ಸಂಪುಟ

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೀನ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ವಿಶೇಷ ಪ್ಯಾಕೇಜ್ ಗೆ ಸಂಪುಟದ ಸಮ್ಮತಿ

Posted On: 14 OCT 2020 4:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗೆ ಐದು ವರ್ಷಗಳ ಅವಧಿಗೆ ಅಂದರೆ 2023-24ನೇ ವಿತ್ತೀಯ ವರ್ಷದವರೆಗೆ 520 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಮತ್ತು ದೀನ ದಯಾಳ್ ಅಂತ್ಯೋದಯ ಯೋಜನೆರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿಎವೈಎನ್.ಆರ್.ಎಲ್.ಎಂ.) ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗೆ ವಿಸ್ತರಿತ ಅವಧಿಯ ವೇಳೆ ಬಡತನದ ಅನುಪಾತದ ಹಂಚಿಕೆಯನ್ನು ಸಂಪರ್ಕಿಸದೆ, ಬೇಡಿಕೆ ಚಾಲಿತ ಆಧಾರದ ಮೇಲೆ ಧನ ಸಹಾಯ ಖಾತ್ರಿ ಪಡಿಸಲು ಸಮ್ಮತಿ ಸೂಚಿಸಿದೆ.

ಅಭಿಯಾನದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಅಗತ್ಯಕ್ಕೆ ಅನುಗುಣವಾಗಿ ಅಗತ್ಯ ಧನಸಹಾಯ ಖಾತ್ರಿಪಡಿಸುತ್ತದೆ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜೆ ಮತ್ತು ಕೆ ಹಾಗೂ ಲಡಾಖ್ ನಲ್ಲಿ ಕೇಂದ್ರ ಪ್ರಾಯೋಜಿತ ಎಲ್ಲಾ ಫಲಾನುಭವಿ-ಆಧಾರಿತ ಯೋಜನೆಗಳನ್ನು ಸಮಯೋಚಿತ ರೀತಿಯಲ್ಲಿ ಸಾರ್ವತ್ರಿಕಗೊಳಿಸುವ ಭಾರತ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿರುತ್ತದೆ.

ಗ್ರಾಮೀಣ ಕುಟುಂಬಗಳ ಜೀವನಮಟ್ಟ ಮತ್ತು ಮಹಿಳಾ ಸಬಲೀಕರಣವನ್ನು ಉತ್ತಮಪಡಿಸುವ ಅಭಿಯಾನದ ಸಾಮರ್ಥ್ಯವನ್ನು ಸೂಚಿಸುವ ಮೌಲ್ಯಮಾಪನದ ಫಲಿತಾಂಶಗಳನ್ನು ಆಧರಿಸಿದ್ದು ಕೇಂದ್ರಾಡಳಿತ ಪ್ರದೇಶಗಳಾದ ಜೆ ಮತ್ತು ಕೆ ಹಾಗೂ ಲಡಾಖ್‌ ಗಳಲ್ಲಿ ಬದಲಾದ ಸನ್ನಿವೇಶದಲ್ಲಿ ನೀಡಲಾಗಿದೆ.

