಂತ್ರಣ ಕೊಠಡಿಗಳ ಮತ್ತು ಅಧಿಕಾರಿಗಳ ಸಾಮರ್ಥ್ಯ ಹೆಚ್ಚಿಸಲಾಗುವುದು;
 • ಪರಿಣಾಮಕಾರಿ ಪರಿಹಾರ ಮತ್ತು ಹೆಚ್ಚಿನ ಮಧ್ಯಸ್ಥಗಾರರ ತೃಪ್ತಿಗಾಗಿ ಚಾಂಪಿಯನ್ಸ್ ಪೋರ್ಟಲ್ ಮೂಲಕ ಅದರ ಏಕ ಗವಾಕ್ಷಿ ವ್ಯವಸ್ಥೆಯ ಸಂಪೂರ್ಣ ಕೆಲಸದ ಹರಿವು ಮತ್ತು ಕುಂದುಕೊರತೆ ಪರಿಹಾರವನ್ನು ನೈಜ-ಸಮಯದ, ವಿವರವಾದ ವಿಶ್ಲೇಷಣೆಯನ್ನು ನೀಡುತ್ತದೆ.

***(Release ID: 1664682) Visitor Counter : 144