ದೀನ್ ದಯಾಳ್ ಅಂತ್ಯೋದಯ ಯೋಜನೆರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿಎವೈ-ಎನ್ಆರ್.ಎಲ್.ಎಂ.) ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಇದು ದೇಶದಾದ್ಯಂತದ ಬಡ ಕುಟುಂಬಗಳಲ್ಲಿ ಬಹು ಜೀವನೋಪಾಯ ಉತ್ತೇಜಿಸುವ ಮೂಲಕ ಗ್ರಾಮೀಣ ಬಡತನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಬಡತನ ನಿವಾರಣಾ ಕಾರ್ಯಕ್ರಮಗಳಲ್ಲಿ ಒಂದು ಮಾದರಿ ಬದಲಾವಣೆಯನ್ನು ಸೂಚಿಸಲು, ಗ್ರಾಮೀಣ ಬಡತನವನ್ನು ನಿವಾರಿಸಲು 2011 ಜೂನ್ ನಲ್ಲಿ ಡಿ..ವೈಎನ್.ಆರ್.ಎಲ್.ಎಂ. ಆರಂಭಿಸಲಾಯಿತು. ಡಿ..ವೈಎನ್.ಆರ್.ಎಲ್.ಎಂ. ಎಲ್ಲಾ ಗ್ರಾಮೀಣ ಬಡ ಕುಟುಂಬಗಳನ್ನು ತಲುಪಲು ಪ್ರಯತ್ನಿಸುತ್ತಿದ್ದು, ಸುಮಾರು 10 ಕೋಟಿ ಕುಟುಂಬಗಳನ್ನು ಅಂದಾಜು ಮಾಡಿದೆ, ಮತ್ತು ಪ್ರತಿ ಗ್ರಾಮೀಣ ಬಡ ಕುಟುಂಬದಿಂದ ಒಬ್ಬ ಮಹಿಳಾ ಸದಸ್ಯರನ್ನು ಸ್ವಸಹಾಯ ಗುಂಪುಗಳಾಗಿ (ಎಸ್‌.ಎಚ್‌.ಜಿ) ಸಂಘಟಿಸುವ ಮೂಲಕ ಸಾರ್ವತ್ರಿಕ ಸಾಮಾಜಿಕ ಕ್ರೋಡೀಕರಣದ ಮೂಲಕ ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ, ಅವರ ತರಬೇತಿ ಮತ್ತು ಸಾಮರ್ಥ್ಯದ ಹೆಚ್ಚಳ, ಅವರ ಸೂಕ್ಷ್ಮ ಜೀವನೋಪಾಯ ಯೋಜನೆಗಳನ್ನು ಸುಗಮಗೊಳಿಸುವುದು ಮತ್ತು ಅವರ ಸ್ವಂತ ಸಂಸ್ಥೆಗಳು ಮತ್ತು ಬ್ಯಾಂಕುಗಳಿಂದ ಹಣಕಾಸಿನ ಸಂಪನ್ಮೂಲಗಳು ಲಭ್ಯವಾಗುವಂತೆ ಮಾಡುವ ಮೂಲಕ ಅವರ ಜೀವನೋಪಾಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.

ಅಭಿಯಾನವು ಸ್ವಯಂ- ಸಹಾಯದ ಸ್ಫೂರ್ತಿಯೊಂದಿಗೆ ಸಾಮುದಾಯಿಕ ವೃತ್ತಿಪರರ ಮೂಲಕ ಸಮುದಾಯ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಒಳಗೊಂಡಿದೆ. ಇದು ಡಿ..ವೈಎನ್.ಆರ್.ಎಲ್.ಎಂ. ವಿಶಿಷ್ಟ ಪ್ರತಿಪಾದನೆಯಾಗಿದೆ ಮತ್ತು ಇದು ಹಿಂದಿನ ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಗಿಂತ ಭಿನ್ನವಾಗಿದೆ. ಕಾರ್ಯಕ್ರಮದ ಇನ್ನಿತರ ವಿಶಿಷ್ಟ ಲಕ್ಷಣಗಳೆಂದರೆ, ಇದನ್ನು ರಾಷ್ಟ್ರೀಯ, ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟಗಳಲ್ಲಿ ಮೀಸಲಾದ ಅನುಷ್ಠಾನ ಬೆಂಬಲ ಘಟಕಗಳೊಂದಿಗೆ ವಿಶೇಷ ಉದ್ದೇಶದ ವಾಹಕಗಳು (ಸ್ವಾಯತ್ತ ರಾಜ್ಯ ಸಂಘಗಳು) ಅಭಿಯಾನದೋಪಾದಿಯಲ್ಲಿ ಕಾರ್ಯಗತಗೊಳಿಸುತ್ತವೆ, ವೃತ್ತಿಪರ ಮಾನವ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸುವ ಸಲುವಾಗಿ, ಪ್ರತಿ ಗ್ರಾಮೀಣ ಬಡ ಕುಟುಂಬಕ್ಕೆ ದೀರ್ಘಕಾಲದವರೆಗೆ ಬೆಂಬಲ ನೀಡುತ್ತದೆ.

ಹಿನ್ನೆಲೆ:

ಡಿ..ವೈಎನ್.ಆರ್.ಎಲ್.ಎಂ. ಅನ್ನು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (ಜೆಕೆಎಸ್.ಆರ್.ಎಲ್.ಎಂ.) ಅಡಿಉಮೀದ್ಕಾರ್ಯಕ್ರಮವಾಗಿ ಜಾರಿ ಮಾಡಲಾಗಿತ್ತು.

ರಾಜ್ಯಗಳ ನಡುವಿನ ಅಂತರ-ಬಡತನದ ಹಂಚಿಕೆಗಳ ಆಧಾರದ ಮೇಲೆ ಡಿ..ವೈಎನ್.ಆರ್.ಎಲ್.ಎಂ. ಅಡಿಯಲ್ಲಿ ಪ್ರಸ್ತುತ ಹಣ ಹಂಚಿಕೆ ಕಾರ್ಯವಿಧಾನದ ಪ್ರಕಾರ, ಡಿ..ವೈಎನ್.ಆರ್.ಎಲ್.ಎಂ. ಅಡಿಯಲ್ಲಿ ವಾರ್ಷಿಕ ಹಂಚಿಕೆಯಲ್ಲಿ ಜೆ ಮತ್ತು ಕೆ ಪಾಲು ಶೇ.1ಕ್ಕಿಂತ ಕಡಿಮೆಯಿತ್ತು. ಜೆ ಮತ್ತು ಕೆ ಅಭಿಯಾನದ ಅಡಿಯಲ್ಲಿ ಸಾಕಷ್ಟು ಹಣಕಾಸಿನ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜ್ಯದ ಗ್ರಾಮೀಣ ದುರ್ಬಲ ಜನರಿಗೆ ಸಮರ್ಪಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರ 2013-14ನೇ ಹಣಕಾಸು ವರ್ಷದಿಂದ 2017-18ನೇ ಸಾಲಿನವರೆಗಿನ ಐದು ವರ್ಷಗಳ ನಿರ್ದಿಷ್ಟ ಸಮಯದೊಳಗೆ ರಾಜ್ಯದಲ್ಲಿ ಎಲ್ಲಾ ಗ್ರಾಮೀಣ ದುರ್ಬಲ ಕುಟುಂಬಗಳನ್ನು ಒಳಗೊಂಡಂತೆ (ಒಟ್ಟು ಗ್ರಾಮೀಣ ಕುಟುಂಬಗಳ ಮೂರನೇ ಎರಡರಷ್ಟು ಅಂದಾಜು ಮಾಡಲಾಗಿತ್ತು) ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಡಿ..ವೈಎನ್.ಆರ್.ಎಲ್.ಎಂ. ಅಡಿಯಲ್ಲಿ ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಿತ್ತು. ಬಡತನ ಅನುಪಾತವನ್ನು ಜೊಡಿಸದೆ, ವಿಶೇಷ ಪ್ಯಾಕೇಜ್ ಅನುಷ್ಠಾನದಲ್ಲಿ ಅಗತ್ಯ ಆಧಾರಿತವಾಗಿ ಡಿ..ವೈಎನ್.ಆರ್.ಎಲ್.ಎಂ. ಅಡಿಯಲ್ಲಿ ರಾಜ್ಯಗಳಿಗೆ ಹಣ ಹಂಚಿಕೆಗೂ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಸ್ತಾವನೆಗೆ ಮೂಲತಃ ಅನುಮೋದಿತ ಹಣಕಾಸು ವಿನಿಯೋಗವು ಐದು ವರ್ಷಗಳ ಅವಧಿಗೆ 755.32 ಕೋಟಿ ರೂ. (ಕೇಂದ್ರ ಪಾಲು 679.78 ಕೋಟಿ) ಆಗಿದೆ.

ನಾನಾ ಕಾರಣಗಳಿಗಾಗಿ ಮತ್ತು ರಾಜ್ಯದಲ್ಲಿನ ತೊಂದರೆಗೊಳಗಾದ ಪರಿಸ್ಥಿತಿಗಳಿಂದಾಗಿ, ವಿಶೇಷ ಪ್ಯಾಕೇಜ್ ಅನ್ನು ಮೇ 2013 ರಲ್ಲಿ ಅಂಗೀಕರಿಸಲಾಯಿತಾದರೂ ತರುವಾಯ 2018-19ರವರೆಗೆ ಒಂದು ವರ್ಷ ವಿಸ್ತರಿಸಲಾಯಿತು, ಆದರೂ ಇದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಜೆ ಮತ್ತು ಕೆಯಲ್ಲಿನ ಸಾಧನೆಗಳ ವಿವರವಾದ ಮೂರನೇ ವ್ಯಕ್ತಿಯ ಮೌಲ್ಯಮಾಪನ ಮತ್ತು ವಿಶೇಷ ಪ್ಯಾಕೇಜ್ ಅನ್ನು ಮತ್ತಷ್ಟು ಕಾರ್ಯಗತಗೊಳಿಸಲು ರಾಜ್ಯ ಅಭಿಯಾನದ ಸನ್ನದ್ಧತೆಯ ಮೌಲ್ಯಮಾಪನವನ್ನು 2019ರಲ್ಲಿ ಗುಜರಾತ್‌ನ ಆನಂದ್‌, ಗ್ರಾಮೀಣ ನಿರ್ವಹಣೆ ಸಂಸ್ಥೆ (ಐಆರ್‌.ಎಂಎ) ನಡೆಸಿತು. ಮೌಲ್ಯಮಾಪನವು ಹಿಂದಿನ ರಾಜ್ಯದಲ್ಲಿ ಡಿಎವೈಎನ್.ಆರ್.ಎಲ್.ಎಂ. ಅನುಷ್ಠಾನದ ಅನೇಕ ಉತ್ತಮ ಫಲಿತಾಂಶಗಳನ್ನು ಹೊರತಂದಿತು. ಆದಾಯದ ಮಟ್ಟದಲ್ಲಿನ ಹೆಚ್ಚಳ, ಸುಧಾರಿತ ಸ್ವತ್ತುಗಳ ಆಧಾರ, ಮಹಿಳೆಯರಿಗೆ ಹೊಸ / ಬಹು ಜೀವನೋಪಾಯದ ಅವಕಾಶಗಳ ಸೃಷ್ಟಿ, ಹೆಚ್ಚಿನ ಉಳಿತಾಯ, ಉತ್ಪಾದಕ ಉದ್ದೇಶಗಳಿಗಾಗಿ ಹೆಚ್ಚಿನ ಹೂಡಿಕೆ, ಸಾಲಗಳ ಉತ್ಪಾದಕ ಬಳಕೆ ಇತ್ಯಾದಿ ಇದರಲ್ಲಿ ಒಳಗೊಂಡಿತ್ತು. ಇದರ ಜೊತೆಗೆ, ಸಮುದಾಯ ಮಟ್ಟದ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಹೆಚ್ಚಾಯಿತು, ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಸಹಾಯದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿತು. ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಪದಾಧಿಕಾರಿಗಳ ರೂಪದಲ್ಲಿ ಸಾಮಾಜಿಕ ಬಂಡವಾಳದ ದೊಡ್ಡ ಗುಂಪನ್ನು ಸಹ ರಚಿಸಲಾಯಿತು.

***(Release ID: 1664418) Visitor Counter : 127